About Us Advertise with us Be a Reporter E-Paper

ಅಂಕಣಗಳು

ಎರಡು ಶತಮಾನ ಹಿಂದಿನ ಸೆಪ್ಟೆಂಬರ್‌ನ ಆ ದಿನ!

ಸ್ಮರಣೆ: ಪ್ರಸಾದ್ ಹರವೆ, ಚಾಮರಾಜನಗರ

ಶಿಕಾಗೋದ ‘ಕೊಲಂಬಿಯನ್ ಜಾಗತಿಕ ಮೇಳ’ದ ಅಂಗವಾಗಿ 1893 ಸೆ.11 ರಿಂದ 17 ರವರೆಗೆ ನಡೆದ ವಿಶ್ವ ಧರ್ಮ ಸಮ್ಮೇಳನವು ಪ್ರಪಂಚದ ಇತಿಹಾಸದ ಅತ್ಯಂತ ಮಹತ್ವಪೂರ್ಣ ಘಟನೆಗಳಂದು ಎನ್ನಬಹುದು. ವಿಶ್ವದ ಧರ್ಮಗಳ ಚರಿತ್ರೆಯಲ್ಲಿ, ಅದರಲ್ಲೂ ಮುಖ್ಯವಾಗಿ ಹಿಂದೂ ಧರ್ಮದ ಚರಿತ್ರೆಯಲ್ಲಿ ಇದೊಂದು ಹೊಸ ಅಧ್ಯಾಯಕ್ಕೆ ನಾಂದಿಯಾಯಿತು. ಪ್ರಪಂಚದ ಸಕಲ ಮತ ಧರ್ಮಗಳ ಪ್ರತಿನಿಽಗಳು ಜಗತ್ತಿನ ಎಡೆಗಳಿಂದ ಬಂದು ತಂತಮ್ಮ ಧರ್ಮದ ಬಗ್ಗೆ ಸಹಸ್ರಾರು ಜನರ ಮುಂದೆ ನಿರ್ಭೀತಿಯಿಂದ ಪ್ರಚುರ ಪಡಿಸಿದರು. ಈ ಸಮ್ಮೇಳನದ ಮುಖ್ಯ ಉದ್ದೇಶವು ಸಮಗ್ರ ಮಾನವತೆಯ ಧಾರ್ಮಿಕ ದರ್ಶನಗಳನ್ನು ಒಂದುಗೂಡಿಸುವುದಾಗಿತ್ತು, ಒಟ್ಟಿನಲ್ಲಿ ಅದು ಸಮಸ್ತ ಮಾನವತೆಯ ಸಮ್ಮೇಳನವಾಗಿತ್ತು.

1893 ನೇ ಸೆಪ್ಟೆಂಬರ್ 11 ರಂದು ಸೋಮವಾರ ಬೆಳಗ್ಗೆ 10 ಗಂಟೆಗೆ ಸರಿಯಾಗಿ ಸರ್ವ ಧರ್ಮ ಸಮ್ಮೇಳನವು ಪ್ರಾರಂಭವಾಯಿತು. ಆ ಭವ್ಯವಾದ ಸಭಾಂಗಣವೂ ಅದಕ್ಕೆ ಮುಂಚಿತವಾಗಿಯೇ ಬಹಳ ಹೊತ್ತಿನಿಂದಲೇ ಕಿಕ್ಕಿರಿದು ತುಂಬಿತ್ತು. ಪ್ರಾರಂಭವನ್ನು ಸೂಚಿಸಲು ‘ನವ ಸ್ವಾತಂತ್ರ್ಯ ಘಂಟೆ’ ಹತ್ತು ಸಲ ಬಾರಿಸಿತು. ಸಮಸ್ತ ಮಾನವ ಜನಾಂಗದ ಮತಧರ್ಮಗಳ ಪ್ರತಿನಿಽಗಳು ಮರವಣಿಗೆಯಲ್ಲಿ ಬಂದು ವೇದಿಕೆಯ ಮೇಲೆ ಆಸೀನರಾದರು. ವೇದಿಕೆಯ ನಡುಭಾಗದಲ್ಲಿ ಅಮೇರಿಕಾದ ರೋಮನ್ ಕ್ಯಾಥೊಲಿಕ್ ರ ಅತ್ಯುನ್ನತ ಧರ್ಮ ಗುರುಗಳಾದ ಕಾರ್ಡಿನಲ್ ಗಿಬ್ಬನ್ಸ್ ಕುಳಿತಿದ್ದರು, ಅವರ ಎರಡೂ ಪಕ್ಕಗಳಲ್ಲಿ ವಿವಿಧ ವೇಷ ಭೂಷಣಧಾರಿಗಳಾದ ಪ್ರತಿನಿಽಗಳು ಕುಳಿತಿದ್ದರು. ಇವರೆಲ್ಲರ ನಡುವೆ ದಿವ್ಯವಾದ ಕಿತ್ತಳೆ ಬಣ್ಣದ ನಿಲುಂಗಿಯನ್ನೂ ಪೀತವರ್ಣದ ಭರ್ಜರಿ ಪೇಟವನ್ನು ಧರಿಸಿದ್ದ ವ್ಯಕ್ತಿಯೊಬ್ಬರು ಭಾವಭರಿತರಾಗಿ ರಾಜಗಾಂಭೀರ್ಯದಿಂದ ಕುಳಿತಿದ್ದರು. ತಮ್ಮ ವಿಶಿಷ್ಟ ಉಡುಪಿನಿಂದಲೂ ಭವ್ಯ ವ್ಯಕ್ತಿತ್ವದಿಂದಲೂ ಸಭಿಕರ ಗಮನ ಸೆಳೆಯುತ್ತಿದ್ದ ಆ ವ್ಯಕ್ತಿಯೇ ವಿಶ್ವ ವಿಜೇತ ವೀರ ಸನ್ಯಾಸಿ ವಿವೇಕಾನಂದರು.

ಸಾಂಪ್ರದಾಯಿಕ ಪ್ರಾರ್ಥನೆಗಳೊಂದಿಗೆ ಸಮ್ಮೇಳನವು ಪ್ರಾರಂಭವಾಯಿತು. ಮೊದಲಿಗೆ ಸ್ವಾಗತ ಸಮಿತಿಯ ಏಳು ಜನ ಅಽಕಾರಿಗಳು ತಮ್ಮ ಸುದೀರ್ಘ ಭಾಷಣಗಳನ್ನು ಮಾಡಿದರು. ಬೆಳಗಿನ ಅಽವೇಶನದಲ್ಲಿ ಎಂಟು ಜನ ಚುಟುಕಾದ ಭಾಷಣಗಳನ್ನು ಮಾಡಿದರು. ಬ್ರಹ್ಮ ಸಮಾಜದ ಪ್ರತಿನಿಽ ಪ್ರತಾಪ್ ಚಂದ್ರ ಮಜುಮ್ದಾರ್ ಹಾಗೂ ಶ್ರೀಲಂಕಾದ ಬೌದ್ಧರ ಪ್ರತಿನಿಽ ಧರ್ಮಪಾಲರ ಭಾಷಣಗಳಿಗೆ ಸಭಿಕರಿಂದ ಒಳ್ಳೆಯ ಪ್ರತಿಕ್ರಿಯೆ ಸಿಕ್ಕಿತು. ವೇದಿಕೆಯ ಮೇಲೆ ಕುಳಿತಿದ್ದ ವಿವೇಕಾನಂದರು ಕಿಕ್ಕಿರಿದು ತುಂಬಿದ್ದ ಜನಸಾಗರವನ್ನು ನೋಡುತ್ತಾ ತಮ್ಮ ವಿಚಾರಗಳನ್ನು ಮಂಡಿಸಲು ಸಿದ್ಧರಾಗುತ್ತಿದ್ದರು. ಬಲವಾದ ಆತ್ಮವಿಶ್ವಾಸ, ಆತ್ಮಶಕ್ತಿಗಳಿಂದ ಅಲ್ಲಿನ ಆಗುಹೋಗುಗಳನ್ನೆ ಹಾಗೂ ವೇದಿಕೆಯ ಮೇಲೆ ನಿಂತು ಮಾತನಾಡುತ್ತಿರುವ ಪ್ರತಿನಿಽಗಳನ್ನು ದಿಟ್ಟಿಸಿ ನೋಡುತ್ತಾ ಅವರಾಡುವ ಮಾತುಗಳಿಗೆ ಸೂಕ್ಷ್ಮವಾಗಿ ಪ್ರತಿಕ್ರಿಯಿಸುವ ಪರಿಯನ್ನು ಗಮನಿಸುತ್ತಿದ್ದರು. ತಕ್ಷಣ ಸ್ವಾಮೀಜಿಯ ಸರದಿ ಬಂದರೂ ಎರಡು ಮೂರು ಬಾರಿ ಆಮೇಲೆ ಮಾತನಾಡುವುದಾಗಿ ತಿರಸ್ಕರಿಸಿದರು, ಕೊನೆಗೆ ಭಾಷಣ ಮಾಡಲೇಬೇಕಾದ ಸಮಯ ಬಂದಿತು.

ವಿವೇಕಾನಂದರು ಎದ್ದು ನಿಂತರು. ಅವರ ಮುಖ ಮಂಡಲ ಅಗ್ನಿ ಜ್ವಾಲೆಯಂತೆ ಬೆಳಗಿತು. ಅವರ ವಿಶಾಲವಾದ ಕಂಗಳಲ್ಲಿ ಮಿಂಚಿನ ಹೊಳಪು ಕಂಡಿತು. ಕ್ಷಣಾರ್ಧದಲ್ಲಿ ಸಮಸ್ತ ಜನಸ್ತೋಮವನ್ನು ಒಮ್ಮೆ ವೀಕ್ಷಿಸಿದರು. ವರ್ಷಾಂತರಗಳಿಂದ ಅವರಲ್ಲಿ ಒತ್ತಿ ಹಿಡಿಯಲ್ಪಟ್ಟಿದ್ದ ಪ್ರಚಂಡ ಶಕ್ತಿಯ ಜ್ವಾಲಾಮುಖಿ ಸೋಟಿಸಿತು. ನಾಲ್ಕು ಸಹಸ್ರಾರು ಪ್ರೇಕ್ಷಕರು ಉಸಿರಾಡುವುದನ್ನೂ ಮರೆತು ಅವರನ್ನೇ ದಿಟ್ಟಿಸಿದರು. ಆ ಬೃಹತ್ ಸಭಾಂಗಣದಲ್ಲಿ ಒಂದು ಸೂಜಿ ಬಿದ್ದರೂ ಕೇಳುವಂತಹ ನೀರವತೆ ನೆಲೆಸಿತು. ಸ್ವಾಮೀಜಿಯವರು ವಾಗ್ದೇವಿಯನ್ನು ಸ್ಮರಿಸಿ ತಮ್ಮ ಮೇಘನಾದ ಸದೃಶ ವಾಣಿಯಲ್ಲಿ ಖಜಿoಠಿಛ್ಟಿo Zb ಆಟಠಿeಛ್ಟಿo ಟ್ಛ ಅಞಛ್ಟಿಜ್ಚಿZ ಎಂದು ಸಭಿಕರನ್ನು ಸಂಬೋಽಸಿದರು. ಮರುಕ್ಷಣವೇ ಸಮಸ್ತ ಸಭಿಕರಲ್ಲಿ ಒಂದು ಬಗೆಯ ಸಂಚಲನ ಉಂಟಾಯಿತು. ಆವೇಶ ಭರಿತರಾಗಿ ಕರತಾಡನ ಮಾಡುತ್ತಾ ಸಹಸ್ರಾರು ಜನ ಎದ್ದು ನಿಂತು ಜಯಘೋಷ ಮಾಡುತ್ತಾ ಕರವಸ, ಟೋಪಿಗಳನ್ನು ಬೀಸಲಾರಂಭಿಸಿದರು. ಸ್ವಲ್ಪ ಹೊತ್ತಿನ ನಂತರ ಸಭೆ ಶಾಂತವಾದ ಮೇಲೆ ತಮ್ಮ ಽರ ಗಂಭೀರ ದನಿಯಲ್ಲಿ ಸ್ವಾಮೀಜಿ ಮಾತು ಮುಂದುವರಿಸಿದರು.

 ‘ನೀವು ನನಗೆ ನೀಡಿದ ಉತ್ಸಾಹಯುತ, ಆದರದ ಸ್ವಾಗತಕ್ಕೆ ಪ್ರತಿಕ್ರಿಯಿಸಲು ಹೊರಟಾಗ ಅನಿರ್ವಚನೀಯ ಆನಂದವೊಂದು ನನ್ನ ಹೃದಯವನ್ನು ತುಂಬುತ್ತದೆ. ಪ್ರಪಂಚದ ಅತ್ಯಂತ ಪ್ರಾಚೀನವಾದ ಸನ್ಯಾಸಿಗಳ ಸಂಘದ ಪರವಾಗಿ ನಾನು ನಿಮಗೆ ಕೃತಜ್ಞತೆ ಸಲ್ಲಿಸುತ್ತೇನೆ. ಬೌದ್ಧ ಧರ್ಮ, ಜೈನ ಧರ್ಮಗಳ ಶಾಖೆಗಳೂ ಸೇರಿದಂತೆ ಅಂತಹ ಸಕಲ ಧರ್ಮಗಳ ಮಾತೆಯಾದ ಹಿಂದೂ ಧರ್ಮದ ಪರವಾಗಿ ನಾನು ನಿಮಗೆ ಕೃತಜ್ಞತೆ ಸಲ್ಲಿಸುತ್ತೇನೆ. ವಿವಿಧ ಜಾತಿ ಮತಗಳಿಗೆ ಸೇರಿದ ಕೋಟ್ಯಾನುಕೋಟಿ ಹಿಂದೂಗಳ ಪರವಾಗಿ ನಾನು ನಿಮಗೆ ಕೃತಜ್ಞತೆ ಸಲ್ಲಿಸುತ್ತೇನೆ. ಇಲ್ಲಿ ಕಂಡುಬರುತ್ತಿರುವ ಸಹಿಷ್ಣುತ ಭಾವವನ್ನು ದೂರ ದೂರದ ದೇಶಗಳಿಂದ ಬಂದಿರುವ ಈ ಪ್ರತಿನಿಽಗಳು ಒಯ್ದು ಪ್ರಸಾರ ಮಾಡುತ್ತಾರೆ ಎಂದು ಸಾರಿದ ಕೆಲವು ಭಾಷಣಕಾರರಿಗೂ ನನ್ನ ಕೃತಜ್ಞತೆ ಸಲ್ಲಿಸುತ್ತೇನೆ.

 ‘ಜಗತ್ತಿಗೆ ಸಹಿಷ್ಣುತೆಯನ್ನು, ಸರ್ವ ಧರ್ಮ ಸ್ವೀಕಾರ ಭಾವವನ್ನು ಬೋಽಸಿದ ಧರ್ಮಕ್ಕೆ ಸೇರಿದವನು ನಾನೆಂಬ ಹೆಮ್ಮೆ ಇದೆ. ನಾವು ಸರ್ವ ಸಹಿಷ್ಣುತೆ ಯನ್ನು ಒಪ್ಪುತ್ತೇವಷ್ಟೇ ಅಲ್ಲದೇ ಸಕಲ ಧರ್ಮಗಳು ಸತ್ಯವೆಂದೂ ನಂಬುತ್ತೇವೆ. ಯಾವ ಧರ್ಮದ ಭಾಷೆಗೆ ಉoಜಿಟ್ಞ ಎಂಬ ಪದವನ್ನು ಅನುವಾದಿಸಲು ಸಾಧ್ಯವೇ ಇಲ್ಲವೋ ಅಂತಹ ಧರ್ಮಕ್ಕೆ ಸೇರಿದ ಹೆಮ್ಮೆ ನನ್ನದು. ಪ್ರಪಂಚದ ಎ ಧರ್ಮಗಳ ಎ ರಾಷ್ಟ್ರಗಳ ಸಂಕಟ ಪೀಡಿತ ನಿರಾಶ್ರಿತರಿಗೆ ಆಶ್ರಯವನ್ನಿತ್ತ ರಾಷ್ಟ್ರಕ್ಕೆ ಸೇರಿದವನೆಂಬ ಹೆಮ್ಮೆ ನನ್ನದು. ರೋಮನ್ನರ ದಬ್ಬಾಳಿಕೆಗೆ ಗುರಿಯಾಗಿ ತಮ್ಮ ಪವಿತ್ರ ದೇವಾಲಯವು ನುಚ್ಚು ನೂರಾದಾಗ ದಕ್ಷಿಣ ಭಾರತಕ್ಕೆ ವಲಸೆ ಬಂದ ಇಸ್ರೇಲಿಯರ ಒಂದು ಗುಂಪನ್ನು ನಮ್ಮ ಮಡಿಲಲ್ಲಿಟ್ಟುಕೊಂಡು ಆಶ್ರಯ ನೀಡಿದ್ದೇವೆ ಎಂದು ಹೇಳಲು ನನಗೆ ಹೆಮ್ಮೆ. ಘನಜರತುಷ್ಟ್ರ ಜನಾಂಗದ ಅವಶೇಷಕ್ಕೆ ಆಶ್ರಯವಿತ್ತ ಹಾಗೂ ಅವರನ್ನೂ ಈಗಲೂ ಪೋಷಿಸುತ್ತಿರುವ ಧರ್ಮಕ್ಕೆ ಸೇರಿದವನೆಂಬುದು ನನ್ನ ಹೆಮ್ಮೆ.

‘ಸೋದರರೇ, ನಾನು ಬಾಲ್ಯಾರಂಭದಿಂದ ಪಠಿಸುತ್ತಿದ್ದ ಹಾಗೂ ಈಗಲೂ ಲಕ್ಷಾಂತರ ಹಿಂದೂಗಳು ಪಠಿಸುವ ಶ್ಲೋಕವೊಂದರಿಂದ ಕೆಲ ಸಾಲುಗಳನ್ನು ಉದ್ಧರಿಸಿ ಹೇಳುತ್ತೇನೆ. “ಹೇ ಭಗವಂತ, ಭಿನ್ನ ಭಿನ್ನ ಸ್ಥಾನಗಳಿಂದ ಉದಯಿಸಿದ ನದಿಗಳೆಲ್ಲವೂ ಹರಿಯುತ್ತಾ ಹೋಗಿ ಕೊನೆಗೆ ಸಾಗರಗೊಳಗೊಂದಾಗುವಂತೆ, ಮಾನವರು ತಮ್ಮ ತಮ್ಮ ವಿಭಿನ್ನ ಅಭಿರುಚಿಗಳಿಂದಾಗಿ ಅನುಸರಿಸುವ ಅಂಕುಡೊಂಕಿನ ಬೇರೆ ಬೇರೆ ದಾರಿಗಳೆಲ್ಲವೂ ಕೊನೆಗೆ ಬಂದು ನಿನ್ನನ್ನೇ ಸೇರುತ್ತವೆ”. ಜಗತ್ತಿನಲ್ಲಿ ಇಲ್ಲಿಯವರೆಗೆ ನಡೆಸಲ್ಪಟ್ಟಿರುವ ಮಹಾದ್ಭುತ ಸಮ್ಮೇಳನಗಳೊಂದಾದ ಇಂದಿನ ಈ ಸಭೆಯು ಭಗವದ್ಗೀತೆಯು ಬೋಽಸಿರುವ ಈ ಅದ್ಭುತ ತತ್ವಕ್ಕೆ ಸಾಕ್ಷಿಯಾಗಿದೆ ಮತ್ತು ಅದನ್ನೇ ಸಾರುತ್ತಿದೆ: ‘ಯಾರು ಯಾರು ನನ್ನಲ್ಲಿಗೆ ಯಾವ ಯಾವ ಮಾರ್ಗದಿಂದ ಬರುತ್ತಾರೋ ಅವರವರನ್ನು ನಾನು ಅದೇ ಮಾರ್ಗದಿಂದ ತಲುಪುತ್ತೇನೆ, ಮಾನವರು ಅನಸರಿಸುವ ಮಾರ್ಗಗಳೆಲ್ಲವೂ ಕೊನೆಯಲ್ಲಿ ನನ್ನನ್ನು ಬಂದು ಸೇರುತ್ತವೆ’.

 ‘ಗುಂಪುಗಾರಿಕೆ, ಅತಿಯಾದ ಸ್ವಮತಾಭಿಮಾನ ಹಾಗೂ ಅದರ ಘೋರ ಪರಿಣಾಮವಾದ ಧರ್ಮಾಂಧತೆಗಳು ಬಹುಕಾಲದ ಈ ಸುಂದರ ಪೃಥ್ವಿಯನ್ನು ಆಕ್ರಮಿಸಿಕೊಂಡಿದೆ. ಅವು ಭೂಮಿಯನ್ನು ಹಿಂಸೆಯಿಂದ ತುಂಬಿ, ಮತ್ತೆ ಮತ್ತೆ ಮಾನವನ ರಕ್ತದಿಂದ ತೋಯಿಸಿವೆ. ನಾಗರಿಕತೆಗಳನ್ನು ನಾಶ ಮಾಡಿವೆ. ದೇಶ ದೇಶಗಳನ್ನೇ ನಿರಾಶೆಯ ಕೂಪಕ್ಕೆ ತಳ್ಳಿವೆ. ಆ ಘೋರ ರಾಕ್ಷಸತನವಿಲ್ಲದಿದ್ದರೆ ಸಮಾಜ ಈಗಿರುವುದಕ್ಕಿಂತಲೂ ಎಷ್ಟೋ ಹೆಚ್ಚು ಮುಂದುವರಿದಿರುತ್ತಿತ್ತು. ಆದರೆ ಈಗ ಆ ರಾಕ್ಷಸತನದ ಅಂತ್ಯ ಕಾಲ ಸಮೀಪಿಸಿದೆ. ಈ ಸಮ್ಮೇಳನದ ಪ್ರತಿನಿಽಗಳ ಗೌರವಾರ್ಥವಾಗಿ ಇಂದು ಮೊಳಗಿದ ಘಂಟನಾದವೂ ಎ ಮತಾಂಧತೆಗೆ ಮೃತ್ಯುಘಾತವನ್ನುಂಟಾಗುವುದೆಂದು ಆಶಿಸುತ್ತಿವೆ’… ಹೀಗೆ ಸ್ವಾಮೀಜಿಯವರು ತಮ್ಮ ಉಪನ್ಯಾಸವನ್ನು ಮುಗಿಸಿ ಕುಳಿತುಕೊಳ್ಳುತ್ತಿದ್ದಂತೆಯೇ ಮತ್ತೊಮ್ಮೆ ಹರ್ಷೋದ್ಗಾರ ಕರತಾಡನಗಳು ಸಿಡಿಲಿನಂತೆ ಮೊಳಗಿದವು. ಕೆಲವೇ ಮಾತುಗಳಲ್ಲಿ ಸ್ವಾಮೀಜಿ ತಮ್ಮ ಭಾವನೆಗಳನ್ನು ಅತ್ಯಂತ ಸ್ಪಷ್ಟವಾಗಿ ವ್ಯಕ್ತಪಡಿಸಿದರು. ಅವರ ಈ ಪುಟ್ಟ ಭಾಷಣ ಅತ್ಯಂತ ಪರಿಣಾಮಕಾರಿಯಾಗಿತ್ತು. ಸರ್ವ ಧರ್ಮ ಸಮ್ಮೇಳನದ ನಿಜವಾದ ಉದ್ದೇಶವನ್ನು ಸ್ವಾಮೀಜಿ ಪ್ರತಿಯೊಬ್ಬರಿಗೂ ಮನಮುಟ್ಟಿಸಿದರು.

ವಿಶ್ವ ವೇದಿಕೆಯಲಿ ವಿಜಯಪತಾಕೆ ಹಾರಿಸಿದ ವೀರ ಸನ್ಯಾಸಿಯ ಆ ಭಾಷಣ ಇಂದಿಗೆ ಎಷ್ಟೊಂದು ಪ್ರಸ್ತುತವಾಗಿ ಕೇಳಿಸುತ್ತಿದೆಯಲ್ಲವೆ?

Tags

Related Articles

Leave a Reply

Your email address will not be published. Required fields are marked *

Language
Close