About Us Advertise with us Be a Reporter E-Paper

Breaking Newsಕ್ರೀಡೆಪ್ರಚಲಿತ
Trending

4-1ರಿಂದ ಸರಣಿ ವಶಪಡಿಸಿಕೊಂಡ ಭಾರತ: ಕೀವೀಸ್‌ಗೆ ತವರಿನಲ್ಲಿ ಮತ್ತೆ ಮುಖಭಂಗ

ವೆಲ್ಲಿಂಗ್ಟನ್: ಕಳೆದ ಪಂದ್ಯದಲ್ಲಿ ಸೋತು ಮುಖಭಂಗ ಅನುಭವಿಸಿದ್ದ ಟೀಂ ಇಂಡಿಯಾ ಕೊನೆಯ ಪಂದ್ಯದಲ್ಲಿ ಗೆಲ್ಲುವ ಮೂಲಕ ಸರಣಿಯನ್ನು 4-1 ರಿಂದ ವಶಪಡಿಸಿಕೊಂಡಿದೆ.

ಇಲ್ಲಿನ ವೆಸ್ಟ್‌ಪ್ಯಾಕ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಅಂತಿಮ ಏಕದಿನ ಪಂದ್ಯದಲ್ಲಿ ಭಾರತ ತಂಡವು ಎದುರಾಳಿ ನ್ಯೂಜಿಲೆಂಡ್‌ಗೆ 253 ರನ್‌ಗಳ ಗೆಲುವಿನ ಗುರಿ ನೀಡಿತ್ತು. ಸವಾಲಿನ ಗುರಿ ಬೆನ್ನಟ್ಟಿದ ಕಿವೀಸ್‌ಗೆ ಇನ್ ಫಾರ್ಮ್ ವೇಗಿ ಮೊಹಮ್ಮದ್ ಶಮಿ ಡಬಲ್ ಆಘಾತ ನೀಡಿದ್ದರು. ಸರಣಿಯಲ್ಲಿ ಆಗಲೇ ಎರಡು ಪಂದ್ಯಶ್ರೇಷ್ಠ ಪ್ರಶಸ್ತಿಗಳನ್ನು ಬಾಚಿಕೊಂಡಿರುವ ಶಮಿ, ಹೆನ್ರಿ ನಿಕೋಲಸ್ (8) ಹಾಗೂ ಕಾಲಿನ್ ಮನ್ರೊಗೆ (24) ಪೆವಿಲಿಯನ್ ಹಾದಿ ತೋರಿಸಿದರು.

ಅನುಭವಿ ರಾಸ್ ಟೇಲರ್ (1) ವಿಕೆಟ್ ಕಬಳಿಸಿದ ಹಾರ್ದಿಕ್ ಪಾಂಡ್ಯ ಬೌಲಿಂಗ್‌ನಲ್ಲೂ ಪ್ರಭಾವಿ ಎನಿಸಿಕೊಂಡರು. ಇಲ್ಲಿ ಕಿವೀಸ್ ಡಿಆರ್‌ಎಸ್ ನೆರವು ಪಡೆದಿರುವುದು ಹಿನ್ನಡೆಗೆ ಕಾರಣವಾಯಿತು. ನಂತರ ಜತೆಗೂಡಿದ ನಾಯಕ ಕೇನ್ ವಿಲಿಯಮ್ಸನ್ ಹಾಗೂ ಎಡಗೈ ವಿಕೆಟ್ ಕೀಪರ್ ಟಾಮ್ ಲೇಥಮ್ ಅಮೂಲ್ಯ ಜತೆಯಾಟದಲ್ಲಿ ಭಾಗಿಯಾದರು. ಈ ಮೂಲಕ ತಂಡವನ್ನು ಆರಂಭಿಕ ಆಘಾತದಿಂದ ಪಾರು ಮಾಡಿದರು.

ವಿಲಿಯಮ್ಸನ್ ಹಾಗೂ ಲೇಥಮ್ 67 ರನ್‌ಗಳ ಜತೆಯಾಟ ನೀಡಿದರು. ಈ ವೇಳೆ ಕೇದರ್ ಜಾಧವ್  ವಿಲಿಯಮ್ಸನ್ (39) ಬಲಿಪಡೆಯುವ ಮೂಲಕ ಗೆಲುವಿನ ಆಸೆ ಮೂಡಿಸಿದರು. ಇದಾದ ಬೆನ್ನಲ್ಲೇ ಲೆಗ್ ಸ್ಪಿನ್ನರ್ ಯುಜ್ವೇಂದ್ರ ಚಹಲ್, ಸೆಟ್ ಬ್ಯಾಟ್ಸ್‌ಮನ್ ಟಾಮ್ ಲೇಥಮ್ (37) ಜತೆಗೆ ಕಾಲಿನ್ ಡಿ ಗ್ರಾಂಡ್‌ಹೋಮ್ (11) ವಿಕೆಟ್ ಕಬಳಿಸುವ ಮೂಲಕ ಪಂದ್ಯದಲ್ಲಿ ಭದ್ರ ಹಿಡಿತ ಸಾಧಿಸುವಂತೆ ಮಾಡಿದರು.

ನಂತರ ಜತೆಗೂಡಿದ ಜೇಮ್ಸ್ ನೀಶಂ ಹಾಗೂ ಮಿಚೆಲ್ ಸ್ಯಾಂಟ್ನರ್ ತಂಡವನ್ನು ಮುನ್ನಡೆಸಿದರೂ ತಂಡವನ್ನು ಗೆಲುವಿನತ್ತ ಮುನ್ನೆಡುಸುವಲ್ಲಿ ವಿಫಲರಾದರು.

Tags

Related Articles

Leave a Reply

Your email address will not be published. Required fields are marked *

Language
Close