About Us Advertise with us Be a Reporter E-Paper

Breaking Newsಕ್ರೀಡೆಪ್ರಚಲಿತ

201 ರನ್‌ ಟಾರ್ಗೆಟ್‌, 14 ರನ್​ಗೆ ಆಲೌಟ್‌: ನಿರ್ಮಾಣವಾಯ್ತು ವಿಶಿಷ್ಟ ದಾಖಲೆ

ಬೀಜಿಂಗ್​​: ಕ್ರಿಕೆಟ್​​ ಮೈದಾನದಲ್ಲಿ ನಿತ್ಯ ವಿಶಿಷ್ಟ ದಾಖಲೆಗಳು ನಿರ್ಮಾಣಗೊಳ್ಳುತ್ತಲೇ ಇರುತ್ತವೆ. ಇದೀಗ ಮಹಿಳಾ ಟಿ-20 ಕ್ರಿಕೆಟ್​​ನಲ್ಲಿ ಚೀನಾ ಮಹಿಳಾ ತಂಡದಿಂದ ಕೇವಲ 14ರನ್​ಗಳಿಗೆ ಸರ್ವಪತನ ಕಾಣುವ ಮೂಲಕ ಹಿಂದೆ ನಿರ್ಮಾಣವಾಗದಂತಹ ಕಳಪೆ ರೆಕಾರ್ಡ್​ವೊಂದು ದಾಖಲಾಗಿದೆ.

ಯುಎಇ ವಿರುದ್ಧದ ಟಿ-20 ಪಂದ್ಯದಲ್ಲಿ 201ರನ್​ಗಳ ಗುರಿ ಬೆನ್ನಟ್ಟಿದ್ದ ಚೀನಾ ಕೇವಲ 10 ಓವರ್​ಗಳಲ್ಲಿ 14ರನ್​ಗಳಿಗೆ ಆಲೌಟ್‌ ಆಗಿದೆ. ಇದರಲ್ಲಿ ಆರು ಆಟಗಾರರು​​ ಡಕೌಟ್‌ ಆದರೆ, ಇನ್ನುಳಿದವರು ಎರಡಂಕಿ ಗೆರೆ ದಾಟಿಲ್ಲ. ಹೀಗಾಗಿ ಯುಎಇ ತಂಡ ಬರೋಬ್ಬರಿ 189ರನ್​ಗಳ ಗೆಲುವು ದಾಖಲು ಮಾಡಿದೆ.

ಕೇವಲ 48 ನಿಮಿಷಗಳಲ್ಲಿ ಆಟ ಮುಗಿಸಿದೆ. ಇನ್ನು ಮಹಿಳಾ ಕ್ರಿಕೆಟ್​​ನಲ್ಲಿ ಇಷ್ಟೊಂದು ಕಡಿಮೆ ರನ್​ಗಳಿಗೆ ಆಲೌಟ್​ ಆಗಿರುವ ಮೊದಲ ತಂಡ ಎಂಬ ಕಳಪೆ ದಾಖಲೆ ಕೂಡ ಚೀನಾ ತಂಡದ ಪಾಲಾಗಿದೆ.

Tags

Related Articles

Leave a Reply

Your email address will not be published. Required fields are marked *

Language
Close