ವಿಶ್ವವಾಣಿ

ಶತಮಾನ ಪೂರೈಸಿದ ಶಾಲೆಗಳ ಶ್ರೇಯೋಭಿವೃದ್ಧಿಯ ಕನಸು

ಪ್ರಗತಿ ಹೊಂದಬೇಕಾದ ಸಮಾಜದಲ್ಲಿ ಸವಾಲು ಮತ್ತು ಸಮಸ್ಯೆಗಳು ಸಾವಿರದಷ್ಟು ಪ್ರಜಾಸತ್ತಾತ್ಮಕ ಸರಕಾರಗಳು ಸವಾಲುಗಳನ್ನು ಮೀರಿ ನಿಲ್ಲುವುದಕ್ಕಾಗಿ ನಿಯಮಗಳನ್ನು ರೂಪಿಸಿಕೊಳ್ಳುತ್ತವೆ. ಅವುಗಳಿಗೆ ಕಾಯ್ದೆಯ ಸ್ಥಾಮಾನವನ್ನು ಹೀಗೆ ರೂಪಿಸಲಾದ ಕಾನೂನುಗಳಲ್ಲಿ ಸಮಸ್ಯೆಯನ್ನು ಬಗೆಹರಿಸುವ ಬದ್ಧತೆಗೆ ವ್ಯಕ್ತವಾಗುತ್ತದೆ. ಕೆಲವೊಂದು ಸಮಸ್ಯೆಗಳನ್ನು ನಿರ್ಮೂಲನೆಗೊಳಿಸಬೇಕಾಗುತ್ತದೆ. ಕೆಲವೊಂದನ್ನು ನಿರ್ಮೂಲನೆಗೊಳಿಸುವುದು ಕಷ್ಟದಾಯಕವಾಗುತ್ತದೆ. ಇಂತಹುಗಳ ನಿಭಾಯಿಸುವಿಕೆಯಲ್ಲಿ ಸರಕಾರದ ಬದ್ಧತೆ ವ್ಯ್ತವಾಗುತ್ತದೆ. ಹಾಗಾಗಿ ಸರಕಾರಗಳಿಂದ ರಚಿತವಾಗುವ ಕಾನೂನುಗಳಲ್ಲಿ ನಿರ್ಮೂಲನೆಯ ಅಂಶ ವ್ಯಕ್ತವಾದರೆ ಕೆಲವೊಂದು ಕಾೂನುಗಳಲ್ಲಿ ನಿಯಂತ್ರಣ ಎಂಬ ಪದವನ್ನು ಬಳಸಲಾಗುತ್ತದೆ. ನಿರ್ಮೂಲನೆ ಮಾಡಬೇಕಾದ ಅವಶ್ಯಕತೆ ಇದ್ದರೂ ಅದನ್ನು ಸಾಧಿಸುವುದು ಸಾಧ್ಯವಾಗದಿದ್ದರೆ ನಿಯಂತ್ರಣ ಎಂಬ ಪದವನ್ನು ಬಳಸಿಕೊಳ್ಳಲಾಗುತ್ತದೆ. ಎಲ್ಲಿ ನಿರ್ಮೂಲನೆಯ ಅವಶ್ಯಕತೆ ಇದ್ದರೂ ಅಂತಹ ಸನ್ನಿವೇಶದಲ್ಲಿ ನಿಯಂತ್ರಣವೆಂಬ ಅದರಲ್ಲಿ ರಾಜಕೀಯ ಇಚ್ಛಾಶಕ್ತಿಯ ಕೊರತೆ ಅಥವಾ ಆಡಳಿತ ಅಂಗದ ವೈಫಲ್ಯತೆ ನುಸುಳಿದೆಯೆಂದು ಅರ್ಥೈಸಿಕೊಳ್ಳಬಹುದಾಗಿದೆ.

ಬಸಲಿಂಗಪ್ಪನವರು ಸಚಿವರಾಗಿ ಕಾರ್ಯ ನಿರ್ವಹಿಸುತ್ತಿದ್ದರು. ಆಗ ಮಲಹೊರುವ ಅಮಾನವೀಯ ಪದ್ಧತಿ ಜಾರಿಯಲ್ಲಿತ್ತು. ನಾಗರೀಕ ಸಮಾಜ ತಲೆತಗ್ಗಿಸಬಹುದಾದ ಇಂತಹ ಪದ್ದತಿಯನ್ನು ಕಿತ್ತೊಗೆಯಬೇಕೆಂದು ಅಂದಿನ ಸಚಿವರಾಗಿದ್ದ ಬಸಲಿಂಗಪ್ಪನವರು ಆಲೋಚಿಸಿದರು. ಪರಂಪರಾಗತ ಯಾವುದೇ ರೂಢಿಯನ್ನು ಬಿಟ್ಟುಕೊಡುವುದಕ್ಕೆ ಕೆಲವರ್ಗಗಳು ಸಿದ್ಧರಾಗುವುದಿಲ್ಲ. ಅದರಂತೆಯೆ ಶತಮಾನದಿಂದ ಜಿಡ್ಡುಗಟ್ಟಿದ ಅಮಾನವೀಯ ಆಚರಣೆಯನ್ನು ನಿಷೇಧಿಸಬೇಕೆಂಬ ಇಚ್ಛೆಯನ್ನು ವ್ಯಕ್ತಪಡಿಸಿದ ಬಸಲಿಂಗಪ್ಪನವರು ಮಸೂದೆಯನ್ನು ಜಾರಿಗೆ ತರುವುದರ ಮೂಲಕ ಮಲಹೊರುವ ಕಿತ್ತೊಗೆಯಲು ಪ್ರಸ್ತಾಪಿಸಿದರು. ಅದಕ್ಕೊಂದು ಪ್ರಬಲವಾದ ಕಾನೂನೊಂದನ್ನು ಜಾರಿಗೆ ತಲಾರದೆ ಇಂತಹ ದುಷ್ಟ ಪದ್ದತಿಯನ್ನು ಹೋಗಲಾಡಿಸುವುದು ಅಸಾಧ್ಯವೆಂದು ಅರಿತ ಅವರು ಟಿಪ್ಪಣಿ ಬರೆದು ಸಚಿವ ಸಂಪುಟದ ಮುಂದೆ ಪ್ರಸ್ತಾಪಿಸಲು ಸಿದ್ಧತೆಯನ್ನು ಕೈಗೊಂಡರು. ಮಾರ್ಗಸೂಚಿಯನ್ನೊಳಗೊಂಡ ನಿಯಮಾವಳಿಯನ್ನು ರೂಪಿಸುವ ಪ್ರಸ್ತಾಪವನ್ನು ಹೊತ್ತ ಕಡತ ಕಾರ್ಯದರ್ಶಿ ಹುದ್ದೆಯ ಅಧಿಕಾರಿಯ ಅಭಿಪ್ರಾಯವನ್ನು ಪಡೆಯುವುದಕ್ಕಾಗಿ ಮಂಡಿಸಲ್ಪಟ್ಟಿತು. ಅಂದಿನ ಅಧಿಕಾರಿ ಮಲ ಹೊರುವ ಪದ್ದತಿಯನ್ನು ತೊಡೆದು ಹಾಕಿದರೆ ಗ್ರಾಮ/ಪಟ್ಟಣಗಳಲ್ಲಿ ಅಶುಚಿತ್ವ ಹೆಚ್ಚುವುದರಿಂದ ಸಾಂಕ್ರಾಮಿಕ ರೋಗಗಳು ಹರಡಿ ಆರೋಗ್ಯದ ಪರಿಸ್ಥಿತಿ ಸಂಭವಿರುತ್ತದೆ. ಆದುದರಿಂದ ಸಾರ್ವಜನಿಕರ ಸಮಾಜದ ಆರೋಗ್ಯದ ಹಿತದೃಷ್ಠಿಯಿಂದ ಮಲಹೊರುವ ಪದ್ದತಿಯನ್ನು ನಿಷೇಧಿಸುವ ಕಾಯ್ದೆಯನ್ನು ಜಾರಿಗೆ ತರುವುದು ಅಷ್ಟೊಂದು ಪ್ರಸ್ತುತವಾದುದಲ್ಲ! ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿ ಪೂರ್ಣವಿರಾಮವನ್ನಿಟ್ಟು ಬಿಟ್ಟಿದ್ದರು. ನೋವಿನ ನಡುವಿನಿಂದೆದ್ದು ಬಂದಿದ್ದ ಬಸಲಿಂಗಪ್ಪನವರು ಹಿರಿಯ ಶ್ರೇಣಿಯ ಅಧಿಕಾರಿಯನ್ನು ಕರೆಯಿಸಿ ಪ್ರತಿಕ್ರಿಯಿಸಿದ ರೀತಿ ನಂತರದ ಎಷ್ಟೋ ಚಿಂತನಶೀಲ ವ್ಯಕ್ತಿಗಳಿಗೆ ಸ್ಪೂರ್ತಿಯನ್ನು ತುಂಬಿತ್ತು.

ಮಲ ಹೊರುವ ಪದ್ದತಿಯನ್ನು ನಿಷೇಧಿಸುವುದರಿಂದ ಯಾರಿಗೋ ತೊಂದರೆಯಾಗುವುದಾರೆ ನಾಳೆಯಿಂದ ನೀವೆ ಏಕೆ ತಲೆಯ ಮೇಲೆ ಮಲವನ್ನು ಹೊತ್ತೊಯ್ಯಬಾರದು ಎಂದು ಪ್ರತಿಕ್ರಿಯಿಸಿದ್ದರು. ಆಗ ಜಾರಿಗೆ ಬಂದ ಕಾಯ್ದೆಯೆ ಮಲ ಹೊರುವ ಪದ್ದತಿಯ ನಿಷೇಧ ಕಾಯ್ದೆ. ಒಂದು ವೇಳೆ ಅಂದಿನ ಸಚಿವರು ಅಧಿಕಾರಿಯ ಅಭಿಪ್ರಾಯವನ್ನು ಮನ್ನಿಸಿದ್ದರೆ ಅನಿಷ್ಟ ಪದ್ದತಿಯನ್ನು ಆಚರಿಸುವ ಅಥವಾ ಪ್ರೋತ್ಸಾಹಿಸುವ ವ್ಯಕ್ತಿಯನ್ನು ದಂಡನೆಗೊಳಪಡಿಸುವ ಪ್ರಬಲ ಕಾಯಿದೆಯ ಬದಲಾಗಿ ಮಲ ಹೊರುವ ಪದ್ದತಿಯ ನಿಷೇಧ ಹಾಗೂ ನಿಯಂತ್ರಣ ಕಾಯಿದೆಯಾಗಿ ಪರಿವರ್ತನೆಯಾಗುತ್ತಿತ್ತು.

ಬಾಲ ಕಾರ್ಮಿಕ ನಿಷೇಧ ಹಾಗೂ ನಿಯಂತ್ರಣ ಕಾಯ್ದೆಯು ಜಾರಿಯಲ್ಲಿದೆ. ಕಾಯಿದೆಯು ಜಾರಿಗೆ ಬಂದು ಸಂಪೂರ್ಣ ಬಾಲ ಕಾರ್ಮಿಕ ನಿಷೇಧಿಸಲು ಸಾಧ್ಯವಾಗಲಾರದೆಂಬ ಅಭಿಪ್ರಾಯದೊಂದಿಗೆ ನಿಯಂತ್ರಣ ಕಾಯಿದೆಯನ್ನು ಜಾರಿಗೆ ತರಲಾಗಿದೆ. ಭಾರತ ದಂಡ ಪ್ರಕ್ರಿಯೆ ಸಂಹಿತೆ ಹದಿನೆಂಟು ವರ್ಷದೊಳಗಿನ ವ್ಯಕ್ತಿಗಳನ್ನು ಮಕ್ಕಳೆಂದು ಗುರುತಿಸಲಾಗಿದೆ. ಬಾಲ ಕಾರ್ಮಿಕ ನಿಷೇಧ ಮತ್ತು ನಿಯಂತ್ರಣ ಕಾಯಿದೆಯು ಮಕ್ಕಳು ಎಂಬ ಶೀರ್ಷಿಕೆಯನ್ನು ಮರುವ್ಯಾಖ್ಯಾನಗೊಳಿಸುತ್ತದೆ. ಅದರ ಪ್ರಕಾರ ಹದಿನಾಲ್ಕು ವರ್ಷದೊಳಗಿನ ಮಕ್ಕಳನ್ನು ದುಡಿಸಿಕೊಳ್ಳುವಂತಿಲ್ಲ ನಿಗದಿತ ವಯಸ್ಸಿನ ಒಳಗಿನವರನ್ನು ಕೂಲಿಗಾಗಿ ಶ್ರಮದ ಕೆಲಸಕ್ಕೆ ನೇಮಿಸಿಕೊಂಡರೆ ಅಪರಾಧವಾಗುತ್ತದೆ. ಆದರೆ ಹದಿನೈದು ವರ್ಷಕ್ಕಿಂತ ಮೇಲ್ಪಟ್ಟ ಮಕ್ಕಳನ್ನು ಕೆಲವೊಂದು ಕೆಲಸಗಳಿಗೆ ಬಳಸಿಕೊಳ್ಳಬಹುದಾಗಿದೆ. ಇಲ್ಲಿ ಬದಲಾಗಿ ನಿಯಂತ್ರಣ ಎಂಬ ಪದವನ್ನು ಉಲ್ಲೇಖಿಸಲಾಗುತ್ತದೆ.

ಚೈಲ್‌ಡ್ ರೈಟ್‌ಸ್ ಆಂಡ್ ಯು ಎಂಬ ಸ್ವಯಂ ಸೇವಾ ಸಂಸ್ಥೆಯು ಪ್ರಕಟಿಸಿರುವ ವರದಿ ಆತಂಕವನ್ನು ಹುಟ್ಟು ಹಾಕಿದೆ. ಹದಿನೈದರಿಂದ ಹದಿನೆಂಟರೊಳಗಿನ ವಯಸ್ಸಿನ 2.3 ಕೋಟಿ ಬಾಲ ಕಾರ್ಮಿಕರು ಬಡತನದ ಕಾರಣದಿಂದಾಗಿ ಶಿಕ್ಷಣವನ್ನು ತೊರೆದು ದುಡಿಮೆಗಳಲ್ಲಿ ತೊಡಗಿಕೊಂಡಿದ್ದಾರೆ. ಸುಮಾರು ಎರಡು ಕೋಟಿಯಷ್ಟು ಮಕ್ಕಳು ದುಡಿಮೆ ಮತ್ತು ಶಿಕ್ಷಣವನ್ನು ಒಟ್ಟಿಗೆ ನಿಭಾಯಿಸಲು ಸಾಧ್ಯವಿಲ್ಲವೆಂಬ ಕಾರಣಕ್ಕಾಗಿ ಶಿಕ್ಷಣವನ್ನು ತೊರೆದಿದ್ದಾರೆ. ತೊಂಬತ್ತೆರಡು ಲಕ್ಷದಷ್ಟು ಹೆಣ್ಣು ಮಕ್ಕಳು ಪ್ರೌಢಾವ್ಯಸ್ಥೆಗೆ ಮುನ್ನ ತಾಳಿಗೆ ಕೊರಳೊನ್ನೊಡಿದ್ದಾರೆ. ಸುಮಾರು ಇಪ್ಪ್ತನಾಲ್ಕು ಲಕ್ಷ ಹೆಣ್ಣು ಮಕ್ಕಳು ದೇಹ ಬಲಿಷ್ಟಗೊಳ್ಳುವುದಕ್ಕಿಂತ ಮುಂಚೆ ತಾಯಿತನವನ್ನು ಹೊಂದಿದ್ದಾರೆ. ದೇಶದಲ್ಲಿ ದಾಖಲೆಯಾದ ಒಟ್ಟು ಅಪರಾಧ ಪ್ರಕರಣಗಲ್ಲಿ ಶೇ. 60 ರಷ್ಟು ಪ್ರಕಣಗಳಲ್ಲಿ ಅಪ್ರಾಪ್ತ ವಯಸ್ಸಿನ ಮಕ್ಕಳು ಸಂತ್ರಸ್ತರಾಗಿದ್ದಾರೆ. ಒಟ್ಟಾರೆ ಅತ್ಯಾಚಾರ ಪ್ರಕರಣಗಳಲ್ಲಿ ಕಾಲು ಭಾಗದಷ್ಟು ಸಂತ್ರಸ್ತರ ಸಂಖ್ಯೆ ಮಕ್ಕಳದ್ದಾಗಿದೆ. ಹಾಗಿದ್ದಲ್ಲಿ ಇಷ್ಟೊಂದು ಅಪಾರ ಪ್ರಮಾಣದ ಅಪರಾಧಗಳು ಹೆಚ್ಚಾಗಲು ಕಾರಣಗಳೇನಿರಬಹುದು? ಮಕ್ಕಳು ಬಾಲ್ಯವನ್ನು ಪೂರ್ಣವಾಗಿ ಅನುಭವಿಸುವುಕ್ಕಿಂತ ಮುಂಚೆ ಸವಾಲುಗಳಿಗೆ ಬಲಿಯಾಗಲು ಯಾರೂ ಹೊತ್ತುಕೊಳ್ಳಬೇಕಾಗಿದೆ.

ಮಕ್ಕಳ ಹಕ್ಕುಗಳ ಅಭಿವೃದ್ಧಿ ಹಾಗೂ ಸಂರಕ್ಷಣೆಗಾಗಿ ಹಲವಾರು ಯೋಜನೆಗಳಿವೆ. ಸರಕಾರವು ಅಪಾರ ಪ್ರಮಾಣದ ಹಣವನ್ನು ಮಕ್ಕಳ ಅಭಿವೃದ್ಧಿಗಾಗಿ ವ್ಯಯಿಸುತ್ತಿದೆ. ಸಮಗ್ರ ಮಕ್ಕಳ ರಕ್ಷಣಾ ಯೋಜನೆ ಎಂಬ ಕೇಂದ್ರ ಪುರಸ್ಕೃತ ಶಿಶು ರಕ್ಷಣಾ ಯೋಜನೆಯನ್ನು 2011 ನೇ ಸಾಲಿನಿಂದ ಜಾರಿಗೆ ತರಲಾಗಿದ್ದು, ಶೇ. 60:40 ರಷ್ಟು ಅನುಪಾತದಲ್ಲಿ ಕೇಂದ್ರದಲ್ಲಿ ರಾಜ್ಯ ಸರಕಾರಗಳು ಅನುಷ್ಠಾನಗೊಳಿಸುತ್ತಿವೆ. ಇದರಲ್ಲಿ ಬಾಲ ನ್ಯಾಯ ಕಾರ್ಯಕ್ರಮ, ಸಮಗ್ರ ಮಕ್ಕಳ ಕಾರ್ಯಕ್ರಮ, ದತ್ತು ಪ್ರಕ್ರಿಯೆ ಮತ್ತು ಮಕ್ಕಳ ಒಟ್ಟುಗೂಡಿಸಲಾಗಿದೆ. ತೀವ್ರ ಪೌಷ್ಠಿಕಾಂಶ ಕೊರತೆಯಿಂದ ಬಳಲುವ ಮಕ್ಕಳ ಆರೋಗ್ಯಮಟ್ಟವನ್ನು ಸುಧಾರಿಸುವುದಕ್ಕಾಗಿ ಅಪೌಷ್ಟಿಕ ಮಕ್ಕಳ ವೈದ್ಯಕೀಯ ವೆಚ್ಚ ಭರಿಸುವ ಯೋಜನೆ ಜಾರಿಯಲ್ಲಿದ್ದು ವೈದ್ಯಾಧಿಕಾರಿಗಳ ಸೂಚನೆಯನ್ವಯ ಔಷೋಧೋಪಚಾರ ಚಿಕಿತ್ಸಾ ಆಹಾರಕ್ಕಾಗಿ ಪ್ರತಿ ಮಗುವಿಗೆ ನೀಡಲಾಗುತ್ತಿದ್ದ ಸಹಾಯಧನವನ್ನು ರು.750 ಬದಲಿಗೆ 2000 ಹೆಚ್ಚಿಸಲಾಗಿದೆ. ಪೂರಕ ಪೌಷ್ಠಿಕ ಆಹಾರ ಯೋಜನೆಯನ್ನು ಜಾರಿಗೆ ತರಲಾಗಿದ್ದು ಅಪೌಷ್ಠಿಕ ಮಕ್ಕಳಿಗೆ ಮೂರು ದಿನ ಮೊಟ್ಟೆ ಹಾಗೂ ಉಳಿದ ಮೂರು ದಿನ ಕೆನೆ ಭರಿತ ಹಾಲನ್ನು ನೀಡಲಾಗುತ್ತಿದ್ದು, ವಾರದ ದಿನಗಳನ್ನೂ ಒಳಗೊಳ್ಳುವ ಯೋಜನೆಯನ್ನು ಕೈಗೊಳ್ಳಲಾಗುತ್ತಿದೆ. ಇದಕ್ಕಾಗಿ ಸುಮಾರು ಹದಿನೇಳು ಸಾವಿರ ಕೋಟಿಯಷ್ಟು ಹಣವನ್ನು ವ್ಯಯಿಸಲಾಗುತ್ತದೆ. ಮಕ್ಕಳ ವ್ಯಕ್ತಿತ್ವ ವಿಕಸನಕ್ಕಾಗಿ ಸ್ನೇಹ ಶಿಬಿರ ಕಾರ್ಯಕ್ರಮ, ಮಕ್ಕಳ ಸಂರಕ್ಷಣೆಗಾಗಿ ಒನ್ ಸ್ಟಾಪ್ ಸೆಂಟರ್, ಸ್ವಾಧಾರ ಗೃಹ ಯೋಜನೆ, ಮಕ್ಕಳ ಅನೈತಿಕ ಸಾಗಾಟದ ನಿವಾರಣಾ ಯೋಜನೆ ಅನಾಥ ಮತ್ತು ನಿರ್ಗತಿಕ ಮಕ್ಕಳಿಗೆ ಖಚಿವಾದ ಆದಾಯ ಯೋಜನೆ ಮಕ್ಕಳ ವಿಶೇಷ ಪಾಲನಾ ಕೇಂದ್ರ ಯೋಜನೆ ಇಂತಹ ಅಸಂಖ್ಯಾತ ಯೋಜನೆ ಹಾಗೂ ನಿಯಮಗಳು ಜಾರಿಯಲ್ಲಿದ್ದರೂ ಸಹ ಅಂಕಿಅಂಶಗಳು ನಮ್ಮಲ್ಲಿ ಆತಂಕವನ್ನು ಮೂಡಿಸುತ್ತವೆ. ಇಷ್ಟೆಲ್ಲಾ ಯೋಜನೆಗಳು ಮತ್ತು ಕಾರ್ಯಕ್ರಮಗಳು ಮಕ್ಕಳ ಸುರಕ್ಷೆತೆಯನ್ನು ಹಾಗೂ ಖಚಿತ ಕಡ್ಡಾಯ ಶಿಕ್ಷಣವನ್ನು ಪೂರೈಸುವಲ್ಲಿ ವಿಫಲವಾಗುತ್ತಿದೆಯೆಂದರೆ ಮೇಲೆ ಹೇಳಲಾದ ಯೋಜನೆಗಳ ಅನುಷ್ಠಾನಕ್ಕಾಗಿ ವ್ಯಯಿಸಲಾಗುತ್ತಿರುವ ಅಪಾರ ಪ್ರಮಾಣದ ಹಣ ಹಾಗೂ ಆಳಿತ ವರ್ಗ ಸಮಗ್ರವಾಗಿ ಅನುಷ್ಠಾನಗೊಳಿಸುವಲ್ಲಿ ಸೋಲುವುದಾದರೂ ಏಕೆ?

ಒಂದು ಸರಕಾರವು ಮಕ್ಕಳ ಶಿಕ್ಷಣ, ಆರೋಗ್ಯ ಸಂರಕ್ಷಣೆ ಹಾಗೂ ಬಾಲ್ಯದ ಜೀವನ ಮಟ್ಟವನ್ನು ಯಾವ ಆದ್ಯತೆಯಲ್ಲಿ ನಿಯಂತ್ರಿಸಲಾಗುತ್ತದೆಯೋ ಅದರ ಫಲವನ್ನು ಮುಂದಿನ ತಲೆಮಾರು ಫಲಿತಾಂಶವನ್ನು ಇಂದಿಗೂ ಬಾಲ ಕಾರ್ಮಿಕ ಮತ್ತು ಬಾಲ ಅಪರಾಧಿ ಕೃತ್ಯಗಳ ಸಂಪೂರ್ಣ ನಿಷೇಧ ಮಾಡಲು ನಮ್ಮಿಂದ ಸಾಧ್ಯವಾಗಿಲ್ಲವೆಂದಾದರೆ ನಮ್ಮನ್ನಾಳುವ ಸರಕಾರಗಳು ಮುಂದಿನ ಸದೃಢ ಸಮಾಜಕ್ಕೆ ನೀಡಬೇಕಾದ ಆಧ್ಯತೆಯನ್ನು ನಿರ್ಲಕ್ಷಿಸುತ್ತಿದೆಯೆಂದು ಅರ್ಥೈಸಿಕೊಳ್ಳಬಹುದು. ನಿಟ್ಟಿನಲ್ಲಿ ಸರಕಾರ ಸಂಪನ್ಮೂಲ ಕ್ರೋಢಿಕರಣಕ್ಕೆ ನೀಡುವ ಆಧ್ಯತೆಯನ್ನು ಮಾನವ ಸಂಪನ್ಮೂಲ ನಿರ್ವಹಣೆಗಾಗಿ ನೀಡುವುದೂ ಅಷ್ಟೇ ಮುಖ್ಯವಾಗುತ್ತದೆ. ಇಂದಿಗೂ ಕೂಡ ಮಕ್ಕಳಿಗೆ ಸಮಾನವಾದ ಶಿಕ್ಷಣ ಹಾಗೂ ಸಮಾನ ಆರೋಗ್ಯ ಭದ್ರತೆಯ ವಾತಾವರಣವನ್ನು ನಿರ್ಮಿಸಲು ನಮ್ಮಲ್ಲಿ ಒಮ್ಮತ ಅಭಿಪ್ರಾಯವನ್ನು ಮೂಡಿಸಲು ಬಡ ಮಕ್ಕಳನ್ನು ಸಮರ್ಪಕ ಸಂಖ್ಯೆಯ ಶಿಕ್ಷಕರಿಲ್ಲದ ಶಾಲೆಗಳಲ್ಲಿ ಶಿಕ್ಷಣ ಪಡೆಯುವುದರೊಂದಿಗೆ ಗುಣಮಟ್ಟದ ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ. ಹಾಗಾಗಿ ಮಕ್ಕಳಿಗೆ ಬಾಲ್ಯ, ಶಿಕ್ಷಣ ಮತ್ತು ಸಂರಕ್ಷಣೆಯ ನಿಯಂತ್ರಣ ರಹಿತ ಹಕ್ಕುಗಳ ಪ್ರಮುಖ ಕಾಯಿದೆಯನ್ನು ರೂಪಿಸುವ ಬದ್ಧತೆಯನ್ನು ವ್ಯಕ್ತಪಡಿಸದ ಹೊರತು ಇಂತಹ ಅಂಕಿ ಸಂಖ್ಯೆಗಳಿಂದ ಮುಕ್ತಿಯನ್ನು ಹೊಂದಲಾಗುವುದಿಲ್ಲ.