ವಿಶ್ವವಾಣಿ

ಬೇರ್ಪಡಿಸುವಿಕೆಯ ಸವಾಲು ನಿಶ್ಚಿತ, ಪ್ರೀತಿಯೊಂದೇ ಶಾಶ್ವತ

ಒಂದು ದಿನ ‘ಬೇರ್ಪಡಿಸುವಿಕೆ’ ಹಾಗೂ ‘ಪ್ರೀತಿ’ ಮಾತನಾಡುತ್ತಿದ್ದವು. ಬೇರ್ಪಡಿಸುವಿಕೆ ಪ್ರೀತಿಗೆ ಹೇಳಿತು ‘ನನಗೆ ಒಂದು ಕ್ಷಣ ಸಾಕು ಇಬ್ಬರು ಪ್ರೀತಿಸುವವರನ್ನು ದೂರ ಮಾಡಲು’ ಎಂದು. ಅದಕ್ಕೆ ಪ್ರೀತಿ ಹೇಳಿತು, ‘ಒಂದು ಕ್ಷಣ ನಿಲ್ಲು, ನಾನು ಮೊದಲು  ನಡುವೆ ಹೋಗಿ ಬರುತ್ತೇನೆ. ಆ ನಂತರ ನೀನು ಹೋಗುವಂತೆ’ ಎಂದು. ಅದಕ್ಕೆ ಬೇರ್ಪಡಿಸುವಿಕೆ ಒಪ್ಪಿತು.

ಪಾರ್ಕಿನಲ್ಲಿ ಕೂತ ಯುವ ಜೋಡಿಯ ಬಳಿ ಪ್ರೀತಿ ಹೋಗಿ ಅವರಿಬ್ಬರನ್ನು ಮುಟ್ಟಿತು. ಜೋಡಿಯ ನಡುವೆ ಪ್ರೀತಿಯಾಯ್ತು. ಆಗ ಪ್ರೀತಿ ಬೇರ್ಪಡಿಸುವಿಕೆಯ ಬಳಿ ಬಂದು ‘ಈಗ ನಿನ್ನ ಸಮಯ ಹೋಗು ಅವರಿಬ್ಬರ ದೂರ ಮಾಡು’ ಎಂದಿತು. ಅದಕ್ಕೆ ಬೇರ್ಪಡಿಸುವಿಕೆ ಹೇಳಿತು ‘ನೀನು ಈಗಿನ್ನೂ ಹೋಗಿ ಬಂದಿದ್ದೀಯಾ, ಅವರ ಮನದ ತುಂಬಾ ಪ್ರೀತಿಯೇ ತುಂಬಿದೆ. ಈಗ  ಸ್ವಲ್ಪ ಸಮಯ ಕಳೆಯಲಿ ನನ್ನ ಜಾದೂ ತೋರಿಸುತ್ತೇನೆ’ ಎಂದಿತು. ಸ್ವಲ್ಪ ಸಮಯ ಕಳೆಯಿತು. ಬೇರ್ಪಡಿಸುವಿಕೆ ಮತ್ತೆ ಬಂದಿತು ‘ಅವರಿಬ್ಬರಿಗೂ ಮದುವೆಯಾಗಿ ಮುದ್ದಾದ ಮಗುವೂ ಇತ್ತು’ ಆಗ ಬೇರ್ಪಡಿಸುವಿಕೆಗೆ ಅವರಿಬ್ಬರ ಕಣ್ಣಲ್ಲಿ ಕೃತಜ್ಞತಾ ಭಾವ ಕಾಣಿಸಿತು. ಈಗ ಬೇಡ ಇನ್ನೊಮ್ಮೆ ಬರುತ್ತೇನೆ ಎಂದು ಹೊರಟು ಹೋಯಿತು. ಮತ್ತೆ ಕೆಲ ವರ್ಷದ ನಂತರ ಬೇರ್ಪಡಿಸುವಿಕೆ ಮತ್ತೆ ಬಂದಿತು. ಆಗ ಅವರಿಬ್ಬರ ಕಣ್ಣಲ್ಲಿ ಪ್ರೀತಿ, ಕೃತಜ್ಞತಾ ಭಾವ ಕಾಣಲಿಲ್ಲ. ಇದೇ ಸರಿಯಾದ ಸಮಯ  ಬೇರೆ ಮಾಡಲು ಎಂದು ಯೋಚಿಸಿತು. ಆದರೆ ಅವರ ಕಣ್ಣಲ್ಲಿ ಬೇರೇನೋ ಕಾಣುತ್ತಿದೆ. ಹತ್ತಿರದಿಂದ ನೋಡಿದಾಗ ಅವರಿಬ್ಬರ ಕಣ್ಣಲ್ಲಿ ಕಂಡದ್ದು ಪರಸ್ಪರ ಗೌರವ ಹಾಗೂ ಹೊಂದಾಣಿಕೆ. ಮತ್ತೆ ಬಂದ ದಾರಿ ಹಿಡಿದು ವಾಪಸ್ ಹೋಯಿತು. ಇನ್ನೂ ಕೆಲ ಸಮಯ ಕಳೆಯಿತು. ಬೇರ್ಪಡಿಸುವಿಕೆ ಮತ್ತೆ ಬಂದಾಗ ಅವರ ಮಗ ಅಪ್ಪನಷ್ಟೆತ್ತರಕ್ಕೇ ಬೆಳೆದು ನಿಂತಿದ್ದ. ಇದು ಸುಸಮಯ ಈಗ ಇವರನ್ನು ಬೇರ್ಪಡಿಸುವೆ ಎಂದುಕೊಂಡಿತು. ಆದರೆ ಈಗ ಅವರ ಕಣ್ಣಲ್ಲಿ ಒಬ್ಬರಿಗೊಬ್ಬರ ಮೇಲಿನ ನಂಬಿಕೆ  ಕಾಣುತ್ತಿತ್ತು. ಸಮಯ ಕಳೆದಂತೆ ಮೊಮ್ಮಕ್ಕಳು ಮನೆಯಲ್ಲಿ ಆಡತೊಡಗಿದರು. ಇದು ಸರಿಯಾದ ಸಮಯ ಇ್ಟರವರೆಗೆ ಪ್ರೀತಿ ಖಂಡಿತ ಇರಲಾರದು ಎಂದು ಯೋಚಿಸಿತು. ಆಕೆಯ ಕಣ್ಣಿನಲ್ಲಿ ಯಾವ ಭಾವವಿದೆ ಎಂದು ನೋಡಲು ಹೊರಟಾಗ ಆಕೆ ಎದ್ದು ಹೊರನಡೆದು ಗಂಡನ ಸಮಾಧಿ ಬಳಿ ಬಂದು ನಿಂತಳು. ಆಗ ಬೇರ್ಪಡಿಸುವಿಕೆಗೆ ಬೇಸರವಾಯಿತು. ನಾನು ಬಂದಿದ್ದು ಕೊಂಚ ತಡವೇ ಆಯಿತು. ಸಮಯವೇ ಇವರನ್ನು ಬೇರ್ಪಡಿಸಿದೆ ಎನಿಸಿತು. ಮತ್ತೆ ಅವಳ ಕಣ್ಣಲ್ಲಿ ನೋಡಿದಾಗ ಬೇರ್ಪಡಿಸುವಿಕೆಗೆ ಪ್ರೀತಿ, ಗೌರವ,  ನಂಬಿಕೆ ಎಲ್ಲವೂ ಕಾಣಿಸಿತು. ಒಮ್ಮೆ ಬಂದು ಹೋದ ಪ್ರೀತಿಗೂ ಹತ್ತು ಬಾರಿ ಬಂದ ನನಗೂ ಇರುವ ವ್ಯತ್ಯಾಸವೇನೆಂದು ಕಂಡುಕೊಂಡಿತು.

ಬೇರ್ಪಡಿಸುವಿಕೆಯಂಥ ಎಷ್ಟೋ ಸವಾಲುಗಳು ಜೀವನದಲ್ಲಿ ನಿಶ್ಚಿತ. ಅವು ಬರುತ್ತವೆ ಹೋಗುತ್ತವೆ. ಆದರೆ ಕೊನೆಗೆ ಉಳಿಯುವುದು ಪ್ರೀತಿಯೊಂದೇ. ಅದು ಮಾತ್ರ ಶಾಶ್ವತವಾಗಿರುತ್ತದೆ. ಜೀವ ಹೋದ ನಂತರವೂ. ಸಮಯ ಪ್ರೀತಿಸುವವರನ್ನು ಯಾವಾಗ ಬೇಕಾದರೂ ಬೇರ್ಪಡಿಸಬಹುದು.

• • •ಸಂತರೊಬ್ಬರು ಪರ್ಯಟನೆ ಮಾಡುತ್ತಾ ನಗರಕ್ಕೆ ಆಗಮಿಸಿದ್ದರು. ಅವರ ಕಾಯಕ, ಬೋಧನೆಗಳು ಅಪಾರ ಸಂಪಾದಿಸಿತ್ತು. ತಮ್ಮತಮ್ಮ ಕಷ್ಟ, ನೋವು, ಅನುಮಾನ, ದುಃಖ ಹೇಳಿಕೊಳ್ಳಲು ಪ್ರತಿದಿನವೂ ಹಲವಾರು ಮಂದಿ ಬರುತ್ತಿದ್ದರು. ಅವರೆಲ್ಲರಿಗೂ ಸಮಾಧಾನದಿಂದಲೇ ಸಂತರು ಉತ್ತರಿಸುತ್ತಿದ್ದರು. ಸಂತರನ್ನು ಭೇಟಿಯಾಗಲು ನಗರದ ಧನಿಕರೊಬ್ಬರು ಬರುತ್ತಾರೆ. ಎಲ್ಲರಂತೆಯೇ ಅವರನ್ನೂ ಸಂತರು ನಡೆಸಿ ಕೊಳ್ಳುತ್ತಾರೆ. ಸಂತರ ಮಾತು, ವಿಷಯ ಜ್ಞಾನ ಕಂಡು ಧನಿಕನಿಗೂ ಅಪಾರ ಸಂತೋಷವಾುತ್ತದೆ. ಇನ್ನೇನು ಎದ್ದು ಹೊರಡುವಾಗ ಆ ನಿಕ ಸಂರಲ್ಲಿ‘ ನಾನು ನಿಮಗೆ ಸಾವಿರ ಚಿನ್ನದ ನಾಣ್ಯಗಳನ್ನು ಕೊಬೇಕೆಂದಿದ್ದೇನೆ. ಈ ಊರಿನಲ್ಲೇ ನಾನೇ ಧನಿಕ.  ಆ ನನ್ನ ಹೆಮ್ಮೆಗೆ ತಕ್ಕಂತೆ ನಿಮಗೆ ದೇಣಿಗೆ ನೀಡುತ್ತೇನೆ ಎನ್ನುತ್ತಾರೆ. ಅದನ್ನು ಕೇಳಿದ ಸಂತರು ‘ಸರಿ, ಚಿನ್ನದ ನಾಣ್ಯದ ಚೀಲ ನೀಬಹುದು’ ಎನ್ನುತ್ತಾರೆ. ಚೀಲ ಕೊಟ್ಟು ಹೊರಟು ನಿಂತ ಧನಿಕನನ್ನು ಸಂತರು ತಡೆದು, ನೀವೇನೂ ಭಾವಿಸದಿದ್ದರೆ ನಾನು ನಿಮಗೆ ಕೆಲ ಪ್ರಶ್ನೆ ಕೇಳುತ್ತೇನೆ ಎಂದರು. ಅದಕ್ಕೆ  ಧನಿಕರು ಹೂಗುಟ್ಟಿದ್ದರು.

ನೀವೀಗ ನನಗೆ ಸಾವಿರ ಚಿನ್ನದ ನಾಣ್ಯ ಕೊಟ್ಟಿರಲ್ಲಾ? ನಿಮ್ಮ ಬಳಿ ಅಷ್ಟೊಂದು ಸಂಪತ್ತು ಇದೆಯೇ? ಈಗ ನೀವು ಹಣ  ನಿಮ್ಮ ಸಂಪತ್ತು ಕಡಿಮೆಯಾಗುವುದಿಲ್ಲವೇ ಎಂದು ಸಂತರು ಪ್ರಶ್ನಿಸುತ್ತಾರೆ. ಇದಕ್ಕುತ್ತರಿಸಿದ ಧನಿಕರು, ಸಂತರೇ, ನನ್ನ ಬಳಿ ಅಪಾರ ಸಂಪತ್ತು ಇದೆ. ನಾನು ನಿಮಗೆ ಹಣ ಕೊಟ್ಟಿದ್ದರಿಂದ ನನ್ನ ಸಂಪತ್ತು ಕಡಿಮೆಯಾಗುವುದು ನಿಜ. ಆದರೆ ನನ್ನ ಗೌರವಕ್ಕಾದರೂ ನಾನು ನಿಮಗೆ ಹಣ ಕೊಡಲೇ ಬೇಕು. ಕೊಟ್ಟ ನಂತರ ನನ್ನ ಸಂಪತ್ತು ವೃದ್ಧಿಯಾಗಲಿ ಎಂದು ದೇವರಲ್ಲಿ ಬೇಡಿಕೊಳ್ಳುತ್ತೇನೆ. ಹಣ ಕಡಿಮೆಯಾದ ಬಗ್ಗೆ ಎಲ್ಲೋ ಎಂದಷ್ಟು ಬೇಸರ ಇರುವುದಂತೂ ನಿಜ ಎನ್ನುತ್ತಾರೆ.

ಆಗ ಸಂತರು,  ನಿಮ್ಮ ಪ್ರಾರ್ಥನೆ ಖಂಡಿತ ದೇವರಿಗೆ ತಲುಪಿದೆ. ನಿಮ್ಮ ಕಡಿಮೆಯಾದ ಸಂಪತ್ತನ್ನು ದೇವರು ಮತ್ತೆ ನೀಡುತ್ತಿದ್ದಾನೆ. ನೀವು ನನಗೆ ಕೊಟ್ಟ ಚಿನ್ನದ ನಾಣ್ಯಗಳ ಚೀಲವನ್ನು ನಿಮಗೆ ಹಿಂದಿರುಗಿಸುತ್ತಿದ್ದೇನೆ. ದಯಮಾಡಿ ಸ್ವೀಕರಿಸಿ ಎನ್ನುತ್ತಾರೆ. ಅಚ್ಚರಿಗೊಳಗಾದ ಧನಿಕರು, ಸಂತರೇ ನೀವು ಭಕ್ತರು ಕೊಡುವ ಹಣದಿಂದ ಬದುಕುವವರು, ನೀವೇ ಹಣ ಬೇಡವೆನ್ನುತ್ತಿದ್ದೀ ರಲ್ಲ? ನಿಮಗೆ ಹಣ ಏಕೆ ಬೇಡ ಎಂದು ಪ್ರಶ್ನಿಸುತ್ತಾರೆ. ನಸುನಕ್ಕ ಸಂತರು, ಧನಿಕರೇ ನನಗೆ ಹಣದ ಬಗ್ಗೆ ಚಿಂತೆಯೇ ಇಲ್ಲ, ಹಾಗಾಗಿ  ಕಡಿಮೆ-ಹೆಚ್ಚು ಎಂಬ ಅಂಶ ನನ್ನನ್ನು ಬಾಧಿಸದು. ಹಾಗೆಯೇ, ಇರುವುದರಲ್ಲಿ ಸಂತೃಪ್ತಿ ಕಾಣುವುದೇ ಬದುಕಿನ ಮೂಲ ಆಶಯ. ಬದುಕಿಗೆ ಗುರಿ, ಕನಸುಗಳು ಇರಬೇಕೇ ಹೊರತು, ಆಸೆ, ಆಮಿಷಗಳಲ್ಲ. ಹಾಗಾಗಿ ನನಗೆ ಹಣದ ಅವಶ್ಯವಿಲ್ಲ. ನೀವು ಹಣ ಕೊಟ್ಟಾಗಲೂ ನಾನೂ ಹಿಗ್ಗಲಿಲ್ಲ. ನಿಮಗೆ ಅದನ್ನು ಹಿಂದಿರು ಗಿಸುವಾಗಲೂ ಸಂಕಟವಾಗುತ್ತಿಲ್ಲ ಎನ್ನುತ್ತಾರೆ. ಧನಿಕ ಮೌನಕ್ಕೆ ಶರಣಾಗುತ್ತಾನೆ!

• • •ಹಳ್ಳಿಯಲ್ಲಿ ವ್ಯಕ್ತಿಯೊಬ್ಬನಿದ್ದ. ಆತ ಪ್ರತಿದಿನ ಬೆಳಗ್ಗೆ ನದಿಗೆ ಬಂದು ಮೀನು ಹಿಡಿಯುತ್ತಿದ್ದ.  ಅಂದೂ ಸಹ ತನ್ನ ಕೆಲಕ್ಕೆಂದು ಬಂದ. ಅಲ್ಲಿ ಒಂದು ದೃಶ್ಯ ಕಾಣಿಸಿತು. ಅಲ್ಲಿ ವ್ಯಕ್ತಿಯೊಬ್ಬ ಹೆಣ್ಣಿನ ತೊಡೆಯ ಮೇಲೆ ತಲೆಯಿಟ್ಟು ಮಲಗಿದ್ದ. ಪಕ್ಕದಲ್ಲಿ ಹೆಂಡದ ಬಾಟಲಿ ಇತ್ತು, ಊಟ ಮಾಡಿದ ಹಾಗಿಯೂ ಇತ್ತು. ಹೆಂಗಸಿನ ಕೈ ಆತನ ತಲೆಯ ಮೇಲೆ ಇತ್ತು. ಅದಕ್ಕೆ ಆ ವ್ಯಕ್ತಿ ಬೆಗ್ಗೆಯೇ ಕುಡಿದು ಹೇಗೆ ಮಲಗಿದ್ದಾನೆ. ಇವರಿಗೆಲ್ಲ ಇಂಥ ಜಾಗವೇ ಬೇಕೆ ಎಂದು ಬೈದುಕೊಂಡ. ಎಷ್ಟು ಕೆಟ್ಟ ಮನುಷ್ಯ ಎಂದು ಮನಸ್ಸಿನಲ್ಲಿ ಅಂದುಕೊಂಡ.  ಸಂಬಂಧವಿಲ್ಲದ ವಿಷಯ ಎಂದು ಸುಮ್ಮನಾದ.

ಹಾಗೇ ಕೆಲ ಸಮಯದ ನಂತರ ಇನ್ನೊಬ್ಬ ವ್ಯಕ್ತಿ ನೀರಿನಲ್ಲಿ ಆಟವಾಡುತ್ತಾ ಮುಳುಗುತ್ತಿರುವವನಂತೆ ಕಂಡಿತು. ಅವನು ಮುಳುಗುತ್ತಿದ್ದಾನೋ ಅಥವಾ ಈಜುತ್ತಿದ್ದಾನೋ ಎಂದು ಅರ್ಥ ಮಾಡಿಕೊಳ್ಳುವುದರೊಳಗೆ ಆತ ಜೋರಾಗಿ ‘ಕಾಪಾಡಿ’ ಎಂದು ಕೂಗಿದ. ಅವನನ್ನು ಬದುಕಿಸುವ ಮನಸಿದ್ದರೂ ನೀರಿಗಿಳಿದು ಅವನು ನನ್ನನ್ನೂ ಎಳೆದುಕೊಂಡು ಹೋದರೆ ಎಂಬ ಭಯದಿಂದ ಅಲ್ಲೇ ನಿಂತ. ತಕ್ಷಣ ಹೆಣ್ಣಿನ ತೊಡೆಯ ಮೇಲೆ ಮಲಗಿದ್ದ ವ್ಯಕ್ತಿ ಓಡಿ ಹೋಗಿ ನೀರಿಗೆ ಧುಮುಕಿದ. ಅವನನ್ನು  ಈಗ ಈ ವ್ಯಕ್ತಿ ಒಳ್ಳೆಯವನಾ? ಕೆಟ್ಟವನಾ ತಿಳಿಯಲೇ ಇಲ್ಲ. ಆತನನ್ನೇ ಪ್ರಶ್ನಿಸಿಬಿಡೋಣ ಎಂದು ಬಂದು ನಿಂತ ‘ನೀವು ಯಾರು?

ಈ ಹೆಂಗಸು ಯಾರು? ಬೆಳಗ್ಗೆಯೇ ಪಾನಮತ್ತರಾಗಿ ಆನಂದಿಸುತ್ತಿದ್ದೀರಲ್ಲಾ?’ ಎಂದ ಅದಕ್ಕೆ ಆತ ನಗುತ್ತಾ, ‘ಇವರು ನನ್ನ ತಾಯಿ, ರಾತ್ರಿ ಮನೆಯಲ್ಲಿ ನಡೆದ ಜಗಳದಿಂದ ಇಲ್ಲಿ ಬಂದಿದ್ದೇನೆ. ನನ್ನಮ್ಮ ನನ್ನನ್ನು ಹುಡುಕಿಕೊಂಡು ಬಂದಿದ್ದಾರೆ. ಏನೂ ತಿಂದಿಲ್ಲ ಎಂದು ಊಟ ನೀರು ತಂದಿದ್ದಾರೆ’ ಎಂದ. ಹಾಗಾದರೆ ಆ ಬಾಟಲಿ ಯಾವುದು ಎಂದು  ಅದು ಪಾನದ ಬಾಟಲಿಯೇ, ಅಮ್ಮ ಗಡಿಬಿಡಿಯಲ್ಲಿ ಸಿಕ್ಕಿದ ಬಾಟಲಿ ತಂದಿದ್ದಾಳೆ. ಹೊಟ್ಟೆ ತುಂಬ ಊಟ, ವಿಶಾಲವಾದ ಆಕಾಶ, ಅಮ್ಮನ ತೊಡೆಯೇ ದಿಂಬಾಗಿರುವಾಗ ನನಗಿಂತ ಅದೃಷ್ಟವಂತ ಇನ್ನೊಬ್ಬ ಇಲ್ಲ’ ಎಂದ.

ಈ ವ್ಯಕ್ತಿ ನಾಚಿಕೆಯಿಂದ ಹೊರಟು ಹೋದ. ಮೊದಲ ನೋಟದಲ್ಲಿ ಯಾರನ್ನೋ ಏಕೆ ಅಳೆಯಬೇಕು? ಅರ್ಥ ಮಾಡಿಕೊಂಡವರೇ ಕೆಲವೊಮ್ಮೆ ಕೆಟ್ಟವರಾಗಬಹುದು. ಇನ್ನು ನೋಡಿದ ತಕ್ಷಣ ಒಬ್ಬರು ಹೀಗೆ ಎಂದು ಹೇಳಲು ಹೇಗೆ ಸಾಧ್ಯ? ಅದಕ್ಕೆ ಮಾನದಂಡಗಳೇನಾದರೂ ಇವೆಯೇ? ಎಷ್ಟೋ ಬಾರಿ  ಇಷ್ಟವಾಗದ ವ್ಯಕ್ತಿಗಳು ಮುಂದೆ ಇಷ್ಟವಾಗಬಹುದು. ನಿಮ್ಮ ಬದುಕಿನ ಅಂಶವೇ ಆಗಬಹುದು ಅಲ್ಲವೆ? ಅಷ್ಟಕ್ಕೂ ವ್ಯಕ್ತಿ ಹೀಗೆ ಎಂದು ಹೇಳಲು ನಾವು ಯಾರು? ಒಬ್ಬರು ಹೀಗೆ ಎಂದು ಮನಸ್ಸಿನಲ್ಲಿ ಅಂದುಕೊಂಡರೆ ನಾವು ಬೇಕು ಎಂದರೂ ಆ ಭಾವನೆ ಹೋಗುವುದಿಲ್ಲ. ಯೋಚಿಸುವುದು ಕಠಿಣ ಅದಕ್ಕೆ ಇವರು ಹೀಗೆ ಎಂದು ಜಡ್‌ಜ್ ಮಾಡಿ ಬಿಡುತ್ತೇವೆ. ಅಂಥವರಲ್ಲಿ ನಾವು ಒಬ್ಬರಾಗುವುದು ಬೇಡ.

• • ಒಂದು ದಿನ ಅಣ್ಣ ತಮ್ಮ ಬಸ್ ಸ್ಟಾಪ್‌ನಲ್ಲಿ  ಅಲ್ಲಿಗೆ ಭಿಕ್ಷುಕನೊಬ್ಬ ಬಂದು ತಿನ್ನಲು ಆಹಾರ ಕೇಳಿದ. ಅದಕ್ಕೆ ಅಣ್ಣ ‘ಈಗ ಸಮಯವಿಲ್ಲ. ನಾಳೆ ಬಾ’ ಎಂದು ತನ್ನ ಫೋನ್‌ನಲ್ಲಿ ಮುಳುಗಿದ. ಪಕ್ಕದಲ್ಲೇ ಕುಳಿತಿದ್ದ ತಮ್ಮನಿಗೆ ಅಣ್ಣನ ವರ್ತನೆ ಸರಿ ಕಾಣಲಿಲ್ಲ. ತಮ್ಮ ಅಣ್ಣನಿಗೆ ‘ಅಣ್ಣ ನೀನು ತುಂಬಾ ದೊಡ್ಡವನು. ಸಮಯಕ್ಕಿಂತ ದೊಡ್ಡವನು’ ಎಂದ. ಅಣ್ಣನಿಗೆ ತಮ್ಮನ ಮಾತಿನ ತಾತ್ಪರ್ಯ ಅರ್ಥವಾಗಲಿಲ್ಲ. ‘ನಾನೇನು ಮಾಡಿದೆ? ಏನರ್ಥ?’ ಎಂದು ಕೇಳಿದ. ಅದಕ್ಕೆ ತಮ್ಮ ಮರು ಪ್ರಶ್ನೆ ಹಾಕಿದ ‘ಭಿಕ್ಷುಕನಿಗೆ ನಾಳೆ  ಎಂದೆಯಲ್ಲಾ, ಭಿಕ್ಷುಕ ನಾಳೆಯವರೆಗೆ ಬದುಕಿರುತ್ತಾನಾ? ಬದುಕಿದ್ದರೂ ಮತ್ತೆ ಇಲ್ಲಿಗೇ ಬಂದು ನಿನ್ನ ಭಿಕ್ಷೆ ಕೇಳುತ್ತಾನಾ? ಅದು ಬಿಡು ನಾಳೆವರೆಗೆ ನೀನು ಬದುಕಿರುತ್ತೀಯಾ?

ನೀವಿಬ್ಬರೂ ಬದುಕಿಯೇ ಇರುತ್ತೀರಾ ಎಂದಿಟ್ಟುಕೊಳ್ಳಿ ಆತ ನಾಳೆ ಬಂದು ಭಿಕ್ಷೆ ಕೇಳಿದರೆ ಕೊಡಲು ನಿನ್ನ ಬಳಿ ಏನಾದರೂ ಇರುತ್ತದಾ? ನೀನು ನೀಡುವಷ್ಟು ಶಕ್ತನಾಗಿರುತ್ತೀಯಾ?

ಈ ಎಲ್ಲ ಪ್ರಶ್ನೆಗಳಿಗೆ ಉತ್ತರಿಸಲಾರೆದೇ ಅಣ್ಣ ಆ ಕ್ಷಣವೇ ಭಿಕ್ಷುಕನಿಗೆ ಭಿಕ್ಷೆ ನೀಡಿ ಕಳಿಸಿದ.