About Us Advertise with us Be a Reporter E-Paper

ಗೆಜೆಟಿಯರ್

ಕೋಟೆ ಸುತ್ತಾ ಬುರ್ ಬುರ್ ಬುರ್

ಮಾಲತೇಶ್ ಅರಸ್ ಹರ್ತಿಕೋಟೆ

ಚಿತ್ರದುರ್ಗ ಎಂಬ ಕೋಟೆ ನಾಡಲ್ಲಿ ಬರೀ ಅವು ಗಳದ್ದೇ ಸೌಂಡ್, ಎಲ್ಲೇ ಅವು ಗಳದ್ದೇ ಕಾರುಬಾರು, ಅವುಗಳನ್ನು ನೋಡುತ್ತಾ ಅಚ್ಚರಿ ಪಟ್ಟ ಜನ ಒಂದು ಸಾರಿ ಬಾಯಿ ಮೇಲೆ ಕೈ ಇಟ್ಟು ಶಾಕ್ ಆದ್ರೂ, ಅಷ್ಟಕ್ಕೂ ಅವುಗಳು ಅಲ್ಲಿ ಬಂದಿದ್ದೆ ಸ್ಪೇಷಲ್’

ಬುರ್ ಬುರ್ ಅಂತ ಸೌಂಡ್ ಮಾಡಿದ ರೇಸಿಂಗ್ ಬೈಕ್ ಗಳು, ಇತ್ತ ನಾವೇನು ಕಡಿಮೆ ಅನ್ನುವಂತೆ ಎಲ್ಲರನ್ನೂ ಅಚ್ಚರಿ ಪಡಿಸಿದ ಕಾರ್‌ಗಳು, ಎಲ್ಲೇ ನೋಡಿದ್ರೂ ಧೂಳಿನಿಂದ ಹೊರಬಂದು ತಮ್ಮ ನಿಗದಿತ ಸಮಯವನ್ನು ರೀಚ್ ಆಗುವ ಡ್ರೆûವರ್ ಗಳು. ಇದನ್ನೆಲ್ಲಾ ಗ್ರೇಟ್ ಅಂದ್ರು ಕೋಟೆ ಜನರು. ಹೌದು. ಇದೆಲ್ಲಾ ಕಂಡು ಬಂದದ್ದು ಚಿಕ್ಕ ಮಗಳೂರು ಅಥವಾ ಕೊಡಗು ಅಂತ ನೀವು ಭಾವಿಸಿದರೆ ನಿಮ್ಮ ಊಹೆ ನಿಜಕ್ಕೂ ತಪ್ಪು, ಹೌದು ಇದೆಲ್ಲಾ ಕಂಡುಬಂದದ್ದು ಬಿಸಿಲ ನಾಡು ಚಿತ್ರದುರ್ಗದಲ್ಲಿ. ಮಾರುತಿ ಸುಜುಕಿ ಯ ದಕ್ಷಿಣ ಡೇರ್ ಕಾರ್ ರೇಸ್ ನಲ್ಲಿ ವಿವಿಧ ಕಾರ್ ಗಳು ಮತ್ತು ರೇಸ್‌ಗೆಂದೆ ರೆಡಿಯಾಗಿ ಬಂದಿರುವ ಬೈಕ್ ಗಳು ಇಲ್ಲಿ ದೂಳೆಬ್ಬಿಸಿದವು.

ದೇಶದ ನಾನಾ ರಾಜ್ಯಗಳಿಂದ ಬಂದಿದ್ದ ರೇಸರ್ ದುರ್ಗದ ಕೋಟೆಯಲ್ಲಿ ಸೌಂಡ್ ಮಾಡಿದ್ರು. ವೇಗವಾಗಿ ಗುರಿ ಮುಟ್ಟಿ ತಮ್ಮ ಸಾಹಸವನ್ನು ಪ್ರದರ್ಶನ ಮಾಡಿದ್ರು. ಅಷ್ಟೇ ಅಲ್ಲ ಕರ್ವಿಂಗ್ ಗಳಲ್ಲಿ ಹೋಗಲು ಸಾಧ್ಯವೇ ಇಲ್ಲ ಅಂತ ಕಣ್ಣು ಬಿಟ್ಟು ಕುಂತಿದ್ದ ಜನರನ್ನ ಕಣ್ಣು ಮಿಟುಕಿಸುವಂತೆ ನೋಡುವ ಹಾಗೆ ಮಾಡಿದ್ರು. ಒಟ್ಟು ಒಂದೂವರೆ ಕಿಮೀ ದಾರಿಯನ್ನು ಕೇವಲ ಒಂದು ನಿಮಿಷದ ಒಳಗಡೆಯೇ ಮುಟ್ಟಿ ಎಲ್ಲರನ್ನ ಚಕಿತಗೊಳಿಸಿ ದರು. ಕೋಟೆ ನಾಡಿನ ಜನರಿಗೆ ಈ ಕಾರ್ ಮತ್ತು ಬೈಕ್ ರೇಸಿಂಗ್ ಸಿಕ್ಕಾಪಟ್ಟೆ

ಬರೀ ಟಿವಿಯಲ್ಲಿ ನೋಡಿ ಖುಷಿ ಪಡುತ್ತಿದ್ದ ಕಾರ್ ರೇಸರ್ ಪ್ರಿಯರು ಇಂದು ಕಣ್ಣ ಮುಂದೆಯೇ ರೇಸರ್ ಗಳ ಹಾವಳಿಯನ್ನು ನೋಡಿ ಫುಲ್ ಎಂಜಾಯ್ ಮಾಡಿದ್ರು. ಒಟ್ಟಿನಲ್ಲಿ ಕೋಟೆ ನಾಡಿನಲ್ಲಿ ಕಾರ್ ಮತ್ತು ಬೈಕ್ ಗಳ ಸೌಂಡ್ ಸಿಕ್ಕಾಪಟ್ಟೆ ಖುಷಿ ಕೊಟ್ಟಿದ್ದು ಮಾತ್ರ ನಿಜ

Tags

Related Articles

Leave a Reply

Your email address will not be published. Required fields are marked *

Language
Close