ಗಾದೆ – ಗಾದಿ – ತಪ್ಪಿದ ಹಾದಿ

Posted In : Others, ಕಾಲೆಳೆಯೋ ಕಾಲ

* ಕೂಸು ಹುಟ್ಟುವ ಮೊದಲೇ ಕುಲಾಯಿ ಹೊಲಿಸಿದಂತೆ
* ತಾನು ಭಂಡ, ಪರರ ನಂಬ
* ಎಮ್ಮೆ ಏರಿಗೆ ಎಳೆದರೆ ಕೋಣ ನೀರಿಗೆ ಎಳೆಯಿತು
* ಯುದ್ಧ ಕಾಲದಲ್ಲಿ ಶಸ್ತ್ರಾಭ್ಯಾಸ
* ಅಕ್ಕಿ ಮೇಲೆ ಆಸೆ, ನೆಂಟರ ಮೇಲೆ ಪ್ರೀತಿ
* ಸಂಕಟ ಬಂದಾಗ ವೆಂಕಟರಮಣ
* ಹೊಟ್ಟೆಗೆ ಹಿಟ್ಟಿಲ್ಲ, ಜುಟ್ಟಿಗೆ ಮಲ್ಲಿಗೆ
* ಬರ್ತಾ ಬರ್ತಾ ರಾಯರ ಕುದುರೆ ಕತ್ತೆಯಾಯ್ತು
* ಮಾಡೋದೆಲ್ಲ ಅನಾಚಾರ, ಮನೆ ಮುಂದೆ ಬೃಂದಾವನ
* ಚಿಂತೆ ಇಲ್ಲದವನಿಗೆ ಸಂತೇಲೂ ನಿದ್ದೆ
* ಹಾಗಲಕಾಯಿಗೆ ಬೇವಿನಕಾಯಿ ಸಾಕ್ಷಿ
* ನೆಲಕ್ಕೆ ಬಿದ್ದರೂ ಮೀಸೆ ಮಣ್ಣಾಗಲಿಲ್ಲ
* ಕೆಟ್ಟ ಮೇಲೂ ಬುದ್ಧಿ ಬರಲಿಲ್ಲ
* ಹೋದ ಪುಟ್ಟ ಬಂದ ಪುಟ್ಟ. ಪುಟ್ಟನ ಹೆಜ್ಜೆ ಕಾಣಲಿಲ್ಲ
* ಕಳ್ಳನ ಮನಸ್ಸು ಹುಳ್ಳಗೆ
* ಮನೆಗೆ ಬೆಂಕಿ ಬಿದ್ದಾಗ ಬಾವಿ ತೋಡಿದರಂತೆ
* ಕೋತಿ ತಾನು ಕೆಡೋದಲ್ದೇ ವನಾನೆಲ್ಲ ಕೆಡಿಸ್ತು
ಈ ಎಲ್ಲ ಗಾದೆ ಮಾತುಗಳನ್ನೂ ನೀವು ಕೇಳಿಯೇ ಇರುತ್ತೀರಿ.. ಇವೆಲ್ಲ ಯಾವುದೋ ಒಂದು ರಾಜಕೀಯ ಪಕ್ಷಕ್ಕೆ ಅನ್ವಯಿಸುತ್ತದೆ ಎಂದು ನಿಮಗನಿಸಿದರೆ ಅದು ನಿಜ. ರಾಜ್ಯದಲ್ಲೊಂದು ರಾಷ್ಟ್ರೀಯ ಪಕ್ಷವಿದೆ. ಹಾಗಂತ ಅದರ ಮುಖಂಡರು ಈಗಿತ್ಲಾಗೆ ಹೇಳುತ್ತಿದ್ದಾರೆ. ಅದರ ಹೆಸರು ಭಾರತೀಯ ಜನತಾ ಪಾರ್ಟಿ. ಆದರೆ ಜನತೆ ಮಾತ್ರ ಈ ನಾಲ್ಕು ವರ್ಷದಲ್ಲಿ ಆ ಪಕ್ಷವನ್ನು ಸಂಪೂರ್ಣ ಮರೆತಿದ್ದಾರೆ. ಚುನಾವಣೆ ಹತ್ತಿರ ಬರುತ್ತಿದ್ದಂತೆ ಸಮಾಧಿಯಿಂದ ಮೇಲೆ ಎದ್ದಿರುವ ಆ ಪಕ್ಷಕ್ಕೆ ಮೇಲೆ ಹೇಳಿದ ಎಲ್ಲ ಗಾದೆಗಳೂ ಒಂದಲ್ಲ ಒಂದು ರೀತಿಯಲ್ಲಿ ಹೊಂದುತ್ತದೆ. ಬೇಕಿದ್ದರೆ ಮತ್ತೊಮ್ಮೆ ಓದಿ ಖಚಿತಪಡಿಸಿಕೊಳ್ಳಿ
ಕೊನೆ ಪದರ: ಮುಂದಿನ ಸಲ ನಾವೇ ಅಧಿಕಾರಕ್ಕೆ ಬರುವುದು. ಕರ್ನಾಟಕ ಮತದಾರರ ವಿವೇಕವನ್ನು ಬಿಜೆಪಿ ತನ್ನ ಈ ಮಾತಿನಿಂದ ಅಣಕಿಸುತ್ತಿದೆ ಅನಿಸುವುದಿಲ್ಲವಾ?

One thought on “ಗಾದೆ – ಗಾದಿ – ತಪ್ಪಿದ ಹಾದಿ

Leave a Reply

Your email address will not be published. Required fields are marked *

19 − twelve =

Monday, 23.10.2017

ಶ್ರೀಹೇಮಲಂಭಿ, ದಕ್ಷಿಣಾಯನ ಶರದ್‌ಋತು, ಕಾರ್ತಿಕ ಮಾಸ, ಶುಕ್ಲಪಕ್ಷ, ಚತುರ್ಥಿ, ಸೋಮವಾರ, ನಿತ್ಯ ನಕ್ಷತ್ರ -ಅನುರಾಧಾ ಯೋಗ-ಸೌಭಾಗ್ಯ, ಕರಣ-ತೈತಲೆ.

ರಾಹುಕಾಲಗುಳಿಕಕಾಲಯಮಗಂಡಕಾಲ
07.30-09.00 01.30-03.00 10.30-12.00

Read More

 

Monday, 23.10.2017

ಶ್ರೀಹೇಮಲಂಭಿ, ದಕ್ಷಿಣಾಯನ ಶರದ್‌ಋತು, ಕಾರ್ತಿಕ ಮಾಸ, ಶುಕ್ಲಪಕ್ಷ, ಚತುರ್ಥಿ, ಸೋಮವಾರ, ನಿತ್ಯ ನಕ್ಷತ್ರ -ಅನುರಾಧಾ ಯೋಗ-ಸೌಭಾಗ್ಯ, ಕರಣ-ತೈತಲೆ.

ರಾಹುಕಾಲಗುಳಿಕಕಾಲಯಮಗಂಡಕಾಲ
07.30-09.00 01.30-03.00 10.30-12.00

Read More

Back To Top