ವಿಶ್ವವಾಣಿ

ಶತಮಾನ ಪೂರೈಸಿದ ಶಾಲೆಗಳ ಶ್ರೇಯೋಭಿವೃದ್ಧಿಯ ಕನಸು

ನೂರು ವರ್ಷ ಪೂರೈಸಿರುವ ಶಾಲೆಗಳನ್ನು ಗುರುತಿಸಿ ಶತಮಾನ ಕಂಡ ಶಾಲೆಗಳ ಶತಮಾನೋತ್ಸವವನ್ನು ಆಚರಿಸಲು ಅಲ್ಲಲ್ಲಿ ಸಿದ್ಧತೆಗಳು ಜರುಗುತ್ತಲಿವೆ.ಇಂತಹ ಶಾಲೆಳನ್ನು ಸಾಂಪ್ರದಾಯಿಕ ಶಾಲೆಗಳೆಂದು ಗುರುತಿಸಲು ಸರಕಾರವು ತಿರ್ಮಾನಿಸಿದೆ. ಶತಮಾನೋತ್ಸವ ಆಚರಣೆಯಲ್ಲಿ ಶಾಲೆಗಳ ಪಾರಂಪರಿಕ ಹಿನ್ನೋಟಗಳ ಮೆಲುಕು ಹಳೆಯ ವಿದ್ಯಾರ್ಥಿಗಳಿಗೆ ಭಾವೋದ್ರೇಕ, ಹುಮ್ಮಸ್ಸನ್ನು ಹುಟ್ಟಿಸುತ್ತಿರುವುದರಲ್ಲಿ ಯಾವುದೇ ಅನುಮಾನಗಳಿಲ್ಲ.

ಅಕ್ಷರಗಳ ಜೋಡಣೆಯನ್ನು ಕಲಿಸಿದ ಶಾಲೆಗಳನ್ನು ಹೇಗೆ ಮರೆಯಲು ಸಾಧ್ಯ? ಶತಮಾನ ಕಂಡ ಶಾಲೆಗಳ ವಿಷಯದಲ್ಲಂತೂ ಅವುಗಳು ಸಾಗಿ ಬಂದ  ಮೆಲುಕು ಹಾಕುವುದೇ ಬಹು ಸುಂದರ. ಈಗ ಶತಮಾನವನ್ನು ಪೂರೈಸಿರುವ ಶಾಲೆಗಳು ತಮ್ಮ ಬಾಲ್ಯದ ದಿನಗಳನ್ನು ನೆನಪಿಸಿಕೊಳ್ಳುವುದು ಇಂದಿನ ತಲೆಮಾರುಗಳಿಗೆ ಅಚ್ಚರಿ ಎನ್ನಿಸಿದರೂ ಬೆಳಕಿನಷ್ಟೆ ಸತ್ಯ. ಬಸ್ ಸಂಪರ್ಕ ಹೊಂದಿರದ ಹಳ್ಳಿಗಳಲ್ಲಿ ತೆರೆದುಕೊಂಡ ಶಾಲೆಗಳಿವು. ಈ ಶಾಲೆಗಳಿಗೆ ಸ್ವಂತ ಕಟ್ಟಡಗಳಿರಲಿಲ್ಲ. ಗ್ರಾಮದ ಹನುಮಪ್ಪ ಅಥವಾ ಬಸವೇಶ್ವರ ದೇವಸ್ಥಾನಗಳಲ್ಲಿ ಶಾಲೆಗಳು ಪ್ರಾರಂಭವಾಗಿದ್ದವು. ಶಿಕ್ಷಣದ ಮಹತ್ವ ಅರಿಯದ ಜನ ಶಾಲೆಗೆ ಮಕ್ಕಳನ್ನು ಸೇರಿಸುವಂತೆ  ಪುಸಲಾಯಿಸುವುದೇ ಶಿಕ್ಷಕರ ದೊಡ್ಡ ಜವಾಬ್ದಾರಿಯಾಗಿತ್ತು. ಅಷ್ಟಕ್ಕೂ ಪೋಷಕರು ಒಪ್ಪಿಕೊಂಡರೂ  ಸುತಾರಾಂ ಇಷ್ಟಪಡುತ್ತಿರಲಿಲ್ಲ. ಹಾಗೂಹೀಗೂ ಮಕ್ಕಳ ಸಂಖ್ಯೆಯನ್ನು ಹೊಂದಿಸಿ ಊರಿನ ಅರಳಿಕಟ್ಟೆಯ ಮೇಲೋ ಅಥವಾ ಬಾಗಿಲು ಗೋಡೆಗಳಿಲ್ಲದ ಗುಡಿ ಗುಂಡಾರಗಳಲ್ಲಿಯೋ ಪ್ರಾರಂಗೊಂಡ ಶಾಲೆಗಳು ಇಂದು ಶತಮಾನವನ್ನು ಪೂರೈಸುತ್ತಿವೆ.

ಆರು ವರ್ಷ ತುಂಬಿಲ್ಲದ ಮಕ್ಕಳನ್ನು ಶಾಲೆಗೆ ಸೇರಿಸಿಕೊಳ್ಳುವಂತಿರಲಿಲ್ಲ. ಆ ದಿನಗಳಲ್ಲಿ ಮಕ್ಕಳ ಜನನ ದಾಖಲಾತಿ ನಮೂದಾಗುತ್ತಿರಲಿಲ್ಲ. ಶಾಲಾ ಪ್ರಾರಂಭದ ವಾರಗಳಲ್ಲಿ ಏಕೋಪಾಧ್ಯಾಯ ಶೊಯ ಮುಖ್ಯೋಪಾಧ್ಯಾಯರು ಇಡೀ ಗ್ರಾಮವನ್ನು ಕಾಲ್ನಡಿಗೆ ಮೂಲಕ  ಅಲೆದಾಡಿ ಬಯಲು ಸ್ಥಳಗಳನ್ನೇ ಆಟದ ಮೈದಾನವೆಂಬಂತೆ ಭಾವಿಸಿ ಆಟೋಟಗಳಲ್ಲಿ ತೊಡಗಿಕೊಂಡಿರುತ್ತಿದ್ದ  ಹಿಡಿದು ತಂದು ಬಲಗೈಯನ್ನು ತಲೆಯ ಮೇಲ್ಭಾಗದಿಂದ ತಂದು ಎಡಗಡೆಯ ಕಿವಿಯನ್ನು ಮುಟ್ಟಲು ಸೂಚಿಸುತ್ತಿದ್ದರು. ಒಂದು ವೇಳೆ ಹುಡುಗನ ಬಲಗೈ ಹಸ್ತದ ಮಧ್ಯದ ಬೆರಳು ಎಡ ಕಿವಿಯ ತೊಗಟೆಯನ್ನು ಸ್ಪರ್ಶಿಸಿದರೆ ಆರು ವರ್ಷವಾಗಿರಬಹುದೆಂಬ ಅಂದಾಜಿನೊಂದಿಗೆ ಒಂದನೇ ಜೂನ್ ಅಥವಾ ಒಂದನೇ ಜುಲೈ ದಿನಾಂಕದೊಂದಿಗೆ ಸರಿ ಹೊಂದಬಹುದಾದ ಇಸವಿಯನ್ನು ಸೇರಿಸಿಕೊಂಡು ಶಾಲೆಗೆ ಮಕ್ಕಳನ್ನು ದಾಖಲಿಸಿಕೊಳ್ಳಲಾಗುತ್ತಿತ್ತು.

ಒಂದರಿಂದ ನಾಲ್ಕನೇ ತರಗತಿಯವರೆಗೆ ಎಲ್ಲಾ ಮಕ್ಕಳು ಗುಡಿಯ ಪಡಸಾಲೆಯಲ್ಲಿ ಸಾಮೂಹಿಕವಾಗಿ ಅಭ್ಯಾಸವನ್ನು ಕೈಗೊಳ್ಳುತ್ತಿದ್ದರು. ವಿದ್ಯೆ ಇಲ್ಲದವನ  ಹದ್ದಿಗಿಂತಲೂ ಕೀಳು ಎಂಬ ನಾಣ್ಣುಡಿ ಸುಂದರವಾಗಿ ತೊಲೆಯ ಮೇಲ್ಭಾಗದಲ್ಲಿಯೋ, ಜನರಿಗೆ ಗೋಚರವಾಗುವ ಕಟ್ಟೆಯ ಅಡಿಭಾಗದಲ್ಲಿಯೋ  ಬರೆದಿರುತ್ತಿತ್ತು. ಸಾಮೂಹಿಕವಾಗಿ ಕುಳಿತ ಮಕ್ಕಳಲ್ಲಿ ಯಾವ ಮಕ್ಕಳು ಯಾವ ತರಗತಿಗೆ ಸೇರಿದವರೆಂಬುದು ಶಿಕ್ಷಕರಿಗೆ ಮಾತ್ರ ತಿಳಿಯುತ್ತಿತ್ತು. ನಿರ್ದಿಷ್ಟ ತರಗತಿಗೆ ಸಂಬಂಧಿಸಿದ ಪಾಠವನ್ನು ಮಾತ್ರ ಎಲ್ಲರೂ ಆಲಿಸುತ್ತಿದ್ದರು. ಕಂಬಕ್ಕೆ ಅಥವಾ ಗೋಡೆಗೆ ಆಲಿಸಿದ ಕಪ್ಪು ಹಲಗೆಯ ಮೇಲೆ ಕುಕ್ಕರಗಾಲಿನಲ್ಲಿ ಕುಳಿತು ಶಿಕ್ಷಕರು ಮೂಡಿಸುತ್ತಿದ್ದ ಅಂದವಾದ ಅಕ್ಷರಗಳು ಅದೆಷ್ಟೋ ವಿದ್ಯಾರ್ಥಿಗಳನ್ನು ಪ್ರೇರೇಪಿಸಿದ್ದವು. ಪಾಠ ಕಲಿಕೆಯಲ್ಲಿ, ಅಕ್ಷರಾಭ್ಯಾಸದಲ್ಲಿ  ಮಕ್ಕಳಿಗೆ  ಗುರುಗಳು ನೀಡುತ್ತಿದ್ದ ಶಿಕ್ಷೆಯ ಪ್ರಮಾಣ ಪೋಷಕರನ್ನೂ  ಅಂಜಿಸುವಂತಿರುತ್ತಿತ್ತು. ಕೆಲ ಮಕ್ಕಳು ಶಿಕ್ಷೆಗೆ ಅಂಜಿಯೋ ಅಥವಾ ಕಲಿಕೆಯಲ್ಲಿ ಆಸಕ್ತಿ ಇಲ್ಲದೆಯೋ ಗೈರು ಹಾಜರಾದಾಗ ಅಂಥವರನ್ನು ಹುಡುಕಿ ಅನಾಮತ್ತಾಗಿ ಹೊತ್ತುಕೊಂಡು ಬಂದು ಅಕ್ಷರವನ್ನು ಕಲಿಸಲಾಗುತ್ತಿತ್ತು. ಇಂತಹ ಕೆಲಸಗಳಿಗಾಗಿಯೇ ಸದೃಢ ಕಾಯ ಶಿಷ್ಯರು ಗುರುಗಳಿಗೆ ಅಚ್ಚುಮೆಚ್ಚಿನವರಾಗಿಯೂ ಇರುತ್ತಿದ್ದರು. ಅಂದಿನ ಶಾಲೆಗಳಿಗೆ ಗೋಡೆ, ಕಿಟಕಿ, ಬಾಗಿಲುಗಳ ಅಶ್ಯಕತೆವಿರಲಿಲ್ಲ. ವಾರಕ್ಕೊಮ್ಮೆ ನೆಲವನ್ನು ವಿದ್ಯಾರ್ಥಿಗಳೇ ಸೇರಿಕೊಂಡು ಸಗಣಿಯಿಂದ ಸಾರಿಸಿ, ಕಸಪೊರಕೆಯಿಂದ ದಿನಕ್ಕೊಬ್ಬರಂತೆ ಗುಡಿಸಿ ನೆಲದ ಮೇಲೆ  ಶಿಕ್ಷಕರು ತಮ್ಮೊಂದಿಗೆ ಕೈಚೀಲದಲ್ಲಿ ಪುಸ್ತಕ, ಬಳಪ ತಂದು ಪುನಃ ಹೊತ್ತೊಯ್ದರೆ ತರಗತಿಯಲ್ಲೇನೂ ಉಳಿಯುತ್ತಿಲ್ಲವಾದ್ದರಿಂದ ಕಳ್ಳತನದ ಪ್ರಮೆಯವೇ ಇರುತ್ತಿರಲಿಲ್ಲ. ಶಾಲಾ ಮಕ್ಕಳು ಕುಳಿತ ಭಂಗಿಯನ್ನು, ಶಿಕ್ಷಕರ ಪಾಠವನ್ನು ರಸ್ತೆಯ ಮೇಲೆ ಅಡ್ಡಾಡುವರೆಲ್ಲರೂ ನೋಡುತ್ತಿದ್ದರು. ಗುಡಿಯಲ್ಲಿನ ದೇವರಿಗೆ ಬಂದು ಕೈ ಮುಗಿಯುತ್ತಿದ್ದವರು, ಅಲ್ಲಿಯೇ ಕಟ್ಟೆಯ ಮೇಲೆ ಕುಳಿತ ಕೆಲವರು ತಮ್ಮ ಹರಟೆಯಲ್ಲಿ ತೊಡಗಿರುತ್ತಿದ್ದರು. ಇದಾವುದರ ಪರಿವೆಯೂ ಇಲ್ಲದಂತೆ ಪಾಠ-ಬೋಧನೆ ಸಾಂಗವಾಗಿ ನಡೆಯುತ್ತಿತ್ತು. ಸಾಯಂಕಾಲವಾಗುತ್ತಿದ್ದಂತೆ ಶಾಲೆ ಬಿಡುವ ಮುಂಚೆ ಒಂದರಿಂದ ಇಪ್ಪತರವರೆಗೆ ಮಗ್ಗಿಯನ್ನು  ವಿದ್ಯಾರ್ಥಿಗಳಿಂದ ಹೇಳಿಸಲಾಗುತ್ತಿತ್ತು. ಸಾಮೂಹಿಕ ಮಗ್ಗಿ ಪಠಣೆ ಕೇಳಿಬಂತೆಂದರೆ ಜನ, ಶಾಲೆ ಬಿಡುವ ಹೊತ್ತಾಯಿತೆಂದು ಗಡಿಯಾರವಿಲ್ಲದೆ ಸಮಯವನ್ನು ಅರ್ಥೈಸಿಕೊಳ್ಳುತ್ತಿದ್ದರು. ಆದರೆ ಶಾಲೆಯ ಗುಣಮಟ್ಟ, ಶಿಕ್ಷಕರ ಬದ್ಧತೆ ಮತ್ತು ಬೋಧನಾ ಕೌಶಲವನ್ನು ಅಲ್ಲಗಳೆಯುಂತಿರಲಿಲ್ಲ. ಇಂದಿನ ವೈಜ್ಞಾನಿಕ ಯುಗದ ತಾಂತ್ರಿಕ ಪರಿಕರಗಳ ನಡುವೆ ನೀಡಲಾಗುತ್ತಿರುವ ಆಧುನಿಕ ಶಿಕ್ಷಣಕ್ಕಿಂತಲೂ ಬಹುಪಾಲು ಉತ್ತಮ ಶಿಕ್ಷಣ ಅಂದಿನದಾಗಿತ್ತು ಎಂದು ಹಳೆಯ ಹಿರಿಯ ಜೀವಿಗಳು ಮೆಲುಕು ಹಾಕಿದಾಗ ಅದರಲ್ಲಿ ಸತ್ಯಾಂಶವಿದೆ ಎಂಬುದನ್ನು ಒಪ್ಪಿಕೊಳ್ಳಲೇಬೇಕಾಗಿದೆ.

ಅಂತಹ ಶತಮಾನ ಕಂಡ ಶಾಲೆಯ  ಆಚರಿಸಲು ನನ್ನ ಮತಕ್ಷೇತ್ರದ ಹಿಡಕಲ್ ಗ್ರಾಮದ ಶಾಲೆಯು ಸಿದ್ಧವಾಗಿದೆ. ಆ ಶಾಲೆಯಲ್ಲಿ ಕಲಿತ ಹಿರಿಯ ಮುತ್ಸದ್ದಿಗಳು ಶತಮಾನೋತ್ಸವದ ಆಚರಣೆಯ ಕುರಿತಾಗಿ ಪೂರ್ವಭಾವಿ ಸಭೆಯನ್ನು ಕರೆದಿದ್ದು ನಾನೂ ಸಹ ಭಾಗವಹಿಸುಂತೆ ಕೋರಿದ್ದರು. ನಾನು ಕಲಿತ ಕುಪ್ಪಗಡ್ಡೆಯ ಬಾಲ್ಯದ ಶಾಲೆಯ ನೆನಪು ನನ್ನನ್ನು ಈ ಸಭೆಯಲ್ಲಿ ಭಾಗವಹಿಸಲೇಬೇಕೆಂಬಂತೆ ಉತ್ತೇಜಿಸಿತು. ಪೂರ್ವಭಾವಿ ಸಭೆಗೆ ತೆರಳುತ್ತಿದ್ದಂತೆ ಸುಮಾರು ಐದು ನೂರರಷ್ಟು ಜನರು ಶತಮಾನೋತ್ಸವ ಆಚರಣೆಗಾಗಿ ಜಮಾಯಿಸಿದ್ದರು. ಕರ್ನಾಟಕ ರಾಜ್ಯ ಸರ್ಕಾರದ ಕಂದಾಯ ಸಚಿವರಾಗಿ ಕಾರ್ಯವನ್ನು  ಈ ಭಾಗದ ರಾಜಕಾರಣಿಗಳಲ್ಲೊಬ್ಬರಾದ ದಿವಂಗತ ವಸಂತರಾವ್ ಪಾಟೀಲ್‌ರವರು ಸಹ ಇದೇ ಶಾಲೆಯ ವಿದ್ಯಾರ್ಥಿಯಾಗಿದ್ದರು. ಈ ಶಾಲೆಯಲ್ಲಿ ಕಲಿತು ಯಶಸ್ಸನ್ನು ಪಡೆದು ಬದುಕುಳಿದವರಲ್ಲಿ ಬಹಳಷ್ಟು ಜನ ಸರಕಾರಿ ಸೇವೆಯಲ್ಲಿ ಕರ್ತವ್ಯ ನಿರ್ವಹಿಸಿ ನಿವೃತ್ತರಾಗಿದ್ದಾರೆ, ಕೆಲವರು ಮುಂದುವರೆದಿದ್ದಾರೆ. ಉದ್ದಿಮೆದಾರರಾಗಿ ಹೊರಹೊಮ್ಮಿದ್ದಾರೆ. ಸ್ನಾತ್ತಕೋತ್ತರ ಪದವಿ ಪಡೆದು ವಿದೇಶಗಳಲ್ಲಿಯೂ ಸೇವೆಯನ್ನು ಸಲ್ಲಿಸುತ್ತಿದ್ದಾರೆ. ಪ್ರಸ್ತುತ ಮುನ್ನೂರಕ್ಕೂ ಹೆಚ್ಚು ಈ ಶಾಲೆಯ ವಿದ್ಯಾರ್ಥಿಗಳು ಇಂದು ಆಡಳಿತ ಸೇವೆಯಿಂದ ಹಿಡಿದು ಪಂಚಾಯತ್ ಹಂತದ ಹುದ್ದೆಯವರೆಗೆ ವಿವಿಧ ಸ್ತರಗಳಲ್ಲಿ ಸೇವೆಯನ್ನು  ಪೂರ್ವಭಾವಿ ಸಭೆಗೆ ರಜೆಯ ಅವಕಾಶವನ್ನು ಪಡೆದುಕೊಳ್ಳಲು ಸಾಧ್ಯವಿದ್ದ ಕೆಲ ಅಧಿಕಾರಿಗಳು ಮೂಲಶಿಕ್ಷಣ ನೀಡಿದ ಶಾಲೆಯ ಮೇಲಿನ ಅಭಿಮಾನದಿಂದ ಭಾಗವಹಿಸಿದ್ದರು. ನಾನು ಭಾಗವಹಿಸಿದ ಸಭೆಯ ಉದ್ದೇಶ ಕೇವಲ ನೂರು ವಸಂತಗಳನ್ನು ಪೂರೈಸಿದ ಶಾಲೆಯ ಶತಮಾನೋತ್ಸವವನ್ನು ಆಚರಿಸಿ ಕೈತೊಳೆದುಕೊಳ್ಳುವುದೇ ಅಥವಾ ಈ ಶಾಲೆಯಿಂದ ಬದುಕನ್ನು ಪ್ರಾರಂಭಿಸಿರುವ ನಾವುಗಳೆಲ್ಲರೂ ಒಟ್ಟಾಗಿ ಇದೇ ಶಾಲೆಯ ಮುಂದಿನ ಗುರಿಯನ್ನು ತಿರ್ಮಾನಿಸುವುದೇ ಎಂಬ ಪ್ರಶ್ನೆಗೆ ಶತಮಾನೋತ್ಸವ ಆಚರಿಸಿ ಕೈತೊಳೆದುಕೊಳ್ಳುವುದಕ್ಕಿಂತಲೂ ಹೆಚ್ಚಾಗಿ ನಮ್ಮನ್ನು ಬೆಳೆಸಿದ ಶಾಲೆಯ ಕಾಯಕಲ್ಪಕ್ಕೆ ಸಿದ್ಧರಾಗೋಣ  ಅಭಿಪ್ರಾಯ ವ್ಯಕ್ತವಾಯಿತು. ಮುನ್ನೂರಕ್ಕಿಂತ ಹೆಚ್ಚು ಈ ಶಾಲೆಯ ಹಳೆಯ ವಿದ್ಯಾರ್ಥಿಗಳು ವಿವಿಧ ಹಂತದ ನೌಕರಿಯಲ್ಲಿದ್ದು ಖಾಸಗಿ ಉದ್ದಿಮೆಗಳನ್ನು ಪ್ರಾರಂಭಿಸಿದ್ದಾರೆ. ಪ್ರತಿಯೊಬ್ಬರೂ ಮಾಸಿಕ ನೂರು ರುಪಾಯಿಗಳಷ್ಟು ದೇಣಿಗೆ ನೀಡಿದರೆ ಪ್ರತಿ ತಿಂಗಳು ಸರಾಸರಿ ಅರ್ಧ ಲಕ್ಷ ರು.ದಷ್ಟು ಸಂಗ್ರಹವಾಗುವ ಸಾಧ್ಯತೆ ಇದೆ. ಶಾಲೆಗೆ ಬೇಕಾದ ಶಿಕ್ಷಕರ ಕೊರತೆಯನ್ನು ನೀಗಿಸುವುದಕ್ಕಾಗಿ ಸರಕಾರವನ್ನು ಅವಲಂಬಿಸುವುದರ ಬದಲಾಗಿ ನಾವುಗಳೇ ನಿರ್ವಹಿಸಬಹುದಾಗಿದೆ. ಕ್ರಿಯಾತ್ಮಕ ಪ್ರಯೋಗಶಾಲಾ ಉಪಕರಣಗಳನ್ನು ಖರೀದಿಸಬಹುದಾಗಿದೆ. ಅರ್ಹ ನಿರುದ್ಯೋಗಿ ಯುವಕರಲ್ಲಿ ಒಂದಿಬ್ಬರನ್ನು ವಿಶೇಷ ತರಬೇತುಗೊಳಿಸಿ  ತರಗತಿಯಿಂದಲೇ ಪ್ರಬುದ್ಧ ಕನ್ನಡ ಭಾಷೆಯೊಂದಿಗೆ ಆಂಗ್ಲ ಭಾಷೆಯನ್ನು ಸುಲಲಿತವಾಗಿ ಮಾತನಾಡುವಂತೆ ವಾತಾವರಣವನ್ನು ಸೃಷ್ಟಿಸಬಹುದಾಗಿದೆ ಎಂಬ ಅಭಿಪ್ರಾಯ ವ್ಯಕ್ತವಾಯಿತು.

ವ್ಯವಸ್ಥೆ ಸರಿಯಾಗಿಲ್ಲ ಎಂದು ದೂಷಿಸುತ್ತ ಕೂರುವುದರ ಬದಲಾಗಿ ನಮ್ಮಿಂದ ಸಾದ್ಯವಾದಷ್ಟು ಬದಲಾವಣೆಗೆ ನಾವುಗಳೇ ಕೈ ಹಾಕಿದರೂ ಸಹ ಅಗಾಧವಾದ ಬದಲಾವಣೆಯನ್ನು ನಿರೀಕ್ಷಿಸಬಹುದಾಗಿದೆ. ಕರ್ನಾಟಕ ರಾಜ್ಯದಲ್ಲಿ ಸರಕಾರಿ ಶಾಲೆಯಿಂದಲೇ ವ್ಯಾಸಾಂಗವನ್ನು ಪ್ರಾರಂಭಿಸಿ ಇಂದು ಉನ್ನತ ಹುದ್ದೆಗೆ ಏರಿರುವ, ಸರಕಾರಿ ನೌಕರಿಯಲ್ಲಿರುವ, ಉದ್ದಿಮೆದಾರರಾಗಿ ಹೊರಹೊಮ್ಮಿರುವ, ಸಂಸದರಾಗಿ, ಶಾಸಕರಾಗಿ ಇನ್ನೂ ಮುಂತಾದ ಸ್ಥಾನವನ್ನಲಂಕರಿಸಿದ  ಲಕ್ಷಾಂತರ  ಅವರೆಲ್ಲರೂ ತಾವು ಕಲಿತ ಸರಕಾರಿ ಶಾಲೆಯನ್ನು ಜೀರ್ಣೋದ್ಧಾರಗೊಳಿಸಲು ಮನಸ್ಸು ಮಾಡಿದಲ್ಲಿ ಖಾಸಗಿ ಶಾಲೆಗಳನ್ನೂ ಮೀರಿಸಬಹುದಾದಂತಹ ಗುಣಮಟ್ಟದ ಸರಕಾರಿ ಶಾಲೆಗಳನ್ನಾಗಿ ರೂಪಿಸಲು ಸಾಧ್ಯವಿದೆ.  ಅಷ್ಟರ ಮಟ್ಟಿಗೆ ಸರಕಾರವನ್ನು ಶಪಿಸುತ್ತಾ, ಶಿಕ್ಷಣ ಕ್ಷೇತ್ರ ಇನ್ನಷ್ಟು ಅಧೋಗತಿಗೆ ತಲುಪಲು ಸಾಕ್ಷಿದಾರರಾಗುವುದರ ಬದಲಾಗಿ ಬದಲಾವಣೆಗಳಿಗೆ ನಾವುಗಳೇ ಸಾಕ್ಷಿಯಾಗಬಹುದಾಗಿದೆ. ನಾವುಗಳೆಲ್ಲರೂ ಸೇರಿ ತೆಗೆದುಕೊಂಡಿರುವ ಹಿಡಕಲ್ ಗ್ರಾಮದ ಶತಮಾನದ ಶಾಲೆಯ ಶ್ರೇಯೋಭಿವೃದ್ಧಿಯ ಕನಸು ನಿಜಕ್ಕೂ ಸಾಕಾರಗೊಳ್ಳುವುದೇ ಅಥವಾ ಇದೂ ಸಹ ನಮ್ಮಗಳ ದಾರುಣ ಆರಂಭ ಶೂರತ್ವವೆ ಎಂಬುದನ್ನು  ಮನಗಾಣಬೇಕಾಗಿದೆ.