About Us Advertise with us Be a Reporter E-Paper

Breaking Newsದೇಶಪ್ರಚಲಿತ

2+2 ಮಾತುಕತೆಯ ಪ್ಲಸ್‌ ಪಾಯಿಂಟ್ಸ್‌ ಏನು ಗೋತ್ತಾ..

ಬೆಂಗಳೂರು: ಭಾರತ ಹಾಗೂ ಅಮೆರಿಕ ನಡುವಣ 2+2 ಉನ್ನತ ಮಟ್ಟದ ಸಭೆ ಉಭಯ ದೇಶಗಳ ಸಂಬಂಧ ಬೆಸೆಯುವಲ್ಲಿ ಮಹತ್ವದ ಪಾತ್ರವಹಿಸಿದೆ. ಕೇವಲ ಸೇಹ್ನ ಸಂಬಂಧ ಮಾತ್ರವಲ್ಲದೇ ಭಾರತದ ವಿರುದ್ಧ ಷಡ್ಯಂತ್ರ ರೂಪಿಸುತ್ತಿರುವ ಚೀನಾಗೆ ತಕ್ಕ ಪಾಠ ಕಲಿಸಲು ಭಾರತಕ್ಕೆ ದೊಡ್ಡ ಮಟ್ಟದ ಸಹಾಯವಾಗಿದೆ.

ಈ ಸಭೆಯಲ್ಲಿ ಭಾರತ ಹಾಗೂ ಅಮೆರಿಕ ನಡುವೆ ಕಾಮ್‌ಕಾಸ (COMCASA) ಉಭಯ ದೇಶಗಳ ನಡುವಣ ಅತಿ ದೊಡ್ಡ ರಕ್ಷಣ ಒಪ್ಪಂದವಾಗಿದ್ದು, ಭಾರತ ಬಹುತೇಕ ನ್ಯಾಟೊ ರಾಷ್ಟ್ರವಾಗುವಂತೆ ಮಾಡಿದೆ. ಈ ಒಪ್ಪಂದ ಏನು? ಇದರಿಂದ ಭಾರತಕ್ಕಾಗುವ ಅನುಕೂಲಗಳೇನು ನೋಡೋಣ ಬನ್ನಿ…

ಕಾಮ್‌ಕಾಸ ಒಪ್ಪಂದವೇನು?
ಕಾಮ್‌ಕಾಸ ಒಪ್ಪಂದವೆಂದರೆ, ಸಂವಹನ ಸಾಮರ್ಥ್ಯ ಮತ್ತು ಭದ್ರತಾ ಒಡಂಬಡಿಕೆಬಾಗಿದ್ದು, ಈ ಒಪ್ಪಂದದ ಮೂಲಕ ಅಮೆರಿಕದಿಂದ ಭಾರತ ರಕ್ಷಣ ತಂತ್ರಜ್ಞಾನದ ನೆರವು ಪಡೆಯಲಿದೆ. ಇದರಿಂದ ಅಮೆರಿಕ ರಕ್ಷಣೆ ಹಾಗೂ ಗಡಿ ಭಾಗದಲ್ಲಿ ಭಾರತಕ್ಕೆ ಬೇಕಾದ ಅಗತ್ಯ ಮಿಲಿಟರಿ ತಂತ್ರಜ್ಞಾನ ಬೆಂಬಲ ಸಿಗಲಿದೆ.

ಈ ಒಪ್ಪಂದದ ಪ್ರಮುಖ ಅಂಶಗಳು
1. ಈ ಒಪ್ಪಂದದ ಮೂಲಕ ಅಮೆರಿಕ ಹಾಗೂ ಭಾರ ತನ್ನ ಗುಪ್ತಚರ ಇಲಾಖೆಗಳ ಪ್ರಮುಖ ಮಾಹಿತಿಗಳನ್ನು ಹಂಚಿಕೊಳ್ಳಬಹುದು.
2. ಇಂಡೋ-ಫೆಸಿಫಿಕ್ ಪ್ರದೇಶದಲ್ಲಿ ಅಮೆರಿಕ ಹಾಗೂ ಭಾರತದ ಯುದ್ಧ ನೌಕೆಗಳು ಪರಸ್ಪರ ಮಾಹಿತಿ ವಿನಿಮಯಕ್ಕೆ ಅವಕಾಶ.
3. ಇನ್ನು ಮುಂದೆ ಭಾರತ ಅಮೆರಿಕದಿಂದ ಖರೀದಿಸುವ ಎಲ್ಲ ಯುದ್ಧ ಜೆಟ್ ವಿಮಾನಗಳಲ್ಲಿ ಭದ್ರತಾ ಸಂವಹನ ಸಾಧನವನ್ನು ಒಳಗೊಂಡಿರಲಿದೆ. (ಈವರೆಗೂ ಖರೀದಿಸಿದ ಯುದ್ಧವಿಮಾನಗಳಲ್ಲಿ ಇದು ಲಭ್ಯವಿರಲಿಲ್ಲ.)
4. ಈ ಒಪ್ಪಂದದ ಮೂಲಕ ಭಾರತ ಮುಂದಿನ ದಿನಗಳಲ್ಲಿ ಅತ್ಯಾಧುನಿಕ ಗುಪ್ತಚರ ಸಾಧನ ಹಾಗೂ ಸೇನಾ ಡ್ರೋನ್ (ಸಮುದ್ರ ಕಾವಲು ಡ್ರೋನ್ ನಂತಹ)ಗಳನ್ನು ಖರೀದಿಸಬಹುದು.
5. ಅಮೆರಿಕದ ನ್ಯಾಟೋ ಸದಸ್ಯ ರಾಷ್ಟ್ರಗಳು ಸಿದ್ಧಪಡಿಸಿರುವ ಮಿಲಿಟರಿ ಲಿಂಕ್‌ಗಳನ್ನು (ಲಿಂಕ್ 16ನಂತಹ) ಇನ್ನು ಮುಂದೆ ಭಾರತ ಸುಲಭವಾಗಿ ಅಳವಡಿಸಿಕೊಳ್ಳಬಹುದು.

ರಷ್ಯಾ ಶಸ್ತ್ರಾಸ್ತ್ರ ಖರೀದಿಗಿಲ್ಲ ಅಭ್ಯಂತರ!

ಭಾರತ ಪ್ರವಾಸದಲ್ಲಿರುವ ಅಮೆರಿಕ ರಕ್ಷಣಾ ಕಾರ್ಯದರ್ಶಿ ಮೈಕ್ ಪೊಯೆಂಪ್ ಅವರು 2+2 ಸಭೆಯಲ್ಲಿ ಭಾಗವಹಿಸಿದ ನಂತರ ಮಾತನಾಡಿ, ಭಾರತವು ರಷ್ಯಾದ ಶಸ್ತ್ರಾಸ್ತ್ರ ಖರೀದಿಸಲು ಅಮೆರಿಕದಿಂದ ಯಾವುದೇ ಅಭ್ಯಂತರವಿಲ್ಲ. ಭಾರತದೊಂದಿಗೆ ನೂತನ ಒಪ್ಪಂದ ಮಾಡಿಕೊಳ್ಳುವ ಮೂಲಕ ಭಾರತಕ್ಕೆೆ ರಷ್ಯಾ ಶಸ್ತ್ರಾಸ್ತ್ರ ಖರೀದಿಗೆ ನಿರಾಕ್ಷೇಪಣ ಪತ್ರ ನೀಡಿದಂತಾಗಿದೆ ಎಂದಿದ್ದಾರೆ. ಹೀಗಾಗಿ ಭಾರತ ರಷ್ಯಾದಿಂದ ಎಸ್-400 ಕ್ಷಿಪಣಿ ಖರೀದಿಗೆ ಇದ್ದ ಅಡ್ಡಿ ದೂರವಾಗಿದೆ.

ಚೀನಾಗೆ ಶಾಕ್! 

ಭಾರತ ಹಾಗೂ ಅಮೆರಿಕದ ಈ ಒಪ್ಪಂದ ಸಹಜವಾಗಿಯೇ ಚೀನಾಗೆ ದೊಡ್ಡ ಹೊಡೆತ ನೀಡಲಿದೆ.  ಆ ಒಪ್ಪಂದದಿಂದ ಇಂಡೋ ಫೆಸಿಫಿಕ್ ಪ್ರದೇಶದಲ್ಲಿ ಭಾರತಕ್ಕೆೆ ಅಮೆರಿಕದನೆರವು ಸಿಗಲಿದ್ದು, ಇದರಿಂದ ಚೀನಾಗೆ ಸಹಜವಾಗಿ ಹಿನ್ನಡೆಯಾಗಲಿದೆ. ಇನ್ನು  ಇರಾಕ್ ಮೂಲಕ ಭಾರತ ಮಧ್ಯ ಏಷ್ಯಾ ರಾಷ್ಟ್ರಗಳ ಮಾರುಕಟ್ಟೆಯಲ್ಲಿ ವ್ಯಾಪಾರಕ್ಕೆ ಅನುಕೂಲ ಮುಂದುವರಿಯಲಿರುವುದು ಚೀನಾಗೆ ಹಿನ್ನಡೆಯಾಗಲಿದೆ. ಮತ್ತೊಂದು ಅಂಶ ಎಂದರೆ ಗಡಿಯಲ್ಲಿ ಭಾರತೀಯ ಸೇನೆಗೆ ಅಗತ್ಯ ಸಂಪರ್ಕ ವ್ಯವಸ್ಥೆೆ ಕಲ್ಪಿಸುವುದು ಹಾಗೂ ಗುಪ್ತಚರ ಮಾಹಿತಿ ಹಂಚಿಕೊಳ್ಳುವುದು ಚೀನಾದ ಕುತಂತ್ರಕ್ಕೆ ಭಾರಿ ಹಿನ್ನಡೆಯಾಗಲಿದೆ.

Tags

Related Articles

Leave a Reply

Your email address will not be published. Required fields are marked *

Language
Close