About Us Advertise with us Be a Reporter E-Paper

Breaking Newsಪ್ರಚಲಿತವಿದೇಶ
Trending

ಸಖತ್ ವೈರಲ್ ಆಗಿದೆ ಪುತ್ರಿಗಾಗಿ ತಂದೆ ಬರೆದಿರುವ ರೆಸ್ಯೂಮ್

ಲಂಡನ್: ಯುವತಿಯೊಬ್ಬಳು ರೆಸ್ಯೂಮ್ ಬರೆದುಕೊಡುವಂತೆ ತಂದೆಗೆ ಹೇಳಿದ್ದಾಳೆ. ಮಗಳಿಗಾಗಿ ತಂದೆ ಬರೆದಿರೋ ರೆಸ್ಯೂಮ್ ಇದೀಗ ಸಖತ್ ವೈರಲ್ ಆಗಿದ್ದೂ, ಹೀಗೂ ಬರೀತಾರಾ ಅಂತ ಅಚ್ಚರಿ ಹಾಗೂ ನಗು ತರಿಸಿದೆ. ಅದೇನು ಅಂತೀರಾ.. ಮುಂದೆ ಓದಿ..

ಇಂಗ್ಲೆಂಡ್ ನಲ್ಲಿ ಯುವತಿ ಹೇಳಿದ್ದ ಕೆಲಸವನ್ನು ಆಕೆಯ ತಂದೆ ಅಚ್ಚುಕಟ್ಟಾಗಿ ಮಾಡಿದ್ದಾರೆ. ಎರಡು ವಿಷಯಗಳಲ್ಲಿ ಫೇಲ್ ಆಗಿದ್ದು, ಫೇಸ್‍ಬುಕ್ ನಲ್ಲೇ ತನ್ನ ಸಮಯ ಕಳೆಯುವುದಾಗಿ ಬರೆದಿದ್ದಾರೆ. ಕೌಶಲಗಳು ಮತ್ತು ವೈಯಕ್ತಿಕ ಗುಣಗಳ ಬಗ್ಗೆ ಸೋಮಾರಿ, ಅಜ್ಞಾನಿ ಎಂಬುದಾಗಿ  ಉಲ್ಲೇಖಿಸಿದ್ದಾರೆ.

ತಂದೆ ಬರೆದಿರುವ ಈ ರೆಸ್ಯೂಮ್ ಅನ್ನು ಯುವತಿ ಸಾಮಾಜಿಕ ಜಾಲಾತಾಣದಲ್ಲಿ ಅಪ್‍ಲೋಡ್ ಮಾಡಿದ್ದು, ಎಲ್ಲರನ್ನು ನಗೆಗಡಲಿನಲ್ಲಿ ತೇಲಿಸುವಂತೆ ಮಾಡಿದೆ. ಇಂತಹ ಪ್ರಾಮಾಣಿಕ ರೆಸ್ಯೂಮ್ ನಿಂದ ಕೆಲಸ ಗಿಟ್ಟಿಸಿಕೊಳ್ಳಲೂ ಸಾಧ್ಯ ಎಂದು ಕೆಲವರು ಹಾಸ್ಯ ಮಾಡಿದ್ದಾರೆ.

Tags

Related Articles

Leave a Reply

Your email address will not be published. Required fields are marked *

Language
Close