About Us Advertise with us Be a Reporter E-Paper

ವಿರಾಮ

‘ಮಾರಕ’ ದ್ರವ್ಯಗಳು

* ಡಾ. ಬಿ. ಎಂ. ಹೆಗ್ಡೆ

* ಮಾದಕ ದ್ರವ್ಯ ಎಂದರೇನು?
ಮಾದಕ ದ್ರವ್ಯವು ಒಂದು ರಾಸಾಯನಿಕ ಅಥವಾ ಔಷಧ ಶಾಸ್ತ್ರೀಯವಾದ ವಸ್ತು. ಅದನ್ನು ಸೇವಿಸಿದಾಗ ಹಲವು ಬದಲಾವಣೆಗಳು ಎದ್ದು ತೋರುತ್ತದೆ. ಔಷಧದ ರೂಪದಲ್ಲಿ ಉಪಯೋಗಿಸುವ ಕೆಲವೊಂದು ದ್ರವ್ಯಗಳಿಂದ ದೇಹಕ್ಕೆ ಹಿತವಾಗಬಹುದು. ಆದರೆ ಇಲ್ಲಿ ಮಾದಕ ದ್ರವ್ಯ ಎಂಬ ಪದವನ್ನು ಸುಖ ಸಿಗುತ್ತದೆ ಎಂಬ ಭಾವನೆಯಿಂದ ಜನ ಸ್ವಂತ ಬಯಕೆಯಿಂದ ತಾವೇ ಸೇವಿಸುವ ರಾಸಾಯನಿಕ ಸಂಯುಕ್ತ ಎಂಬ ಅರ್ಥದಲ್ಲಿ ಬಳಸಲಾಗಿದೆ.

tequila , lime and salt on wooden table

* ಮಾದಕ ದ್ರವ್ಯ ಎಂಬುದು ಎಷ್ಟು ಪ್ರಾಚೀನ?
ಸುಖ ನೀಡುವ ಮಾದಕ ದ್ರವ್ಯಗಳನ್ನು ಮನುಷ್ಯ ಅನಾದಿ ಕಾಲದಿಂದಲೂ ಬಳಸುತ್ತ ಬಂದಿದ್ದಾನೆ. ಕನ್‌ಫ್ಯೂಶಿಯಸ್‌ನ ಕಾಲದಿಂದಲೂ ಚೀನೀಯರು ಲಘುವಾದ ಮನೋದ್ದೀಪಕವಾದ ದ್ರವ್ಯಗಳನ್ನು ಬಳಸುತ್ತಲೇ ಇದ್ದಾರೆ. ತೀರ ಸಾಮಾನ್ಯ ಮಾದಕ ಮದ್ಯವನ್ನು ನಮ್ಮಲ್ಲಿ ವೈದಿಕಯುಗದ ಋಷಿಗಳು ಕೂಡ ಸೇವಿಸುತ್ತಿದ್ದರು. ಪ್ರಾಚೀನ ಈಜಿಪ್‌ಟ್ನ ಜನರು ಕೂಡ ಮಾದಕ ದ್ರವ್ಯವನ್ನು ಸೇವಿಸುತ್ತಿದ್ದರು

* ಮಾದಕ ದ್ರವ್ಯ ಸೇವನೆಯ ಮೂಲ ಕಾರಣವೇನು?
ನ್ಯೂಯಾರ್ಕ್‌ನ ಬ್ರೂಕ್ಲಿನ್ ಕೊಂಪೆಗಳಲ್ಲಿ ನಡೆಸಿದ ಸಮೀಕ್ಷೆಯಲ್ಲಿ 7-8 ವರ್ಷದ ಮಕ್ಕಳು ಕೂಡ ಧೂಮಪಾನ ಹಾಗೂ ಮಾದಕ ದ್ರವ್ಯ ವ್ಯಸನಕ್ಕೆ ಬಲಿಯಾಗಿದ್ದಾರೆ ಎಂಬ ಆಘಾತಕಾರಿ ಅಂಶ ಬೆಳಕಿಗೆ ಬಂದಿದೆ. ಈ ಅಧ್ಯಯನದಿಂದ ತಿಳಿದುಬಂದ ಸಂಗತಿ ಎಂದರೆ ಈ ಎಲ್ಲಾ ಮಕ್ಕಳು ಭಗ್ನ ಕುಟುಂಬಗಳಿಗೆ ಇವರ ತಂದೆ ತಾಯಿಗಳು ಒಂದೋ ಮದ್ಯಪಾನಿಗಳು ಇಲ್ಲವೆ ವಿಚ್ಛೇದಿತರು ಅಥವಾ ವರ ತಾಯಿಯರು ಅವಿವಾಹಿತರು. ಈ ಮಕ್ಕಳು ತಮ್ಮ ತಂದೆ ತಾಯಿಗೆ ಅನಿಚ್ಛ ಸಂತಾನವಾಗಿದ್ದು, ಅವರ ಪ್ರೀತಿ ಪ್ರೇಮದಿಂದ ವಂಚಿತರಾಗಿರುತ್ತಾರೆ.

ಈ ಮಕ್ಕಳು ಪ್ರೀತಿ, ಪ್ರೇಮ, ಸಂತೋಷ ಸಂಪಾದನೆಗಾಗಿ ತಮ್ಮ ತಂದೆ ತಾಯಿಯನ್ನು ಅವಲಂಬಿಸುವ ಬದಲು ಮಾದಕ ದ್ರವ್ಯಗಳನ್ನು ಆಶ್ರಯಿಸಿದರು. ನಮ್ಮ ದೇಶದ ಶಾಲಾ ಕಾಲೇಜುಗಳ ಸ್ಥಿತಿ ಕೂಡ ಚಿಂತಾಜನಕವಾಗಿದ್ದು, ಪ್ರಜ್ಞಾವಂತರಲ್ಲಿ ವಿಸ್ಮಯಾಘಾತಗಳನ್ನು ಉಂಟುಮಾಡುವಂತಿದೆ. ನಮ್ಮಲ್ಲಿ ಈ ಬಗ್ಗೆ ಸಮೀಕ್ಷೆಗಳು ನಡೆದಿದ್ದರೂ, ಪ್ರಾದೇಶಿಕ ನೆಲೆಯಲ್ಲಿ ಸಣ್ಣಪುಟ್ಟ ಸಮೀಕ್ಷೆಗಳು ಮಾತ್ರ ನಡೆದಿವೆ. ಈ ಸಮೀಕ್ಷೆಗಳ ಪ್ರಕಾರ ತರುಣ ಜನಾಂಗದಲ್ಲಿ ಸಾಕಷ್ಟು ಮಂದಿ ತಂಬಾಕು, ಮದ್ಯ ಹಾಗೂ ಬ್ರೌನ್‌ಶುಗರ್‌ನಂಥ ಮಾದಕ ದ್ರವ್ಯಗಳನ್ನು ಸೇವಿಸುತ್ತಾರೆ. ಆ ಮೂಲಕ ಮಾದಕ ದ್ರವ್ಯಗಳು ಅವರ ಜೀವನಕ್ಕೆ ‘ಮಾರಕ’ ದ್ರವ್ಯಗಳಾಗುತ್ತಿವೆ.

Tags

Related Articles

Leave a Reply

Your email address will not be published. Required fields are marked *

Language
Close