About Us Advertise with us Be a Reporter E-Paper

ಅಂಕಣಗಳು

 ನಿಷೇಧ ಸ್ವಾಗತಾರ್ಹ

ರಾಜ್ಯದ ರಾಜಧಾನಿಯ ಸಾರ್ವಜನಿಕ ಪ್ರದೇಶ ಹಾಗೂ ಖಾಸಗಿ ಸ್ವತ್ತಿನಲ್ಲಿ ಒಂದು ವರ್ಷ ಎಲ್ಲ ರೀತಿಯ ಜಾಹೀರಾತು ಫಲಕಗಳ ನಿಷೇಧ ಕುರಿತು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಐತಿಹಾಸಿಕ ತೀರ್ಮಾನ ಕೈಗೊಂಡಿರುವುದು ಸ್ವಾಗತಾರ್ಹ ಹಾಗೂ ಮಾದರಿಯದ್ದಾಗಿದೆ. ಜಾಹೀರಾತು ಫಲಕ ಎಂಬುದು ಒಳ ವ್ಯವಹಾರದ ಒಂದು ಬೃಹತ್ ಲಾಬಿಯಾಗಿದೆಯೇ ಹೊರತು ಪಾಲಿಕೆಗೆ ಕಿಂಚಿತ್ತೂ ಲಾಭ ತಂದಿಲ್ಲ. ನಗರದ ತುಂಬೆಲ್ಲ ಜಾಹೀರಾತುಗಳು ಕಂಗೊಳಿಸುತ್ತಿದ್ದರೂ ಪಾಲಿಕೆ ಬೊಕ್ಕಸಕ್ಕೆ ಮಾತ್ರ ಅವುಗಳ ಕೊಡುಗೆ  ಇರಲಿಲ್ಲ. ಬದಲಿಗೆ ಉದ್ಯಾನ ನಗರಿಯ ಅಂದಗೆಡಿಸಿವೆ. ನೂರಾರು ಕೋಟಿ ರುಪಾಯಿ ಆದಾಯ ಬರುವ ಜಾಗದಲ್ಲಿ ಬೆರಳೆಣಿಕೆ ಕೋಟಿಯಷ್ಟು ಮಾತ್ರ ಬರುತ್ತಿದ್ದುದು ಅಧಿಕಾರಿಗಳು ಯಾವ ಮಟ್ಟದಲ್ಲಿ ವ್ಯವಸ್ಥೆ ದುರ್ಬಳಕೆ ಮಾಡಿಕೊಂಡಿದ್ದರು, ಕೋಟಿ ಕೋಟಿ ರುಪಾಯಿಗಳನ್ನು ಹೇಗೆ ಲೂಟಿ ಹೊಡೆಯುತ್ತಿದ್ದರು ಎಂಬುದಕ್ಕೆ ಬೃಹತ್ ಸಾಕ್ಷಿ. ಜಾಹೀರಾತು ಫಲಕಗಳಿಂದ ನಗರದ ಅಂದಗೆಡುವುದು ಒಂದು ಕಡೆಯಾದರೆ, ವಾಹನ ಸವಾರರಿಗೆ ಅಡಚಣೆಯಾಗಿ ಪರಿಣಮಿಸಿದ್ದು ಮತ್ತೊಂದು ಕಡೆ. ರಾಜಕಾರಣಿಗಳು, ಖಾಸಗಿ ವ್ಯಕ್ತಿ, ಸಂಸ್ಥೆಗಳ ಗಗನಚುಂಬಿ ಕಟೌಟ್‌ಗಳು, ಎಲ್ಲೆಡೆ  ತುಂಬಿಕೊಂಡ ಭಿತ್ತಿಚಿತ್ರಗಳು ನಗರದ ಪರಿಸರ ಮತ್ತು ಸೌಂದರ್ಯ ಪ್ರಜ್ಞೆಗೆ ಮಾರಕವಾಗಿರುವುದಂತೂ ದಿಟ. ಪಾಲಿಕೆಯಿಂದ ಅನುಮತಿ ಪಡೆದವು ಕೆಲವಾದರೆ, ಅನುಮತಿ ಪಡೆಯದಿದ್ದರೂ ಅಧಿಕಾರಿಗಳ ಕೃಪಾಕಟಾಕ್ಷದಿಂದ ಮೆರೆಯುತ್ತಿರುವವು ಅಸಂಖ್ಯ. ಖಾಸಗಿ ಸ್ವತ್ತುಗಳಲ್ಲಿ ಜಾಹೀರಾತು ಹಾಕುವವರು ಪಾಲಿಕೆಯಿಂದ ಅನುಮತಿ ಪಡೆಯಬೇಕೆಂಬ ನಿಯಮವಿದ್ದರೂ ಪಾಲನೆ ಮಾತ್ರ ನಗಣ್ಯ. ಹೀಗಾಗಿ ಎಲ್ಲ ರೀತಿಯ ಜಾಹೀರಾತು ನಿಷೇಧ, ಒಂದೊಮ್ಮೆ ಫಲಕ ಹಾಕಿದರೆ ಲಕ್ಷ ರುಪಾಯಿ ದಂಡ, ಆರು ತಿಂಗಳು ಜೈಲುಶಿಕ್ಷೆ ವಿಧಿಸಲು ಅವಕಾಶವಿರುವ ನಿರ್ಣಯ ಕೈಗೊಂಡಿರುವುದು ಶ್ಲಾಘನೀಯ.  ಬರೀ ರಾಜಧಾನಿಯಲ್ಲಿ ಮಾತ್ರವಲ್ಲಿ ರಾಜ್ಯದ ಎಲ್ಲ ನಗರಗಳಲ್ಲೂ ಅನುಷ್ಠಾನಕ್ಕೆ ಬರಬೇಕು. ಪರಿಸರ ಪ್ರಜ್ಞೆ ಮತ್ತು ಸೌಂದರ್ಯ ರಾಜಧಾನಿಗೆ ಮಾತ್ರ ಸೀಮಿತವಾಗಬಾರದು.

Tags

Related Articles

Leave a Reply

Your email address will not be published. Required fields are marked *

Language
Close