About Us Advertise with us Be a Reporter E-Paper

ಅಂಕಣಗಳು

ಇಂಧನ ಬೆಲೆ ಏರಿಕೆ ಕಾಂಗ್ರೆಸ್‌ಗೆ ಸಿಕ್ಕ ಅನಾಯಾಸ ಅಸ್ತ್ರ

ಐದು ರಾಜ್ಯಗಳ ವಿಧಾನಸಭಾ ಚುನಾವಣೆ ಹಾಗೂ ಮುಂಬರುವ ಲೋಕಸಭಾ ಚುನಾವಣೆ ದೃಷ್ಟಿಯಿಂದ ದೆಹಲಿಯಲ್ಲಿ ನಡೆಯುತ್ತಿರುವ ಬಿಜೆಪಿ ಕಾರ್ಯಕಾರಿಣಿ ಸಭೆ ಭಾರಿ ಚರ್ಚೆಗೆ ಗ್ರಾಸವಾಗಿದೆ. ಆದರೆ ಇದೇ ಹೊತ್ತಿನಲ್ಲಿ ಇಂಧನ ಬೆಲೆ ಹೆಚ್ಚಾಗುತ್ತಿರುವುದು ಪ್ರತಿಪಕ್ಷಗಳಿಗೆ ಮೋದಿ ಸರಕಾರದ ವಿರುದ್ಧ ತೊಡೆತಟ್ಟಲು ಹೊಸದೊಂದು ಅಸ್ತ್ರ ಸಿಕ್ಕಂತಾಗಿದೆ. ಇದನ್ನೇ ಮುಂದು ಮಾಡಿಕೊಂಡು ಭಾರತ್ ಬಂದ್‌ಗೂ ಪ್ರತಿಪಕ್ಷಗಳು ಕರೆಕೊಟ್ಟಿವೆ. ಇದಕ್ಕೆ ಕೆಲವು ಸಂಘಟನೆಗಳು ಬೆಂಬಲ ಕೊಟ್ಟಿದ್ದರೆ ಇನ್ನು ಕೆಲವರು ಕಾದು ನೋಡುವ ಮಾತನಾಡಿವೆ. ಇಂಧನ ಬೆಲೆ ಏರಿಕೆಯಂಥ ವಿಷಯಗಳು ಬಹಳಷ್ಟು ಸರಕಾರಗಳನ್ನು ಅಲ್ಲಾಡಿಸಿದ ಉದಾಹರಣೆಗಳಿದ್ದು, ಈ ಅಂಶವನ್ನು ಸಮರ್ಥವಾಗಿ ಬಳಸಿಕೊಳ್ಳಲು ಒಗ್ಗಟ್ಟು ಕಾಣುತ್ತಿಲ್ಲ. ‘ಮುಂದಿನ ಲೋಕಸಭಾ ಚುನಾವಣೆಯಲ್ಲಿ ಅಽಕಾರ ನಮಗೆ’ ಎನ್ನುವುದನ್ನು ಬಿಟ್ಟರೆ ಪ್ರತಿಪಕ್ಷಗಳಲ್ಲಿ ಕ್ರಿಯಾತ್ಮಕ ಕಾರ್ಯಗಳು ಕಾಣುತ್ತಿಲ್ಲ. ಅದೂ ಅಲ್ಲದೆ ಮೋದಿ ಅಲೆ ದೇಶದಲ್ಲಿ ಇನ್ನೂ ಕಸುವು ಕಳೆದುಕೊಂಡಿಲ್ಲ ಎನ್ನುವುದು ಹಲವಾರು ಸಮೀಕ್ಷೆಗಳಿಂದ ಈಗಾಗಲೇ ಋಜುವಾತಾಗಿದ್ದರೂ ಕಾಂಗ್ರೆಸ್‌ನಂಥ ರಾಷ್ಟ್ರೀಯ ಪಕ್ಷ ಎಲ್ಲರನ್ನೂ ಒಟ್ಟುಗೂಡಿಸುವುದರಲ್ಲೇ ಮಗ್ನವಾಗಿರುವುದನ್ನು ಬಿಟ್ಟರೆ ಉಳಿದಂತೆ ಯಾವುದೇ ಪರಿಣಾಮಕಾರಿ ಕ್ರಮಗಳನ್ನು ಕೈಗೊಂಡಿಲ್ಲ. ಈ ವಿಷಯದಲ್ಲಿ ಬಿಜೆಪಿ ಒಂದು ಹೆಜ್ಜೆ ಮುಂದಿಟ್ಟಿದೆ. ದೆಹಲಿಯಲ್ಲಿ ನಡೆಯುತ್ತಿರುವ ರಾಷ್ಟ್ರೀಯ ಕಾರ್ಯಕಾರಣಿಯಲ್ಲಿ ಹಲವು ಮಹತ್ವದ ನಿರ್ಧಾರ ಕೈಗೊಂಡಿದೆ. ಲೋಕಸಭಾ ಚುನಾವಣೆ ಹಾಗೂ ಐದು ರಾಜ್ಯಗಳ ವಿಧಾನಸಭಾ ಚುನಾವಣೆಯನ್ನು ಎದುರಿಸುವ ಕುರಿತು ಗಂಭೀರ ಚರ್ಚೆ ಮಾಡಿದೆ. ಬಹಳ ಮುಖ್ಯವಾಗಿ ಪಕ್ಷದ ರಾಷ್ಟ್ರಾಧ್ಯಕ್ಷ ಅಮಿತ್ ಶಾ, ಅಜೆಂಡಾ ವಿವರಿಸುವ ಮೂಲಕ ಪಕ್ಷದ ಮುಂದಿನ ಹೆಜ್ಜೆಗಳೇನು ಎನ್ನುವುದನ್ನು ಎಲ್ಲರಿಗೂ ಮನವರಿಕೆ ಮಾಡಿಕೊಟ್ಟಿದ್ದಾರೆ.

ರಾಜಸ್ಥಾನ, ಛತ್ತೀಸಗಢ, ಮಧ್ಯಪ್ರದೇಶ ಹಾಗೂ ಇತ್ತೀಚೆಗಷ್ಟೇ ವಿಧಾನಸಭೆ ವಿಸರ್ಜನೆಯಾದ ತೆಲಂಗಾಣ ಹಾಗೂ ಮಿಜೋರಾಂಗೆ ಚುನಾವಣೆಗಳು ವರ್ಷಾಂತ್ಯಕ್ಕೆ ಎದುರಾಗಲಿದ್ದು, ಈ ಎಲ್ಲ ರಾಜ್ಯಗಳಲ್ಲಿ ಅಽಕಾರ ಉಳಿಸಿಕೊಳ್ಳುವ ಬಗ್ಗೆ ಮತ್ತು ಪಕ್ಷದ ಶಕ್ತಿ ಹೆಚ್ಚಿಸಿಕೊಳ್ಳಲು ಪಕ್ಷ ಇಡಬಹುದಾದ ಹೆಜ್ಜೆಗಳನ್ನು ಕುರಿತು ಸಭೆಯ ಗಮನಕ್ಕೆ ತಂದು ಎಲ್ಲರಲ್ಲೂ ಚೈತನ್ಯ ತುಂಬುವ ಪ್ರಯತ್ನ ಮಾಡಿದ್ದಾರೆ. ಪಂಚ ರಾಜ್ಯಗಳ ಚುನಾವಣೆ -ಲಿತಾಂಶ ಇಡೀ ರಾಷ್ಟ್ರ ರಾಜಕಾರಣದ ದಿಕ್ಸೂಚಿ ಎನ್ನುವುದು ನಿರ್ವಿವಾದ. ಅದರಲ್ಲಿ ಬಿಜೆಪಿ ನೆಲೆ ಕಳೆದುಕೊಂಡರೆ ಅದರ ಕರಿನೆರಳು ಲೋಕಸಭಾ ಚುನಾವಣೆ ಮೇಲೆ ಬೀಳುವುದರಲ್ಲಿ ಅನುಮಾನವೇ ಇಲ್ಲ. ಆದ್ದರಿಂದಲೇ ಕಮಲ ಪಾಳಯ ಪಕ್ಷ ಸಂಘಟನೆಗೆ ಮುಂದಾಗಿದೆ. ಇಂಧನ ಬೆಲೆ ಏರಿಕೆ ಎನ್ನುವುದು ಕಾಂಗ್ರೆಸ್‌ಗೆ ಅನಾಯಾಸವಾಗಿ ಸಿಕ್ಕಿರುವ ಅಸ. ಅದನ್ನು ಹೆದೆಗೇರಿಸಿ ಗುರಿ ಇಡುವಷ್ಟು ಚಾಣಾಕ್ಷತೆ ಕಾಂಗ್ರೆಸ್‌ಗೆ ಬೇಕು. ಅಂಥ ಚಾಣಾಕ್ಷತೆ ಅಲ್ಲಿ ಕಾಣುತ್ತಿಲ್ಲ.

Tags

Related Articles

Leave a Reply

Your email address will not be published. Required fields are marked *

Language
Close