About Us Advertise with us Be a Reporter E-Paper

ಅಂಕಣಗಳು

ಭೂಮಿಯ ಮೇಲೆ ಬೇರಿರಿಸಿಯೇ ಆಗಸದಲ್ಲಿ ಅಭಿವೃದ್ಧಿ ಹೊಂದಬೇಕು!

ಪರಿಣತ ದೃಷ್ಟಿ: ಮಾಧವ ಗಾಡ್ಗೀಳ್, ಪರಿಸರ ವಿಜ್ಞಾನಿ

ನಿಸರ್ಗ ಹಾಗೂ ವನ್ಯಜೀವಿಗಳೆಂದರೆ ನನಗೆ ಯಾವಾಗಲೂ ಬಹಳ ಆಕರ್ಷಣೆ. ಆದರೆ 1973ರಲ್ಲಿ ಒಮ್ಮೆ ಪಶ್ಚಿಮ ಘಟ್ಟದ ಕಣ್ಣಾರೆ ಕಂಡಾಗ ಮನಸ್ಸು ಅವುಗಳ ಮೇಲೆ ನೆಟ್ಟಿತು. ಅರಣ್ಯದಲ್ಲಿ ಅವು ಎಷ್ಟಿವೆ ಎಂಬ ಕುರಿತು ಖಚಿತ ಮಾಹಿತಿ ಇದೆಯೇ, ಮತ್ತಿತರ ವಿವರಗಳನ್ನು ಹುಡುಕಿಕೊಂಡು ಹೊರಟರೆ ಯಾವುದೇ ವೈಜ್ಞಾನಿಕ ಮಾಹಿತಿ ಕುರಿತು ಲಭ್ಯವಿಲ್ಲ ಎಂದು ಗೊತ್ತಾಯಿತು. ನಾನೇ ಮುಂದಾಗಿ ಅವನ್ನು ಎಣಿಕೆ ಮಾಡಿದರೆ ಹೇಗೆ ಎಂಬ ಆಲೋಚನೆ ಬಂತು. ಮೈಸೂರು ಪ್ರಸ್ತಭೂಮಿ ಹಾಗೂ ನೀಲಗಿರಿ ಪ್ರದೇಶಗಳಿಂದ ಪ್ರಾರಂಭಿಸಿ ನಂತರ ಕೇರಳದ ವೈನಾಡ್ ಕಡೆ ಪ್ರಯಾಣಿಸಿದೆ. ಅಲ್ಲಿ ಒಂದು ವಿಷಯ ಎದ್ದುತೋರಿತು. ಆನೆಗಳು ಎಲ್ಲ ಕಡೆ ಒಂದೇ ಆಗಿದ್ದರೂ ಅವನ್ನು ಸುತ್ತುವರಿದ ಜನರ ಸಂಸ್ಕೃತಿ ಇಲ್ಲಿ ತುಂಬ ಭಿನ್ನವಾಗಿತ್ತು. ಕರ್ನಾಟಕ ಹಾಗೂ ತಮಿಳುನಾಡಿನಲ್ಲಿ ಸ್ಥಳೀಯ ಗ್ರಾಮಸ್ಥರು ಮತ್ತು ಅರಣ್ಯ ವಿಭಾಗದ ಕೆಳ ದರ್ಜೆ ಸಿಬ್ಬಂದಿ ಇಲಾಖೆಯ ಮುಖ್ಯಸ್ಥರೊಂದಿಗೆ ಬಹಳ ಗುಲಾಮತನದಲ್ಲಿ ನಡೆದುಕೊಳ್ಳುತ್ತಿದ್ದರು. ಆದರೆ ಕೇರಳದಲ್ಲಿ ಹಾಗಿರಲಿಲ್ಲ. ಬೇರೆ ಬೇರೆ ಸಾಮಾಜಿಕಆರ್ಥಿಕ ಸ್ತರಗಳ ನಡುವಿನ ಅಂತರ ಗಣನೀಯವಾಗಿ ಕಡಿಮೆ ಇರುವ ಸಮಾಜ ಅದು. ‘ಕೇರಳ ಶಾಸ್ತ್ರ ಸಾಹಿತ್ಯ ಪರಿಷದ್ಹೆಸರಿನ ಒಂದು ಆಂದೋಲನದಲ್ಲಿ ಧೋರಣೆ ವಿಕಸಿತಗೊಂಡಿದ್ದನ್ನು ಕಂಡೆ. ‘ಸಾಮಾಜಿಕ ಕ್ರಾಂತಿಗಾಗಿ ವಿಜ್ಞಾನಅದರ ಘೋಷವಾಕ್ಯ. ಇಂತಹದೊಂದು ಆಂದೋಲನದಿಂದ ಸೆಳೆಯಲ್ಪಟ್ಟ ನಾನು ಅಲ್ಲಿಂದೀಚೆ ಕೇರಳದ ಅನೇಕ ಚಳವಳಿಗಾರರೊಂದಿಗೆ, ವಿಷಯ ತಜ್ಞರೊಂದಿಗೆ ದರಿಂದ ಕೆಲಸ ಮಾಡುತ್ತಾ ಬಂದಿದ್ದೇನೆ.

ಕೇರಳ ಪ್ರವಾಹ ಪೀಡಿತವಾಗಿರುವ ವೇಳೆ ಒಂದು ಸಂಗತಿ ಬಹಳ ನೆನಪಿಗೆ ಬರುತ್ತಿದೆ: ಸ್ಥಳೀಯ ನೈಸರ್ಗಿಕ ಸಂಪನ್ಮೂಲಗಳನ್ನು ಗ್ರಾಮಸ್ಥರೇ ಸುಪರ್ದಿಗೆ ತೆಗೆದುಕೊಂಡು, ಅಧ್ಯಯನ ಮಾಡಿ ಅದಕ್ಕೆ ಮಾರಕವಾಗದ ರೀತಿಯಲ್ಲಿ ಅಭಿವೃದ್ಧಿ ಕೆಲಸಗಳನ್ನು ಯೋಜಿಸಿಕೊಳ್ಳುವ ಆಶಯ ಪೀಪಲ್‌ಸ್ ಪ್ಲಾನಿಂಗ್ ಕ್ಯಾಂಪೇನ್ಎಂಬ ಅಭಿಯಾನವೇ ಅದು. 90 ದಶಕದ ಕೊನೆಯ ಭಾಗದಲ್ಲಿ ಚಳವಳಿ ಹುಟ್ಟಿಕೊಂಡಿತ್ತು.

ಆನೆಗಳಷ್ಟೇ ಅಲ್ಲ, ಅಲ್ಲಿನ ಭದ್ರ ಬೇರುಗಳಿದ್ದ ರೈತರು, ಪಶುಮಂದೆ ಕಾಯುವವರು, ಮೀನುಗಾರ ಸಮುದಾಯ ಹಾಗೂ ಕುಶಲ ಕಸುಬಿಗಳ ಜತೆ ಒಡನಾಡುತ್ತಾ ನನ್ನ ಕ್ಷೇತ್ರ ಕಾರ್ಯ ಮುಂದುವರಿಸುತ್ತಾ ಬಂದಂತೆ ನನಗೆ ಬಹಳ ಚೆನ್ನಾಗಿ ಅರ್ಥವಾಗಿದ್ದೇನೆಂದರೆ, ಒಂದು ಆರೋಗ್ಯವಂತ ಪರಿಸರದ ಹಿಂದೆ ಆರೋಗ್ಯವಂತ ಆರ್ಥಿಕತೆ, ಸಮಾಜ ಇರುತ್ತದೆ. ಹಾಗೂ ಎರಡರ ನಡುವೆ ಬಲವಾದ ಹಾಗೂ ಸಕಾರಾತ್ಮಕ ಸಂಬಂಧವಿದೆ. ಅಂತಾರಾಷ್ಟ್ರೀಯವಾಗಿ ವಿಷಯದಲ್ಲಿ ದೊಕುವ ಮಾದರಿ ಎಂದರೆ ಪ್ರಕೃತಿಯನ್ನು ಬಹಳ ಪ್ರೀತಿಸುವ ಸ್ಕ್ಯಾಂಡಿನೇವಿಯನ್ ದೇಶಗಳ ಸಮಾಜ. ಅಲ್ಲಿರುವ ಸಮೃದ್ಧ ವನ್ಯ ಹಾಗೂ ಲೋಹದ ನಿಕ್ಷೇಪಗಳಿಂದ ಅವರು ಅಪಾರ ಸಂಪತ್ತನ್ನು ಸೃಷ್ಟಿಸುತ್ತಿದ್ದಾರೆ. ಆದರೆ ಪ್ರಕ್ರಿಯೆಯಲ್ಲಿ ಜನರ ಜೀವನಮಟ್ಟ ಎತ್ತರಗೊಳ್ಳುವಂತೆ ಎಚ್ಚರಿಕೆ ವಹಿಸುತ್ತಾರೆ. ಭಾರತದಲ್ಲಿ ಕಂಡುಬರುವ ಸ್ಫೂರ್ತಿದಾಯಕ ಉದಾಹರಣೆಗಳೆಂದರೆ, ಪೂರ್ವ ಮಹಾರಾಷ್ಟ್ರದ ಹಳ್ಳಿಗಳು. ಅರಣ್ಯ ಸಂಪತ್ತನ್ನು ತಮ್ಮ ಸುಪರ್ದಿಯಲ್ಲಿಟ್ಟುಕೊಂಡಿರುವ ಅಲ್ಲಿನ ಜನತೆ. ಗ್ರಾಮಸಭೆಗಳ ಜತೆ ಕೈ ಜೋಡಿಸಿ ಅವುಗಳ ನಿರ್ವಹಣೆ ಸಮರ್ಪಕವಾಗಿರುವಂತೆ ನೋಡಿಕೊಳ್ಳುತ್ತಿದ್ದಾರೆ. ಪ್ರಜಾತಾಂತ್ರಿಕ ತತ್ವಗಳನ್ನು ಬಲಪಡಿಸುತ್ತ ಸಾಗುವ ಸದೃಢ ಆರ್ಥಿಕತೆ, ಸದೃಢ ಪರಿಸರದ ಸೃಷ್ಟಿಗೆ ಹೇಗೆ ಇಂಬುಕೊಡುತ್ತದೆ ಎಂಬ ಪ್ರಾತ್ಯಕ್ಷಿಕೆ ಅಲ್ಲಿ ಕಾಣಸಿಗುತ್ತದೆ. ಆದರೆ ಸಣ್ಣ ಮಟ್ಟದಲ್ಲಿ ಜರುಗುತ್ತಿರುವ ಪ್ರಯತ್ನಗಳನ್ನು ಮುಂದಕ್ಕೆ ತೆಗೆದುಕೊಂಡು ಹೋಗಬೇಕಾದ ಅಗತ್ಯಬಹಳ. ಕೇರಳ ತನ್ನ ಆಂದೋಲನವನ್ನು ರಾಜ್ಯವ್ಯಾಪಿ ವಿಸ್ತರಿಸಬೇಕಾದ ಸಮಯ ಇದು. ಸದರಿ ಹಣಕಾಸು ಸಚಿವ ಥಾಮಸ್ ಐಸಾಕ್ ಇದೇ ಪೀಪಲ್‌ಸ್ ಪ್ಲಾನಿಂಗ್ ಕ್ಯಾಂಪೇನ್ ಪ್ರಮುಖ ರೂವಾರಿಯಾಗಿದ್ದವರು. ಇದೇ ಯುಕ್ತವಾದದ್ದು ಕೂಡ.

ಭಾರತ ಇಂದಿಗೂ ಜೈವಿಕ ದ್ರವ್ಯರಾಶಿಯನ್ನು ಅವಲಂಬಿಸುವ ನಾಗರಿಕತೆಯೇ ಆಗಿದ್ದು ಜನಸಂಖ್ಯೆಯ ಮುಕ್ಕಾಲು ಭಾಗ ಬದುಕಿನ ಮಾರ್ಗೋಪಾಯಕ್ಕೆ, ಆರೋಗ್ಯಕ್ಕೆ, ಹಾಗೂ ಕ್ಷೇಮಾಭಿವೃದ್ಧಿಗೆ ಸುತ್ತಲಿನ ಪರಿಸರದಲ್ಲಿ ಸಿಗುವ ಸಂಪತ್ತನ್ನೇ ಮೊರೆಹೋಗುತ್ತಾರೆ. ಹಾಗಾಗಿ ಸುಸ್ಥಿರ ಆರ್ಥಿಕತೆಗೆ ಆರೋಗ್ಯವಂತ ಪರಿಸರ ಅವರೆಲ್ಲರ ಪ್ರಾಥಮಿಕ ಅಗತ್ಯ. ತೀರಾ ಕಡಿಮೆ, ಅಂದರೆ ಭಾರತದ ಜನಸಂಖ್ಯೆಯ ಐದನೇ ಒಂದು ಭಾಗ ಮಾತ್ರ ರೀತಿ ತಮ್ಮ ಆವರಣದಲ್ಲಿರುವ ಪ್ರಕೃತಿ ಸಂಪತ್ತನ್ನು ನೆಚ್ಚಿಕೊಳ್ಳದ ಅಲ್ಪಸಂಖ್ಯಾತರಾಗಿದ್ದಾರೆ. ದೂರದಲ್ಲಿದ್ದರೂ ನಿಸರ್ಗ ಸಂಪತ್ತನ್ನು ಲೂಟಿ ಹೊಡೆದು ಶ್ರೀಮಂತರಾಗುವವರಲ್ಲಿ ಇವರದೇ ಮೇಲುಗೈ. ವರ್ಗವೇ ದೇಶದ ನೀತಿ ನಿರೂಪಣೆ ಮಾಡುತ್ತದೆ, ಆಡಳಿತಶಾಹಿಯಲ್ಲಿ ಇರುತ್ತದೆ ಹಾಗೂ ಮಾಧ್ಯಮಗಳ ವಿಷಯ ಪ್ರಸ್ತುತಿಯನ್ನು ಆಯ್ಕೆ ಮಾಡುತ್ತದೆ. ಅಭಿವೃದ್ಧಿ ಯೋಜನೆಗಳು ಹಾಗೂ ಪರಿಸರ ಸಂರಕ್ಷಣೆ ಜತೆಗೆ ಸಾಗಲು ಸಾಧ್ಯವಿಲ್ಲವಾದ್ದರಿಂದ ಆರ್ಥಿಕ ಪ್ರಗತಿಗೆ ಪರಿಸರವನ್ನು ಬಳಸಿಕೊಳ್ಳಬೇಕಾದುದು ಅಗತ್ಯ ಎಂಬ ಸುಳ್ಳು ಕವಲನ್ನು ಪ್ರತಿಪಾದಿಸುವವರೂ ಇವರೇ.

ಪಶ್ಚಿಮಘಟ್ಟಗಳಾದ್ಯಂತ ಸ್ಥಳೀಯರ ಇಷ್ಟಕ್ಕೆ ವಿರುದ್ಧವಾಗಿ ಅಕ್ರಮ ಗಣಿಗಾರಿಕೆಯಲ್ಲಿ ತೊಡಗಿರುವವರೂ ಇಂತಹ ಮೀಮಾಂಸಕರಲ್ಲಿ ಅಧಿಕವಾಗಿದ್ದಾರೆ. ವರ್ಷಗಳ ಹಿಂದೆ ಚೆಂಬನ್ಮುಡಿ ಎಂಬ ಹಳ್ಳಿಗೆ ಭೇಟಿ ನೀಡಿದಾಗ ನನಗೆ ಇದರ ಅಲ್ಪ ಪರಿಚಯವಾಯಿತು. ಕಲ್ಲು ಗಣಿಗಾರಿಕೆ ವಿರುದ್ಧ ಅಲ್ಲಿನ ಜನ ಹನ್ನೊಂದು ತಿಂಗಳಿನಿಂದ ಸರದಿ ಉಪವಾಸ ನಡೆಸುತ್ತಿದ್ದರು. ಭೂ ಕುಸಿತ ಉಂಟುಮಾಡುವ, ಕೃಷಿಗೆ ಮುಳುವಾಗಿದ್ದ ನದಿತೊರೆಗಳನ್ನು ಅಡ್ಡಗಟ್ಟಿದ್ದ, ವಾಯುಮಾಲಿನ್ಯಕ್ಕೆ ಕಾರಣವಾಗಿದ್ದ ಗಣಿಗಾರಿಕೆ ನಿಲ್ಲಿಸಿ ಎಂದು ಆಗ್ರಹಿಸುತ್ತಿದ್ದರು. ಕೇರಳದೆಲ್ಲೆಡೆ ಜನ ಇಂತಹ ಚಟುವಟಿಕೆಗಳನ್ನು ವಿರೋಧಿಸುತ್ತಲೇ ಬಂದಿದ್ದಾರೆ. ಪ್ರಯತ್ನದಲ್ಲಿ ಹಲವು ದುರಂತಗಳೂ ಘಟಿಸಿದ್ದವು. ನಮ್ಮ ವರದಿ ಉಲ್ಲೇಖಿಸಿದಂತೆ ಕೋಜಿಕೋಡ್ ಕೈವೇಲಿ ಕಲ್ಲುಗಣಿಗಳಲ್ಲಿ ಅಕ್ರಮ ಗಣಿಗಾರಿಕೆ ನಿಲ್ಲಿಸಿ ಎಂದು ಶಾಂತಿಯುತವಾಗಿಯೇ ಪ್ರರ್ಶನ ನಡೆಸಿದ್ದ 20 ಯುವಕ ಅನೂಪ್ ವೆಲ್ಲೋಲಿಪಿಲ್‌ನನ್ನು ಗಣಿ ಮಾಲೀಕರು ನೇಮಿಸಿಕೊಂಡ ಗೂಂಡಾಗಳು ಡಿ.16. 2014ರಂದು ಕಲ್ಲುಹೊಡೆದು ಕೊಂದಿದ್ದರು. ಕೊಲೆಗೆ ಯಾರನ್ನೂ, ಇದುವರೆಗೂ ಆರೋಪಿ ಎಂದು ವಶಕ್ಕೆ ತೆಗೆದುಕೊಂಡಿಲ್ಲ.

ನೊಬೆಲ್ ವಿಜೇತ ಜೋಸೆಫ್ ಸ್ಟಿಗ್‌ಲಿಟ್‌ಜ್ ಹೇಳುವಂತೆ, ಯಾವುದೇ ರಾಷ್ಟ್ರ ತನ್ನ ನಾಲ್ಕು ಸಂಪತ್ತುಗಳ ಸೌಹಾರ್ದಯುತ ಪ್ರಗತಿ ಸಾಧಿಸುವತ್ತ ಗುರಿ ಇಟ್ಟುಕೊಳ್ಳಬೇಕು; ಅವೆಂದರೆ ಮನುಷ್ಯ ನಿರ್ಮಿತ, ನೈಸರ್ಗಿಕ, ಮಾನವ ಸಾಮಾಜಿಕ ಬಂಡವಾಳಗಳು. ಜಿಡಿಪಿ ಎತ್ತಿತೋರಿಸುವ ಮನುಷ್ಯ ನಿರ್ಮಿತ ಸಂಪತ್ತಿನ ಮೇಲೆ ಎಲ್ಲ ಗಮನ ಕೇಂದ್ರೀಕರಿಸುವುದಲ್ಲ. ಕೇವಲ ಸಾಂಸ್ಥಿಕ ವಲಯಗಳಲ್ಲಿ ಆಗುವ ಆರ್ಥಿಕ ಚಟುವಟಿಕೆವೃದ್ಧಿಯನ್ನಷ್ಟೇ ಇದು ಒಳಗೊಳ್ಳುವುದರಿಂದ ಇದು ಸಮರ್ಪಕವಲ್ಲ. ಚೆಮ್ಬನ್‌ಮುಡಿಯ ಉದಾಹರಣೆಯನ್ನೇ ತೆಗೆದುಕೊಳ್ಳುವುದಾದರೆ, ಗಣಿಗಾರಿಕೆಯಿಂದ ಆಗುತ್ತಿರುವುದು ಬರೀ ಲಾಭ ಎಂದು ಅದು ಬಿಂಬಿಬಲ್ಲುದು. ಗಣಿಗಾರಿಕೆ, ಕಲ್ಲು ಒಡೆಯುವುದು, ಟ್ರಕ್‌ಗಳಲ್ಲಿ ಅದರ ಸಾಗಣೆಯಷ್ಟೇ ಅಲ್ಲ ಗಣಿಗಾರಿಕೆಯಿಂದ ಅಸ್ವಸ್ಥಗೊಂಡ ಜನರು ಹೆಚ್ಚಿದಂತೆ ಕ್ಯಾನ್ಸರ್, ಅಸ್ತಮಾ ಕಾಯಿಲೆಗಳ ಔಷಧ ಮಾರಾಟವೂ ಏರುವುದೂ ಲಾಭ ಇಂತಲ್ಲಿ ಸರಿಯಾದ ದಾಖಲೆಗಳ ಕೊರತೆಯಿಂದಾಗಿ, ಇತರ ಸಂಬಂಧಿತ ನಷ್ಟಕಾರಕ ಆರ್ಥಿಕ ಚಟುವಟಿಕೆಗಳಾದ ಕೃಷಿ ಉತ್ಪನ್ನ ಇಳಿಮುಖ ಅಥವಾ ಕೃಷಿ ಕಾರ್ಮಿಕರಲ್ಲಿ ಉದ್ಯೋಗಾವಕಾಶ ಕಡಿಮೆಯಾಗುವುದು ಗಣನೆಗೇ ಬರುವುದಿಲ್ಲ.

ಅಷ್ಟೇಅಲ್ಲ, ಜಿಡಿಪಿ ಕೇಂದ್ರಿತ ದೃಷ್ಟಿ ನೈಸರ್ಗಿಕ, ಮಾನವ ಹಾಗೂ ಸಾಮಾಜಿಕ ಬಂಡವಾಳ ಗಮನಾರ್ಹವಾಗಿ ಸೂರೆಗೊಳ್ಳುತ್ತಿರುವುದನ್ನು ಕಡೆಗಣಿಸುತ್ತದೆ. ಚೆಮ್ಬನ್ಮುಡಿಯಲ್ಲಿ ಭೂ ಕುಸಿತ, ಹಳ್ಳಕೊಳ್ಳಗಳನ್ನು ಕಲ್ಲು ಅಡ್ಡಗಟ್ಟುವುದು ಭೂ, ಜಲ ಹಾಗೂ ಅರಣ್ಯ ಸಂಪನ್ಮೂಲಗಳಿಗಷ್ಟೇ ಅಲ್ಲ ಜೈವಿಕ ವೈವಿಧ್ಯದ ಮೇಲೆಯೂ ಅಹಿತಕರ ಪರಿಣಾಮ ಬೀರುತ್ತದೆ. ಸಂಪನ್ಮೂಲದ ಮೂರು ಮುಖ್ಯ ಘಟಕಗಳೆಂದರೆ ಆರೋಗ್ಯ, ಶಿಕ್ಷಣ ಹಾಗೂ ಉದ್ಯೋಗವಾಗಿರುವಾಗ ಹಳ್ಳಿಯಲ್ಲಿ ಮೂರೂ ಕುಸಿದಿವೆ. ಸಣ್ಣ ಮಕ್ಕಳಲ್ಲಿ ಶ್ವಾಸಕೋಶ ಕ್ಯಾನ್ಸರ್ ಕಾಣಿಸಿಕೊಳ್ಳುತ್ತಿದೆ, ಒಂದೇ ಸಮನೆ ಟ್ರಕ್ ಸಂಚಾರ ಇರುವುದರಿಂದ ತಮ್ಮ ಮಕ್ಕಳ ವಿದ್ಯಾಭ್ಯಾಸಕ್ಕೆ ತೊಂದರೆಯಾಗಿದೆ ಎಂದು ತಾಯಂದಿರು ಅರ್ಜಿ ಸಲ್ಲಿಸಿದ್ದಾರೆ. ಅದರಿಂದ ಸೃಷ್ಟಿಯಾದ ಉದ್ಯೋಗಗಳಲ್ಲಿ ಸ್ಥಳೀಯ ಸಮುದಾಯದವರಿಗೆ ಯಾವ ಪಾಲೂ ಇಲ್ಲ. ಸಣ್ಣ ಸಂಖ್ಯೆಯಲ್ಲಿರುವ ಕಾರ್ಮಿಕರಲ್ಲಿ ಒಡಿಶಾ ಅಥವಾ ಜಾರ್ಖಂಡ್‌ಗ ಆದಿವಾಸಿಗಳೇ ಇದ್ದಾರೆ. ತಮ್ಮ ಸ್ವಂತ ಪ್ರದೇಶಗಳಲ್ಲಿ ಗಣಿಗಾರಿಕೆ ಅವರ ಬದುಕು ಕಸಿದಿದ್ದರಿಂದ ಇಲ್ಲಿ ಬಂದವರು ಜನ. ಇನ್ನು ಸಾಮಾಜಿಕ ಸಂಪತ್ತು ನೆಲೆಗೊಳ್ಳವುದು ಸಮುದಾಯದಲ್ಲಿ ಸೌಹಾರ್ದ, ವಿಶ್ವಾಸ ಹಾಗೂ ಸಹಕಾರ ಮನೋಭಾವಗಳಿದ್ದಾಗ. ಸುತ್ತ ಹಿಂಸೆಯ ವಾತಾವರಣ ಇರುವುದರಿಂದ ಇದಕ್ಕೂ ಧಕ್ಕೆಯಾಗಿದೆ. ಭೂ ಕಬಳಿಕೆ ಮಾಡಿ, ಜಲ, ಅರಣ್ಯ ಹಾಗೂ ಲೋಹ ಸಂಪತ್ತನ್ನು ಲೂಟಿ ಮಾಡಿ ಲಾಭ ಹೊಂದಲು ಕೆಲ ಮಾಲೀಕರಿಗೆ ಅವಕಾಶ ಮಾಡಿಕೊಟ್ಟಿರುವ ಇಂತಹ ಆರ್ಥಿಕತೆಯಿಂದ ಇಡೀ ಸಮಾಜಕ್ಕೆ ದೊಡ್ಡ ನಷ್ಟವಾಗಿದೆ. ಸದ್ಯ ಕೇರಳದಲ್ಲಿ ಕಾರ್ಯನಿರ್ವಹಿಸುತ್ತಿರುವ 2,700 ಗಣಿಗಳಲ್ಲಿ ಸುಮಾರು 1,700ರಲ್ಲಿ ಅಕ್ರಮವಾಗಿ ಗಣಿಗಾರಿಕೆ ನಡೆಸಲಾಗುತ್ತಿದೆ ಎಂದರೆ ಅದು ಕಾನೂನು ರಹಿತ, ಸಾಮಾಜಿಕ ಅನ್ಯಾಯದ ಪರಿಸ್ಥಿತಿಗೆ ಸಾಕ್ಷಿ ಹೇಳುತ್ತಿದೆ. ಅಲ್ಲದೆ ಏರುತ್ತಿರುವ ದೇಶದ ಪ್ರಗತಿ ದರ ಉದ್ಯೋಗವಕಾಶಗಳನ್ನು ಹೆಚ್ಚಿಸುತ್ತಿದೆ ಎನ್ನುವುದಂತೂ ಬರೀ ಸುಳ್ಳೇ ಆಗಿದೆ. ಜಿಡಿಪಿ ದರ ಶೇ.3 ಇದ್ದಾಗ ಸಾಂಸ್ಥಿಕ ವಲಯಗಳಲ್ಲಿ ಉದ್ಯೋಗಾವಕಾಶ ಶೇ.2 ಇದ್ದುದು ನಂತರ ಶೇ.7 ಕ್ಕೆ ಜಿಡಿಪಿ ದರ ಏರಿದಾಗ ಹೆಚ್ಚಾಗುವ ಬದಲು ಇನ್ನೂ ಕುಸಿಯಿತು. ಅಂದರೆ ನಾವು ಕಾಣುತ್ತಿರುವ ದಿನಗಳ ಆರ್ಥಿಕ ಪ್ರಗತಿ ಉದ್ಯೋಗ ರಹಿತ ಪ್ರಗತಿಯೇ ಆಗಿದೆ.

ತುರ್ತು ಅಗತ್ಯಗಳಾದ ಪ್ರವಾಹ ಪೀಡಿತರ ಪುನರ್ವಸತಿ ಹಾಗೂ ಕೇರಳದ ಮರು ನಿರ್ಮಾಣಕ್ಕೆ ನಾವು ತಕ್ಷಣ ಮುಂದಾಗಬೇಕು ನಿಜ. ಆದರೆ ದುರಂತದಿಂದ ಕಲಿತ ಪಾಠಗಳನ್ನು ಹೃದ್ಗತ ಮಾಡಿಕೊಳ್ಳಬೇಕು. ಕೇವಲ ಮಾನವ ನಿರ್ಮಿತ ಬಂಡವಾಳದ ಅಭಿವೃದ್ಧಿಗೆ ಮುಂದಾಗಿದ್ದು ಹೇಗೆ ಇನ್ನಿತರ ಮೂರರ ನಾಶಕ್ಕೆ ಕಾರಣವಾಯಿತು ಎಂಬುದನ್ನು ಮನಗಾಣಬೇಕು.

ನಾವು ಕಡ್ಡಾಯವಾಗಿ ಹೊಸತೊಂದು ಪುಟ ತೆರೆಯಬೇಕು ಎಂದು ಕೇರಳದ ಪ್ರಾಕೃತಿಕ ವಿಕೋಪ ಸ್ಥಳೀಯರೊಂದಿಗೆ ಸಮಾಲೋಚಿಸದೆ ಯಾವುದೇ ಆರ್ಥಿಕ ಅಭಿವೃದ್ಧಿ ಯೋಜನೆ ರೂಪಿಸುವುದಿಲ್ಲ ಎಂಬ ಆಶ್ವಾಸನೆಯನ್ನು ಕೇರಳ ಸರಕಾರ ಜನತೆಗೆ ನೀಡಬೇಕು. ಅದಕ್ಕೆ ತಕ್ಕ ನೀತಿ ನಿರೂಪಣೆಗೆ ಮುಂದಾಗಬೇಕು. ಜನರನ್ನು ದೌರ್ಜನ್ಯಕ್ಕೀಡುಮಾಡುವ ಹಾಗೂ ಭ್ರಷ್ಟಾಚಾರಕ್ಕೆ ಆಸ್ಪದ ಇರುವ ಆಡಳಿತಶಾಹಿಯಿಂದ ನೈಸರ್ಗಿಕ ಸಂಪನ್ಮೂಲ ರಕ್ಷಣೆ ಮಾಡುವುದನ್ನು ನಿಲ್ಲಿಸಬೇಕು. ಯಾವಾಗಲೂ ಅರಣ್ಯ ಪ್ರದೇಶಗಳ ಸಮುದಾಯವೇ ತಮಗೆ ಎಂತಹ ಪ್ರಗತಿ ಬೇಕೆಂದು ಅಂತಿಮವಾಗಿ ನಿರ್ಧರಿಸಬೇಕು ಎಂದು ನಮ್ಮ ಸಂವಿಧಾನವೇ ಹೇಳಿದೆ. ಹಕ್ಕನ್ನು ನೀಡಿ ಅವರನ್ನು ಸಬಲಗೊಳಿಸಿದರೆ ಇಂತಹ ದುರಂತ ತಪ್ಪಿಸಲು ಅವರು ಶಕ್ತಿಯುತವಾಗಿ ಸರಕಾರದೊಂದಿಗೆ ಅನುಸಂಧಾನ ಮಾಡಬಲ್ಲವರಾಗುತ್ತಾರೆ.

Tags

Related Articles

Leave a Reply

Your email address will not be published. Required fields are marked *

Language
Close