About Us Advertise with us Be a Reporter E-Paper

Breaking Newsದೇಶಪ್ರಚಲಿತ

7 ವಾರಗಳ ಪ್ರಸೂತಿ ರಜೆ ವೇತನ ಭರಿಸಲಿದೆ ಕೇಂದ್ರ

ದೆಹಲಿ: ಮಹಿಳಾ ಉದ್ಯೋಗಿಗಳಿಗೆ ನೀಡಲಾಗುತ್ತಿರುವ ಮಾತೃತ್ವ ರಜೆಯ 7 ವಾರಗಳ ವೇತನವನ್ನು ಸರಕಾರವೇ ಕಂಪನಿಗಳಿಗೆ ನೀಡುವುದಾಗಿ ಕೇಂದ್ರ ಘೋಷಿಸಿದೆ.

ಕೇಂದ್ರ ಮಹಿಳಾ ಮತ್ತು ಮಕ್ಕಳ ಸಚಿವಾಲಯವು ಮಾತೃತ್ವ ರಜೆಗೆ ತೆರಳುವ ಮಹಿಳಾ ಉದ್ಯೋಗಿಗಳ ಏಳು ವಾರಗಳ ವೇತನ(ತಿಂಗಳಿಗೆ 15 ಸಾವಿರ ರೂಪಾಯಿ) ಕಂಪನಿಗೆ ನೀಡಲಾಗುವುದು ಎಂದು ಗುರುವಾರ ತಿಳಿಸಿದೆ. ಮಾತೃತ್ವ/ಪ್ರಸೂತಿ ರಜೆ 12 ವಾರಗಳಿಂದ 26 ವಾರಗಳವರೆಗೆ ಹೆಚ್ಚಿಸಿರುವುದರಿಂದ, ಅನೇಕ ಕಂಪನಿಗಳು ಗರ್ಭಿಣಿ ಮಹಿಳೆಯರಿಗೆ ಉದ್ಯೋಗ ನೀಡಲು ಒಪ್ಪುತ್ತಿಲ್ಲ.

ಈ ರೀತಿಯ ದೂರುಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಸರ್ಕಾರ ಈ ನಿರ್ಧಾರ ಕೈಗೊಂಡಿದೆ. ಕೆಲವು ಕಂಪನಿಗಳು ಗರ್ಭಿಣಿ ಮಹಿಳೆಯರನ್ನು ಉದ್ಯೋಗದಿಂದ ತೆಗೆದಿರುವ ಬಗ್ಗೆಯೂ ದೂರುಗಳು ದಾಖಲಾಗಿದ್ದು, ಸರಕಾರ ಖಾಸಗಿ ಕ್ಷೇತ್ರಗಳಲ್ಲಿ ಕೆಲಸ ಮಾಡುವ ಮಹಿಳೆಯರೆಲ್ಲರಿಗೂ ಸರ್ಕಾರದಿಂದ ಈ ನೆರವು ನೀಡುವುದಾಗಿ ಸರ್ಕಾರ ಘೋಷಿಸಿದೆ.

ರಾಜ್ಯ ಸರ್ಕಾರಗಳಲ್ಲಿ ಕಾರ್ಮಿಕ ಕಲ್ಯಾಣ ಸೆಸ್ನ ಹಣವನ್ನು ಬಳಸುವುದು ಬಹಳ ಕಡಿಮೆ ಎಂದು ಶ್ರೀವಾಸ್ತವ ಹೇಳಿದರು. ಕಾರ್ಮಿಕ ಸಚಿವಾಲಯದ ಸಂವಾದದ ನಂತರ, 26 ವಾರಗಳಲ್ಲಿ 7 ವಾರಗಳ ವೇತನವನ್ನು ಮಾಲೀಕರಿಗೆ ನೀಡಲಾಗುವುದು ಎಂದು ನಿರ್ಧರಿಸಲಾಗಿದೆ. ಮಹಿಳಾ ಮಾಸಿಕ ವೇತನಕ್ಕಿಂತ 15 ಸಾವಿರಕ್ಕಿಂತ ಅಧಿಕ ವೇತನ ಪಡೆಯುವ ಮಹಿಳೆಯರಿಗೆ ಪ್ರಸೂತಿ ರಜೆಯ ಸಮಯದಲ್ಲಿ ವೇತನ ಸರ್ಕಾರದಿಂದ ಕಂಪನಿಗಳಿಗೆ ಸಹಕಾರ ನೀಡಲಾಗುವುದು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಕಾರ್ಯದರ್ಶಿ ರಾಕೇಶ್ ಶ್ರೀವಾಸ್ತವ್ ಹೇಳಿದರು.

Tags

Related Articles

Leave a Reply

Your email address will not be published. Required fields are marked *

Language
Close