About Us Advertise with us Be a Reporter E-Paper

ಅಂಕಣಗಳು

ಕೆಟ್ಟ ಸಾಲದ ಪೆಡಂಭೂತಕ್ಕೆ  ಬ್ಯಾಂಕುಗಳಿಗೊಂದು ಆಶಾಕಿರಣ

ವಿಶ್ಲೇಷಣೆ: ಶಶಿಧರ ಹಾಲಾಡಿ

ಕಳೆದ ಹತ್ತೆಂಟು ತಿಂಗಳುಗಳು ಬ್ಯಾಂಕುಗಳ ಪಾಲಿಗೆ ಚಳಿಜ್ವರ ತಂದ ಕಾಲ ಅಂತಲೇ ಹೇಳಬಹುದು. ಈ ಅವಧಿಯಲ್ಲಿ ಬಹುಪಾಲು ಬ್ಯಾಂಕುಗಳ ಲಾ‘ಾಂಶ ಇಳಿಕೆಯಾಗಿದೆ ಮತ್ತು ಕೆಲವು ಬ್ಯಾಂಕುಗಳು ನಷ್ಟವನ್ನು ಘೋಷಿಸಿವೆ. ಮೊನ್ನೆ ತಾನೆ ಮೊದಲ ಮೂರು ತಿಂಗಳ ಲಿತಾಂಶವನ್ನು ಘೋಷಿಸಿದ ಐಸಿಐಸಿಐ ಬ್ಯಾಂಕು ಸಪ್ಪೆ ಮೋರೆ ಹಾಕಿಕೊಂಡಿದೆ. ಕಳೆದ ವರ್ಷ ಮೊದಲ ಮೂರು ತಿಂಗಳಲ್ಲಿ (ಎಪ್ರಿಲ್-ಜೂನ್) ರು.2,049 ಕೋಟಿ ಲಾ‘ ಘೋಷಿಸಿದ್ದ  ಬ್ಯಾಂಕ್, ಈ ವರ್ಷ ಅದೇ ಅವಧಿಯಲ್ಲಿ ರು.119.55 ಕೋಟಿ ನಷ್ಟ ಅನು‘ವಿಸಿದೆ. ದೇಶದ ಅತಿ ದೊಡ್ಡ ಬ್ಯಾಂಕ್ ಆಗಿರುವ ಸ್ಟೇಟ್ ಬ್ಯಾಂಕ್‌ನ ಲಾ‘ಾಂಶದ ಗತಿಯೂ ಅಷ್ಟೇನೂ ಚೇತೋಹಾರಿಯಾಗಿಲ್ಲ. ಈ ವರ್ಷದ ಜನವರಿ – ಮಾರ್ಚ್ ಅವಧಿಯಲ್ಲಿ ಅದು ರು.7718 ಕೋಟಿ ನಷ್ಟವನ್ನು ಘೋಷಿಸಿದೆ. ಪಂಜಾಬ್ ನ್ಯಾಷನಲ್ ಬ್ಯಾಂಕ್ ಅಂತೂ, ಆ ಬ್ಯಾಂಕಿನಲ್ಲಾಗಿರುವ ವಂಚನೆ ಮೋಸಗಳಂತಹ ಮುಜುಗರ ಅನು‘ವಿಸುತ್ತಲೇ ಕಳೆದ ಅವಧಿಯಲ್ಲಿ ‘ಾರೀ ನಷ್ಟವನ್ನು ಅನು‘ವಿಸಿದೆ. ಇತರ ಹಲವು ಬ್ಯಾಂಕುಗಳ  ಕಡಿಮೆಯಾಗಿದೆ.

ಸಾಲು ಸಾಲು ಬ್ಯಾಂಕುಗಳು ನಷ್ಟ ಅನು‘ವಿಸುತ್ತಿರುವ ಈ ಸ್ಥಿತಿಗೆ ಏನು ಕಾರಣ? ಇತರ ಕೆಲವು ಕಾರಣಗಳ ಜೊತೆಯಲ್ಲಿ, ಎನ್‌ಪಿಎ (ನಾನ್ ರ್ಪಾರ್ಮಿಂಗ್ ಅಸೆಟ್‌ಸ್) ಎಂಬ ಪೆಡಂ‘ೂತ ಬ್ಯಾಂಕಿಂಗ್ ವಲಯವನ್ನು ಕಾಡುತ್ತಿದೆ ಎಂಬುದಂತೂ ಸ್ಪಷ್ಟ. ಸಾಲವನ್ನು ಕೊಟ್ಟು ಲಾ‘ ಗಳಿಸುವ ಇರಾದೆಯಲ್ಲಿರುವ ಬ್ಯಾಂಕುಗಳು, ತಾವು ಕೊಟ್ಟ ಸಾಲವು ಕಣ್ಣೆದುರೇ ಎನ್‌ಪಿಎ ಆಗುತ್ತಿರುವುದನ್ನು ನೋಡಬೇಕಾದ ಅನಿವಾರ್ಯ ಪರಿಸ್ಥಿತಿ. ಒಮ್ಮೆ ಎನ್‌ಪಿಎ ಆಯಿತೆಂದರೆ, ಆ ಸಾಲದಿಂದ ಬಡ್ಡಿಯ ರೂಪದಲ್ಲಿ ಬರಬಹುದಾದ ಆದಾಯವನ್ನು  ತೆಗೆದುಕೊಳ್ಳುವಂತೆ ಇಲ್ಲ. ಉದಾಹರಣೆಗೆ ಒಂದು ಮನೆ ಕಟ್ಟಲು ರು.50 ಲಕ್ಷ ಸಾಲ ಕೊಟ್ಟು, ತಿಂಗಳ ಕಂತುಗಳು ಆರಂ‘ವಾದ ನಂತರ, ಅನಿವಾರ್ಯ ಕಾರಣದಿಂದ ಮೂರು ತಿಂಗಳುಗಳ ಕಂತುಗಳು ವಸೂಲಾಗದೇ ಇದ್ದರೆ, ಆ ಸಾಲ ಎನ್‌ಪಿಎ ಆಗುತ್ತದೆ! ಅಂದರೆ, ಮನೆಯ ಮೌಲ್ಯ ಒಂದು ಕೋಟಿ ರುಪಾಯಿ ಇರಬಹುದು, ದಿನೇ ದಿನೇ ಆ ಮೌಲ್ಯವು ವೃದ್ಧಿಯಾಗುತ್ತಲೇ ಇರಬಹುದು, ಆದರೆ 90 ದಿನಗಳ ಅವಧಿಯಲ್ಲಿ ಬಡ್ಡಿ ಅಥವಾ ಕಂತುಗಳೂ ವಸೂಲಾಗದೇ ಉಳಿದರೆ, ತಕ್ಷಣ ಆ  ಎನ್‌ಪಿಎ!

 ಕೆಲವೇ ವಾರಗಳಲ್ಲಿ ಆ ಕಂತುಗಳು ಮತ್ತು ಬಡ್ಡಿ ವಸೂಲಾಗುವ ನಿಚ್ಚಳ ಸಾ‘್ಯತೆ ಇದ್ದರೂ, ಈ ಕ್ಷಣದಲ್ಲಿ ಪೂರ್ತಿ ಸಾಲವನ್ನು ನಷ್ಟದ ಖಾತೆ ಎಂದೇ ಪರಿಗಣಿಸಬೇಕಾದ ಅನಿವಾರ್ಯತೆ ಬ್ಯಾಂಕುಗಳಿಗಿದೆ. ಅದರಿಂದ ಬರಬಹುದಾದ ಲಾ‘ವನ್ನು ಪರಿಗಣನೆಗೆ ತೆಗೆದುಕೊಳ್ಳದೇ ಇರುವುದರಿಂದ, ನಷ್ಟಸಂ‘ಾವ್ಯತೆಯ ಹೆಚ್ಚಳ. ಅಂತಹ ಸಾಲಗಳು ಬೆಳೆದು, ಈಗ ದೊಡ್ಡ ದೊಡ್ಡ ಬ್ಯಾಂಕುಗಳೇ ನಷ್ಟ ಘೋಷಿಸುವ ಪರಿಸ್ಥಿತಿ ಬಂದಿದೆ.

ನಿಜ, ಯಾವುದೇ ಸಾಲ ಕೊಟ್ಟಾಗ ಸ್ವಲ್ಪ ಮಟ್ಟಿಗಿನ ನಷ್ಟಸಂ‘ಾವ್ಯತೆ ಇದ್ದೇ ಇದೆ.  ಎನ್‌ಪಿಎ ವಿಚಾರ ಹೇಗೆಂದರೆ, ಕೇವಲ ತೊಂಬತ್ತು ದಿವಸಗಳಲ್ಲೇ ನಷ್ಟಸಂ‘ಾವ್ಯತೆ! ಈ ಒಂದು ನಿಯಮದಿಂದಾಗಿ ಬ್ಯಾಂಕಿಂಗ್ ಉದ್ದಿಮೆ ಇಂದು ಕತ್ತಿ ಮೇಲೆ ನಡೆಯುವ ಸರ್ಕಸ್‌ನಂತಾಗಿದೆ. ಬಾಕಿ ಉಳಿದ ಕಂತು ಮತ್ತು ಬಡ್ಡಿಯನ್ನು ವಸೂಲು ಮಾಡಿ, ಎನ್‌ಪಿಎಗಳನ್ನು ಪುನಃ ಮೊದಲಿನ ಸ್ಥಿತಿಗೆ ತರಲು ವಿಲವಾದರೆ, ಆ ಸಾಲಗಳನ್ನು ಕೆಟ್ಟ ಸಾಲ (ಬ್ಯಾಡ್‌ಲೋನ್) ಎಂದೇ ಪರಿಗಣಿಸಬೇಕಾದ ಅನಿವಾರ್ಯತೆ. ಇದರಿಂದಾಗಿ ದೊಡ್ಡ ಮೊತ್ತದ ಹೊಸ ಹೊಸ ಸಾಲ ಕೊಡಲು ಹಿಂದೇಟು ಹಾಕುವಂತಹ ಪರಿಸ್ಥಿತಿ ಕೆಲವೆಡೆ  ಹಾಗಾಗಿ ದೇಶದಲ್ಲಿಯೇ ಪ್ರಥಮ ಬಾರಿಗೆ,, ಬ್ಯಾಂಕುಗಳಿಗೆ ತುಸು ಮಟ್ಟಿಗಿನ ‘ೈರ್ಯ ತುಂಬಲು ಮತ್ತು ಸಾಲಗಳು ನಷ್ಟಸಂ‘ಾವ್ಯತೆಗೆ ಒಳಗಾಗುವ ಒತ್ತಡವನ್ನು ಎದುರಿಸಲು ‘ಪ್ರಾಜೆಕ್‌ಟ್ ಸಶಕ್‌ತ್’ ನ್ನು ಜುಲೈ ಮೊದಲ ವಾರ ಘೋಷಣೆ ಮಾಡಲಾಯಿತು: 18 ಸಾರ್ವಜನಿಕ ಕ್ಷೇತ್ರದ ಬ್ಯಾಂಕುಗಳು ಮತ್ತು 6 ಖಾಸಗಿ ಬ್ಯಾಂಕುಗಳು ಒಗ್ಗೂಡಿ ಕೆಟ್ಟ ಸಾಲದ ‘ಾರ ಕಳಚಿಕೊಳ್ಳಲು ಒಂದು ಹೊಸ ಯೋಜನೆ ತಯಾರಿಸಿದವು. ಅದುವೇ ‘ಪ್ರಾಜೆಕ್‌ಟ್ ಸಶಕ್‌ತ್’. ಅದರ ಮೂಲಕ, ಎನ್‌ಪಿಎ ಸಾಲಗಳ ತ್ವರಿತ ವಸೂಲಿಗಾಗಿ  ಎಲ್ಲ ಬ್ಯಾಂಕುಗಳು ಸನ್ನಾಹ ನಡೆಸಿವೆ.

ಪ್ರಾಜೆಕ್‌ಟ್ ಸಶಕ್‌ತ್ ಎಂದರೇನು? ಪಂಜಾಬ್ ನ್ಯಾಷನಲ್ ಬ್ಯಾಂಕಿನ ಚೇರ್‌ಮನ್ ಸುನಿಲ್ ಮೆಹ್ತಾ ನೇತೃತ್ವದ ಸಮಿತಿಯು ತಯಾರಿಸಿದ ಈ ಯೋಜನೆ, ಮುಖ್ಯವಾಗಿ ಕೆಟ್ಟ ಸಾಲಗಳ (ಬ್ಯಾಡ್ ಲೋನ್) ವಸೂಲಿಗಾಗಿ ಪಂಚಶೀಲ ಕಾರ್ಯಸೂಚಿಯನ್ನು ಒಳಗೊಂಡಿದೆ. ಬ್ಯಾಂಕುಗಳು ತಮ್ಮ ಮಂಡಳಿಗಳ ಅನುಮತಿ ಪಡೆದು ಈ ಯೋಜನೆಯಲ್ಲಿ ‘ಾಗವಹಿಸಬಹುದು ಅಥವಾ ಪ್ರತ್ಯೇಕವಾಗಿ ಉಳಿಯಲೂ ಬಹುದು. ಈ ವಾರ ‘ಾರತದ 18 ಸಾರ್ವಜನಿಕ ಕ್ಷೇತ್ರದ ಬ್ಯಾಂಕುಗಳು ಮತ್ತು 6 ಖಾಸಗಿ  ‘ಪ್ರಾಜೆಕ್‌ಟ್ ಸಶಕ್‌ತ್ ’ಗೆ ಸೇರ್ಪಡೆಯಾಗುವ ಮೂಲಕ, ಎನ್‌ಪಿಎ ಸಾಲಗಳ ತ್ವರಿತ ವಸೂಲಿಗಾಗಿ ಈ ಯೋಜನೆಯ ಲಾ‘ ಪಡೆಯುವ ಹಾದಿ ತುಳಿದಿವೆ.

ಬ್ಯಾಂಕುಗಳು ನೀಡುವ ವಿವಿ‘ ಸಾಲಗಳ ಪೈಕಿ, ರು. 50 ಕೋಟಿ ತನಕದ ಸಾಲಗಳು ‘ಕೆಟ್ಟ ಸಾಲ’ವಾದ ಪಕ್ಷದಲ್ಲಿ ಬ್ಯಾಂಕಿನ ಮಟ್ಟದಲ್ಲೇ ಅದರ ವಸೂಲಿ ಪ್ರಕ್ರಿಯೆ ನಡೆಯಬೇಕು. ಇದಕ್ಕೆ 90 ದಿನಗಳ ಅವಕಾಶ. ರು.50 ಕೋಟಿಯಿಂದ ರು.500 ಕೋಟಿಯ ತನಕದ ಇಂತಹ ಸಾಲಗಳ ವಸೂಲಾತಿಗೆ 180 ದಿನಗಳ ಅವಧಿಯಲ್ಲಿ  ಕಾರ್ಯಸೂಚಿಯನ್ನು ಲೀಡ್ ಬ್ಯಾಂಕ್ ತಯಾರಿಸಲು ಅನುವಾಗುವಂತೆ ಬ್ಯಾಂಕು ಒಂದು ಇಂಟರ್-ಕ್ರೆಡಿಟರ್ ಸಾಲ ನೀಡಿಕೆದಾರರ ಆಂತರಿಕ ಒಪ್ಪಂದಕ್ಕೆ ಬರಬೇಕು. ಪರ್ಯಾಯವಾಗಿ ಇಂತಹ ಸಾಲಗಳ ವಸೂಲಿ ಕ್ರಮವನ್ನು ಎನ್‌ಸಿಎಲ್‌ಟಿ ()ಗೆ ಲೀಡ್‌ಬ್ಯಾಂಕ್ ಒಪ್ಪಿಸಬಹುದು. ರು. 500 ಕೋಟಿಗಿಂತ ಹೆಚ್ಚಿನ ಮೊತ್ತದ ಸಾಲಗಳ ವಸೂಲಾತಿಯನ್ನು ‘ಆಸ್ತಿ ವ್ಯವಸ್ಥಾಪನಾ ಸಂಸ್ಥೆ’ (ಎಎಂಸಿ) ಗೆ ಒಪ್ಪಿಸಬಹುದೆಂದು ಈ ವರದಿಯಲ್ಲಿ ಶಿಾರಸು ಮಾಡಲಾಗಿದೆ. ರಾಷ್ಟ್ರಮಟ್ಟದ ಈ ಎಎಂಸಿ ಯ ಮುಖ್ಯ ಕೆಲಸವೇ ಸಾಲ ವಸೂಲಾತಿ. ಎಎಂಸಿ ಯನ್ನು  ಪಾಲ್ಗೊಳ್ಳುವ ಬ್ಯಾಂಕುಗಳು ಮತ್ತು ವಿವಿ‘ ಸಂಸ್ಥೆಗಳು ಬಂಡವಾಳ ಹೂಡಬೇಕಾಗಿದ್ದು, ಎಎಂಸಿಯು ಸ್ವಯಂ ನಿರ್ಣಯ ತೆಗೆದುಕೊಳ್ಳುವ ಒಂದು ಸಂಸ್ಥೆಯಾಗಿರುತ್ತದೆ. ಸಾವಿರಾರು ಕೋಟಿ ಮೊತ್ತದ ಸಾಲಗಳು ವಸೂಲಾಗದೇ ಉಳಿದಾಗ, ಹೆಚ್ಚಿನ ಅಧಿಕಾರ ಇರುವ ಎಎಂಸಿಗಳು ಕಾನೂನು ಕ್ರಮ ತೆಗೆದುಕೊಂಡು ಅಂತಹ ಸಾಲಗಳ ವಸೂಲಿಯನ್ನು ತ್ವರಿತಗೊಳಿಸುತ್ತವೆ.

ಎಎಂಸಿ ತನ್ನ ಉದ್ದೇಶದಲ್ಲಿ ಯಶಸ್ವಿಯಾಗಲು ಹೇಗೆ ಸಾ‘್ಯ? ಎಎಂಸಿ, ಸಾಲ ವಸೂಲಾತಿ ಸಂಸ್ಥೆಯ ರೀತಿ ಕೆಲಸ ಮಾಡುತ್ತದೆ. ಈ ಯೋಜನೆಗೆ ಸ್ವಯಂಪ್ರೇರಿತವಾಗಿ ಸೇರಿಕೊಳ್ಳುವ ಬ್ಯಾಂಕುಗಳು ಬಂಡವಾಳ  ಎಎಂಸಿಯನ್ನು ಸ್ಥಾಪಿಸಬೇಕು. ಎಎಂಸಿಯ ವ್ಯಾಪ್ತಿಯಲ್ಲಿ, ವಿವಿ‘ ವಲಯಗಳಿಗೆ ಸಂಬಂಧಿಸಿದಂತೆ ಹಲವು ಎಐಎ್ಗಳನ್ನು (ಆಲ್ಟರ್ನೇಟಿವ್ ಇನ್ವೆಸ್‌ಟ್ಮೆಂಟ್ ಂಡ್) ಸ್ಥಾಪಿಸಲಾಗುತ್ತದೆ. ವಿವಿ‘ ಬ್ಯಾಂಕುಗಳಲ್ಲಿ ಈಗಾಗಲೇ ಒತ್ತಡಕ್ಕೆ ಒಳಗಾಗಿರುವ, ದೀರ್ಘಕಾಲ ಎನ್‌ಪಿಎ ಆಗಿರುವ ಸಾಲಗಳನ್ನು ಈ ಸಂಸ್ಥೆಗಳು ಖರೀದಿಸುತ್ತವೆ. ಖರೀದಿ ಬೆಲೆಯು, ಸುಸ್ತಿಯಾಗಿರುವ ಸಾಲದ ಶೇ.40ರ ಆಸುಪಾಸು ಇರಬಹುದು.

ಈ ರೀತಿಯ ಬಹುದೊಡ್ಡ ಮೊತ್ತದ ಸುಸ್ತಿ ಸಾಲಗಳನ್ನು ‘ಖರೀದಿಸುವ’ ಎಎಂಸಿ, ಅದನ್ನು ಸುಸ್ಥಿತಿಗೆ ತರಲು ಶ್ರಮಿಸಬಹುದು ಅಥವಾ ಸಂಪೂರ್ಣ ವಸೂಲಾತಿಗೂ ಶ್ರಮಿಸಬಹುದು. ಆದರೆ,  ಎಲ್ಲಾ ಪ್ರಕ್ರಿಯೆಗೆ ಅದಕ್ಕೆ ‘ಾರೀ ಮೊತ್ತದ ಬಂಡವಾಳ ಬೇಕು. ನಮ್ಮ ದೇಶದಲ್ಲಿ ರು.500 ಕೋಟಿಗಿಂತ ಹೆಚ್ಚಿನ ‘ಕೆಟ್ಟಸಾಲ’ಗಳ ಒಟ್ಟು ಮೊತ್ತ ಸುಮಾರು ರು. 3 ಸಹಸ್ರ ಕೋಟಿ (ಟ್ರಿಲಿಯನ್)ಮೀರುತ್ತದೆ. ಇದನ್ನು ಖರೀದಿಸಲು ಎಎಂಸಿಗೆ ಸುಮಾರು ರು.1.2 ಟ್ರಿಲಿಯನ್ ಬೇಕಾದೀತು. (ಶೇ.40 ‘ಾಗದ ಸಾಲ ವಸೂಲಾಗುತ್ತದೆ ಎಂಬ ನಿರೀಕ್ಷೆಯಲ್ಲಿ.) ಈ ನಿಟ್ಟಿನಲ್ಲಿ ಎಎಂಸಿ ಸ್ಥಾಪಿಸಲು ಅಗತ್ಯವಿರುವ ಬಂಡವಾಳವು ಸುಮಾರು ರು.1.2 ಟ್ರಿಲಿಯನ್. ಇದರ ಬಹುಪಾಲು ಮೊತ್ತವನ್ನು‘ಪ್ರಾಜೆಕ್‌ಟ್ ಸಶಕ್‌ತ್’ನಲ್ಲಿ ‘ಾಗವಹಿಸುವ ಬ್ಯಾಂಕುಗಳೇ  ಈ ಮೊತ್ತದ ಶೇ. 30ರಷ್ಟನ್ನು ವಿದೇಶಿ ಬಂಡವಾಳ ಹೂಡಿಕೆದಾರರು ‘ರಿಸಬಹುದು. ಸಹಜವಾಗಿ, ಎಎಂಸಿ ಎಂಬ ಸಾಲ ವಸೂಲಾತಿ ಸಂಸ್ಥೆಯು ಮುಂದೆ ಲಾ‘ ಗಳಿಸಿದಾಗ, ಹೂಡಿಕೆದಾರರಿಗೆ ಲಾ‘ ದೊರಕಬಹುದು ಎಂಬ ನಿರೀಕ್ಷೆ.

ಕಳೆದ ಕೆಲ ವರ್ಷಗಳಿಂದ ಜ್ವಲಂತ ಸಮಸ್ಯೆಯಾಗಿ ಕಾಡುತ್ತಿರುವ ಕೆಟ್ಟ ಸಾಲದ ಹೊರೆ ತಪ್ಪಿಸಿಕೊಳ್ಳಲು ಹೀಗೊಂದು ಪರಿಹಾರವನ್ನು ಯೋಚಿಸಿರುವ ಬೆನ್ನಲ್ಲೇ ಸಹಸ್ರಾರು ಕೋಟಿ ರು. ಜಮಾಯಿಸಬೇಕಾಗಿರುವ ಈ ಬಗೆಯ ಬೃಹತ್ ಪ್ರಯತ್ನ ಎಷ್ಟರಮಟ್ಟಿಗೆ ಇದು ಯಶಸ್ವಿಯಾಗಬಹುದು ಎಂಬ ಸಂದೇಹಗಳೂ  ಸಹಜ. ಈ ತಿಂಗಳು ಘೋಷಣೆಯಾಗಿದ್ದು, ಈಗಾಗಲೇ 24 ಬ್ಯಾಂಕುಗಳು ಸೇರ್ಪಡೆಗೊಂಡಿರುವ ‘ಪ್ರಾಜೆಕ್‌ಟ್ ಸಶಕ್‌ತ್’ ಯೋಜನೆಗೆ ಕೆಲವು ವಲಯಗಳಿಂದ ಟೀಕೆಗಳು ಬಂದಿವೆ. ಮುಖ್ಯವಾದ ಆಕ್ಷೇಪಣೆ ಎಂದರೆ, ಎಎಂಸಿ ಗಳಿಗೆ ಅಗತ್ಯವಿರುವ ‘ಾರೀ ಬಂಡವಾಳವನ್ನು ಕ್ರೋಡೀಕರಿಸುವ ಮೂಲ ಯಾವುದು ಎಂಬ ಪ್ರಶ್ನೆ. ‘ಾಗವಹಿಸುವ ಬ್ಯಾಂಕುಗಳು ಬಂಡವಾಳ ತೊಡಗಿಸಬೇಕು ಎಂಬ ನಿಯಮ ಇದ್ದರೂ, ಹೊಸ ಎಎಂಸಿ ಸ್ಥಾಪನೆಗೆ ಅಗತ್ಯವಿರುವ ಸುಮಾರು ರು.1.2 ಟ್ರಿಲಿಯನ್ ಸಂಗ್ರಹವಾದೀತೆ ಎಂಬ ಶಂಕೆ. ಇಂತಹ ಸಾಲವಸೂಲಾತಿ ಸಂಸ್ಥೆಗಳಲ್ಲಿ ಹಣ  ವಿದೇಶಿ ಹೂಡಿಕೆದಾರರು ಮುಂದೆ ಬಂದಾರೆಯೇ ಎಂಬ ಇನ್ನೊಂದು ಪ್ರಶ್ನೆ ಸಹ ಇದೆ.

ಏಕೆಂದರೆ ಈಗಾಗಲೇ ನಮ್ಮ ದೇಶದಲ್ಲಿ 26 ಎಎಂಸಿ ಸ್ವರೂಪದ ಸಂಸ್ಥೆಗಳಿವೆ. ಆದರೆ ಅವು ಸಾಲ ವಸೂಲಾತಿಯಲ್ಲಿ ಸಾಧಿಸಿರುವ ಪ್ರಗತಿ ಅಷ್ಟೇನೂ ಆಶಾದಾಯಕವಾಗಿಲ್ಲ. ಅವು ಯಶಸ್ವಿಯಾಗಿದ್ದರೆ, ಈಗ ಹೊಸದಾಗಿ ‘ಪ್ರಾಜೆಕ್‌ಟ್ ಸಶಕ್‌ತ್’ ಅವಶ್ಯಕತೆಯೇ ಇರಲಿಲ್ಲ! ‘ಾರೀ ಮೊತ್ತದ ಸಾಲಗಳ ವಸೂಲಾತಿಗೆ ಈಗ ಇರುವ ಮಾರ್ಗಸೂಚಿಗಳನ್ನೇ, ತುಸು ಆಚೆ ಈಚೆ ಮಾಡಿ ಈ ಹೊಸ ಯೋಜನೆಯನ್ನು ಸಿದ್ಧಪಡಿಸಲಾಗಿದೆ ಎಂಬ  ಕೆಲವು ವಲಯಗಳಲ್ಲಿ ವ್ಯಕ್ತವಾಗಿದೆ.

ಅದೇನಿದ್ದರೂ, ಕೇಂದ್ರ ಸರಕಾರದ ಸೂಚನೆಯ ಮೇರೆಗೆ ಘೋಷಣೆಯಾಗಿರುವ ‘ಪ್ರಾಜೆಕ್‌ಟ್ ಸಶಕ್‌ತ್’ ಬ್ಯಾಂಕಿಂಗ್ ವಲಯದಲ್ಲಿ ಒಂದು ಹೊಸ ಆಸೆಯನ್ನು ಮೂಡಿಸಿರುವುದಂತೂ ನಿಜ. ಕೊನೆಯ ಪಕ್ಷ, ‘ಾರೀ ಮೊತ್ತದ ಎನ್‌ಪಿಎ. ಸಾಲಗಳನ್ನು ಎಎಂಸಿಗೆ (ಕಡಿಮೆ ಬೆಲೆಗೆ) ಮಾರಿ, ಅಷ್ಟರ ಮಟ್ಟಿಗೆ ತಮ್ಮ ಬ್ಯಾಲೆನ್‌ಸ್ ಷೀಟನ್ನು ಮತ್ತು ಲೆಕ್ಕದ ಪುಸ್ತಕಗಳನ್ನು ಸ್ವಚ್ಛಗೊಳಿಸಿಕೊಳ್ಳುವ ಅವಕಾಶ ಬ್ಯಾಂಕುಗಳಿಗೆ ದೊರೆಯುತ್ತದೆ. ‘ಪ್ರಾಜೆಕ್‌ಟ್ ಸಶಕ್‌ತ್’ ಒದಗಿಸುವ ಹೆಚ್ಚಿನ ಕಾನೂನು ಬಲದಿಂದಾಗಿ, ಬ್ಯಾಂಕುಗಳಿಂದ ‘ಕೆಟ್ಟ ಸಾಲ’ಗಳನ್ನು  ವಸೂಲಾತಿ ಸಂಸ್ಥೆಗಳು (ಎಎಂಸಿ) ಹೆಚ್ಚಿನ ಯಶಸ್ಸನ್ನು ಗಳಿಸಿದರೆ, ಬ್ಯಾಂಕುಗಳಿಗೆ ಪರೋಕ್ಷವಾಗಿ ಸ್ಥೆ‘ರ್ಯವನ್ನು ತುಂಬಿದಂತಾಗುತ್ತದೆ. ದೊಡ್ಡ ಮೊತ್ತದ ಹೊಸ ಹೊಸ ಸಾಲಗಳನ್ನು ನೀಡಲು ‘ೈರ್ಯವೂ ದೊರೆತಂತಾಗುತ್ತದೆ. ಅದರಿಂದಾಗಿ, ಹೊಸ ಹೊಸ ಉದ್ದಿಮೆಗಳು ಸ್ಥಾಪನೆಗೊಂಡು, ದೇಶದ ಆರ್ಥಿಕ ಪ್ರಗತಿಗೆ ಅನುವು ಮಾಡಿಕೊಟ್ಟಂತಾಗುತ್ತದೆ. ಈ ನಿಟ್ಟಿನಲ್ಲಿ, ‘ಪ್ರಾಜೆಕ್‌ಟ್ ಸಶಕ್‌ತ್’ ಕಾರ್ಯನಿರ್ವಹಿಸಿ ಕೃಶಗೊಂಡಿರುವ ನಮ್ಮ ಬ್ಯಾಂಕುಗಳಿಗೆ ಉತ್ತಮ ಆರೋಗ್ಯದ ಕೊಡುಗೆ ನೀಡುತ್ತವೆಯೇ ಕಾದುನೋಡಬೇಕಿದೆ.

Related Articles

Leave a Reply

Your email address will not be published. Required fields are marked *

Language
Close