About Us Advertise with us Be a Reporter E-Paper

ಕ್ರೀಡೆಪ್ರಚಲಿತ

ಥಾಯ್ಲೆಂಡ್ ಓಪನ್: ಫೈನಲ್‌ಗೆ ಸಿಂಧು

ಬ್ಯಾಂಕಾಂಕ್: ಥಾಯ್ಲೆಂಡ್ ಓಪನ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಅತ್ಯುತ್ತಮ ಪ್ರದರ್ಶನ ತೋರುತ್ತಿರುವ ಭಾರತದ ಪಿ. ವಿ ಸಿಂಧು ಫೈನಲ್ ಪ್ರವೇಶಿಸಿದ್ದು, ಪ್ರಶಸ್ತಿ ಬಾಚಿಕೊಳ್ಳುವ ಭರವಸೆಯಲ್ಲಿದ್ದಾರೆ.

ಇಲ್ಲಿ ನಡೆದ ಮಹಿಳೆಯರ ಸಿಂಗಲ್ಸ್ ವಿಭಾಗದ ಸೆಮಿಫೈನಲ್ ಪಂದ್ಯದಲ್ಲಿ ಇಂಡೋನೇಷ್ಯಾದ ಗ್ರೆಗರಿಯಾ ಮರಿಸ್ಕಾ ಟ್ಯುನ್ಜುಂಗ್ ಅವರ ವಿರುದ್ಧ 23- 21, 16-21, 21-9 ಸೆಟ್‌ಗಳ ಅಂತರದಿಂದ ಗೆಲುವು ಸಾಧಿಸಿದರು.

ವಿಶ್ವಾಸದಿಂದಲೇ ಕಣಕ್ಕೀಳಿದ ಸಿಂಧು ಮೊದಲ ಸೆಟ್‌ನ ಆರಂಭದಿಂದಲೇ ಉತ್ತಮ ಆಟ ಪ್ರದರ್ಶಿಸಿದರು. ಅವರಿಗೆ ಪ್ರತಿಸ್ಪರ್ಧಿ ತೀವ್ರ ಪೈಪೋಟಿಯನ್ನೇ ನೀಡ ತೊಡಗಿದರು. ಕೊನೆಯಲ್ಲಿ ಸಿಂಧು ಅವರು ಕೇವಲ 2 ಅಂಕಗಳ ಮುನ್ನಡೆಯಿಂದ ಗೆಲುವು ಸಾಧಿಸಿದರು. ಎರಡನೇ ಸೆಟ್‌ನಲ್ಲಿ ಅತ್ಯುತ್ತಮ ಆಟವಾಡಿದ ಗ್ರೆಗರಿಯಾ ಸಿಂಧು ಅವರನ್ನು 16 ಅಂಕಗಳಿಗೆ ಕಟ್ಟಿ ಹಾಕಿ ಸೆಟ್ ತಮ್ಮದಾಗಿಸಿಕೊಳ್ಳುವಲ್ಲಿ ಯಶಸ್ವಿಯಾದರು. ಮೂರನೇ ಹಾಗೂ ಅಂತಿಮ ಸೆಟ್‌ನಲ್ಲಿ ತಪ್ಪುಗಳಿಂದ ಎಚ್ಚೆತ್ತುಕೊಂಡ ಸಿಂಧು, ಪ್ರತಿಸ್ಪರ್ಧಿಗೆ ಅಂಕ ಗಳಿಸಲು ಹೆಚ್ಚಿನ ಅವಕಾಶ ಕಲ್ಪಸಿದೆ, ಒಂದರ ಮೇಲೊಂದು ಅಂಕ ಗಳಿಸುತ್ತಾ ಮೂರನೇ ಸೆಟ್‌ನಲ್ಲಿ 11 ಅಂಕಗಳ ಮುನ್ನಡೆಯಿಂದ ಜಯಿಸಿ ಫೈನಲ್‌ಗೆ ಪ್ರವೇಶಿಸಿದರು.

Tags

Related Articles

Leave a Reply

Your email address will not be published. Required fields are marked *

Language
Close