About Us Advertise with us Be a Reporter E-Paper

ಸಿನಿಮಾಸ್

ನಿರ್ದೇಶಕನಾದವನು ಕತೆಯ ಬಗ್ಗೆ ಹೆಚ್ಚು ಗಮನ ಹರಿಸಬೇಕು: ಉಪೇಂದ್ರ

ಪುಟ್ಟಣ್ಣ ಕಣಗಾಲ್ ಹುಟ್ಟುಹಾಕಿದ್ದ ಕರ್ನಾಟಕ ಚಲನಚಿತ್ರ ನಿರ್ದೇಶಕರ ಸದ್ಯ ಅಧ್ಯಕ್ಷರಾಗಿ ಸಾಹಿತಿ ಡಾ.ನಾಗೇಂದ್ರಪ್ರಸಾದ್ ಆಯ್ಕೆಯಾಗಿದ್ದಾರೆ. ಇವರ ಅಧೀನದಲ್ಲಿ ನಾಗರಬಾವಿಯಲ್ಲಿ ಕಚೇರಿಯೊಂದು ಆರಂಭವಾಗಿದೆ. ಇದರ ಉದ್ಘಾಟನಾ ಸಮಾರಂಭ ಇತ್ತೀಚೆಗೆ ನಡೆಯಿತು. ಸಂಘದ ವೆಬ್‌ಸೈಟ್‌ನ್ನು ನಿರ್ದೇಶಕ ರೇಣುಕಾಶರ್ಮ ಅನಾವರಣಗೊಳಿಸಿದರೆ, ಕ್ಯಾಲೆಂಡರ್‌ಅನ್ನು ರಮೇಶ್‌ಅರವಿಂದ್ ಹಾಗೂ ಡೈರಿಯನ್ನು ಕ್ರಮವಾಗಿ ಭಗವಾನ್, ಸುದೀಪ್ ಬಿಡುಗಡೆ ಮಾಡಿದರು.

ನಿರ್ದೇಶಕನಾದವನು ಚಿತ್ರೀಕರಣದಲ್ಲಿ ಒಮ್ಮೆ ಟೇಕ್‌ನ್ನು ಓಕೆ ಎಂದರೆ ಅದನ್ನು ನೋಡಲು ಆರು ಕೋಟಿ ಜನ ಇರುತ್ತಾರೆ ಇವರ ಪ್ರತಿನಿಧಿಯಾಗಿ ನಿರ್ದೇಶಕ ಇರುತ್ತಾನೆ. ಸಂಘದಲ್ಲಿ ನಾಲ್ಕು ನೂರು ಸದಸ್ಯರುಗಳು ಸಂತಸ ತಂದಿದೆ. ನಿಮ್ಮಿಂದ ಒಳ್ಳೆಯ ಸಿನಿಮಾಗಳು ಬರುವ ಸಾಧ್ಯತೆ ಇದೆ ಅಂತ ಕಿರಿಯ ನಿರ್ದೇಶಕರುಗಳಿಗೆ ರಮೇಶ್‌ಅರವಿಂದ್ ಕಿವಿಮಾತು ಹೇಳಿದರು.

ಸಂಘವು ಹುಟ್ಟಿದ್ದನ್ನು ನೆನಪು ಮಾಡಿಕೊಂಡ ರಾಜೇಂದ್ರಸಿಂಗ್ ಬಾಬು, ಅಂದು ಎಲ್.ವಿ.ಪ್ರಸಾದ್ ಹೇಳಿದ್ದರು. ನನಗೆ ಫಾಲ್ಕೆ ಪ್ರಶಸ್ತಿಗಿಂತ ನಿರ್ದೇಶಕರ ಸಂಘವು ನೀಡುವ ಗೌರವ ದೊಡ್ಡದಿದೆ. ಕೆಲವು ವರ್ಷಗಳಿಂದ ಸಂಘದಲ್ಲಿ ಸಕ್ರಿಯವಾಗಿ ಕಾರ್ಯಕ್ರಮಗಳು ನಡೆಯುತ್ತಿಲ್ಲ, ನೀವುಗಳು ಸದರಿ ಸಂಪ್ರದಾಯವನ್ನು ಮುಂದುವರೆಸಿದರೆ ಸುಗಮವಾಗುತ್ತದೆಂದು ಹೇಳಿದರು.

ಸ್ವಂತ ಕಟ್ಟಡ ಮಾಡಿದ ಮೇಲೆ ಅಧಿಕಾರದಿಂದ ಕೆಳಗೆ ಪ್ರಾರಂಭದಲ್ಲೆ ಹೇಳಿದ ಅಧ್ಯಕ್ಷರು, ಎಲ್ಲಾ ಅಂಗ ಸಂಸ್ಥೆಗಳು ಬೆಂಬಲ ವ್ಯಕ್ತಪಡಿಸಿದರೆ ಸಂಘವು ಹೆಚ್ಚಿನ ಮಟ್ಟದಲ್ಲಿ ಅಭಿವೃದ್ದಿಗೊಳ್ಳುತ್ತದೆ. ಹಾಲಿ ಸಂಘದಲ್ಲಿ ನಿರ್ದೇಶನ, ಅಭಿನಯ, ನೃತ್ಯ ಮತ್ತು ಸಂಗೀತ ತರಬೇತಿ ನೀಡಲಾಗುತ್ತಿದೆ. ಸದಸ್ಯತ್ವ ಹೊಂದಿದವರಿಗೆ ಆರ್ಥಿಕ, ನೈತಿಕವಾಗಿ ಸಹಾಯ ಮಾಡಲಾಗುವುದು. ಆರೋಗ್ಯವಿಮೆ ಮಾಡಿಸಲು ಚಿಂತನೆ ನಡೆಸಿದೆ. ಭಾರತ ದೇಶದಲ್ಲೆ ಮೊಟ್ಟ ಮೊದಲು ನಿರ್ದೇಶಕರ ಸಂಘ ತೆರೆದಿದ್ದು ಹೆಮ್ಮೆಯ ವಿಷಯವಾಗಿದೆ ಎಂದರು.

ಹಲವು ದಿಗ್ಗಜರು ಹಾಕಿದ ಬುನಾದಿ ನಾಂದಿಯಾಗಿದೆ. ಒಬ್ಬ ನಿರ್ದೇಶಕ ಹೇಗಿರಬೇಕೆಂದು ತೋರಿಸಿದ್ದಾರೆ. ಅವರು ಕೃಷ್ಣನಿದ್ದಂತೆ. ನಿರ್ದೇಶಕನಾದವನು ಯಾರ ಹಿಂದೆ ಹೋಗಬಾರದು. ಪ್ರತಿಯೊಬ್ಬರು ನಮ್ಮ ಹಿಂದೆ ಬರಬೇಕು. ಅದಕ್ಕಾಗಿ ನಾವು ಕಷ್ಟಪಡಬೇಕು. ಕಲಾವಿದರು ಮೇಧಾವಿಗಳು ಅಲ್ಲ. ನಾವುಗಳು ಸ್ಟಾರ್ ಮೇಕರ್ ಆಗಬೇಕು. ತಂತ್ರಜ್ಞಾನ ಬೆಳೆದಿರುವುದರಿಂದ ಸಿನಿಮಾ ಮಾಡುವುದು ಸುಲಭ. ಕತೆ ಬರೆಯುವುದು ಕಷ್ಟ. ನೆಟ್‌ಫ್ಲಿಕ್‌ಸ್, ಯೂಟ್ಯೂಬ್, ಚಾನಲ್‌ಗಳು ಇರುವ ಕಾರಣ ಸಂಕೀರ್ಣ ನೋಡುಗರು ಇದ್ದಾರೆ. ಅವರುಗಳು ಎಲ್ಲಾ ಭಾಷೆಯ ಚಿತ್ರ ನೋಡುತ್ತಾರೆ. ಇಂತಹ ಸ್ಪರ್ಧೆಯಲ್ಲಿ ಕ್ಯಾಪ್ಟನ್ ಆದವನು ಕತೆಯ ಬಗ್ಗೆ ಹೆಚ್ಚು ಹರಿಸಬೇಕಾಗಿದೆ ಅಂತ ಉಪೇಂದ್ರ ಹಿತವಚನ ನುಡಿದರು.

ಕೊನೆಯದಾಗಿ ಸಂಘಕ್ಕೆ ಹಾರೈಸಲು ಆಗಮಿಸಿದ್ದ ಸುದೀಪ್ ಮಾತನಾಡಿ ಎರಡು ದಿನದಿಂದ ಬ್ಯುಸಿ ಇರುವುದು ನಿಮಗೆಲ್ಲಾ ತಿಳಿದಿದೆ. ಕಾರ್ಯಕ್ರಮ ಇರುವುದು ಮರೆತುಹೋಗಿತ್ತು. ನಾಗೇಂದ್ರ ಪ್ರಸಾದ್ ಫೋನ್ ಮಾಡಿದಾಗಲೇ ನೆನಪಿಗೆ ಬಂತು. ಕ್ಷಮೆ ಇರಲಿ. ಬಾಡಿಗೆ ಕಟ್ಟಡವು ಮುಂದೆ ಸ್ವಂತದ್ದು ಆಗಲಿ. ನನ್ನ ಕಡೆಯಿಂದ ಪ್ರೋತ್ಸಾಹ ನೀಡಲು ಸಿದ್ಧ. ಚಿತ್ರ ಹಿಟ್ ಆದಾಗ ನಾಯಕ, ನಾಯಕಿಯನ್ನು ಹೊಗಳುತ್ತಾರೆ. ಅದರ ಹಿಂದೆ ತಂತ್ರಜ್ಞರ ಪ್ರತಿಭೆ ಇರುತ್ತದೆ. ಸ್ಥಾನ ಮಹತ್ವವಾಗಿರುತ್ತದೆ. ಅವರನ್ನು ತಂದೆ-ತಾಯಿಗೆ ಹೋಲಿಸುತ್ತಾರೆ. ನಿರ್ದೇಶಕ ಉನ್ನತ ಸ್ಥಾನದಲ್ಲಿದ್ದಾಗ ಮಾತ್ರ ಎಲ್ಲಾ ಕೆಲಸಗಳು ಚೆನ್ನಾಗಿ ಆಗುತ್ತದೆ. ನಾಯಕ, ನಾಯಕಿ ಅಂತ ಬಂದಾಗ ಮೊದಲು ಅವರೆಲ್ಲರನ್ನು ಆಯ್ಕೆ ಮಾಡುವ ಜವಾಬ್ದಾರಿ ನಿರ್ದೇಶಕರದಾಗಿರುತ್ತದೆ. ಇಂತಹ ಸಂಘದಲ್ಲಿ ನಾನು ಸದಸ್ಯನಾಗಿರುವುದು ಹೆಮ್ಮೆ ಅನಿಸುತ್ತದೆ. ಸಾಧುಕೋಕಿಲರನ್ನು ಸಾದ್ಯವಾದಷ್ಟು ಬಳಸಿಕೊಳ್ಳಿ ಎಂದು ತಿಳಿಸಿದರು. ನಿರ್ಮಾಪಕ ಜಾಕ್‌ಮಂಜು, ಜೊಸೈಮನ್ ಸೇರಿದಂತೆ ಹಲವು ಹಿರಿಯ, ಕಿರಿಯ ನಿರ್ದೇಶಕರುಗಳು, ಸಹಾಯಕರು ಸಮಾರಂಭದಲ್ಲಿ ಹಾಜರಿದ್ದರು

Tags

Related Articles

Leave a Reply

Your email address will not be published. Required fields are marked *

Language
Close