About Us Advertise with us Be a Reporter E-Paper

ಅಂಕಣಗಳು

ಸರಕಾರದ ಸೂಕ್ತ ನಡೆ

ವೈಯಕ್ತಿಕ ಕಾನೂನಿನ ನೆಪದಲ್ಲಿ ಮುಸ್ಲಿಂ ಮಹಿಳೆಯರ ಶೋಷಣೆಗೆ ಕಾರಣವಾಗಿದ್ದ  ತ್ರಿವಳಿ ತಲಾಖ್ ಪದ್ಧತಿಯನ್ನು ಶಿಕ್ಷಾರ್ಹ ಕಾನೂನಿನ ವ್ಯಾಪ್ತಿಗೆ ತರುವ ಪ್ರಯತ್ನ ತನ್ನ ಕಡೆಯ ಚರಣ ಪ್ರವೇಶಿಸಿದೆ. ಕಳೆದ ಅಧಿವೇಶನದಲ್ಲಿಯೇ ಲೋಕಸಭೆ ಈ ಕುರಿತಾದ ಮಸೂದೆಯನ್ನು ಅಂಗೀಕರಿಸಿತ್ತಾದರೂ ರಾಜ್ಯಸಭೆಯ ಅನುಮೋದನೆ ಇಲ್ಲದೇ ಅದು ಕಾನೂನಿನ ರೂಪ ಪಡೆದಿರಲಿಲ್ಲ.  ತನ್ನ ಬಹುಮತದ ಆಧಾರದ ಮೇಲೆ ಕಠಿಣ ಕಾನೂನು ರೂಪಿಸಿದ್ದ ಸರಕಾರ ರಾಜ್ಯಸಭೆಯಲ್ಲಿ ಅದಕ್ಕೆ ಅನುಮೋದನೆ ಸಿಗದು ಎಂಬುದು ತಿಳಿದ ಮೇಲೆ ಪ್ರತಿಪಕ್ಷಗಳು ಸೂಚಿಸಿದ ತಿದ್ದುಪಡಿಗಳೊಂದಿಗೆ ಮಸೂದೆಯನ್ನು ಮಂಡಿಸಲು ತೀರ್ಮಾನಿಸಿದೆ. ಇದರೊಂದಿಗೆ ಕೆಲವೇ ದಿನಗಳಲ್ಲಿ ಇದು ಕಾನೂನಿನ ರೂಪದಲ್ಲಿ ಕಾರ‌್ಯರೂಪಕ್ಕೆ ಬರಲು ಹಾದಿ ಸುಗಮವಾಗಿದೆ. ಮೂರು ಬಾರಿ ತಲಾಖ್ ಎಂದು ಹೇಳಿ ಪತ್ನಿಗೆ ವಿಚ್ಛೇದನ ನೀಡಲು ಅವಕಾಶ ಕಲ್ಪಿಸಿದ್ದ  ಮುಸ್ಲಿಂ ವೈಯಕ್ತಿಕ ಕಾನೂನನ್ನು ಸುಪ್ರೀಂ ಕೋರ್ಟು ನಿಷೇಧಿಸಿದ ಹಿನ್ನೆಲೆಯಲ್ಲಿ ಅದಕ್ಕೆ  ರೂಪಿಸುವ ಕೆಲಸ ಸರಕಾರದ ಹೊಣೆಗಾರಿಕೆಯಾಗಿತ್ತು. ರಾಜಕೀಯ ಮೀರಿ ಇದನ್ನು ಸಾಕಾರಗೊಳಿಸಲು ಇಚ್ಛಾಶಕ್ತಿಯ ಅಗತ್ಯವಿತ್ತು. ಮೋದಿ ಸರಕಾರ ಅದನ್ನು ಪ್ರದರ್ಶಿಸಿದೆ. ಈಗ ಪ್ರತಿಪಕ್ಷಗಳು ತಮ್ಮ ಜವಾಬ್ದಾರಿ ನಿಭಾಯಿಸಬೇಕಿದೆ.

Tags

Related Articles

Leave a Reply

Your email address will not be published. Required fields are marked *

Language
Close