About Us Advertise with us Be a Reporter E-Paper

ಅಂಕಣಗಳು

ಅಂಕಿ-ಸಂಖ್ಯೆಗಳಲ್ಲಿ ಬೆಳಗುವ-ಬಳಲುವ ನಗರಾಯಣ!

ಚಿಂತನೆ: ನಾಗರಾಜ ವಸ್ತಾರೆ

ಪ್ರತಿವರ್ಷದಂತೆ ಈ ವರ್ಷವೂ ‘ಸುಗಮ ಜೀವನ ನಡೆಸಲು ತಕ್ಕುದಾದ ನಗರ’ಗಳ ಶ್ರೇಣೀಕರಣ ಪಟ್ಟಿ ಬಿಡುಗಡೆಯಾಯಿತು. ಆಸ್ಟ್ರಿಯಾದ ವಿಯೆನ್ನ 2018ರ ಪಟ್ಟಿಯಲ್ಲಿ ಆಸ್ಟ್ರೇಲಿಯಾದ ಮೆಲ್ಬರ್ನ್ ನಗರಕ್ಕೆ ‘ಖೋ’ ಕೊಟ್ಟು ಬೀಗಿತು. ಹಾಗಾದರೆ  ನಗರ ಅಂತಂದರೇನು? ಹಾಗೇ ‘ನಾಗರಿಕ’ ಅಂತಂದರೇನು? ಮತ್ತು ನಾಗರಿಕತೆ ಅಂದರೆ ಎನ್ನುವ ಲಹರಿಯನ್ನೂ ಅದು ಹುಟ್ಟುಹಾಕಿತೆನ್ನಿ.

ಎತ್ತೆತ್ತಲೂ ಎತ್ತೆತ್ತರದ ಇಮಾರತುಗಳು ತಕ್ಕುದಾಗಿ ಕಿಕ್ಕಿರಿದ ರಸ್ತೆಗಳು ಎಲ್ಲು ಊರಲ್ಲದಿನ್ನಿಲ್ಲವೆನ್ನುವ ಹಾಗೆ ನೆರೆಯುವ ಮಂದಿ ಮತ್ತು ದಟ್ಟಣೆ ಇನ್ನು ಇಲ್ಲಿಲ್ಲದೇನಿಲ್ಲವಂತ ಜರುಗುವ ವಾಹನ ಮತ್ತು ಸಂದಣಿ ಅನುದಿನವೂ ಪರಿಷೆ ಹಮ್ಮಿಕೊಳ್ಳುವ ಶಾಪಿಂಗ್-ಮಾಲುಗಳು ಎಲಿವೇಟರು ಎಸ್ಕಲೇಟರುಗಳಲ್ಲಿ ಬದಿಹಾಯುವ ಆಸೆಬುರುಕ ನಜರುಗಳು, ಕೊಳ್ಳುಬಾಕ ಇರಾದೆಗಳು ಮೇಲು ಮಹಡಿಗಳಲ್ಲಿನ -ಡ್ಕೋರ್ಟುಗಳು ಕಾಫೀಮೇಜುಗಳ ಸುತ್ತಲಿನ ದುಂಡುಪಟ್ಟಾಂಗಗಳು ಪಬ್ಬುಗಿಬ್ಬಂತ ಬೆಳಕು ಮಬ್ಬಿದ ಮೇಲೆ ಹಬ್ಬುವ ಬಿಯರು-ಚಿಯರುಗಳು ಜಗತ್ತಿನ ಮೋಡಿಯೇ ಖುzನ್ನುವಂತೆ, ಹೊರಗೆ ಹೆಬ್ಬೀದಿಗಳಲ್ಲಿ ಉದ್ದೀಪಗೊಳ್ಳುವ ಝಗಮಗ  ಕೋಟ್ಯಂತರ ವಾಟುಗಳ ಬೆಳಕು ಬೆಡಗು ಬೆರಗು ದಿನದಲ್ಲಿ, ರಾತ್ರಿಯ ಸೊಗಸು ಮಗ್ಗುಲು ಬದಲಾಯಿಸಿದ ಹಾಗೆ ತೋರುವ ಕೊಳಚೆ ಕೊಳೆಗೇರಿಯಿತ್ಯಾದಿಗಳು ಬದಿಗೇ ಉಕ್ಕು ಕಾಂಕ್ರೀಟು ಲೋಹ ಗಾಜುಗಳ ಐಷಾರಾಮಿ ಆಫೀಸುಗಳು ಮಂದಿಯನ್ನು ಮಂದೆಯ ಹಾಗೆ, ದಿಟದ ದೊಡ್ಡಿಯೇ ಆದರೂ ಅನಿಸಗೊಡದ ಹಾಗೆ- ಶೆಡ್ಡೊಳಗೆ ತುರುಕಿಟ್ಟುಕೊಳ್ಳುವ ಕೈಗಾರಿಕೆಗಳು ಆಜುಬಾಜಿನಲ್ಲಿ, ಬಿಸುಟ ಬೆಂಕಿಪೊಟ್ಟಣಗಳ ಹಾಗೆ ಚೆಪಿಲ್ಲಿ ಚೆಲ್ಲಿರುವ ಕಡಿಮೆ ಆದಾಯದವರ ಮನೆಗಳು ಎಷ್ಟೇ ದೊಡ್ಡದಿದ್ದೂ ಸಾಲದೆನಿಸುವ ಬಸ್ಸುದಾಣಗಳು  ಅಷ್ಟೇ ಇಕ್ಕಟ್ಟಿನ ರೇಲುಬೀಡುಗಳು  ಆದಿಶೇಷನ ಹಾಗೆ ತಮ್ಮನ್ನು ತಾವೇ ನುಲಿದು ಹಾಯುವ ಮೇಲುಸೇತುವೆಗಳು ಭೂಮಿಯ ಬಸಿರು ಕೊರೆದೇ ಆದಂತನಿಸುವ ಒಳ-ಕೆಳ ಸುರಂಗದಾರಿಗಳು ನೆಲ ಬಿಟ್ಟು ಹರಿದರಷ್ಟೇ ದಾರಿ ಸುಗಮವೆನಿಸಗೊಡುವ ನೋಡುಗರ ಓಡುಗರ ದಿಗ್ಭ್ರಾಂತ ಭ್ರಮೆಗಳು… ಆಕಾಶವನ್ನು ಕೊಯ್ದು ಸಾಗುವ ವಿಮಾನಯಾನಗಳು  ಎ ಹಾರಿದರೂ ನೆಲವೇ ಲಂಗರೆನ್ನುವ ಹಾಗೆ ಇಳಿವಕ್ಕಿಗಳಿಗೆ ಸಲೀಸು ಅನುವೊಡ್ಡುವ ರನ್ವೇಗಳು

ಇವುಗಳೆಲ್ಲ- ಈ ದೇಶದ ಯಾವುದೇ ರಾಜಧಾನಿಯನ್ನು ಅಥವಾ ಮೆಟ್ರೋಶಹರವನ್ನು ವಿವರಿಸಬಲ್ಲ ಝಲಕುಗಳೇ ಆಗಿವೆ! ನಗರವೆನ್ನುತ್ತಲೇ, ಕಣ್ಣೊಳಗೆ ಮನಸೊಳಗೆ ಮೂಡಿ ಮುಂದುವರಿಯುವ ಚಿತ್ರಗಳಿವು. ಬಯೋಸ್ಕೋಪಿನಲ್ಲಿ ಜರುಗುವ ಬದಲುಬಿಂಬಗಳ ಮೆರವಣಿಗೆ ಹಾಗೆ!

ಈ ವಿವರಗಳಲ್ಲಿನ ವ್ಯಕ್ತಗಳು, ಮೂರ್ತಗಳು, ದೃಶ್ಯ ಶ್ರವ್ಯಗಳು, ಘ್ರಾಣ ಸ್ವಾದ ಸ್ಪರ್ಶಗಳು ಈ ಮೂಲಕ ಉಂಟಾಗುವ ಇಂದ್ರಿಯಗ್ರಾಹೀ ಚಿತ್ರಣವಷ್ಟೇ ನಗರವೆ? ಅಥವಾ ಇವಿವೇ ಚಿತ್ರಗಳ ಕಲಕುಮೆಲುಕುಗಳ ಮನನವೆ?

ಹಳ್ಳಿಗಳ ಬಗ್ಗೆ, ಅವಲ್ಲದೆ ಇನ್ನಿಲ್ಲವೆನ್ನುವ ಹಾಗೆ- ಭಾವುಕಗೊಂಡು ಆಡುವ ನಾವು, ಶಹರವೆನ್ನುತ್ತಲೇ ಕಾಂಕ್ರೀಟು ಕಾಡೆಂದು, ಬದುಕಿಲ್ಲದ ಮೇಡೆಂದು, ನಿರಾರ್ದ್ರವೆಂದು, ಜೀವ ಜೋಬದ್ರವೆಂದು, ಸೋಗುಗೀಗೆಂದು, ಸೋಗಲಾಡಿಯೆಂದು, ಗೊಡ್ಡೆಂದು ಭಡ್ಡೆಂದು, ಅಡಾವುಡಿಯೆಂದು, ಗಿಲೀಟೆಂದು ಉರುಟುರುಟಿ ಮುರುಟಿ ಸುರುಟಿ, ಹಾವು ಮೆಟ್ಟಿದಂತೆ ಹಿಮ್ಮೆಟ್ಟುತ್ತೇವಲ್ಲ- ಯಾಕೆ?

ನಗರದಲ್ಲಿ ಬದುಕಿಲ್ಲವೆಂತಲೆ? ನಗರದ ಮಂದಿ ಬದುಕುವುದೇ ಇಲ್ಲವೆಂತಲೆ? ನಗರದಲ್ಲಿ ಜೀವವಿಲ್ಲವೆ? ಹೇಳುವುದಾದರೆ, ನಗರವೇ ಒಂದು ಜೀವಂತಿಕೆಯಲ್ಲವೆ?

ನಗರವಾದರೂ ನಿಸ್ಸಂವೇದಿಯೆ? ನಗರವೇ ಸ್ವಯಂ ಸಂವೇದನೆಯಲ್ಲವೆ?

ದೊಡ್ಡ ದೊಡ್ಡ ಊರುಗಳನ್ನು ಕುರಿತು ಆಡುವಾಗ ‘ಮೆಟ್ರೊಪೊಲಿಸ್’ ಅಂತೊಂದನ್ನು ವಿಶೇಷಿಸುತ್ತೇವಲ್ಲ, ಹಾಗಂದರೆ ಒಂದು ಭೂಪ್ರಾಂತ್ಯದಲ್ಲಿನ- ರಾಜಕೀಯದೊಟ್ಟಿಗೆ ಆರ್ಥಿಕ, ಸಾಂಸ್ಕೃತಿಕ ಪರಿಸ್ಥಿತಿಯನ್ನೂ ನಿಭಾಯಿಸಬಲ್ಲ ನಗರ ಅಂತನ್ನುವ ಅರ್ಥೈಕೆಯಿದೆ. ಇಂಥದೊಂದು ಊರು ದೇಶದ ಒಳಗಿನ ಮತ್ತು ಹೊರಗಿನ ನಗರಗಳೊಟ್ಟಿಗೆ- ಸಾರಿಗೆ, ಸಂಪರ್ಕ ಮತ್ತು ವಾಣಿಜ್ಯಗಳ ಭರಪೂರ ಪರಸ್ಪರವನ್ನೂ, ವಿನಿಮಯವನ್ನೂ ಹೊಂದಿರಬಲ್ಲದಾಗಿರುತ್ತದೆ.

ಇನ್ನು, ಅಖಂಡ ಇಂಡಿಯಾದಲ್ಲಿನ ಮೆಟ್ರೊಪೊಲಿಸುಗಳು ಯಾವುವಂತ ಬಿಡಿಯಾಗಿ ಹೇಳಬೇಕಿಲ್ಲವಷ್ಟೆ?

ಸಿಟಿ ಅಂತಂದಿದ್ದೇ ತಳುಕಿಟ್ಟುಕೊಂಡಂತೆ ಮೂಡುವ ಇಂತಹ -ಲನಗಳಲ್ಲಿ, ಅನುಕ್ತವೂ ಅವ್ಯಕ್ತವೂ ಉಳಿದುಬಿಡುವ ಕೆಲವು ಪ್ರಚ್ಛನ್ನ ಮಾತುಗಳೂ ಇವೆ. ಈ ಕುರಿತು ಆಡುವುದಾದರೂ, ಅದನ್ನೊಂದು ಪಿಡುಗೆನ್ನುವ ಹಾಗೆ ಹೇಳಲಾಗುತ್ತದೆ. ನಗರಗಳಲ್ಲಿನ ದೊಡ್ಡ ಪ್ರಮೇಯವೆನ್ನುವ ಹಾಗೆ- ಅವನ್ನು ಬಿಂಬಿಸಿ, ಪರಿಹಾರಗಳನ್ನು ಹೇಳಲಾಗುತ್ತದೆ. ಸೆಮಿನಾರುಗಳನ್ನು ಮಾಡಲಾಗುತ್ತದೆ. ಸುಖಾಸುಮ್ಮನೆ, ಅಳದೆಯೇ ಇರುವವರ ಕಣ್ಣೊರೆಸಲಾಗುತ್ತದೆ!

ಅದು ಅರ್ಬನ್ ಪಾಪ್ಯುಲೇಶನ್! ಅಂದರೆ ನಗರಗಳಲ್ಲಿನ ಜನಸಂಖ್ಯೆಯನ್ನು ಕುರಿತ ಆಡಿಕೆ!

ಕಳೆದ ಶತಮಾನದ ಎಪ್ಪತ್ತರ ದಶಕದಂದು ಆತಂಕವಿ೦ತ್ತು. ಜಗತ್ತಿನ ಮುಂಚೂಣಿಯ ಶಹರಗಳಲ್ಲಿ ಇನ್ನು ಮುಂದೆ, ಮಂದೆಮಂದೆಯಾಗಿ ಮಂದಿ ಇಡುಕಿಕೊಳ್ಳುತ್ತಾರೆನ್ನುವ ಕಳವಳ! ಇಡುಕುವುದೆಂದರೆ ಹುಳುಗಳ ಹಾಗೆ ಒಬ್ಬರೊಬ್ಬರ ಪಕ್ಕೆಯಿರುಕುತ್ತ ಇಕ್ಕಟ್ಟಿನಲ್ಲಿರುವುದು ಎಂದರ್ಥ.

ಆತಂಕದ ಸಂಗತಿಯೆಂದರೆ, ಇಕ್ಕಟ್ಟೋ ಬಿಕ್ಕಟ್ಟೋ ಅಂತ ಜಿeಸೆಯಾಗುವಷ್ಟು, ಕೆಲವು ಮಾನವ-ನೆಲೆಗಳು ಈಚೀಚೆಗೆ ವೃಥಾ ಸಂದಣಿಗೊಂಡು ಕಡಿದೆನಿಸತೊಡಗಿವೆ!

ಆ ಕಾಲದ ಒಂದು ಅಂದಾಜಿನ ಪ್ರಕಾರ, ಎರಡನೇ ಸಹಸ್ರಮಾನದ ಹೊತ್ತಿಗೆ- ಹತ್ತಿರ ಹತ್ತಿರ ಒಂದು ಕೋಟಿ ಮನುಷ್ಯತಲೆಗಳಿರುವ ಊರುಗಳೆಲ್ಲ ಬರೇ ಮುಂದುವರಿದ ದೇಶಗಳಲ್ಲಿರುತ್ತವಂತ ಎಣಿಸಲಾಗಿತ್ತು. ನ್ಯೂಯಾರ್ಕ್, ಟೋಕಿಯೋ, ಲಂಡನ್, ಲಾಸೇಂಜಲಿಸ್ ಇತ್ಯಾದಿಗಳ ನಾಗಾಲೋಟವನ್ನು ಕಂಡು, ಮುಂದಾನೊಮ್ಮೆ ಈ ಶಹರಗಳೆಲ್ಲ- ಅನಾಮತ್ತಾಗಿ ಕೋಟಿಯೆಣಿಕೆಯನ್ನು ದಾಟಿ ಹವಣುತ್ತಾವೆಂದು ಬಗೆಯಲಾಗಿತ್ತು!

ಆದರೆ, ಅಂಥದೊಂದು ಪರಿಸ್ಥಿತಿ ಸದರಿ ಪಟ್ಟಣಗಳಲ್ಲಿ ಉಂಟಾಗಲೇ ಇಲ್ಲ!

ನಿಜದ ವಿಚಾರವೆಂದರೆ- ಜಪಾನು, ಅಮೆರಿಕ, ಇಂಗ್ಲೆಂಡು ಇಂತೆಲ್ಲ ಸೋಕಾಲ್ಡ ಮುಂದುವರಿದ ದೇಶಗಳು, ವರ್ಷಗಳು ಕಳೆದಂತೆ ಬೆಳೆದಂತೆ ಜನಸಂಖ್ಯೆಯ ದೃಷ್ಟಿಯಿಂದ ಹಿಂದುಳಿದುಬಿಟ್ಟವು. ಅವೇನು ಎಚ್ಚೆತ್ತುಕೊಂಡವೋ, ಇ ತಮ್ಮೊಳಗಿನ ಸಮಸ್ಯೆಯನ್ನು ಹತ್ತಿಕ್ಕಿ- ಬೇರಿನ್ನೆ ಎತ್ತೊಗೆದುಬಿಟ್ಟವೋ, ಒಟ್ಟಾರೆ ಗೊತ್ತಾಗಲಿಕ್ಕೆ ಮೊದಲೇ, ಜಗತ್ತಿನಾದ್ಯಂತ ತೃತೀಯ ವಿಶ್ವವಂತ ಕರೆಸಿಕೊಳ್ಳುವ ಭಾರತದಂದತಹ ನಾಡುಗಳಲ್ಲಿನ ನಗರಗಳೆಲ್ಲ ಏಕಾಏಕಿ ಬಹುಜನಸಂಖ್ಯಾತವಾಗಿಬಿಟ್ಟವು!

ಹೌದು, ನಮ್ಮ ಮೆಚ್ಚಿನ ನೆಚ್ಚಿನ ಬೆಂಗಳೂರು ಸಹ ತನ್ನೊಳಗಿರುವ ತಲೆಗಳೆಣಿಕೆಯಲ್ಲಿ ನ್ಯೂಯಾರ್ಕು, ಲಂಡನುಗಳನ್ನೂ ಸೈಡುಹೊಡೆದಿದೆ!

ಕಳೆದ ನಲವತ್ತೈವತ್ತು ವರ್ಷಗಳಿಂದ, ಇಡೀ ಭೂಮಂಡಲದಲ್ಲಿನ ಎಡೆಯ ನಗರಗಳು ಅರ್ಬುದ ವ್ರಣದಂತೆ ದೊಡ್ಡದಾಗುತ್ತಿವೆಯೆಂತಲೂ, ಎಂತಲೇ ಅವುಗಳ ಸಾಮಾನ್ಯ ಸ್ವಾಸ್ಥ್ಯವು ಶೋಚನೀಯಗೊಳ್ಳುತ್ತದೆಂತಲೂ- ಕಳವಳಿಸಲಾಗುತ್ತಲೇ ಇದೆ.

ಇವೊತ್ತಿಗೂ, ಎಷ್ಟೆಲ್ಲ ದೇಶಗಳಲ್ಲಿನ ವರ್ಷಾವರಿ ಜನಸಂಖ್ಯೆಯ ಹೆಚ್ಚಳದ ವೇಗವನ್ನು ಶೇಕಡ ಮೂರೋ ನಾಲ್ಕೋ ಎಂದು ಅಂದಾಜಿಸಲಾದರೆ, ಅವವೇ ದೇಶಗಳಲ್ಲಿನ ಟೌನು, ಸಿಟಿಗಳು- ವರ್ಷದಿಂದ ವರ್ಷಕ್ಕೆ ದುಪ್ಪಟ್ಟು ಮುಪ್ಪಟ್ಟು ಮಂದಿಯನ್ನು ಉಡಿಗೂಡಿಕೊಳ್ಳುತ್ತಿವೆ! ಹಳ್ಳಿಗಳಿಂದ ನಗರಗಳೆಡೆಗೆ ಜನವಲಸೆಯಾಗುತ್ತಿzರೆಂಬುದು ಇದರ ಸಾಮಾನ್ಯ ಸಲುವಿದ್ದರೂ, ದಿಟದಲ್ಲಿ ಹೊಲಗzಗಳು ಹೆಚ್ಚುವರಿ ಮಂದಿಯನ್ನು ಉಳಿಸಿಕೊಳ್ಳಲು ವಿ-ಲವಾಗಿವೆಯೆನ್ನುವ ಸಕಾರಣವೂ ಇದೆ. ಹೀಗೆ ವರ್ಷವರ್ಷವೂ ಗುಳೆಯೆದ್ದು ಬರುವವರು ವಾಪಸಾಗುವ ಬಾಬ್ತೇ ಇಲ್ಲವಲ್ಲ! ಇಷ್ಟಾಗಿ, ಕೆಟ್ಟು ಪಟ್ಟಣ ಸೇರು ಅನ್ನುವ ಗಾದೆ ಬೇರೆ ಇದೆಯಲ್ಲ! ಹಾಗೆ ಬಂದುಸೇರಿದ ಮಂದಿಯಾದರೋ- ನಗರಗಳ ಪೇವ್ಮೆಂಟು, -ಟ್ಪಾತುಗಳಲ್ಲಿ, ಬಸ್ಸು-ರೇಲುದಾಣಗಳ ಜಗುಲಿಗಳಲ್ಲಿ, ಊರಿನ ಹೊಲಸು ಹರಿಯುವ ನಾಲೆಗಾಲುವೆಗಳ ಅದಿಬದಿಯಲ್ಲಿ ಉಳಿದೇಬಿಡುತ್ತಾರೆ. ಠಿಕಾಣಿ ಹೂಡಿಬಿಡುತ್ತಾರೆ. ಕಡೆಗೆ, ಸಿಟಿಗೆ ಸಂದಿಯೇ ತೀರುತ್ತಾರೆ!

ತೀರುವುದೆಲ್ಲಿ ಇದ್ದೇ ಇರುತ್ತಾರೆ!

ಇವೊತ್ತು ಜಗತ್ತಿನಾದ್ಯಂತ ಗಣಿಸುವುದಾದರೆ, ಒಂದು ಕೋಟಿಗೂ ಹೆಚ್ಚು ಜನರಿರುವ ಹದಿನಾಲ್ಕು ಶಹರಗಳಿವೆ. ಮುಕ್ಕಾಲು ಕೋಟಿಯ ಆಸುಪಾಸಿನ ಲೆಕ್ಕವುಳ್ಳ ಹತ್ತು ನಗರಗಳಿವೆ!

ಈ ಅಂಕಿಗಿಂಕಿಗಳ ಲೆಕ್ಕವಾದರೋ, ನಮ್ಮ ತಲೆಕೆಡಿಸಿ ಬದಿಗಿಡಿಸಬಲ್ಲುದು!

ವಾಸ್ತವವೇನೆಂದರೆ, ಒಂದು ದೇಶವಾಗಿ ನಾವು ಇಂತಹ ದೊಡ್ಡ ದೊಡ್ಡ ನಂಬರುಗಳ ನಡುವೆಯೇ ಬದುಕುತ್ತಿದ್ದೇವೆ! ಮತ್ತು, ಹಾಗೆ ಬದುಕುವುದು ನಮಗೆ ಅನಿವಾರ್ಯವೂ ಆಗಿಬಿಟ್ಟಿದೆ!

ಭರತವರ್ಷವೆನ್ನುವುದನ್ನು ಸಂಕಥಿಸುವ, ಸಂಘಟಿಸುವ ನಾವು- ಒಟ್ಟು ನೂರಿಪ್ಪತ್ತು ಕೋಟಿ ಜನರಿದ್ದೇವೆ; ಮತ್ತು, ಅದರಲ್ಲಿ ಮೂರನೇ ಒಂದು ಪಾಲು ನಗರಗಳಲ್ಲಿದ್ದೇವೆ! ಅಂದರೆ, ಈ ದೇಶದಲ್ಲಿ ಬರೋಬ್ಬರಿ ನಲವತ್ತು ಕೋಟಿ ಜನರು ನಗರವಾಸಿಗಳಾಗಿದ್ದೇವೆ! ಮತ್ತು ‘ನಾಗರಿಕ’ರಾಗಿದ್ದೇವೆ!!

ಹೀಗೆ ‘ನಾಗರಿಕ’ಗೊಂಡು ಇರುವುದು, ಉಳಿಯುವುದು ಸುಲಭವೇನಲ್ಲ!

ಇಷ್ಟಾಗಿ, ನಗರದಲ್ಲಿರುವುದೆಂದರೆ ನಾವು ‘ಎಲ್ಲ’ವನ್ನೂ ಬಿಟ್ಟು ಬದುಕಬೇಕು!

ಹೆಸರು, ಜಾತಿಗೀತಿ, ಕುಲಗೋತ್ರ ಇತ್ಯಾದಿಗಳನ್ನು ಬಿಟ್ಟುಬಿಡಬೇಕು. ಭಾಷೆಗೀಷೆಯೆನ್ನುವ ಗಡಿಗಡುವುಗಳನ್ನು ಮೀರಿಕೊಳ್ಳಬೇಕು. ನಾವು, ನಮ್ಮವರೆನ್ನುವ ವಾಂಛೆಗಳನ್ನು ದಾಟಿಬಿಡಬೇಕು.

ಹೊಸತೇ ಅಸ್ತಿತ್ವವನ್ನು ತಾಳಬೇಕು. ಹೊಸತೇ ಜಾತಕವನ್ನು ಬರೆದುಕೊಳ್ಳಬೇಕು.

ಕಡೆಗೆ ನಾವು ನಮ್ಮ ಹೆಸರು ಕೂಡ ಮರೆತು ಬರೇ ನಂಬರಾಗಬೇಕು!

ಮನೆಗೊಂದು ಡೋರಂಕಿ, ತಲೆಗೊಂದು ಪ್ಯಾನಂಕಿ, ಕೈಯಂದು ಮೊಬೈಲಂಕಿ, ಬದಿಮೇಜಂದು -ನಂಕಿ, ಇನ್ನು ಬ್ಯಾಂಕಿನಲ್ಲಿ- ಖಾತೆಗೊಂದು, ಸಾಲಕ್ಕಿನ್ನೊಂದೆನ್ನುವ ಹಾಗೆ ಹದಿನಾರಂಕಿ, ಏಟೀಯೆಮ್ಮೆಂದರೆ ಪಿನ್ನಂಕಿ ಹೀಗೆ ಸ್ವಯವಷ್ಟೂ ಕಳಚಿಕೊಂಡು ಅಂಕಿಅಂಶಗಳ ನಿರ್ವಾಣಕ್ಕಿಳಿಯಬೇಕು. ಬರೇ ಸಂಖ್ಯೆಯಾಗಿಬಿಡಬೇಕು!

ಹೀಗಾದರಷ್ಟೇ ಇಲ್ಲಿ ಇರವು ಮತ್ತು ಉಳಿವು!

ಹೌದು, ನಾಗರಿಕ’ಗೊಳ್ಳುವುದು ಅಷ್ಟು ಸುಲಭವಲ್ಲ! ಹಾಗಂತ ನೀವು ಪ್ರಯತ್ನಪೂರ್ವಕವಾಗಿ ನಂಬರಾಗಬೇಕೇನಿಲ್ಲ. ಇಲ್ಲಿನ ಹವೆಯೊಗ್ಗಿದರೆ ಸಾಕು, ನಿಮಗೆ ನೀವೇ ಹಾಗಾಗಿಬಿಡುತ್ತೀರಿ.

ಬೇಕಿದ್ದರೊಮ್ಮೆ, ಶಹರ ಹೊಕ್ಕು ನೋಡಿ; ಅದನ್ನು ನಂಬೆವೆನ್ನುವರೂ  ನಂಬರಾಗಿರುವರು!

ಇನ್ನು, ನಗರವೆನ್ನುವುದರ ಚುಂಬಕತೆಯಾದರೂ ಏನು? ಅದರ ಒಳವಸ್ತುವಿನೊಳಗೊಂದು ಅಯಸ್ಕಾಂತ ಹುದುಗಿದೆಯೇನು? ಅದರ ಕಾಂತಕ್ಷೇತ್ರದ ಸೆಳವೇನು ಅಳವೇನು? ಮರುಳೇನು ಹೊರಳೇನು?

ಊಹ್ಞೂಂ! ಗೊತ್ತಾಗುವುದೇ ಇಲ್ಲ!

ನಗರದಷ್ಟು ಗೊಡ್ಡಿಲ್ಲವೆಂದು ಹೀಗಳೆಯುವ ಮಂದಿ ಸಹ, ಒಂದಮ್ಮೆ ಇಲ್ಲಿ ಬಂದು ಸಂದುಬಿಡುತ್ತಾರೆ! ಅವರಲ್ಲದಿದ್ದರೆ, ಅವರ ಮಕ್ಕಳಾದರೂ ಪಟ್ಟಣದ ಮೋಡಿಗೀಡಾಗಿ ಬಂದು ಈಡಾಡುತ್ತಾರೆ!!

ಇಷ್ಟಿದ್ದೂ ದೊಡ್ಡ ದೊಡ್ಡ ಡಿಗರಿಗಳ ದೊಡ್ಡ ದೊಡ್ಡ ಮಂದಿ ನಗರೀಕರಣವನ್ನು ಽಕ್ಕರಿಸುತ್ತಾರೆ. ಅದೊಂದು ಆನೆಕಾಲಿನ ಬೇನೆಯೆಂದು ಛೀತ್ಕರಿಸುತ್ತಾರೆ. ಅದರಷ್ಟು ಕೇಡೊಂದಿಲ್ಲವಂತ ಚಿತಾವಣೆಯಾಡುತ್ತಾರೆ.

ಇಂತಹ ದೊಡ್ಡವರು ಈಗ ಒಕ್ಕೊರಲಿನಲ್ಲಿ ಅನ್ನುತ್ತಿzರೆ: ನಾವೊಂದು ಗಂಡಾಂತರದಲ್ಲಿದ್ದೇವೆ!

Tags

Related Articles

Leave a Reply

Your email address will not be published. Required fields are marked *

Language
Close