About Us Advertise with us Be a Reporter E-Paper

ಗುರು

ಸಾಮರ್ಥ್ಯವೇ ಬದುಕನ್ನು ರೂಪಿಸುವ ಪ್ರಕ್ರಿಯೆ

ನಾಯಕರಾಗಿ ನೀವು ಕೇವಲ ಭೌತಿಕ ಮತ್ತು ಭೌದ್ಧಿಕ ವಿಧಾನಗಳಲ್ಲಿ ಕಾರ್ಯ ನಿರ್ವಹಿಸಿದರೆ ಒಬ್ಬ ಸಾಧಾರಣ ನಾಯಕರಾಗುತ್ತೀರಿ. ಏಕೆಂದರೆ ನಿಮ್ಮ ಮನಸ್ಸು ತನ್ನಲ್ಲಿರುವ ಗತಕಾಲದ ಮಾಹಿತಿ ಯನ್ನಿಟ್ಟುಕೊಂಡು ವರ್ತಿಸುತ್ತದೆ. ಇದು ನಿಜವಾದ ನಾಯಕತ್ವಕ್ಕೆ ಸಾಕಾಗುವುದಿಲ್ಲ. ನಾಯಕನಲ್ಲಿ ಅಧ್ಯಾತ್ಮಿಕ ಅಂಶವಿಲ್ಲದಿದ್ದರೆ ತನ್ನ ದೇಹ ಮತ್ತು ಬುದ್ಧಿಯ ಆಚೆಗಿನ ಬದುಕನ್ನು ಅದು ಇರುವಂತೆ ಅನುಭವಿಸಲು ಆರಂಭಿಸದಿದ್ದರೆ ಆತ ತನ್ನ ತಲೆಮಾರಿನ ಜನರಿಗೆ, ಮಾನವ ಕುಲಕ್ಕೆ ಹೊಸ ಸಾಧ್ಯತೆಗಳನ್ನು ನೀಡಲಾರ. ಜೀವನವನ್ನು ಜೀವಿಯಾಗಿ ಆರಂಭಿಸಿದಾಗ ಮಾತ್ರ ಜೀವನದ ಸ್ವಾಸ್ಥ್ಯಕ್ಕೆ ನಿಜವಾಗಲೂ ಏನು ಅಗತ್ಯ ಎನ್ನುವುದು ಆತ ಕಾಣಬಲ್ಲ. ನಾಯಕರಿಗೆ ತಮ್ಮ ಮೇಲೆ ಪ್ರಭುತ್ವವಿದ್ದಾಗ ಮಾತ್ರ ಹೊರಗಿನ ಪರಿಸ್ಥಿತಿಯನ್ನು ನಿಭಾಯಿಸಲು ಸ್ವತಂತ್ರರಾಗಬಹುದು. ಜಗತ್ತಿನಲ್ಲಿ ನೀವು ಎಷ್ಟೇ ಶಕ್ತಿವಂತ ಅಧಿಕಾರಿಯಾದರೂ ಹೊರಗಿನ ಸಂದರ್ಭಗಳ ಮೇಲೆ, ವ್ಯವಹಾರಗಳಲ್ಲಿ, ಮನೆಯ ವಿಷಯಗಳಲ್ಲಿ, ಯಾವುದರಲ್ಲೂ ಸಹ ನೂರಕ್ಕೆ ನೂರರಷ್ಟು ನೀವು ಬಯಸಿದಂತೆ ನಡೆಯುವುದಿಲ್ಲ. ನಿಮ್ಮ ಕುಟುಂಬದವರಿರಲಿ, ಕಡೆಗೆ ನೀವು ಸಾಕಿದ ನಾಯಿಯೂ ಕೂಡಾ ನೀವು ಬಯಸಿದಂತೆ ಯಾವಾಗಲೂ ಇರುವುದಿಲ್ಲ. ಆದರೆ ನಿಮ್ಮ ಮನಸ್ಸು ಬಯಸಿದಂತೆ ಇರಬಹುದಲ್ಲವೇ?

ಒತ್ತಡ, ಕೋಪ, ತಾಪ, ಇಂತಹ ಅಸಂಬದ್ಧತೆಗಳನ್ನು ಜನ ಯಾಕೆ ಅನುಭವಿಸುತ್ತಾರೆ? ಇದು ನೈತಿಕತೆಯ ಪ್ರಶ್ನೆಯಲ್ಲ. ಮೌಲ್ಯ, ನೀತಿಗಳ ಪ್ರಶ್ನೆಯೂ ಅಲ್ಲ. ಅವರಲ್ಲಿರುವ ಮೂಲಭೂತ ಸಾಮರ್ಥ್ಯಗಳು, ಅಂದರೆ ಅವರ ದೇಹ, ಮನಸ್ಸ, ಅವರದೇ ಭಾವಗಳು, ಚೈತನ್ಯ ಅವರ ಮಾತು ಕೇಳದೆ ಹೊರಗಿನ ಪರಿಸ್ಥಿತಿಗಳಿಗೆ ಪ್ರತಿಕ್ರಯಿಸುತ್ತಿರುವುದೇ ಇವೆಲ್ಲಕ್ಕೂ ಮುಖ್ಯ ಕಾರಣ. ಹೊರಗಿನ ಪರಿಸ್ಥಿತಿ ಏನೇ ಇರಲಿ, ಅಂತರಂಗದಲ್ಲಿ ಸ್ವತಂತ್ರರಾಗಿ ಇರುವ ಸಾಧ್ಯತೆಯಿದೆ. ಅದು ದೂರದ್ದೂ ಅಲ್ಲ ಅಲ್ಲ. ಅದರ ದಿಕ್ಕು ಮಾತ್ರ ಬೇರೆ ಅಷ್ಟೇ ಅದೇ ಅಂತರಂಗದ, ಅಂತರ್ಮುಖತೆಯ ದಾರಿ. ಬದುಕಿನ ನಿಮ್ಮೆಲ್ಲ ಅನುಭವ ಬಹಿರ್ಮುಖಿಯಾದ ಇಂದ್ರಿಯಗಳ ಗ್ರಹಿಕೆಯ ಮೂಲಕ ದೊರೆಯುತ್ತದೆ. ಆದರೆ ಅಂತರಂಗವೆನ್ನುವುದು ಇಂದ್ರಿಯಗಳ ವಲಯಕ್ಕೆ ಸೆರಿದುದಲ್ಲ. ಆದ್ದರಿಂದಲೇ ನಿಮಗೆ ಸ್ವಾತಂತ್ರ್ಯವೆಂಬುದು ಬಹು ದೂರದ ಸಾಧ್ಯತೆಯಾಗಿ ಕಾಣುವುದು.

ಇವೆಲ್ಲದಕ್ಕೂ ಮೂಲ ಸಮಸ್ಯೆ ಏನೆಂದರೆ ನಾವು ಸೃಷ್ಟಿಯ ಮೂಲದೊಂದಿಗೆ ಇರುವ ನಮ್ಮ ಸಂಬಂಧವನ್ನು ಕಳೆದುಕೊಂಡಿದ್ದೇವೆ. ಆಂತರಿಕ ನಿರ್ವಹಣೆ ಎಂಬುದು ಒಳಗೆ ನೋಡಿಕೊಳ್ಳುವುದರ ಕುರಿತಾಗಿ ಇರುವಂಥದ್ದು. ದೇವರು ಎಲ್ಲರೂ ಹೇಳುತ್ತಾರೆ. ನಂಬುತ್ತಾರೆ. ಆದರೆ ಇದು ಸ್ಥಿರವಾದದ್ದೇ? ಹೀಗಿದ್ದ ಮೇಲೆ ಮಾರ್ಗದರ್ಶನಕ್ಕಾಗಿ ನೀವು ಗ್ರಹ, ನಕ್ಷತ್ರಗಳ ಕಡೆಗೆ, ಬಾಹ್ಯ ಪ್ರಪಂಚದ ಕಡೆಗೆ ನೋಡುವುದಾದರೂ ಏಕೆ?

ವೇಗದ ವಾಹನಗಳ ಸಂಚಾರವಿರುವ ಹೆದ್ದಾರಿಯನ್ನು ಬರಿದೇ ಆತ್ಮ ವಿಶ್ವಾಸದಿಂದಲೋ ನಂಬಿಕೆಯಿಂದಲೋ ಅಥವಾ ಧೈರ್ಯದಿಂದಲೋ ದಾಟಲು ಸಾಧ್ಯವಾಗುತ್ತದೆಯೇ? ಹಾಗೆಯೇ ಇದು ಕೂಡಾ. ಜೀವನದ ಮೂಲಕ್ಕೆ ಪ್ರವೇಶಿಸುವ ನಿಮ್ಮ ಸಾಮರ್ಥ್ಯವೊಂದೇ ಬದುಕಿನ ಪ್ರಕ್ರಿಯೆಯನ್ನು ಸಂಪೂರ್ಣ ಸ್ಪಷ್ಟತೆಯೊಡನೆ ನಿರ್ವಹಿಸುವಂತೆ, ತಡಕಾಡದಂತೆ, ಮಾನಸಿಕವಾಗಿ ಚಂಚಲರಾಗದಂತೆ ಸಶಕ್ತರನ್ನಾಗಿಸುತ್ತದೆ.

Tags

Related Articles

Leave a Reply

Your email address will not be published. Required fields are marked *

Language
Close