ಆಗ ಸೇಬು ಹಣ್ಣನ್ನು ಯಾರೂ ಅರ್ಧ ತಿಂದಿರಲಿಲ್ಲ !

Posted In : ಸಂಗಮ, ಸಂಪುಟ

ನಾನು ಶಾರುಖ್ ಖಾನ್. ನನಗೀಗ 51 ವರ್ಷ. ಆದರೂ ನಾನು 21ರ ಹುಡುಗನಂತೆ ಆಡುತ್ತೇನೆ. ಅದು ಹೇಗಿರುತ್ತದೆಂದು ನೀವೆಲ್ಲ ನನ್ನ ಸಿನಿಮಾದಲ್ಲಿ ನೋಡಿದ್ದೀರಿ. ನಾನು ಕನಸುಗಳನ್ನು ಮಾರ್ತೀನಿ ಹಾಗೂ ಪ್ರೀತಿ ಹಂಚುತ್ತೇನೆ. ನನ್ನನ್ನು ನೀವೆಲ್ಲ ಜಗತ್ತಿನ ಬೆಸ್‌ಟ್ ಲವರ್ ಅಂತ ಭಾವಸ್ತೀರಾ ಅನ್ನೋದು ನನಗೆ ಗೊತ್ತು. ನಿಮ್ಮ ಭಾವನೆ ತಪ್ಪಾಗದ ಹಾಗೆ ನಾನು ನೋಡ್ಕೋತೀನಿ. ಇಲ್ಲಿರುವ ಬಹಳ ಮಂದಿ ನನ್ನ ಕೆಲಸ ನೋಡಿಲ್ಲ. ಅವರ ಬಗ್ಗೆ ನನಗೆ ಅನುಕಂಪವಿದೆ. ನನಗೆ ನ್ನನ ಬಗ್ಗೆಯೇ ಭ್ರಮೆ ಇದೆ ಅನ್ಕೊಂಡ್ರೆ ಅದು ಸತ್ಯವೇ. ಯಾಕೇಂದ್ರೆ ಅದು ಒಬ್ಬ ನಟನಿಗೆ ಇರಬೇಕಾದ್ದೇ.

ನನಗೆ ನನ್ನ ಬಗ್ಗೆ ಹೇಳಿಕೊಳ್ಳಬೇಕೆಂದು ನನ್ನ ಗೆಳೆಯರಾದ ಕ್ರಿಸ್ ಹಾಗೂ ಜೂಲಿಯಟ್ ಇಲ್ಲಿಗೆ ಆಹ್ವಾನ ನೀಡಿದ್ರು. ಅವರಿಗೆ ಮುಂದಿನ ದಿನಗಳ ನಾನು ಹೇಗಿರುತ್ತೇನೆ ಎಂದು ಹೇಳಬೇಕಂತೆ. ಅಂದ ಮೇಲೆ ಮೊದಲು ನಾನು, ಈಗಿನ ನನ್ನ ಬಗ್ಗೆ ಹೇಳಲೇಬೇಕು. ಇದೊಳ್ಳೆ ಹೇಗಿದೆ ಅಂದರೆ ಒಬ್ಬ ವಯಸ್ಸಾಗ್ತಿರೋ ಸಿನಿಮಾ ಹೀರೋ ಮೊದಲಿನಂತೆಯೇ ತನ್ನ ಉಳಿಸಿಕೊಳ್ಳಲು ಹೆಣಗುವಂತಿದೆ.

ನಾನು ದೆಹಲಿಯ ನಿರಾಶ್ರಿತರ ಕೇರಿಯಲ್ಲಿ ಹುಟ್ಟಿದವನು. ನನ್ನ ತಂದೆ ಸ್ವಾತಂತ್ರ ಹೋರಾಟಗಾರರಾಗಿದ್ದರು. ಹಾಗೆಯೇ ನನ್ನ ಅಮ್ಮ ಎಲ್ಲ ಅಮ್ಮಂದಿರತೇ ಹೋರಾಟಗಾರ್ತಿಯೇ. ನಮಗೆ ಜೀವನದಲ್ಲಿ ಕಷ್ಟಗಳಿತ್ತು. ನನ್ನ 20 ನೇ ವಯಸ್ಸಿನಲ್ಲಿ ನಾನು ನನ್ನ ಅಪ್ಪ ಅಮ್ಮ ಇಬ್ಬರನ್ನೂ ಕಳೆದುಕೊಂಡೆ. ನನಗಿನ್ನೂ ನನ್ನ ತಂದೆಯನ್ನು ಕಳೆದುಕೊಂಡ ದಿನ ನೆನಪಿದೆ. ನಮ್ಮ ಪಕ್ಕದ ಮನೆಯ ಡ್ರೈವರ್ ನಮ್ಮ ತಂದೆಯನ್ನು ಆಸ್ಪತ್ರೆಗೆ ಕರೆದೊಯ್ಯುತ್ತಿದ್ದ. ಆದರೆ ನಮ್ಮ ತಂದೆ ಆಗಲೇ ಶವವಾಗಿದ್ದರು. ಇನ್ನೂ 14. ಡ್ರೈವರ್ ಕಾರು ಬಿಡಲು ನಿರಾಕರಿಸಿಬಿಟ್ಟ. ನಾನು ಅಪ್ಪನ ದೇಹವನ್ನು ಹಿಂದಿನ ಸೀಟಿನಲ್ಲಿ ಕೂರರಿಸಿದೆ. ಅಮ್ಮ ಜತೆಗಿದ್ದರು.

ನಾನು ಕಾರ್ ಡ್ರೈವ್ ಮಾಡತೊಡಗಿದೆ. ಅಮ್ಮ ಬಿಕ್ಕುತ್ತಲೇ ಕೇಳಿದರು, ‘ನೀನ್ಯಾವಾಗ ಕಾರ್ ಡ್ರೈವ್ ಮಾಡುವುದನ್ನು ಕಲಿತೆ’ ಎಂದು. ನಾನು ಯೋಚಿಸಿದೆ. ಮತ್ತೆ ಹೇಳಿದೆ, ‘ಈಗಷ್ಟೇ’ ಆ ರಾತ್ರಿಯ ನಂತರ ನಾನು ಬದುಕಿನ ಕಷ್ಟದ ಎಷ್ಟೋ ಕಠಿಣ ಸಂಗತಿಗಳನ್ನು ಸುಲಭವಾಗಿ ಕಲಿಯತೊಡಗಿದೆ. ನಮ್ಮ ಬಟ್ಟಲಿಗೆ ಬಿದ್ದಿದ್ದನ್ನು ತಿನ್ನುತ್ತೇವೆ, ನಮಗೆ ಹೇಳಿದ್ದನ್ನು ಎನ್ನುವ ವಯಸ್ಸಿನಲ್ಲಿ ನಾನು ನನಗೆ ಹೇಳದೇ ಇರುವುದನ್ನೂ ಮಾಡಿದೆ. ನಾವು ಸಮಾಜದ ವ್ಯವಸ್ಥೆಯ ಮೇಲೆ ಅವಲಂಬಿಸಿರುತ್ತೇವೆ ಹಾಗೂ ನಮ್ಮ ನಾವು ಕಷ್ಟಪಟ್ಟು ಕಾಪಾಡಿಕೊಂಡಿರುತ್ತೇವೆ. ಆದರೆ ಸರಕಾರ ನಮ್ಮ ಒಳಿತಿಗೋಸ್ಕರ ಇದೆಲ್ಲ ಮಾಡಿತು ಎಂದು ಯೋಚಿಸುತ್ತೇವೆ.

ಆಗಿನ್ನೂ ವಿಜ್ಞಾನ ಸರಳವಾಗಿತ್ತು, ಸೇಬು ಹಣ್ಣನ್ನು ಯಾರೂ ಅರ್ಧ ತಿಂದಿರಲಿಲ್ಲ. ಅದು ಕೇವಲ ಹಣ್ಣಾಗಿ ಮಾತ್ರ ಗುರುತಿಸಲ್ಪಡುತ್ತಿತ್ತು. ಅದು ಮೊದಲು ಏವ್‌ನದಾಗಿತ್ತು. ನಂತರ ನ್ಯೂಟನ್‌ದಾಯಿತು. ಕೊನೆಗೆ ಸ್ಟೀವ್ ಜಾಬ್‌ಸ್ದಾಯಿತು. ನಾನು ನನ್ನ 20ನೇ ಮುಂಬೈನ ಮೆಟ್ರೋಪೋಲಿಸ್‌ಗೆ ಶಿಪ್‌ಟ್ ಆದೆ. ಜಗತ್ತಿನ ಎಲ್ಲ ಥರದ ಜನರನ್ನೂ ಭೇಟಿ ಮಾಡತೊಡಗಿದೆ. ವಿಧ ವಿಧದ ಮುಖಗಳು, ಓಟಗಳು, ಲಿಂಗಗಳು ಹೀಗೆ. ನನಗಾಗ ನಮ್ಮ ಸುತ್ತಲಿನ ವ್ಯವಸ್ಥೆಯ ಬಗೆಗೆ ನಂಬಿಕೆ ಕಡಿಮೆಯಾಗತೊಡಗಿತು. ಸುತ್ತೆಲ್ಲ ಐಡಿಯಾಗಳು ಬರುತ್ತಿತ್ತು. ಆಗಲೇ ನನಗೆ ನಾನು ಎಲ್ಲ ತಲುಪಬೇಕೋ ಅಲ್ಲಿ ತಲುಪಿದ್ದೇನೆ ಅನ್ನಿಸತೊಡಗಿತ್ತು. ನಾನು ನನ್ನ 40ರ ವಯಸ್ಸಿನಲ್ಲಿ ನಿಜವಾಗಿಯೂ ಹಾರಾಡುತ್ತಿದ್ದೆ. ಎಲ್ಲ ಕಡೆಯೂ ನಾನೇ ಇದ್ದೆ. ಅಷ್ಟರಲ್ಲೇ ನಾನು 50 ಸಿನಿಮಾ ಮಾಡಿ ಗೊತ್ತಾ? ಜತೆಗೆ 200ಕ್ಕೂ ಹೆಚ್ಚು ಹಾಡುಗಳು. ಮಲೇಷ್ಯಾದಲ್ಲಿ ನನ್ನ ರಸಸಂಜೆಯಾಗುತ್ತಿತ್ತು.

ಫ್ರೆಂಚ್ ಸರಕಾರ ಅದರ ಅತ್ಯುನ್ನತ ನಾಗರೀಕ ಗೌರವ ಪ್ರಶಸ್ತಿ ಕೊಟ್ಟು ಗೌರವಿಸಿತ್ತು. ಅದರ ಸ್ಪೆಲ್ಲಿಂಗ್ ಇವತ್ತಿಗೂ ಹೇಳಲು ಬರುವುದಿಲ್ಲ ನನಗೆ. ಧನ್ಯವಾದಗಳು ಫ್ರಾನ್ಸ್ ! ಆ ಗೌರವಕ್ಕಾಗಿ ಥ್ಯಾಂಕ್ಯೂ. ಎಲ್ಲಕ್ಕಿಂತ ನನಗೆ ನೆನಪಿನಲ್ಲಿರುವುದೇನೆಂದರೆ ನನಗಾಗ ಏಂಜಲೀನಾ ಜೋಲಿಯನ್ನು ಭೇಟಿ ಮಾಡಲು ಸಾಧ್ಯವಾಯಿತು. ಆಕೆಯೂ ಎಲ್ಲಾದರೂ ನನ್ನ ಭೇಟಿಯನ್ನು ನೆನಪಿಸಿಕೊಂಡಿರಬಹುದು. ನಾನು ಹನಾಹ್ ಮೊಂಟಾನಾಳ ಪಕ್ಕವೇ ಕೂತಿದ್ದೆ. ಆದರೆ ಹೊತ್ತು ಅವಳು ನನಗೆ ಬೆನ್ನು ಹಾಕಿಯೇ ಕೂತಿದ್ದಳು. ಆಗಲೇ ಹೇಳಿದಂತೆ ನಾನು ಮಿಲಿಯಿಂದ ಜೋಲಿಗೆ ಶಿಪ್‌ಟ್ ಆಗುತ್ತ ಮಜವಾಗಿದ್ದೆ. ಆದರೂ ನನ್ನೊಳಗೊಂದು ಮಾನವೀಯ ಮುಖವಿತ್ತು.

ನಾನು ಹೇಳಿದ್ದೆಲ್ಲ ಸುದ್ದಿಯಾಗುತ್ತಿತ್ತು, ನಾನು ಹೇಳಿದ್ದಕ್ಕೆಲ್ಲ ಹೊಸ ಅರ್ಥ ಹುಟ್ಟಿಕೊಳ್ಳುತ್ತಿತ್ತು. ಕೆಲವು ವಿವಾದವೂ ಆಗುತ್ತಿತ್ತು. ನಾನು ಹೇಳದೇ ಇರುವುದು ಕೂಡ ಹೇಳಿದ್ದೇನೆ ಎಂಬಂತೆ ಆಗುತ್ತಿತ್ತು. ನಾಲ್ಕು ವರ್ಷದ ಹಿಂದೆ ನಾನು ಹಾಗೂ ನನ್ನ ಮುದ್ದಿನ ಹೆಂಡತಿ ಗೌರಿ, ಮೂರನೇ ಮಗುವನ್ನು ಪಡೆಯಲು ನಿರ್ಧರಿಸಿದೆವು. ಸಾಮಾಜಿಕ ಜಾಲತಾಣದಲ್ಲಿ ಹೇಗೆ ಬಿಂಬಿಸಲಾಯಿತು ಎಂದರೆ ಅದು ನಮ್ಮ ಮೊದಲ ಮಗನ ಮಗು ಎಂದು ! ಆಗಿನ್ನೂ ನನ್ನ ಮಗನಿಗೆ 15 ವರ್ಷ. ಅವನು ಅವನ ಗೆಳತಿಯೊಂದಿಗೆ ರೊಮಾನಿಯಾದಲ್ಲಿ ಕಾರಿನಲ್ಲಿ ಡ್ರೈವ್ ಹೋಗುತ್ತಿದ್ದ. ಅದರಲ್ಲಿ ಮುಚ್ಚಿಡುವುದೇನೂ ಇಲ್ಲ. ಆದರೆ ಅವನು ಕೇವಲ ಡ್ರೈವ್ ಹೋಗುತ್ತಿದ್ದ. ಯಾವುದೋ ಒಂದು ವಿಡಿಯೋ ಕೂಡ ಹರಿದಾಡುತ್ತಿತ್ತು.

ಈ ವಿಚಾರ ನಮ್ಮ ಇಡಿಯ ಕುಟುಂಬದ ಮನಸ್ವಾಸ್ಥ್ಯವನ್ನೇ ಕೆಡಿಸಿತು. ನನ್ನ ಹಿರಿಯ ಮಗನಿಗೀಗ 19 ವರ್ಷ. ಅವನಿಗೆ ಹಲೋ ಹೇಳಿದರೆ ಅವನು ಏನು ಹೇಳ್ತಾನೆ ಎಂದರೆ, ‘ ನನ್ನ ಹತ್ರ ಇನ್ನೂ ಯುರೋಪಿಯನ್ ಡ್ರೈವಿಂಗ್ ಲೈಸೆನ್‌ಸ್ ಎನ್ನುತ್ತಾನೆ. ಅರ್ಥವಾಯಿತಲ್ಲವೆ? ಎಲ್ಲಿಂದೆಲ್ಲಿಗೆ ಲಿಂಕ್ ಮಾಡುತ್ತಾರೆ ನೋಡಿ.  ಬಹುಶಃ ನಾವೆಲ್ಲ ಮಧ್ಯ ವಯಸ್ಸಿನ ಗೊಂದಲಗಳನ್ನು ಎದುರಿಸಿಯೇ ಇರುತ್ತೇವೆ. ನಮಗಲ್ಲಿ ಕಾಡುವುದು ಮಾನವೀಯತೆ. ಆದರೆ ಆ ಶಬ್ದ ಬಳಸಿದರೆ ತೀರಾ ಸಿನಿಕತೆ ಎನಿಸಬಹುದು. ನಾನು ನನ್ನ ಮಧ್ಯ ವಯಸ್ಸಿನಲ್ಲಿ ಎಲ್ಲವನ್ನೂ ಮಾರತೊಡಗಿದೆ. ಹೇರ್ ಆಯಿಲ್‌ನಿಂದ ಹಿಡಿದು, ಡೀಸೆಲ್ ಜನರೇಟರ್ ತನಕವೂ. ಎಲ್ಲವನ್ನೂ ಕೊಂಡುಕೊಳ್ಳತೊಡಗಿದರು, ಕಚ್ಚಾ ತೈಲದಿಂದ, ಅಣು ಸ್ಥಾವರದವರೆಗೂ!

ಇವತ್ತಿಗೂ ಸಿನಿಮಾ ನಾಯಕನಂತೆ ಮೈಗಂಟಿಕೊಳ್ಳುವ ಸೂಟ್ ಧರಿಸಿ ನನ್ನ ನಾನು ಕಂಡುಕೊಳ್ಳಲು ಪ್ರಯತ್ನಿಸುತ್ತೇನೆ. ಆದರೂ ನಾನು ಸೋತಿರುವುದಾಗಿ ಒಪ್ಪಿಕೊಳ್ಳಲೇಬೇಕು. ಬಾಟ್‌ಮ್ಯಾನ್, ಸ್ಪೈಡರ್‌ಮ್ಯಾನ್, ಹಾಗೂ ಸೂಪರ್‌ಮ್ಯಾನ್‌ಗಳ ಪರವಾಗಿ ಈ ಮಾತು ಹೇಳುತ್ತಿದ್ದೇನೆ. ನಂತರ ನಾನು ನನಗೆ ಗೊತ್ತಿಲ್ಲದೇ ಹೊಸ ಥರದ ಡಾನ್‌ಸ್ ಕಂಡು ಹಿಡಿದುಬಿಟ್ಟೆ. ಅದು ಯಾವುದೆಂದರೆ ಲುಂಗಿ ಡಾನ್‌ಸ್. ಅದು ಬಹಳ ಜನಪ್ರಿಯವಾಗಿಹೋಯ್ತು. ಯಾರಿಗೂ ಏನಾಗುತ್ತಿದೆ ಎಂಬ ಅರಿವಿರಲಿಲ್ಲ. ನನ್ನನ್ನೂ ಎಲ್ಲರೂ ಆ ಹಾಡಿನ ಹುಚ್ಚಲ್ಲಿ ಕಳೆದು ಹೋದರು. ನಾನು ಕೂಡ!

ನಂತರ ನಾನು ನನ್ನನ್ನು ಸೋಷಿಯಲ್ ಮೀಡಿಯಾದಲ್ಲಿ ಮತ್ತೆ ಕಟ್ಟಿಕೊಳ್ಳಲು ಪ್ರಯತ್ನಿಸಿದೆ ಎಲ್ಲರಂತೇ. ನಾನಂದುಕೊಂಡೆ, ನಾನು ಫಿಲಾಸಫಿಕಲ್ ಆಗಿ ಟ್ವೀಟ್ ಮಾಡಿದರೆ ಜನರು ನನ್ನ ಒಪ್ಪಿಕೊಳ್ಳುತ್ತಾರೆ ಎಂದು. ಆದರೆ ನಿಜ ಹೇಳ್ತೀನಿ ಅದಕ್ಕೆ ಕೆಲವರು ಕೊಟ್ಟ ಉತ್ತರ ದೇವರಾಣೆಗೂ ನನಗಿವತ್ತಿಗೂ ಅರ್ಥವಾಗಿಲ್ಲ. ಒಬ್ಬರು ನನ್ನ ಟ್ವೀಟ್ ಗೆ ‘ಅಡಿಡಾಸ್’ ಎಂದು ಉತ್ತರ ಕೊಟ್ಟರು. ನನಗದು ಏನೆಂದೇ ಅರ್ಥವಾಗಲಿಲ್ಲ. ಆಗ 16 ವರ್ಷದ ಮಗ ನನಗೆ ಜ್ಞಾನೋದಯ ಮಾಡಿಸಿದ. ಅಡಿಡಾಸ್ ಎಂದರೆ, ‘ಆಲ್ ಡೇ, ಐ ಡ್ರೀಮ್ ಅಬೌಟ್ ಸೆಕ್‌ಸ್’ ಅಂತ ಅರ್ಥವಂತೆ! ನಾನದಕ್ಕೆ ಕೊನೆಗೆ ಡಬ್ಲೂಟಿಎಫ್ ಎಂದು ಉತ್ತರಿಸಿದೆ. ನಾನಾಗ್ಲೇ ಹೇಳಿದೆ, ನನಗೀಗ 51 ವರ್ಷ. ಬುದ್ಧಿ ಮೆಲ್ಲಗಾಗ್ತಿದೆ. ಇದೆಲ್ಲ ಅರ್ಥವಾಗುವುದಿಲ್ಲ. ಆದರೆ ಮಾನವೀಯತೆ ಎನ್ನುವುದು ಇದ್ದರೆ ಅದು ಈಗ ಅರ್ಥವಾಗುತ್ತದೆ.

ಏಕೆಂದರೆ ಈಗ ಬದುಕಿನಲ್ಲಿ ಧೈರ್ಯವಿದೆ, ಆಶಾವಾದವಿದೆ, ನನ್ನ ಕೈಲೀಗ ಸಂಪತ್ತಿದೆ. ಆದರೂ ಇಲ್ಲಿಗೆ ಬರುವಾಗ ಚೂರೇ ಧೈರ್ಯ ಇತ್ತು. ನಾನು ನನ್ನ ಮುಖವನ್ನು ಗಂಭೀರವಾಗಿರಿಸಿಕೊಳ್ಳಲು ತೀರ್ಮಾನಿಸಿದೆ. ಆದರೆ ಕೊನೆಗೆ ಅನಿಸಿತು, ನನ್ನ ಮುಖ ಮೇಡಮ್ ಟುಸ್ಸಾಡ್ ಅರಮನೆಯಲ್ಲಿನ ಮೇಣದ ಬೊಂಬೆಯಂತೆ ಕಾಣುತ್ತದೆ ಎಂದು. ಆಗ ನನಗೆ ನಾನೇ ಕೇಳಿಕೊಂಡೆ, ನಾನು ನಿಜವಾಗಿಯೂ ನನ್ನ ಮುಖವನ್ನು ಕೃತಕವಾಗಿ ಇರಿಸಿಕೊಳ್ಳಬೇಕಾ? ನಾನು ನಿಜವಾಗಿಯೂ ಒಬ್ಬ ನಟ. ಆಧುನಿಕ ಅಭಿವ್ಯಕ್ತಿಗಳನ್ನು ಅಭಿನಯಿಸಿ ತೋರಿಸಬಲ್ಲ ಪ್ರತಿಭೆ. ನನ್ನ ದೇಶ ನನ್ನ ಮುಖದಲ್ಲಿ ಕನಸುಗಳನ್ನು ಮಾರಾಟ ಮಾಡುವ, ರೋಮ್ಯಾನ್‌ಸ್ನ ಕಿಂಗ್‌ನನ್ನು ಹಾಗೂ ‘ಬಾದ್‌ಶಾಹ್ ಬಾಲಿವುಡ್’ ನ್ನನು ನೋಡಿತು. ನನ್ನದು ಚಾಕಲೇಟ್ ಹೀರೋ ಮುಖವಲ್ಲ, ಒಂಥರಾ ನೋಡಲೂ ಚಂದವಿಲ್ಲ.

ಹೀರೋಗಳಿಗೆ ಇರಬೇಕಾದ ಮುಖಕ್ಕಿಂತ ತೀರಾ ಅಸಂಪ್ರದಾಯಿಕವಾಗಿದೆ. ನನ್ನ ದೇಶದ ಜನ ನನ ಗೆ ಅಪರಿಮಿತ ಪ್ರೀತಿ ಕೊಟ್ಟಿದ್ದಾರೆ. ಅವರಿಂದ ನಾನು ಸಾಕಷ್ಟು ಕಲಿತಿದ್ದೇನೆ. ಶ್ರೀಮಂತಿಕೆಯಾಗಲೀ, ಬಡತನವಾಗಲೀ ನಿಮಗೆ ನಿಮ್ಮ ಬದುಕನ್ನು ಸರಳವೂಗೊಳಿಸುವುದಿಲ್ಲ, ಕಷ್ಟಕರಗೊಳಿಸುವುದೂ ಇಲ್ಲ. ನಾನು ನನ್ನ ದೇಶದ ಜನರಿಂದ ಬದುಕಿನ ಘನತೆಯನ್ನು ಕಲಿತೆ. ಔನ್ನತ್ಯ ಹಾಗೂ ಕರುಣೆಯಿಂದ ಒಂದು ದೇಶದ ಘನತೆ, ಮಾನವೀಯತೆ, ಧರ್ಮವನ್ನು ತ್ತಿ ಹಿಡಿಯಬಹುದೆಂಬುದನ್ನು ಕಲಿತೆ. ನಮ್ಮ ಅಂತರಂಗವನ್ನು ಕಲಕುವುದು, ನಮ್ಮನ್ನು ಏನನ್ನಾದರೂ ಹೊಸದು ಮಾಡುವಂತೆ ಪ್ರೇರೇಪಿಸುವುದು, ಸೋಲದಂತೆ ಎತ್ತಿ ಹಿಡಿಯುವುದು, ಕಷ್ಟಗಳಿಂದ ಪಾರಾಗಲು ಮೊದಲಿನಿಂದಲೂ ಗೊತ್ತಿರುವ, ಸರಳವಾದ ಒಂದೇ ಭಾವನೆಯೆಂದರೆ ಅದು ಪ್ರೀತಿ ಎನ್ನುವುದನ್ನು ನಾನು ನನ್ನ ಜನರಿಂದ ಕಲಿತೆ. ಪ್ರೀತಿ ಎಂಬ ಎರಡಕ್ಷರದ ಶಬ್ದವನ್ನು ಅರ್ಥಮಾಡಿಕೊಂಡು ನಮ್ಮದಾಗಿಸಿಕೊಂಡರೆ, ಅದೇ ಮಾನವತ್ವವನ್ನು ಮೇಲೆತ್ತುತ್ತದೆ. ಹೀಗಾಗಿ ನಾನು ನನ್ನ ಮುಂದಿನ ‘ನಾನು’ ಪ್ರೀತಿಯಾಗಿರಬೇಕು ಅಂದುಕೊಂಡಿದ್ದೇನೆ.

ನೀವು ನಿಮ್ಮ ಪವರ್ ಉಪಯೋಗಿಸಿ, ಸುತ್ತ ಗೋಡೆ ಕಟ್ಟಿಕೊಳ್ಳಬಹುದು, ಹಾಗೆ ಮಾಡುವುದರ ಮೂಲಕ ಜನರನ್ನು ಆಚೆ ಇಡಬಹುದು. ಇಲ್ಲವೇ ನಿಮ್ಮ ಪವರನ್ನು ಬಳಸಿ ಆ ಗೋಡೆಯನ್ನು ಒಡೆದು ಜನರನ್ನು ಪ್ರೀತಿಯಿಂದ ಸ್ವಾಗತಿಸಬಹುದು. ನೀವು ನಿಮ್ಮ ನಂಬಿಕೆಗಳನ್ನು ಬಳಸಿ ಜನರನ್ನು ಹೆದರಿಸಬಹುದು ಅಥವಾ ಅದೇ ನಂಬಿಕೆಯಿಂದ ಜನರಿಗೆ ಧೈರ್ಯ ತುಂಬಬಹುದು. ನೀವು ನಿಮ್ಮ ಶಕ್ತಿಯನ್ನು ಅಣುಬಾಂಬ್ ಮಾಡಲು ಬಳಸಿ ಅದರಿಂದ ಸರ್ವನಾಶ ಮಾಡಬಹುದು ಇಲ್ಲವೇ ಜನರ ಜೀವನವನ್ನು ಬೆಳಗಬಹುದು. ನೀವು ಸಮುದ್ರವನ್ನು ಕಸದಿಂದ ತುಂಬಿಸಬಹುದು, ಕಾಡು ನೆಲಸಮ ಮಾಡಬಹುದು, ಪರಿಸರ ಸಮತೋತಲನ ಕೆಡಿಸಬಹುದು ಇಲ್ಲವೇ ಶುದ್ಧ ನೀರು, ಮರಗಳಿಂದ ಮತ್ತೆ ಮರುಜೀವ ತುಂಬಬಹುದು.

ನಾವು ಮಂಗಳನ ಅಂಗಳದಲ್ಲಿ ಕಾಲಿಟ್ಟು ಕಾಲನಿಗಳನ್ನು ಕಟ್ಟಬಹುದು ಇಲ್ಲವೇ ತಾನಾಗೇ ಜೀವಸೃಷ್ಟಿಯಾಗುವವರೆಗೂ ತಾಳ್ಮೆಯಿಂದ ಕಾಯಬಹುದು. ನಾವು ನಮ್ಮ ಹಣವನ್ನೆಲ್ಲ ಉಪಯೋಗಿಸಿ ಈ ಭೂಮಿಯನ್ನು ಯುದ್ಧ ಭೂಮಿಯಾಗಿಸಿ ಮಕ್ಕಳ ಕೈಗೆ ಗನ್ ಕೊಡಬಹುದು, ಆ ಮೂಲಕ ಒಬ್ಬರನ್ನೊಬ್ಬರು ಕೊಂದುಕೊಳ್ಳಲು ಹೇಳಬಹುದು ಇಲ್ಲವೇ ಅದೇ ಹಣದಿಂದ ಆ ಮಕ್ಕಳ ಹೊಟ್ಟೆ ತುಂಬಬಹುದು.

ಪ್ರೀತಿ ಎಂದರೆ ಎಂದು ನನ್ನ ನೆಲ ನನಗೆ ಕಲಿಸಿಕೊಟ್ಟಿದೆ. ಕಳೆದ ಕೆಲವು ದಿನಗಳಿಂದ ಈ ಟೆಡ್‌ಟಾಕ್ ವೇದಿಕೆಗೆ ಅದ್ಭುತವಾದವರು ಬಂದು ಮಾತನಾಡುತ್ತಿದ್ದಾರೆ. ತಮ್ಮ ಪ್ರತಿಭೆಯನ್ನು ಪ್ರದರ್ಶಿಸುತ್ತಿದ್ದಾರೆ. ಸ್ವಂತ ಸಾಧನೆ ಬಗ್ಗೆ ಮಾತಾಡುವುದು, ಹೊಸ ಆವಿಷ್ಕಾರಗಳ ಬಗ್ಗೆ ಹೇಳುವುದು, ತಂತ್ರಜ್ಞಾನ, ವಿಜ್ಞಾನ ಇವೆಲ್ಲದರ ಕುರಿತು ನಾವು ಪಡೆಯುತ್ತಿರುವ ಜ್ಞಾನ ಹಾಗೂ ಇದನ್ನೆಲ್ಲ ಆಸಕ್ತಿಯಿಂದ ಕೇಳುತ್ತಿರುವ ನೀವೆಲ್ಲ ಮುಂದೆ ಭವಿಷ್ಯವಿದೆ ಎಂಬ ಆಶಾವಾದ ಹುಟ್ಟಿಸಿರುವಿರಿ.

ನನ್ನ ಪ್ರಕಾರ ಭವಿಷ್ಯದ ನೀನು ಎಂದರೆ ‘ಅನಂತವಾದ ನೀನು’. ಭಾರತದಲ್ಲಿ ಚಕ್ರ ಎನ್ನುತ್ತಾರೆ. ಇದು ಶುರುವಾದಲ್ಲೇ ಮುಕ್ತಾಯವಾಗುತ್ತದೆ. ಆ ‘ನೀನು’ ಕಾಲಚಕ್ರದಲ್ಲಿ ಅದರದ್ದೇ ಆದ ಸಮಯಕ್ಕೆ ಎಲ್ಲಿ ತಲುಪಬೇಕೊ ಅಲ್ಲಿ ಬಂದು ತಲುಪಿ, ಪರಿಪೂರ್ಣ ನೀವಾಗುವಿರಿ. ಹಾಗೆ ತಲುಪಿದ ನೀನು ಪ್ರಾಂಜಲವಾದ ಮಾನವತ್ವಕ್ಕೆ ಮರಳುತ್ತದೆ. ಹಾಗಾದಾಗ ನೀವು ಪರಿಶುದ್ಧ ಅಂತರಂಗದಿಂದ ಪ್ರೀತಿಸುವವರಾಗುವಿರಿ, ಸತ್ಯದ ಕಣ್ಣಿಂದ ನೋಡಬಲ್ಲವರಾಗುವಿರಿ, ಇದ್ದಂತೆ ಇರುವ, ಬದಲಾಯಿಸದ ಕಣ್ಣುಗಳಿಂದ ಕನಸು ಕಾಣಬಲ್ಲವರಾಗುವಿರಿ. ಭವಿಷ್ಯದ ನೀವು ಒಬ್ಬ ವಯಸ್ಸಾಗುತ್ತಿರುವ ಸಿನಿಮಾ ನಾಯಕನಂತೆ ಆಗಬೇಕು. ಅವನಂದುಕೊಳ್ಳುತ್ತಾನೆ, ಜಗತ್ತು ತನ್ನಷ್ಟಕ್ಕೇ ಪರಿಪೂರ್ಣವಾದ, ತುಂಬು ಪ್ರೀತಿಯಿಂದ ತುಂಬಿದೆ ಎಂದು. ಅಂಥ ಜಗತ್ತು ಸೃಷ್ಟಿಯಾಗಬೇಕೆಂದರೆ, ಅಲ್ಲಿ ನೀವಿರಬೇಕು ಹಾಗೂ ಆ ಪ್ರಪಂಚವು ತನ್ನನ್ನೇ ತಾನು ಪ್ರೀತಿಸಿಕೊಳ್ಳಲು ಸಮರ್ಥವಾಗಿರಬೇಕು. ಇದನ್ನು ನಾನು ನಂಬುತ್ತೇನೆ. ಧನ್ಯವಾದಗಳು.

ಶಾರುಖ್ ಖಾನ್
ಶಾರುಖ್ ಖಾನ್ ಬಾಲಿವುಡ್ ಬಾದ್‌ಶಾ ಎಂದೇ ಪ್ರಸಿದ್ಧ. ವಿಲನ್ ಪಾತ್ರ ಮಾಡುತ್ತಲೇ ಜನರಿಗೆ ಇಷ್ಟವಾದ ನಟ. ಹಿಂದಿ ಚಿತ್ರರಂಗ ಕಂಡ ಅದ್ಭುತ ಲವರ್ ಬಾಯ್. ಅಭಿನಯದಿಂದಲೇ ಜನರ ಮನಸೂರೆಗೊಳ್ಳುವುದಲ್ಲದೇ ಅಪಾರವಾದ ಬುದ್ಧಿವಂತಿಕೆಯಿಂದಲೂ ಅಚ್ಚರಿಗೊಳಿಸುತ್ತಾರೆ. ಅವರ ಮಾತಿನ ಆಳ, ಅದರಲ್ಲಿನ ಅಪಾರ ಜೀವನಾನುಭವ ಇಂದಿನ ಯುವ ಪೀಳಿಗೆಯನ್ನು ಸೂಜಿಗಲ್ಲಿನಂತೆ ಸೆಳೆಯುತ್ತಿದೆ.

Leave a Reply

Your email address will not be published. Required fields are marked *

thirteen − 11 =

Recent News
Loading

ಸದನದಲ್ಲಿ ಸಿಎಂ ವಿರುದ್ಧವೇ ಹಕ್ಕುಚ್ಯುತಿ ಮಂಡಿಸಿದ ಪ್ರತಿಪಕ್ಷದ ನಿರ್ಧಾರ ಸರಿಯೇ?

Thank you for voting
You have already voted on this poll!
Please select an option!

vishwavani-timely-3

 
Back To Top