ಜಮ್ಮು ಕಾಶ್ಮೀರ: ಸೇನಾ ನೆಲೆ ಮೇಲೆ ಭಯೋತ್ಪಾದಕರ ದಾಳಿ, ಇಬ್ಬರು ಕಿರಿಯ ಅಧಿಕಾರಿಗಳು ಹುತಾತ್ಮ

Posted In : ದೇಶ

ದೆಹಲಿ: ಜಮ್ಮು ಕಾಶ್ಮೀರದ ಸುಂಜುವಾನ್‌ ಸೇನಾ ನೆಲೆ ಮೇಲೆ ನಡೆದ ದಾಳಿಯಲ್ಲಿ ಇಬ್ಬರು  ಸೇನಾಧಿಕಾರಿಗಳು ಹುತಾತ್ಮರಾಗಿದ್ದಾರೆ.

ಜೈಶೆ ಮೊಹಮ್ಮದ್‌ನ ಐದು ಶಸ್ತ್ರ ಸಜ್ಜಿತ ಭಯೋತ್ಪಾದಕರು ನಡೆಸಿದ ದಾಳಿಯಲ್ಲಿ ಕಿರಿಯ ಕಮಿಷನ್ಡ್‌ ಅಧಿಕಾರಿ ಎಂ ಅಶ್ರಫ್‌ ಮಿರ್‌ ಹಾಗು ಮದನ್‌ ಲಾಲ್‌ ಹುತಾತ್ಮರಾಗಿದ್ದಾರೆ.

ಘಟನೆಯಲ್ಲಿ ಮತ್ತೊಬ್ಬ ಅಧಿಕಾರಿ ಹಾಗು ನಾಗರಿಕ ಗಾಯಗೊಂಡಿದ್ದು ಮಿಲಿಟರಿ ಆಸ್ಪತ್ರೆಗೆ ದಾಖಲಿಸಲಾಗಿದೆ.

36 ಸೇನಾ ಬ್ರಿಗೇಡ್‌ನ ಸುಂಜ್ವಾನ್‌ ನೆಲೆಯ ಹಿಂಭಾಗದಿಂದ ಒಳನುಗ್ಗಿದ ಮೂರು ಜೈಶೆ ಮೊಹಮ್ಮದ್‌ ಭಯೋತ್ಪಾದಕರು ಗುಂಡಿನ ಮಳೆಗರೆದಿದ್ದಾರೆ. ಗ್ಯಾರಿಸನ್‌ನ ಕಟ್ಟಡವೊಂದರಲ್ಲಿ ಭಯೋತ್ಪಾದಕರನ್ನು ದಿಗ್ಭಂಧಿಸಲಾಗಿದೆ ಎಂದು ನಂಬಲಾಗಿದೆ.

“ಮುಂಜಾನೆ 4:55ರ ವೇಳೆಗೆ ಅನುಮಾನಾಸ್ಪದ ಚಲನವಲನವನ್ನು ಸೆಂಟ್ರಿ ಕಂಡಿದ್ದಾನೆ. ಸೆಂಟ್ರೆ ಬಂಕರ್‌ ಮೇಲೆ ಗುಂಡಿನ ದಾಳಿ ನಡೆದ  ಕೂಡಲೇ ನಮ್ಮವರಿಂದ ಪ್ರತಿ ದಾಳಿ ನಡೆದಿದೆ. ಭಯೋತ್ಪಾದಕರ ಸಂಖ್ಯೆ ಎಷ್ಟೆಂದು ಇನ್ನೂ ತಿಳಿದಿಲ್ಲ. ಕುಟುಂಬಗಳು ವಾಸವಿರುವ ಸಮುಚ್ಛಯವೊಂದರಲ್ಲಿ ಅವರನ್ನು ದಿಗ್ಭಂಧಿಸಲಾಗಿದೆ. ಕಾರ್ಯಾಚರಣೆ ಪ್ರಗತಿಯಲ್ಲಿದೆ ” ಎಂದು ಜಮ್ಮು ಮತ್ತು ಕಾಶ್ಮೀರದ ಐಜಿಪಿ ಎಸ್‌ಡಿ ಸಿಂಗ್‌ ಜಮ್ವಾಲ್‌ ತಿಳಿಸಿದ್ದಾರೆ.

ಭಾರೀ ಗುಂಡಿನ ಕಾಳಗ ನಡೆಯುತ್ತಿದ್ದು ಪ್ರದೇಶದಲ್ಲಿ ಸೇನೆಯ ವಿಶೀಷ ಪಡೆಗಳು ಆಗಮಿಸಿವೆ. ಪ್ರದೇಶದ 500ಮೀ ವ್ಯಾಪ್ತಿಯಲ್ಲಿರುವ ಶಾಲೆಗಳನ್ನು ಇಂದಿನ ಮಟ್ಟಿಗೆ ಮುಚ್ಚಿಡಲು ಜಿಲ್ಲಾಡಳಿತ ಸೂಚನೆ ನೀಡಿದೆ.

ಘಟನೆ ಬಳಿಕ ಜಮ್ಮು ಕಾಶ್ಮೀರದ ಡಿಜಿಪಿಯೊಂದಿಗೆ ಮಾತನಾಡಿದ ಗೃಹ ಸಚಿವ ರಾಜನಾಥ್‌ ಸಿಂಗ್‌ ತಮ್ಮ ಸಚಿವಾಲಯದ ಅಧಿಕಾರಿಗಳು ಈ ವಿಚಾರವಾಗಿ ಕ್ರಮ ತೆಗೆದುಕೊಳ್ಳಲು ಸೂಚಿಸಿದ್ದಾರೆ.

ಫೆಬ್ರವರಿ 9, 2013ರಂದು ಅಫ್ಝಲ್‌ ಗುರುವನ್ನು ಗಲ್ಲಿಗೇರಿಸಿದ್ದ ದಿನದ ಸ್ಮರಣಾರ್ಥ ಭದ್ರತಾ ವ್ಯವಸ್ಥೆಗಳ ಮೇಲೆ ದಾಳಿ ನಡೆಸುವ ಸಾಧ್ಯತೆಯನ್ನು ಗುಪ್ತಚರ ಇಲಾಖೆ ನೀಡಿತ್ತು.

ದಾಳಿ ಬಳಿಕ ಜಮ್ಮುವಿನಲ್ಲಿ ಕಟ್ಟೆಚ್ಚರ ವಹಿಸಲಾಗಿದ್ದು ಭದ್ರತೆಯನ್ನು ಮತ್ತಷ್ಟು ಹೆಚ್ಚಿಸಲಾಗಿದೆ.

 

Leave a Reply

Your email address will not be published. Required fields are marked *

1 + 6 =

Recent News
Loading

ಸದನದಲ್ಲಿ ಸಿಎಂ ವಿರುದ್ಧವೇ ಹಕ್ಕುಚ್ಯುತಿ ಮಂಡಿಸಿದ ಪ್ರತಿಪಕ್ಷದ ನಿರ್ಧಾರ ಸರಿಯೇ?

Thank you for voting
You have already voted on this poll!
Please select an option!

vishwavani-timely-3

Wednesday, 25.04.2018

ಶ್ರೀವಿಲಂಬಿ, ಉತ್ತರಾಯಣ, ವಸಂತಋತು, ವೈಶಾಖಮಾಸ, ಶುಕ್ಲಪಕ್ಷ, ದಶಮಿ, ಬುಧವಾರ, ನಿತ್ಯನಕ್ಷತ್ರ-ಮಖಾ, ಯೋಗ-ವೃದ್ಧಿ, ಕರಣ-ಗರ

ರಾಹುಕಾಲಗುಳಿಕಕಾಲಯಮಗಂಡಕಾಲ
12.00-1.30 10.30-12.00 7.30-9.00

Read More

 

Wednesday, 25.04.2018

ಶ್ರೀವಿಲಂಬಿ, ಉತ್ತರಾಯಣ, ವಸಂತಋತು, ವೈಶಾಖಮಾಸ, ಶುಕ್ಲಪಕ್ಷ, ದಶಮಿ, ಬುಧವಾರ, ನಿತ್ಯನಕ್ಷತ್ರ-ಮಖಾ, ಯೋಗ-ವೃದ್ಧಿ, ಕರಣ-ಗರ

ರಾಹುಕಾಲಗುಳಿಕಕಾಲಯಮಗಂಡಕಾಲ
12.00-1.30 10.30-12.00 7.30-9.00

Read More

Back To Top