About Us Advertise with us Be a Reporter E-Paper

ಅಂಕಣಗಳು

ಕಾರ್ಗಿಲ್ ಯೋಧರ ವೀರಗಾಥೆ ಅಮರ

ಸ್ಮರಣೆ: ಸಿನಾನ್ ಇಂದಬೆಟ್ಟು

ಅಖಂಡ ಭಾರತ, ಹಿಂದೂಸ್ತಾನ ಹಾಗೂ ಪಾಕಿಸ್ತಾನವಾಗಿ ಇಬ್ಭಾಗವಾದ ಮೇಲೆ ನಿರಂತರವಾಗಿ ಎರಡೂ ದೇಶಗಳ ಮಧ್ಯೆ ಕಲಹ, ಕಾದಾಟ, ಯುದ್ಧಗಳು ನಡೆಯುತ್ತಲೇ ಬಂದಿವೆ. ಗಡಿ ವಿವಾದ, ರಾಜತಾಂತ್ರಿಕ ವಿಷಯಗಳು, ಭಯೋತ್ಪಾದನೆ ಹೀಗೆ ಹಲವಾರು ವಿಷಯಗಳಲ್ಲಿ ಎರಡೂ ರಾಷ್ಟ್ರಗಳು  ಕಚ್ಚಾಡಿವೆ. ಕಚ್ಚಾಡುತ್ತಿವೆ. ಪ್ರತಿ ಬಾರಿಯೂ ಪಾಕಿಸ್ತಾನ, ಭಾರತವನ್ನು ಕೆಣಕಿ ಅದಕ್ಕೆ ಸರಿಯಾದ ಬೆಲೆ ತೆತ್ತಿದೆ. ನಮ್ಮ ಯೋಧರು ಪಾಕಿಸ್ತಾನದ ಆಕ್ರಮಣಕ್ಕೆ, ಪುಂಡಾಟಿಕೆಗೆ ತಕ್ಕ ಉತ್ತರ ನೀಡಿ ದೇಶದ ಸ್ವಾಭಿಮಾನ ಹಾಗೂ ಸಾರ್ವಭೌಮತೆಯನ್ನು ಎತ್ತಿ ಹಿಡಿದಿದ್ದಾರೆ. ಈಗಲೂ ಅದಕ್ಕೆ ಧಕ್ಕೆಯಾಗದಂತೆ ಪ್ರತಿ ಕ್ಷಣವೂ ದೇಶವನ್ನು ಕಾಯುತ್ತಿದ್ದಾರೆ. ನಮ್ಮ ದೇಶದ ಸೈನಿಕರ ಅಸೀಮ ಸಾಹಸಕ್ಕೆ ಸಾಕ್ಷಿಯಾದ ಹಲವು ಐತಿಹಾಸಿಕ ವಿಕ್ರಮಗಳಲ್ಲಿ 1999ರಲ್ಲಿ ನಡೆದ ಕಾರ್ಗಿಲ್ ಯುದ್ಧ ಗೆದ್ದಿದ್ದು ಕೂಡ ಒಂದು.

1998,  11 ರಂದು ಭಾರತ, ಇಡೀ ಜಗತ್ತೇ ಬೆರಗಾಗುವಂತೆ ಪೋಖ್ರಾನ್‌ನಲ್ಲಿ ಎರಡನೇ ಬಾರಿಗೆ ಅಣ್ವಸ್ತ್ರ ಪರೀಕ್ಷೆ ಮಾಡಿ ಯಶಸ್ವಿಯಾಯಿತು. ಇದಾದ ಎರಡೇ ವಾರಗಳಲ್ಲಿ ರಷ್ಯಾ ಸಹಾಯದೊಂದಿಗೆ ಪಾಕಿಸ್ತಾನ ಕೂಡ ಅಣು ಪರೀಕ್ಷೆ ಮಾಡಿ ತಾನೂ ಅದರಲ್ಲಿ ಯಶಸ್ವಿಯಾಗಿದ್ದಾಗಿ ಬೀಗಿತು. ಮೊದಲೇ ಹಾವು-ಮುಂಗುಸಿಗಳಂತೆ ಕಚ್ಚಾಡುತ್ತಿದ್ದ ದೇಶಗಳ ನಡುವೆ ಈಗ ಅಣ್ವಸ್ತ್ರ ಸಮರದ ಕರಿ ಛಾಯೆ. ಎಲ್ಲೆಲ್ಲೂ ಯುದ್ಧದ್ದೇ ಮಾತುಕತೆ. ಈ ವಿಷಮ ಪರಿಸ್ಥಿತಿಯನ್ನು ತಹಬಂದಿಗೆ ತರಲು ಪಾಕಿಸ್ತಾನದೊಂದಿಗೆ ಶಾಂತಿ ಮಾತುಕತೆಗೆ ಮುಂದಾಯಿತು  ಅಂದಿನ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ, ಪಾಕ್ ಪ್ರಧಾನಿ ನವಾಝ್ ಶರೀಫ್‌ರೊಂದಿಗೆ ಲಾಹೋರ್ ಶಾಂತಿ ಒಪ್ಪಂದಕ್ಕೆ ಸಹಿ ಹಾಕಿದರು. ದೆಹಲಿಯಿಂದ ಲಾಹೋರ್‌ಗೆ ಬಸ್ ಹಾಗೂ ರೈಲು ಹೊರಟಿತು. ಅರ್ಧ ಶತಮಾನದ ವೈರಿಗಳಿಬ್ಬರು ಪರಸ್ಪರ ಸ್ನೇಹದಿಂದ ಅಪ್ಪಿಕೊಂಡಿದ್ದರು. ಇತ್ತ ಲಾಹೋರ್‌ನಲ್ಲಿ ಇಬ್ಬರು ಪ್ರಧಾನಿಗಳು ಶಾಂತಿ ಒಪ್ಪಂದಕ್ಕೆ ಸಹಿ ಹಾಕುತ್ತಿದ್ದರೆ, ಅತ್ತ ಪಾಕ್ ಸೇನಾ ಮುಖ್ಯಸ್ಥ ಪರ್ವೇಜ್ ಮುಶರ್ರಫ್ ಯುದ್ಧ ತಯಾರಿ ನಡೆಸುತ್ತಿದ್ದರು.

ಕಾರ್ಗಿಲ್, ಸಮುದ್ರ ಮಟ್ಟದಿಂದ ಸುಮಾರು ಹದಿನೈದು ಸಾವಿರ  ಹೆಚ್ಚು ಎತ್ತರದಲ್ಲಿರುವ ಹಿಮಾವೃತ ಪ್ರದೇಶ. ಪ್ರತೀ ವರ್ಷ ಸೆಪ್ಟೆಂಬರ್‌ನಿಂದ ಮೇ ವರೆಗೆ ಭಾರೀ ಹಿಮಪಾತದಿಂದ ಅಲ್ಲಿನ ಬೆಟ್ಟಗಳು ಸಂಪೂರ್ಣ ಹಿಮಾವೃತವಾಗಿ ಬಿಡುತ್ತವೆ. ಆ ಸಮಯದಲ್ಲಿ ಎರಡೂ ದೇಶದ ಸೈನಿಕರು ತಮ್ಮ ಡೇರೆಗಳನ್ನು ಖಾಲಿ ಮಾಡಿ ಕೆಳಗೆ ಇಳಿದು ಬರುತ್ತಾರೆ. ಮಂಜು ಕರಗಿದ ನಂತರ ಮತ್ತೆ ವಾಪಸಾಗುತ್ತಾರೆ. ಇದೇ ಸಮಯಕ್ಕೆ ಕಾಯುತ್ತಿದ್ದ ಮುಷರ್ರಫ್, ತನ್ನ ಸೈನಿಕರನ್ನು ಉಗ್ರರ ವೇಷದಲ್ಲಿ ಜಮಾವಣೆ ಮಾಡಿ, ಭಾರತದ ವಿರುದ್ಧ ಯುದ್ಧ ತಯಾರಿ ನಡೆಸಿದರು.

ಹೊಸ  ಅಮಲಿನಲ್ಲಿದ್ದ ಭಾರತಕ್ಕೆ ಇದರ ಅರಿವಿರಲಿಲ್ಲ. ಗುಪ್ತಚರ ಇಲಾಖೆ ಇದರ ಬಗ್ಗೆ ಸರಕಾರಕ್ಕೆ ಮಾಹಿತಿ ತಿಳಿಸಿದರೂ ಸ್ನೇಹದ ಗುಂಗಿನಲ್ಲಿ ಅದನ್ನು ನಿರಾಕರಿಸಿತ್ತು. ಕೊನೆಗೆ ದನಗಾಹಿಗಳಿಂದ ಮಾಹಿತಿ ಬಂದಾಗ, ಸತ್ಯಾಸತ್ಯತೆಯನ್ನು ತಿಳಿಯಲು ಕ್ಯಾಪ್ಟನ್ ಸೌರಭ್ ಕಾಲಿಯ ಜತೆ ಐದು ಮಂದಿ ಸೈನಿಕರನ್ನು ಬಜರಂಗಿ ಪೋಸ್‌ಟ್ ಕಡೆಗೆ ಕಳುಹಿಸಿ ಕೊಡಲಾಯಿತು. ಸೈನಿಕರನ್ನು ಕಳುಹಿಸಿ ಇಪ್ಪತ್ತೈದು ದಿನಗಳಾದರೂ ಯಾವುದೇ ವಿವರ ಸಿಗಲಿಲ್ಲ. ಸೈನಿಕರೂ ಸಂಪರ್ಕಕ್ಕೆ ಸಿಗಲಿಲ್ಲ. ಕೊನೆಗೆ 1999 ಜೂನ್ 9 ರಂದು ಕೈ,  ಮರ್ಮಾಂಗಗಳನ್ನು ತುಂಡು ತುಂಡಾಗಿಸಿದ ಅವರ ಶವಗಳನ್ನು ಪಾಕಿಸ್ತಾನ ಭಾರತಕ್ಕೆ ಕಳುಹಿಸಿಕೊಟ್ಟಿತು. ಸ್ನೇಹಕ್ಕೆ ಬೆಲೆ ಕೊಟ್ಟಿದ್ದ ನೆರೆ ರಾಷ್ಟ್ರದ ಬೆನ್ನಿಗೆ ಚೂರಿ ಇರಿದಿತ್ತು.

ಪಾಕಿಸ್ತಾನವನ್ನು ಬಗ್ಗು ಬಡಿಯಲು ಯುದ್ಧ ಆಗ ಅನಿವಾರ್ಯವಾಯಿತು. ‘ಅಪರೇಶನ್ ವಿಜಯ್’ ಹೆಸರಿನಲ್ಲಿ ಸಮರ ಪ್ರಾರಂಭವಾಯಿತು. ಪಾಕಿಸ್ತಾನಿ ಸೇನೆ ಬೆಟ್ಟದ ಮೇಲಿದ್ದರೆ, ಭಾರತೀಯ ಸೇನೆ ಕೆಳಗೆ ಇತ್ತು. ಪಾಕ್, ಯುದ್ಧಕ್ಕೆ ಸರ್ವ ರೀತಿಯಲ್ಲೂ ಸನ್ನದ್ಧವಾಗಿದ್ದರೆ, ಭಾರತಕ್ಕೆ ಯುದ್ಧ ನಡೆಯುತ್ತದೆ ಎಂಬ ಸಣ್ಣ ಸುಳಿವೂ ಇರಲಿಲ್ಲ. ಅಲ್ಲದೆ ಬೇಕಾದಷ್ಟು  ದಾಸ್ತಾನೂ ಇರಲಿಲ್ಲ. ಇವೆಲ್ಲಾ ಋಣಾತ್ಮಕ ಅಂಶಗಳ ನಡುವೆ ಸೆಣಸಿ ಗೆಲ್ಲಬೇಕಿತ್ತು. ಯಾವ ರೀತಿಯಲ್ಲೂ ಗೆಲ್ಲಲು ಅಸಾಧ್ಯ ಎನ್ನುವ ಯುದ್ಧವನ್ನು ಭಾರತೀಯ ಸೇನೆ ಗೆದ್ದು ತೋರಿಸಿದ್ದರ ಹಿಂದೆ ಯೋಧರ, ಧೈರ್ಯ, ಸಾಹಸ ಹಾಗೂ ಪೌರುಷಗಳಿವೆ. ಬೇಕಾದಷ್ಟು ಶಸ್ತ್ರಾಸ್ತ್ರಗಳಿಲ್ಲದಿದ್ದರೂ, ತಮ್ಮ ಎಂಟೆದೆಯ ಗುಂಡಿಗೆಯಿಂದ ಶತ್ರುಗಳನ್ನು ಹಿಮ್ಮೆಟ್ಟಿಸಿದ ಅವರ ಶೌರ್ಯಕ್ಕೆ ಇಡೀ ಜಗತ್ತು ತಲೆ ಬಾಗಿತು. ಅದರ ಸ್ಮರಣಾರ್ಥ ಪ್ರತಿ ವರ್ಷ ಜುಲೈ.26ರಂದು ಆಚರಿಸಲಾಗುವ  ‘ಕಾರ್ಗಿಲ್ ವಿಜಯ್ ದಿವಸ್’ ಸಂದರ್ಭದಲ್ಲಿ ಅಂಥ ಮೂವರು  ಯೋಧರನ್ನು ನಮಿಸುವ, ನೆನೆಯುವ ಪ್ರಯತ್ನ ಈ ಬರಹ.

ಆತನ ಹೆಸರು ಕ್ಯಾಪ್ಟನ್ ವಿಕ್ರಂ ಬಾತ್ರಾ. ಇನ್ನೂ ಇಪ್ಪತ್ನಾಲ್ಕು ವರ್ಷದ ಯುವಕ. ಸೇನೆಗೆ ಸೇರಿ ಕೆಲವೇ ವರ್ಷಗಳಾಗಿದ್ದವು. ಅದೇ ವೇಳೆ ಕಾರ್ಗಿಲ್ ಯುದ್ಧ ಘೋಷಣೆಯಾಯಿತು. ಬೆಟ್ಟವೊಂದನ್ನು ವಶಪಡಿಸಿಕೊಳ್ಳಲು ಬಾತ್ರಾ ನಾಯಕತ್ವದಲ್ಲಿ ಒಂದು ಸೇನಾ ತುಕಡಿಯನ್ನು ಕಳುಹಿಸಿಕೊಡಲಾಯಿತು. ಕೊಟ್ಟ ಗುರಿಯನ್ನು ಪೂರೈಸಿ, ಬೇಸ್ ಕ್ಯಾಂಪ್‌ಗೆ ಮರಳಿದ ಆತನನ್ನು ಮಾಧ್ಯಮಗಳು ಆನಂದವಾಯ್ತಾ ಎಂದು ಪ್ರಶ್ನಿಸಿದಾಗ, ಆನಂದವಾಯಿತು ಆದರೆ ತೃಪ್ತಿಯಾಗಿಲ್ಲ, ‘ಯೇ ದಿಲ್ ಮಾಂಗೆ  ಎಂದು ಘರ್ಜಿಸಿದ್ದರು. ಮತ್ತೊಂದು ಬೆಟ್ಟ ವಶಪಡಿಸಿಕೊಳ್ಳಲು ಹೋದಾಗ ಕ್ಯಾ. ವಿಕ್ರಂ ಹುತಾತ್ಮರಾದರು. ಆದರೇನಂತೆ? ಅವರ ಆ ಹೇಳಿಕೆ ಉಳಿದಿದ್ದ ಯೋಧರ ಕಿವಿಗಳಲ್ಲಿ ರಿಂಗಣಿಸುತ್ತ ಸ್ಫೂರ್ತಿ ನೀಡಿತ್ತು.

ಇಪ್ಪತ್ತೆರಡು ವರ್ಷದ ಆ ತರುಣ ಅಗಷ್ಟೇ ಎಂಜಿನಿಯರಿಂಗ್ ಮುಗಿಸಿ ಸೇನೆಗೆ ಭರ್ತಿಯಾಗಿದ್ದ. ಎಂಜಿನಿಯರ್ ಆಗಿ ದುಡಿದರೆ ಕೈತುಂಬಾ ಸಂಬಳ ಸಿಗಬಹುದಿದ್ದರೂ ಯಾಕೆ ಸೈನ್ಯಕ್ಕೆ ಸೇರಿದೆ ಎಂದು ಕೇಳಿದರೆ, ‘ನನಗೆ ಪರಮವೀರಚಕ್ರ ಪ್ರಶಸ್ತಿ ಬೇಕು. ಅದು ಯಾವ ಕಂಪನಿಯಲ್ಲೂ ಕೊಡುವುದಿಲ್ಲ. ಅದಕ್ಕೆ ಸೈನ್ಯ  ಎಂದು ಹೇಳಿದ್ದ! ಆತ ಸೇನೆಗೆ ಸೇರಿದ ಎರಡೇ ವರ್ಷಕ್ಕೆ ಕಾರ್ಗಿಲ್ ಯುದ್ಧ ಆರಂಭವಾಯಿತು. ದುರ್ಗಮ ಹಾದಿಯಲ್ಲಿ ಬೆಟ್ಟ ಹತ್ತಿ ತನ್ನ ಗ್ರೆನೇಡ್ ಮೂಲಕ ಪಾಕಿಗಳನ್ನು ಉಡಾಯಿಸಿ, ಒಂದೊಂದೆ ಬಂಕರ್‌ಗಳನ್ನು ವಶಪಡಿಸಿ ಕೊಳ್ಳತೊಡಗಿದ. ಆ ಕಡೆಯಿಂದ ತೂರಿಬಂದ ಗುಂಡುಗಳು ಇವನ ಬಲಗೈ ತುಂಡರಿಸಿದವು. ಚರ್ಮ ನೇತಾಡುತ್ತಿದ್ದ  ಕೈಯನ್ನು ತನ್ನ ಬೆಲ್‌ಟ್ನಿಂದ ಸೊಂಟಕ್ಕೆ ಕಟ್ಟಿ ಹೋರಾಟ ಮುಂದುವರಿಸಿದ. ಎಲ್ಲ ಬಂಕರ್‌ಗಳನ್ನು ವಶಪಡಿಕೊಂಡು ಶತ್ರುಗಳನ್ನು ಕೊಂದು ಹಾಕಿದ ಬಳಿಕ ತೀವ್ರ ರಕ್ತಸ್ರಾವದಿಂದ ಕುಸಿದ  ಬೆಟ್ಟವೇ ಅಂತಿಮ ಧಾಮವಾಯ್ತು.

ಭಾರತ ಸರಕಾರ ಆ ವೀರ ಯೋಧನಿಗೆ ಮರಣೋತ್ತರವಾಗಿ ಪರಮವೀರಚಕ್ರ ಪ್ರಶಸ್ತಿ ನೀಡಿ ಗೌರವಿಸಿತು. ಮಗನ ಮಹದಾಕಾಂಕ್ಷೆ ಪೂರೈಸಿದ ಆ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ತಾಯಿ, ‘ಒಂದು ವೇಳೆ ನನ್ನ ರಕ್ತದ ತಾಕತ್ತನ್ನು ತೋರಿಸುವ ಮುಂಚೆಯೇ ಸಾವೇನಾದರೂ ಎದುರಾದರೆ ಸಾವನ್ನೇ ಕೊಲ್ಲುತ್ತೇನೆ’ ಎಂದು ಆತ ಡೈರಿಯಲ್ಲಿ ಬರೆದಿದ್ದ ಸಾಲುಗಳನ್ನು ಓದಿ ಹೇಳಿದಾಗ ಅಲ್ಲಿದ್ದ ಅಷ್ಟೂ ಮಂದಿ ರೋಮಾಂಚಿತಾಗಿದ್ದರು. ಮುಂದೆ ಆ ಸಾಲು ಯೋಧರು ಹಾಗೂ ಯುವಜನತೆಗೆ  ಕೇವಲ ಇಪಪತ್ನಾಲ್ಕನೇ ವಯಸ್ಸಿಗೆ ಹುತಾತ್ಮರಾದ ಆ ಯೋಧನ ಹೆಸರು ಮೇಜರ್ ಮನೋಜ್ ಕುಮಾರ್ ಪಾಂಡೆ!.

ಕಾರ್ಗಿಲ್ ಬೆಟ್ಟಗಳಲ್ಲೊಂದಾದ ‘ಟೈಗರ್ ಹಿಲ್’ ಅನ್ನು ವಶಪಡಿಸಿಕೊಳ್ಳಲು ಗ್ರೆನೇಡಿಯರ್ ಯೋಗೇಂದ್ರ ಸಿಂಗ್ ಯಾದವ್ ಹಾಗೂ ತಂಡವನ್ನು ಹೆಲಿಕಾಪ್ಟರ್ ಮೂಲಕ ಇಳಿಸಲಾಯಿತು. ನೂರಕ್ಕೂ ಹೆಚ್ಚಿನ ಪಾಕ್ ಸೈನಿಕರನ್ನು ಅದು ಎದುರಿಸಬೇಕಿತ್ತು.

ವೀರ ಯೋಧರು ಪಾಕ್ ಸೈನಿಕರ ಮೇಲೆ ಗುಂಡಿನ ದಾಳಿ ನಡೆಸಿದ್ದಷ್ಟೇ ಅಲ್ಲ ಅವರ ಬಂಕರ್‌ಗಳನ್ನೂ ಕೂಡ ವಶಪಡಿಸಿಕೊಂಡರು. ಘಟನೆಯಲ್ಲಿ ಅವರ ಆರು ಸಹೋದ್ಯೋಗಿಗಳು  ಪಾಕ್ ಸೈನಿಕರು ಅವರ ಎಲ್ಲ ಆಯುಧ, ಮದ್ದು-ಗುಂಡುಗಳನ್ನು ವಶಪಡಿಸಿಕೊಂಡು ಸತ್ತವರ ಮೇಲೂ ಗುಂಡು ಹಾರಿಸಿ ವಿಕೃತತೆ ಮೆರೆದರು. ಪಾಕಿ ಸೈನಿಕರು ಎಲ್ಲ ಶಸ್ತ್ರಾಸ್ತ್ರಗಳನ್ನು ವಶ ಪಡಿಸಿಕೊಂಡಿದ್ದರೂ, ಸಿಂಗ್ ಜೇಬಿನಲ್ಲಿ  ಒಂದೇ ಒಂದು ಗ್ರೆನೇಡ್ ಬಾಕಿಯಿತ್ತು. ಪಾಕ್ ಸೈನಿಕರ ಮೇಲೆ ಅವರು ಆ ಗ್ರೆನೇಡನ್ನು ಎಸೆದರು. ಹಲವರು ಸತ್ತರೆ, ಇನ್ನು ಕೆಲವರು ಓಡಿ ಹೋದರು.

ಟೈಗರ್‌ಹಿಲ್ ವಶವಾದ ಬಗ್ಗೆ ಕೆಳಗಿನವರಿಗೆ ವಿಷಯ ಮುಟ್ಟಿಸಲು ಯಾರೂ ಇರಲಿಲ್ಲ. ಹತ್ತಿರದಲ್ಲೇ ಹರಿಯುತ್ತಿದ್ದ ಝರಿಯೊಂದಕ್ಕೆ  ಈಸು ಬಿದ್ದರು. ಅದು ಅವರನ್ನು ಬೇಸ್ ಕ್ಯಾಂಪ್‌ವರೆಗೂ ತಲುಪಿತು. ಅಲ್ಲಿದ್ದವರಿಗೆ ಟೈಗರ್ ಹಿಲ್ ವಶವಾದ ಬಗ್ಗೆ ಮಾಹಿತಿ ನೀಡಿದರು. ಭಾರತದ ತಿರಂಗಾ ಟೈಗರ್ ಹಿಲ್‌ನಲ್ಲಿ ರಾರಾಜಿಸಿತು. ಗಾಯಗೊಂಡಿದ್ದ ಯೋಗೇಂದ್ರ ಸಿಂಗ್ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತು. ಅದಾಗಲೇ 18 ಗುಂಡುಗಳು ಹೊಕ್ಕು ಅವರ ದೇಹವನ್ನು ಛಿದ್ರಮಾಡಿದ್ದವು. ಚಿಕಿತ್ಸೆ ಬಳಿಕ ಯೋಗೇಂದ್ರ ಸಿಂಗ್ ಚೇತರಿಸಿಕೊಂಡರು. ಭಾರತ ಸರಕಾರ ಅವರ ಪರಾಕ್ರಮಕ್ಕೆ  ಪರಮವೀರಚಕ್ರ ಪ್ರಶಸ್ತಿ ನೀಡಿ ಗೌರವಿಸಿತು. ಇಂದಿಗೂ ಯೋಗೇಂದ್ರ ಸಿಂಗ್ ಯಾದವ್  ಅಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ಹೀಗೆ ಕಾರ್ಗಿಲ್ ವಿಜಯದ ಹಿಂದೆ ನೂರಾರು ಯೋಧರ ಬಲಿದಾನ ಹಾಗೂ ಸಾವಿರಾರು ಯೋಧರ ನೆತ್ತರಗಾಥೆ ಇದೆ. ತಾಯ್ನೆಲದ ರಕ್ಷಣೆಗಾಗಿ ತಮ್ಮ ಜೀವನ ಸಮರ್ಪಿಸಿದ ಪ್ರತಿಯೊಬ್ಬ ಯೋಧನ ಹಿಂದೆಯೂ  ಒಂದೊಂದು ವೀರ ಕಥೆ ಇದೆ. ಅಳಿಸಲಾರದ ನೆನಪುಗಳಿವೆ. ಅವರ ಒಂದೊಂದು ಸಾಹಸವೂ ನಮಗೆ ಎಣೆಯಿಲ್ಲದ ಸ್ಫೂರ್ತಿ ತುಂಬುತ್ತವೆ. ಅವರ ಧೈರ್ಯ, ತಾಕತ್ತು, ಪೌರುಷ, ದೇಶಭಕ್ತಿ ಮಾದರಿಯಾಗಿ ನಿಂತು ನಮ್ಮನ್ನು ರೋಮಾಂಚನಗೊಳಿಸುತ್ತದೆ.

ಸೋಲೇ ಖಾತ್ರಿಯೇನೋ ಎಂಬ ಶಂಕೆ  ಯುದ್ಧ ವನ್ನು ತಮ್ಮ ಅದಮ್ಯ ಸಾಹಸದಿಂದ ಗೆದ್ದುಕೊಟ್ಟ ನಮ್ಮ ಯೋಧರ ಪರಾಕ್ರಮಕ್ಕೆ ಬೆಚ್ಚಿದ ಪಾಕ್, ಯುದ್ಧ ವಿರಾಮ ಘೋಷಿಸುವಂತೆ ಭಾರತಕ್ಕೆ ಹೇಳಿ ಎಂದು ಅಮೆರಿಕ ಬಳಿ ಅಸಹಾಯಕತೆಯಿಂದ ಬೇಡಿಕೆ ಇಟ್ಟಿತ್ತು. ಆಪರೇಶನ್ ವಿಜಯ್ ಯಶಸ್ವಿಯಾದ ಹೆಗ್ಗುರುತಾಗಿ ಭಾರತದ ತ್ರಿವರ್ಣ ಧ್ವಜ ಕಾರ್ಗಿಲ್‌ನಲ್ಲಿ ರಾರಾಜಿಸಿತು. ಇಂದಿಗೆ ಈ ಘಟನೆ ನಡೆದು 19 ವರ್ಷಗಳು ಸಂದಿವೆ. ಆದರೆ ನಮ್ಮ ಸೈನಿಕರ ಪರಾಕ್ರಮ ಹಾಗೂ ಸಾಹಸ ಕಾರ್ಗಿಲ್ ನೆನಪಿನಂತೆ ಚಿರನೂತನ ಮತ್ತು ಅಮರ.

Tags

Related Articles

Leave a Reply

Your email address will not be published. Required fields are marked *

Language
Close