About Us Advertise with us Be a Reporter E-Paper

ಅಂಕಣಗಳು

ಸ್ವಹಿತಕ್ಕಾಗಿ ರಾಜ್ಯದ ಹಿತಾಸಕ್ತಿ ಬಲಿ ಆಗಬಾರದು

ಈ ಸಮ್ಮಿಶ್ರ ಸರಕಾರ ಬಂದ ಗಳಿಗೆಯೇ ಸರಿ ಇಲ್ಲವೇನೋ ಎಂಬಂತಾಗಿದೆ. ಅಽಕಾರಕ್ಕೆ ಬಂದ ದಿನದಿಂದ ಇಲ್ಲಿವರೆಗೆ ಒಂದಿಲ್ಲೊಂದು ಬಿಕ್ಕಟ್ಟನ್ನು ಎದುರಿಸುತ್ತಲೇ ಇದೆ. ನೂರು ದಿನಗಳ ಪೂರೈಸಿದ ನಂತರ ಸಮನ್ವಯ ಸಮಿತಿ ಅಧ್ಯಕ್ಷರಾಗಿರುವ ಸಿದ್ದರಾಮಯ್ಯನವರೇ ಈ ಸರಕಾರ ಐದು ವರ್ಷ ಪೂರೈಸಲಿದೆ ಎಂದು ಹೇಳುವ ಮೂಲಕ ಸರಕಾರಕ್ಕೆ ಅಭಯ ನೀಡಿದ್ದರು. ಆಗ ಎಲ್ಲವೂ ಸರಿ ಹೋಯಿತು ಎಂದುಕೊಳ್ಳುವಷ್ಟರಲ್ಲಿ ಕುಂದಾನಗರಿ ಬೆಳಗಾವಿ ಕಾಂಗ್ರೆಸ್ ಪಕ್ಷದಲ್ಲಿ ಭಿನ್ನಮತ ಸೋಟಗೊಂಡು ಮತ್ತೊಂದು ಸುತ್ತಿನ ಬಿಕ್ಕಟ್ಟನ್ನು ಎದುರಿಸುವಂತಾಗಿದೆ. ಸಮ್ಮಿಶ್ರ ಸರಕಾರದ ನೇತೃತ್ವ ವಹಿಸಿರುವ ಜೆಡಿಎಸ್‌ನಲ್ಲಿ ಭಿನ್ನಮತಗಳಿಲ್ಲದಿದ್ದರೂ, ಅದಕ್ಕೆ ಬೆಂಬಲ ನೀಡಿರುವ ಕಾಂಗ್ರೆಸ್ ಪಕ್ಷದಲ್ಲಿ ಒಂದರ ನಂತರ ಮತ್ತೊಂದು ಎಂಬಂತೆ ವಿಘ್ನಗಳು ಎದುರಾಗುತ್ತಿವೆ. ಒಂದು ಸಮಸ್ಯೆಯನ್ನು ಬಗೆಹರಿಸುವಷ್ಟರಲ್ಲಿ ಮತ್ತೊಂದು ಧುತ್ತನೆ ಬಂದು ಕುಳಿತುಕೊಳ್ಳುತ್ತಿದೆ. ಈ ಎಲ್ಲಾ ಸಮಸ್ಯೆಗಳು ಉಂಟಾಗುತ್ತಿರುವುದು ವೈಯಕ್ತಿಕ ಮತ್ತು ಅಽಕಾರಕ್ಕಾಗಿಯೇ ಹೊರತು ರಾಜ್ಯದ ಹಿತಾಸಕ್ತಿಗಲ್ಲ. ಈಗ ಬೆಳಗಾವಿಯಲ್ಲಿ ಆಗಿರುವುದೂ ಈ ಅಽಕಾರದ ಲಾಲಸೆ. ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ನಾಯಕರು ಯಾರಾಗಬೇಕೆಂಬುದರ ಬಗ್ಗೆ ಕಿತ್ತಾಟ ಆರಂಭವಾಗಿ ತಾರಕಕ್ಕೂ ಏರಿದೆ. ಇದೇ ಮೊದಲ ಬಾರಿಗೆ ಶಾಸಕಿಯಾಗಿ ಆಯ್ಕೆಯಾಗಿರುವ ಪ್ರದೇಶ ಕಾಂಗ್ರೆಸ್ ಪಕ್ಷದ ಮಹಿಳಾ ಘಟಕದ ಅಧ್ಯಕ್ಷೆಯೂ ಆಗಿರುವ ಲಕ್ಷ್ಮೀ ಹೆಬ್ಬಾಳ್ಕರ್ ಅತ್ಯಲ್ಪ ಅವಽಯಲ್ಲಿ ಜಿಲ್ಲೆಯ ಕಾಂಗ್ರೆಸ್ ಘಟಕವನ್ನು ತಮ್ಮ ಸುಪರ್ದಿಯಲ್ಲಿಟ್ಟುಕೊಳ್ಳಬೇಕೆಂದು ಹಠಕ್ಕೆ ಬಿದ್ದಿದ್ದಾರೆ. ಆದರೆ, ಕಳೆದ ಹಲವು ದಶಕಗಳಿಂದ ಜಿಲ್ಲೆಯಲ್ಲಿ ದಣಿಗಳ ಕುಟುಂಬವೆಂದೇ ಕರೆಯಿಸಿಕೊಂಡಿರುವ ಜಾರಕಿಹೊಳಿ ಕುಟುಂಬ ಲಕ್ಷ್ಮೀ ಹೆಬ್ಬಾಳ್ಕರ್ ಅವರ ವೇಗದ ಬೆಳವಣಿಗೆಯನ್ನು ಸಹಿಸುತ್ತಿಲ್ಲ. ಹೀಗಾಗಿ ಇವರಿಬ್ಬರ ನಡುವಿನ ಭಿನ್ನಮತ ಬೀದಿಗೆ ಬಂದು ನಿಂತಿದೆ. ಇದಕ್ಕೆ ವೇದಿಕೆಯಾಗಿರುವುದು ಪಿಎಲ್‌ಡಿ ಬ್ಯಾಂಕ್ ಚುನಾವಣೆ. ಇದರ ಆಡಳಿತ ಚುಕ್ಕಾಣಿ ತಮಗೇ ಬೇಕೆಂದು ಎರಡೂ ಪಾಳಯದವರು ಜಿದ್ದಿಗೆ ಬಿದ್ದಿದ್ದಾರೆ. ಲಕ್ಷ್ಮೀ ಹೆಬ್ಬಾಳ್ಕರ್ಗೆ ಸಚಿವ ಡಿ.ಕೆ.ಶಿವಕುಮಾರ್ ಬೆಂಬಲವಾಗಿ ನಿಂತಿದ್ದರೆ, ಜಾರಕಿಹೊಳಿ ಸಹೋದರರು ಜಿದ್ದಿಗೆ ಬಿದ್ದಿದ್ದು, ಶಿವಕುಮಾರ್ ತಮ್ಮ ಜಿಲ್ಲೆಯ ಉಸಾಬರಿಗೆ ಬರದಂತೆ ತಡೆಯಬೇಕು. ಇಲ್ಲವಾದರೆ ರಾಜೀನಾಮೆ ಕೊಡುವುದಾಗಿ ಬೆದರಿಕೆ ಹಾಕಿದ್ದಾರೆ. ಆದರೆ, ಈ ಬೆದರಿಕೆ ಕೇವಲ ಕಾಂಗ್ರೆಸ್ ಪಕ್ಷಕ್ಕೆ ಮುಳುವಾಗುವುದಷ್ಟೇ ಅಲ್ಲ, ಸಮ್ಮಿಶ್ರ ಸರಕಾರಕ್ಕೂ ಮುಳುವಾಗುತ್ತದೆ. ಏಕೆಂದರೆ, ೧೩ ಕ್ಕೂ ಹೆಚ್ಚು ಶಾಸಕರು ರಾಜೀನಾಮೆ ನೀಡಿದರೆ ಸರಕಾರ ಬಹುಮತ ಕಳೆದುಕೊಂಡು ಬಿದ್ದು ಹೋಗಲಿದೆ. ಈ ಭೀತಿ ಎಲ್ಲರನ್ನೂ ಕಾಡುತ್ತಿದೆ. ಆದರೆ, ಜನಪ್ರತಿನಿಽಗಳು ತಮ್ಮ ಬೇಳೆ ಬೇಯಿಸಿಕೊಳ್ಳಲು ಒಂದು ಸರಕಾರಕ್ಕೆ ಸಂಚಕಾರ ತರುವುದು ಆ ಪಕ್ಷಗಳಿಗಷ್ಟೇ ಅಲ್ಲ, ರಾಜ್ಯದ ಅಭಿವೃದಿಟಛಿ ಮೇಲೂ ಕರಿಛಾಯೆಯನ್ನು ಮೂಡುವಂತೆ ಮಾಡುತ್ತದೆ. ಈ ಹಿನ್ನೆಲೆಯಲ್ಲಿ ಜನಪ್ರತಿನಿಽಗಳು ಹೊಣೆ ಅರಿತು ಹೆಜ್ಜೆಗಳನ್ನು ಇಡಬೇಕಾಗುತ್ತದೆ.

Tags

Related Articles

Leave a Reply

Your email address will not be published. Required fields are marked *

Language
Close