About Us Advertise with us Be a Reporter E-Paper

ಅಂಕಣಗಳು

ಸ್ವತಂತ್ರ ಅಸ್ತಿತ್ವಕ್ಕಾಗಿ ಹೋರಾಟ ಅತ್ಯಂತ ಸಮರ್ಥನೀಯ

ಆಶಯ:  ಗೊ.ರು. ಚನ್ನಬಸಪ್ಪ

ಹನ್ನೆರಡನೆಯ ಶತಮಾನದಲ್ಲಿ ವಿಚಾರವಾದಿ ಬಸವಣ್ಣನವರ ಮಾರ್ಗದರ್ಶನದಲ್ಲಿ ಶರಣರು ನಡೆಸಿದ ಅಪೂರ್ವ ಸಮಾಜೋ-ಧಾರ್ಮಿಕ ಆಂದೋಲನ ಅಂದಿನ ಜನಸಮುದಾಯದಲ್ಲಿ ಮೂಡಿಸಿದ ನವಜಾಗೃತಿ ಲೋಕವಿದಿತ. ಆ ಜಾಗೃತಿ ಪಟ್ಟಭದ್ರ ಹಿತಾಸಕ್ತಿಯ ಸಂಪ್ರದಾಯವಾದಿಗಳಲ್ಲಿ ನಡುಕ ಹುಟ್ಟಿಸಿದ್ದು, ಆ ಆಂದೋಲನವನ್ನು ಅಡಗಿಸಲು ನಡೆದ ಒಳಸಂಚು, ಆಂದೋಲನದ ಅಂತಃಶಕ್ತಿಯಾಗಿದ್ದ ವಚನ ಸಾಹಿತ್ಯವನ್ನು ನಾಶಪಡಿಸಲು ಮಾಡಿದ ಪ್ರಯತ್ನ,  ಮಾತುಗಳಿಂದಾಗಿ ಅರಸನಿಂದ ಶರಣರು ಅನುಭವಿಸಿದ ಹಿಂಸೆ, ಜೊತೆಗೆ ನಡೆದ ದುರಂತ ಘಟನೆಗಳು, ಅಳಿದುಳಿದ ವಚನ ಸಾಹಿತ್ಯದ ಸಂರಕ್ಷಣೆಗಾಗಿ ಶರಣರು ತಮ್ಮ ಪ್ರಾಣವನ್ನೇ ಪಣಕ್ಕಿಟ್ಟು ಕಲ್ಯಾಣ ಬಿಟ್ಟು ಚದುರಿ ಹೋದದ್ದು, ಅನಂತರ ವೈದಿಕ ಹಿನ್ನೆಲೆಯ ಸಂಪ್ರದಾಯವಾದಿಗಳು ಮತ್ತೆ ತಲೆ ಎತ್ತಿ, ಶರಣರು ಹೇಳಿದ ಲಿಂಗಾಯತ ಸಿದ್ಧಾಂತಗಳೆಲ್ಲ ಬಸವ ಪೂರ್ವದಲ್ಲೇ ಇದ್ದ ವೀರಶೈವ ಸಿದ್ಧಾಂತಗಳೇ ಆಗಿವೆ ಎಂದು ಸಾರತೊಡಗಿದ್ದು, ಮಠ ವ್ಯವಸ್ಥೆಯಲ್ಲಿ ಗುರು-ವಿರಕ್ತ ಭೇದ ಮೂಡಿಸಿದ್ದು, ವಚನ ಸಾಹಿತ್ಯವನ್ನು ಪ್ರಕ್ಷಿಪ್ತಗೊಳಿಸಿದ್ದು ಇವೆಲ್ಲವನ್ನೂ  ದಾಖಲಿಸಿದೆ.

ವಚನ ಸಾಹಿತ್ಯದ ಒಳ-ಹೊರಗನ್ನೆಲ್ಲ ಅರಿತಿದ್ದ ಲಿಂ. ಡಾ.ಎಂ.ಎಂ. ಕಲಬುರ್ಗಿ ಅವರು ತಮ್ಮೊಂದು ಲೇಖನದಲ್ಲಿ, ‘ವಚನ ಸಾಹಿತ್ಯಕ್ಕೆ ಕನ್ನಡದಲ್ಲಿ ಕನಿಷ್ಠ 850 ವರ್ಷಗಳ ಇತಿಹಾಸವಿದೆ. ಈ ಸುದೀರ್ಘ ಕಾಲಾವಧಿಯಲ್ಲಿ ಕೆಲವರು ಬದಲಾದ ಧೋರಣೆಗೆ ತಕ್ಕ ಹೊಸ ವಚನಗಳನ್ನು ರಚಿಸುತ್ತ, ಅದು ಸಾಧ್ಯವಾಗದಿದ್ದರೆ ಹಳೆಯ ವಚನಗಳ ಪಾಠ ವ್ಯತ್ಯಾಸ ಮಾಡುತ್ತ ಬಂದಿದ್ದಾರೆ. ಇದರಿಂದಾಗಿ, ವಚನ ಸಾಹಿತ್ಯದಲ್ಲಿ ಮೂರು ಹಂತಗಳು ಕಂಡುಬರುತ್ತವೆ. ಅವು ಬಸವಪೂರ್ವ ಯುಗದ ಸೂಳ್ನುಡಿ ಹಂತ, ಬಸವ ಯುಗದ  ಹಂತ, ಬಸವೋತ್ತರದ ವಚನಾಗಮ ಹಂತ, (ಸೂಳ್ನುಡಿ ನಾಥ ಸಂಪ್ರದಾಯದ್ದು, ವಚನ ಶರಣ ವಿಚಾರದ್ದು, ವಚನಾಗಮ ವೀರಶೈವದ್ದು)’ ಎಂದು ಹೇಳಿ, ಆ ಮೂರು ಹಂತದ ಬೆಳವಣಿಗೆಯನ್ನು ತಿಳಿಸಿದರು.  ‘ಒಟ್ಟಾರೆ ನಾಥಪಂಥೀಯರಲ್ಲಿ ಸೂಳ್ನುಡಿಯಾಗಿ ಹುಟ್ಟಿ, ಲಿಂಗಾಯತ ಧರ್ಮೀಯರಲ್ಲಿ ವಚನವಾಗಿ ಬೆಳೆದು ವೀರಶೈವ ಮತೀಯರ ಕೈಯಲ್ಲಿ ಅದು ವಚನಾಗಮವಾಗಿ, ಈ ಸಾಹಿತ್ಯ ಪ್ರಕಾರವು ತಿರುವು ಪಡೆಯುತ್ತಾ ಬಂದಿತು. ಅಂದರೆ, ಅವಧೂತರಲ್ಲಿ ಹುಟ್ಟಿ, ಅನುಭಾವಿಗಳ ಕೈಯಲ್ಲಿ ಬೆಳೆದು, ಆಚಾರ್ಯರ ಮುಷ್ಠಿಯಲ್ಲಿ ನಲುಗಿತೆನಿಸುತ್ತದೆ’ (ತವನಿಧಿ-ಸೂಳ್ನುಡಿ-ವಚನ-ವಚನಾಗಮ, ಪುಟ-8)  ಈ ಮಾತುಗಳು ವಚನ ಸಾಹಿತ್ಯಕ್ಕೆ ಸಂಬಂಧಿಸಿದ್ದರೂ, ಆ ಸಾಹಿತ್ಯವೇ ಪ್ರಾಣ ಜೀವಾಳವಾಗಿರುವ ಲಿಂಗಾಯತ ಧರ್ಮಕ್ಕೂ ಸಂಬಂಧಿಸಿವೆ. ಏಕೆಂದರೆ ಲಿಂಗಾಯತ ಧರ್ಮಕ್ಕೆ ವಚನ ಸಾಹಿತ್ಯವೇ ಆಧಾರ. ಹೆಚ್ಚೇನು ವಚನ ಸಾಹಿತ್ಯವೇ ಲಿಂಗಾಯತರ ಧರ್ಮಗ್ರಂಥ!ಲಿಂಗಾಯತರು ಈಗ ನಡೆಸಿರುವ ಹೋರಾಟ ವಸ್ತುಸ್ಥಿತಿಯ ಬಗೆಗೆ ಉಂಟಾಗಿರುವ ಜಾಗೃತಿಯಲ್ಲದೆ ಬೇರೆಯಲ್ಲ. ಈ ಜಾಗೃತಿಗೆ ಬಸವಾದಿ ಶರಣರ ಪ್ರಗತಿಪರ ವಿಚಾರಧಾರೆಯೇ ಮೂಲ ಆಧಾರವೆಂದು ಬೇರೆ ಹೇಳಬೇಕಾಗಿಲ್ಲ. ಶೈವ ಮತ್ತು ಆಗಮ ಸಿದ್ಧಾಂತಗಳನ್ನು ಅವಲಂಬಿಸಿರುವ ವೀರಶೈವವು ವೈಚಾರಿಕ ಒರೆಗಲ್ಲಿಗೆ  ಕಾರಣದಿಂದಲೇ ಲಿಂಗಾಯತ ಪ್ರತ್ಯೇಕ ಮತ್ತು ಸ್ವತಂತ್ರ ಧರ್ಮ ಎನ್ನುವುದು ಸ್ಪಷ್ಟವಾಗುತ್ತದೆ.

 ಅತ್ಯಂತ ಪ್ರಾಚೀನ ಎನ್ನಲಾಗುತ್ತಿರುವ ವೀರಶೈವವೂ ಸೇರಿದಂತೆ, ಹಿಂದೂ ಧರ್ಮ ಮಾತ್ರವಲ್ಲ, ವಿಶ್ವದ ಯಾವುದೇ ಧರ್ಮಕ್ಕಿಂತ ಭಿನ್ನವಾದ ವೈಚಾರಿಕ ಧರ್ಮ ಲಿಂಗಾಯತ ಧರ್ಮ. ಯಾವುದೇ ಸಂಪ್ರದಾಯದ ಅಥವಾ ಸನಾತನ ಶಾಸ್ತ್ರಾಚರಣೆಗಳ ಕಟ್ಟುಪಾಡುಗಳಿಗೆ ಒಳಗಾಗದೆ, ಕೇವಲ ಮಾನವ ಘನತೆ ಮತ್ತು ಸಮಾನತೆಗಳನ್ನೇ ಮುಖ್ಯ ಸಿದ್ಧಾಂತವನ್ನಾಗಿಟ್ಟುಕೊಂಡಿರುವ ಸಾರ್ವಕಾಲಿಕ ಅನ್ವಯದ ಅನನ್ಯತೆ ಇರುವ ಕಾರಣದಿಂದ ಲಿಂಗಾಯತ ಸ್ವತಂತ್ರ ಧರ್ಮದ ಮನ್ನಣೆ ಪಡೆಯಲು ಅಗತ್ಯವಾದ  ಅರ್ಹತೆಗಳನ್ನೂ ಪಡೆದಿದೆ. ಈ ಧರ್ಮದ ವೈಶಿಷ್ಟ್ಯವೆಂದರೆ ಅದರ ಪ್ರಜಾಸತ್ತಾತ್ಮಕ ಸ್ವರೂಪ. ಈ ಹಿನ್ನೆಲೆಯಲ್ಲಿ ಶೈವ ಹೆಸರಿನೊಂದಿಗೆ ಅಂಟಿಕೊಂಡಿರುವ ವೀರಶೈವರು, ಇನ್ನಾದರೂ ಆ ಹಂಗು ತೊರೆದು ಮುಕ್ತ ಮನಸ್ಸಿನಿಂದ ನಾವು ಲಿಂಗಾಯತರು ಎಂದು ಹೇಳಿಕೊಳ್ಳಬೇಕಾದ ಸಂದರ್ಭವಿದು. ಸ್ವತಂತ್ರ ಭಾರತದ ಜಾತ್ಯಾತೀತ ಪ್ರಜಾಪ್ರಭುತ್ವದ ಎಲ್ಲ ಆಶಯಗಳನ್ನೂ 12ನೆಯ ಶತಮಾನದಷ್ಟು ಹಿಂದೆಯೇ ಪ್ರತಿಪಾದಿಸಿದ ಧರ್ಮ ಲಿಂಗಾಯತ ಧರ್ಮ ಎನ್ನುವುದನ್ನು ನಾವಾರೂ ಮರೆಯಬಾರದು.

ಇದು ವೈಚಾರಿಕ ಕಾಲಮಾನ; ವೈಜ್ಞಾನಿಕ ಕಾಲಮಾನ. ಇಂದಿನ ಯುವಜನಾಂಗ ಯಾವುದನ್ನೂ  ತಮ್ಮ ಪ್ರಶ್ನೆಗಳಿಗೆ ಸಮರ್ಥ ಉತ್ತರ ದೊರಕದೆ ಒಪ್ಪಿಕೊಳ್ಳುವುದಿಲ್ಲ. ಹಾಗಾಗಿ, ಕರ್ಮಠತನದ ಬಂಧನಗಳಿಂದ ಮುಕ್ತವಾದ, ಸರ್ವ ಸಮಾನತೆಯ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯದ ಶರಣ ಸಿದ್ಧಾಂತ ಅವರಿಗೆ ಸಹಜವಾಗಿಯೇ ಒಪ್ಪಿಗೆಯಾಗುತ್ತದೆ. ಆಧುನಿಕ ವಿಚಾರವಾದಿಗಳೆಲ್ಲ ಯಾವುದೇ ಜಾತಿ-ಮತ, ಪಂಥ-ಪಂಗಡಗಳ ಭೇದವಿಲ್ಲದೆ ವಚನ ಸಾಹಿತ್ಯವನ್ನು ತೆರೆದ ಹೃದಯದಿಂದ ಒಪ್ಪಿಕೊಂಡಿರುವುದೇ ಇದಕ್ಕೆ ಸಾಕ್ಷಿ.

ಸಂಪ್ರದಾಯ-ಅಸಂಪ್ರದಾಯ, ಸನಾತನ-ವಿನೂತನ, ಪ್ರತಿಗಾಮಿ-ಪ್ರಗತಿಗಾಮಿ, ಅಂಧಶ್ರದ್ಧೆ-ವೈಚಾರಿಕ ಇತ್ಯಾದಿ ದ್ವಂದ್ವಗಳ ಮಧ್ಯೆ ಸಂಘರ್ಷ ಇದ್ದದ್ದೇ. ಆದರೆ ಧರ್ಮ ಮತ್ತು ಸಮಾಜಗಳನ್ನು ಪೂರ್ಣ ಮಾನವೀಯತೆಯ ಆಧಾರದ  ನೈತಿಕ ನೆಲಗಟ್ಟಿನ ಮೇಲೆ ನಿಲ್ಲಿಸಿದ ಬಸವಣ್ಣನವರ ವಿಚಾರಧಾರೆ ಅಂತಹ ಸಂಘರ್ಷಕ್ಕೆ ಒಳಗಾಗಬೇಕಾಗಿಲ್ಲ. ಆ ವಿಚಾರಧಾರೆಯಲ್ಲಿ ಅರಳಿದ ಶರಣ (ಲಿಂಗಾಯತ) ಧರ್ಮದ ಬಗೆಗೂ ಸಂಘರ್ಷದ ಅಗತ್ಯವಿಲ್ಲವೆಂದೇ ನಾನು ತಿಳಿದಿದ್ದೇನೆ. ಏಕೆಂದರೆ ಲೋಕದ ಜನ ಸಮುದಾಯವನ್ನು ಇಂದು ಕಾಡುತ್ತಿರುವ ಅನೇಕ ದ್ವಂದ್ವಗಳಿಗೆ ಲಿಂಗಾಯತ ಧರ್ಮ ಸಿದ್ಧಾಂತ ಕಾರ್ಯಸಾಧ್ಯ ಉತ್ತರವಾಗುತ್ತವೆ.

ಈ ಭೂಮಿಕೆಯಲ್ಲಿ ಇಂದಿನ ಮತ್ತು ಮುಂದೆಂದಿನ ಕಾಲಮಾನಕ್ಕೆ ಸಮುಚಿತವಾಗಿ ಸಲ್ಲುವ ಲಿಂಗಾಯತ ಧರ್ಮಕ್ಕೆ ಸಂವಿಧಾನಾತ್ಮಕ ಮನ್ನಣೆ ದೊರಕಬೇಕು ಎಂದು ನಡೆಸುವ ಹೋರಾಟ  ಇದೆ. ಈ ಹೋರಾಟಕ್ಕೆ ಯಾವುದೇ ರಾಜಕೀಯವನ್ನು ಥಳಕು ಹಾಕುವ ಅಗತ್ಯವಿಲ್ಲ. ಇದನ್ನು ರಾಜಕೀಯಗೊಳಿಸಿದರೆ ಶರಣರ ವಿಚಾರಗಳಿಗೇ ಅಪಚಾರವೆಸಗಿದಂತಾಗುತ್ತದೆ. ಹಾಗೆಯೇ ಇದರಲ್ಲಿ ಯಾವುದೇ ಪ್ರತಿಷ್ಠೆ-ಪೂರ್ವಾಗ್ರಹಗಳು ತಲೆಹಾಕಬಾರದು.

ಯಾವುದೇ ದೇಶದಲ್ಲಿ ಅಲ್ಲಿನ ಸಂವಿಧಾನಕ್ಕೆ ಅಲ್ಲಿನ ಪ್ರತಿಯೊಬ್ಬ ಪ್ರಜೆಯೂ ಬದ್ಧವಾಗಿರಬೇಕು. ಭಾರತದ ಸಂವಿಧಾನ ಪ್ರಜಾಪ್ರಭುತ್ವವನ್ನು ಅಂಗೀಕರಿಸಿರುವ ಸಂವಿಧಾನ. ಪ್ರಜಾಪ್ರಭುತ್ವದಲ್ಲಿ ಜನಾಭಿಪ್ರಾಯಕ್ಕೆ ಮನ್ನಣೆ. ಅದರಂತೆ ಈಗ ನಡೆಯುತ್ತಿರುವ ಲಿಂಗಾಯತರ ಹೋರಾಟವೂ ಜನಾಭಿಪ್ರಾಯದ್ದೇ ಆಗಿದೆ ಮತ್ತು ಪ್ರಜಾಸತ್ತಾತ್ಮಕವಾಗಿದೆ.

ಈ ಹೋರಾಟ ಕೇವಲ ಅಂಗದ ಮೇಲೆ ಲಿಂಗವಿದ್ದವರಿಗಾಗಿ  ಶರಣ ಸಿದ್ಧಾಂತದಂತೆ ಶ್ರಮದ ದುಡಿಮೆ, ಸಮಾನ ಹಂಚಿಕೆ, ಅಂತರಂಗದ ಚಿಂತನೆ ಈ ವಿಚಾರಧಾರೆಯನ್ನು ಒಪ್ಪಿ ಅನುಸರಿಸುತ್ತಿರುವ ಸಕಲ ದೀನ-ದಲಿತರ ಪರವಾದ ಹೋರಾಟವೂ ಹೌದು.

Tags

Related Articles

Leave a Reply

Your email address will not be published. Required fields are marked *

Language
Close