About Us Advertise with us Be a Reporter E-Paper

Breaking Newsದೇಶಪ್ರಚಲಿತ
Trending

ಭಯೋತ್ಪಾದಕ ಪರಿವರ್ತಿತ ಯೋಧನಾಗಿ ಹುತಾತ್ಮನಾದ ನಜೀರ್‌ ವಾನಿಗೆ ಅಶೋಕ ಚಕ್ರ ಪದವಿ

ಶ್ರೀನಗರ : ಈ ಹಿಂದೆ ಭಯೋತ್ಪಾದಕನಾಗಿದ್ದು ತದನಂತರ ಯೋಧನಾಗಿ ಪರಿವರ್ತಿತನಾಗಿದ್ದ ನಜೀರ್‌ ಅಹಮ್ಮದ್‌ ವಾನಿ ದಕ್ಷಿಣ ಕಾಶ್ಮೀರದ ಶೋಪಿಯಾನ್‌ ಜಿಲ್ಲೆಯಲ್ಲಿ  ನಡೆದಿದ್ದ ಭಯೋತ್ಪಾದಕಕ ವಿರುದ್ಧ ಕಾರ್ಯಾಚರಣೆ ವೇಳೆ ಹುತಾತ್ಮರಾಗಿದ್ದರು. ಇವರ ಪರಮೋಚ್ಚ ತ್ಯಾಗವನ್ನು ಪರಿಗಣಿಸಿ ಅವರಿಗೆ ಭಾರತೀಯ ಸೇನೆಯ ಪರಮೋಚ್ಚ ಅಶೋಕ ಚಕ್ರ ಪದವಿಯನ್ನು ನೀಡಲಾಗುವುದು ಎಂದು ರಕ್ಷಣಾ ಇಲಾಖೆ ತಿಳಿಸಿದೆ.

ವಾನಿ ಅವರು ಉಗ್ರ ಸಂಘಟನೆ ತೊರೆದು 2004ರಲ್ಲಿ ಭಾರತೀಯ ಸೇನೆ ಸೇರಿದ್ದರು. ಯೋಧರಿಗೆ ಭಾರತ ಸರ್ಕಾರ ನೀಡುವ ಅತ್ಯುತ್ತಮ ಪ್ರಶಸ್ತಿ ಇದಾಗಿದೆ. 2018ರ ನವೆಂಬರ್‌ನಲ್ಲಿ ಜಮ್ಮು-ಕಾಶ್ಮೀರದಲ್ಲಿ ನಡೆದಿದ್ದ ಎನ್‌ಕೌಂಟರ್‌ನಲ್ಲಿ ನಜೀರ್‌ ವಾನಿ ಹತರಾಗಿದ್ದರು. ಈ ಕಾರ್ಯಾಚರಣೆಯಲ್ಲಿ ಭಾರತೀಯ ಸೇನೆ ಆರು ಮಂದಿ ಭಯೋತ್ಪಾಕರನ್ನು ಹೊಡೆದುರುಳಿಸಿತ್ತು. ವಾನಿ, ಕಾಶ್ಮೀರದ 162ನೇ ಬೆಟಾಲಿಯನ್‌ನಲ್ಲಿ ಕಾರ್ಯನಿರ್ವಹಿಸುತ್ತಿದ್ದರು. 2007, 2017ರಲ್ಲಿ ಸೇನೆಯಿಂದ ಪದಕವನ್ನು ಪಡೆದಿದ್ದರು.

ಸೇನೆಗೆ ಸೇರುವುದಕ್ಕೂ ಮೊದಲು ನಜೀರ್‌, ‘ಇಖ್ವಾನ್’ ಉಗ್ರ ಸಂಘಟನೆಯಲ್ಲಿದ್ದರು. ನಂತರ ಮನಪರಿವರ್ತನೆಯಾಗಿ ಸೇನೆಗೆ ಸೇರಿದ್ದರು.ಇವರು ಮೂಲತಃ ಕುಲಗಾಂವ್‌ ನಿವಾಸಿಯಾಗಿದ್ದು, ಎರಡು ಬಾರಿ ಪ್ರತಿಷ್ಠಿತ ಸೇನಾ ಮೆಡಲ್‌ ಪಡೆದಿದ್ದಾರೆ.

Tags

Related Articles

Leave a Reply

Your email address will not be published. Required fields are marked *

Language
Close