ವಿಶ್ವವಾಣಿ

ಹೊಸರೂಪದ ಮಾರುತಿ ಸುಝುಕಿ ಸಿಯಾಝ್

ಇನ್ನೇನು ಕೆಲವೇ ದಿನಗಳಲ್ಲಿ ಮಾರುತಿ ತನ್ನ ನೆಕ್ಸಾ ಬ್ರ್ಯಾಂಡ್‌ನ ಕೆಳಗೆ  ಮಾಡಿದ್ದ ಮಾರುತಿ ಸುಝುಕಿ ಸಿಯಾಝ್‌ನ ಹೊಸ ರೂಪದ ವರ್ಶನ್‌ಅನ್ನು ಬಿಡುಗಡೆಗೊಳಿಸಲಿದೆ.

ನೆಕ್ಸಾದ ಶ್ರೇಣಿಯಲ್ಲಿ ಜನಪ್ರಿಯವಾಗಿರುವ ಸಿಯಾಝ್‌ನ ಈ ಫೇಸ್‌ಲಿಫ್‌ಟ್ ಮುಂದಿನ ತಿಂಗಳು ಮಾರುಕಟ್ಟೆಗೆ ಬರಲಿದ್ದು ಈ ಕಾರ್ ಹಿಂದಿನ ಸಿಯಾಝ್‌ಗಿಂತ ರೂಪದಲ್ಲಿ ಉತ್ತಮ ಹಾಗೂ ಬಜೆಟ್‌ನಲ್ಲೂ ಹೆಚ್ಚಿನದೆನಿಸಲಿದೆ ಅನ್ನುವುದು ಸದ್ಯದ ಮಾಹಿತಿ.

ಹೋಂಡಾ ಸಿಟಿ, ಹ್ಯೂಂಡೈ ವರ್ನಾ ಹಾಗೂ ಟೊಯೋಟಾ ಯಾರಿಸ್ ಮುಂದೆ ಸೆಡ್ಡುಹೊಡೆಯಲು ತಯಾರಿ ನಡೆಸಿರುವ ಮಾರುತಿ ಈ ಕಾರ್‌ನ ಲುಕ್‌ನಲ್ಲಿ ಕೆಲ ಬದಲಾವಣೆಗಳನ್ನು ಮಾಡಿದೆ.

ಹೊಸ  ಮುಂದಿನ ಬಂಪರ್, ಎಲ್‌ಇಡಿ ಡಿಆರ್‌ಎಲ್‌ಗಳನ್ನೊಳಗೊಂಡರೂ ಸೈಡ್ ಪ್ರೊಫೈಲ್‌ನಲ್ಲಿ ಹೆಚ್ಚಿನ ಬದಲಾವಣೆಗಳಿಲ್ಲ. 15 ಇಂಚಿನ ಚಕ್ರಗಳು ಸ್ವಲ್ಪ ಅಪ್‌ಡೇಟ್ ಆಗಿರುವ ಡಿಸೈನ್ ಹೊಂದಲಿವೆ. ಹಿಂದೆ ಕೂಡ ಬದಲಾದ ಬಂಪರ್ ಹಾಗೂ ಡಿಫ್ಲೆಕ್ಟರ್ ಸುತ್ತ ಕ್ರೋಮ್ ಗಾರ್ನಿಶ್ ಅನ್ನು ಹೊಂದಲಿವೆ.

ಈಗಿರುವ 1.4 ಲೀ ಪೆಟ್ರೋಲ್  ಎಂಜಿನ್ ಬದಲು 1.5 ಲೀ ಎಂಜಿನ್ ಬರಲಿದೆ. ಹೊಸ ಎಂಜಿನ್5-ಸ್ಪೀಡ್ ಮ್ಯಾನುವಲ್‌ನೊಂದಿಗೆ ಬರಲಿದ್ದು 4-ಸ್ಪೀಡ್ ಆಟೋಮ್ಯಾಟಿಕ್ ಆಪ್ಶನಲ್ ಆಗಿ ಸಿಗಲಿದೆ. ಅಂದ ಹಾಗೆ ಡೀಸೆಲ್  ಅನ್ನು ಮಾರುತಿ ನಿಲ್ಲಿಸುವ ಬಗ್ಗೆ ಸುಳಿವು ಸಿಕ್ಕಿದ್ದು ಹೊಸ ಸಿಯಾಝ್ 22 ಕಿಮೀ ಮೈಲೇಜ್ ನೀಡಲಿದೆ ಎನ್ನುವುದು ಕಂಪೆನಿಯ ನಂಬಿಕೆ.

ಸೆಪ್ಟೆಂಬರ್‌ನಲ್ಲಿ ಬರಲಿದೆ ಇ-ಟ್ರಾನ್ ಎಲೆಕ್ಟ್ರಿಕ್ ಕಾರ್

Fahraufnahme

ಇದೇ ಸೆಪ್ಟೆಂಬರ್ 17ರಂದು ಆಡಿ ತನ್ನ ಮೊತ್ತಮೊದಲ ಎಲೆಕ್ಟ್ರಿಕ್ ಕಾರ್ ಇ-ಟ್ರಾನ್ ಅನ್ನು ಸ್ಯಾನ್ ಫ್ರಾನ್ಸಿಸ್ಕೋ ದಲ್ಲಿ ಬಿಡುಗಡೆ ಮಾಡಲಿದೆ. ಪ್ರೀಮಿಯಂ ಲುಕ್ ಹಾಗೂ ಗ್ರಾಹಕ ಸ್ನೇಹಿ ಕಾರೊಂದನ್ನು ನಾವು ಅಂದು ಬಿಡುಗಡೆ ಮಾಡಲಿದ್ದೇವೆ, ಹಾಗೂ ಗ್ರಾಹಕರು ಅಂದೇ  ಆರಂಭಿಸಬಹುದು ಅಂದಿದೆ ಕಂಪೆನಿಯ ಪ್ರಕಟಣೆ.

ಆದರೆ ಇದು ಅಮೆರಿಕದಲ್ಲಿ ಮಾತ್ರ ಲಾಂಚ್ ಆಗಲಿದ್ದು, ಇದರ ಬೆಲೆ ಅದೇ ದಿನ ಹೊರಬೀಳಲಿದೆ. ಉಳಿದ ದೇಶಗಳಲ್ಲಿನ ಲಾಂಚ್ ಯಾವಾಗ ಎನ್ನುವುದು ಕೂಡ ಕಾದು ನೋಡಬೇಕಿದೆ.

ಈ ಕಾರ್ 4-ವೀಲ್ ಡ್ರೆûವ್‌ನ ಅನುಭವ ನೀಡಲಿದೆಯಂತೆ. 150 ಕಿಲೋವಾಟ್‌ವರೆಗಿನ ಯಾವುದೇ ಫಾಸ್‌ಟ್ ಚಾರ್ಜಿಂಗ್ ಸೆಂಟರ್‌ಗಳಲ್ಲಿ ಚಾರ್ಜ್ ಮಾಡಬಹುದು ಹಾಗೂ ಕೇವಲ 30 ನಿಮಿಷಗಳಲ್ಲಿ ಫುಲ್ ಚಾರ್ಜ್ ಆಗುತ್ತದೆ ಎಂದಿದೆ ಕಂಪೆನಿ. 2020ರ ವೇಳೆಗೆ ಒಟ್ಟು  ಇಲೆಕ್ಟ್ರಿಕ್ ಕಾರ್‌ಗಳನ್ನು ಲಾಂಚ್ ಮಾಡಲು ಇಚ್ಛಿಸಿರುವ ಕಂಪೆನಿ ಇ-ಟ್ರಾನ್ ಅನ್ನು 2019ರಲ್ಲಿ ಗ್ರಾಹಕರ ಕೈಗೆ ನೀಡಲು ಯೋಜಿಸಿದೆ. ಅಂದ ಹಾಗೆ ಅಮೆರಿಕದ 30 ಶೇಕಡಾ ವಾಹನಗಳು 2025ರ ವೇಳೆಗೆ ಇಲೆಕ್ಟ್ರಿಕ್ ಆಗಲಿವೆ ಅನ್ನೋದು ಒಂದು ಅಂದಾಜು.

ನೆಕ್ಸಾ ಕಾರ್‌ಗಳಿಗೆ ಸುಝುಕಿ ಕನೆಕ್‌ಟ್

ಸುರಕ್ಷೆ, ಭದ್ರತೆ ಹಾಗೂ ಬಳಕೆದಾರ ಸ್ನೇಹಿ ಕಾರ್ ಅನುಭವವನ್ನು ನೀಡಲು ಮಾರುತಿ ಸುಝುಕಿ ಹೊಸದೊಂದು ವ್ಯವಸ್ಥೆಯನ್ನು ತಂದಿದ್ದು ಸುಝುಕಿ ಕನೆಕ್‌ಟ್ ಎನ್ನುವ ಈ ಟೆಲೆಮ್ಯಾಟಿಕ್‌ಸ್  ಯುನಿಟ್ ಅಥವಾ ಟಿಸಿಯು ಭಾರತದಲ್ಲೇ ಅಭಿವೃದ್ಧಿಪಡಿಸಲಾದ ವ್ಯವಸ್ಥೆಯಂತೆ.

ವಾಹನದ ಟ್ರ್ಯಾಕಿಂಗ್, ಎಮರ್ಜೆನ್ಸಿ ಅಲರ್ಟ್‌ಗಳು, ಲೈವ್ ವೆಹಿಕಲ್ ಸ್ಟೇಟಸ್, ಚಾಲನಾ ನಡವಳಿಕೆ ವಿಶ್ಲೇಷಣೆ ಇತ್ಯಾದಿಗಳನ್ನು ನೀಡುವ ಈ ವ್ಯವಸ್ಥೆಯು ಒಂದು ಆ್ಯಪ್‌ಗೆ ಕನೆಕ್‌ಟ್ ಆಗಿರುತ್ತದೆ. ಇದೀಗ ಕೇವಲ ನೆಕ್ಸಾದ ಕಾರ್‌ಗಳಿಗೆ ಮಾತ್ರ ಲಭ್ಯವಿದ್ದು ಇದರ ಬೆಲೆ 9,999. 42 ನಗರಗಳಲ್ಲಿ ಹತ್ತು ಲಕ್ಷಕ್ಕೂ ಹೆಚ್ಚು ಕಿಲೋಮೀಟರ್‌ಗಳ ಟೆಸ್ಟಿಂಗ್‌ನ ನಂತರ ಈ ಸರ್ವಿಸ್ ಅನ್ನು ಲಾಂಚ್ ಮಾಡಲಾಗಿದೆ ಎನ್ನುತ್ತದೆ ಕಂಪೆನಿ. ಕನೆಕ್ಟೆಡ್  ಅನುಭವವನ್ನು ಇನ್ನೊಂದು ಮಟ್ಟಕ್ಕೆ ಕೊಂಡೊಯ್ದು, ಆ ಮೂಲಕ ಸುರಕ್ಷೆ ಮತ್ತು ಭದ್ರತೆ ಎರಡನ್ನೂ ಮಾರುತಿ ತನ್ನ ಗ್ರಾಹಕರಿಗೆ ನೀಡಲು ಬಯಸುತ್ತಿದೆಯಂತೆ.