About Us Advertise with us Be a Reporter E-Paper

Breaking Newsದೇಶಪ್ರಚಲಿತ

ಅತ್ಯಾಚಾರಿ ಶಿಕ್ಷಕಣ ಬೆತ್ತಲೆ ಮೆರವಣಿಗೆ

ಹೈದರಾಬಾದ್: ಅಪ್ರಾಪ್ತ ವಯಸ್ಸಿನ ವಿದ್ಯಾರ್ಥಿನಿಯೊಬ್ಬಳನ್ನು ಅತ್ಯಾಚಾರ ಮಾಡಿದ ಆರೋಪದ ಮೇರೆಗೆ ಶಾಲಾ ಶಿಕ್ಷಕನೊಬ್ಬನನ್ನು ನಡು ರಸ್ತೆಯಲ್ಲೇ ಸಾರ್ವಜನಿಕರು ಥಳಿಸಿ, ಬೆತ್ತಲೆ ಮೆರವಣಿಗೆ ನಡೆಸಿದ್ದಾರೆ.

ಆಂಧ್ರಪ್ರದೇಶದ ಪಶ್ಚಿಮ ಗೋದಾವರಿಯ ಏಲೂರ್ ನಗರದಲ್ಲಿ ಈ ಘಟನೆ ನಡೆದಿದೆ. 38 ವರ್ಷದ ಆರೋಪಿ ಶಿಕ್ಷಕನನ್ನು ಬೆತ್ತಲೆ ಮೆರವಣಿಗೆ ಮಾಡಿದ ದೃಶ್ಯವನ್ನು ವಿಡಿಯೋ ಮಾಡಿದ್ದಾರೆ. ಇಂಗ್ಲಿಷ್ ಶಿಕ್ಷಕ ರಾಮ್‌ಬಾಬು ಎಂಬಾತ ಕಳೆದ ಎರಡು ವರ್ಷಗಳಿಂದ 10ನೇ ತರಗತಿ ವಿದ್ಯಾರ್ಥಿನಿಯೊಬ್ಬಳಿಗೆ ಲೈಗಿಂಕ ಹಿಂಸೆ ನೀಡುತ್ತಿದ್ದ ಎಂದು ತಿಳಿದು ಬಂದಿದೆ.

ಇತ್ತೀಚೆಗೆ ಈ ಅಪ್ರಾಪ್ತ ಬಾಲಕಿ ಗರ್ಭಿಣಿಯಾದಾಗ ಆರೋಪಿ ಶಿಕ್ಷಕ ಗರ್ಭಪಾತದ ಮಾತ್ರೆ ನೀಡಿದ್ದ. ವಿದ್ಯಾರ್ಥಿನಿಗೆ ತೀವ್ರ ರಕ್ತಸ್ರಾವವಾದ ನಂತರ ಅತ್ಯಾಚಾರ ಮತ್ತು ಗರ್ಭಿಣಿಯಾಗಿರುವುದು ಬೆಳಕಿಗೆ ಬಂದಿದೆ. ಈ ಕೃತ್ಯಕ್ಕೆ ಕಾರಣ ಶಿಕ್ಷಕ ಎಂದು ತಿಳಿದು ಬಂದ ನಂತರ ಪೋಷಕರು ಮತ್ತು ಗಾಮಸ್ಥರು ಆಕ್ರೋಶಭರಿತರಾಗಿ ಶಿಕ್ಷಕನನ್ನು ಬೆತ್ತಲೆಗೊಳಿಸಿ, ರಸ್ತೆಯುದ್ದಕ್ಕೂ ಥಳಿಸಿ ಮೆರವಣಿಗೆ ಮಾಡಿ ಪೊಲೀಸರಿಗೆ ಒಪ್ಪಿಸಿದ್ದಾರೆ.

ಆರೋಪಿ ವಿರುದ್ಧ ಪ್ರಕರಣ ದಾಖಲಿಸಿರುವ ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಹೆಚ್ಚಿನ ಅಂಕಗಳನ್ನುನೀಡುವ ಆಮಿಷ ಒಡ್ಡಿ ಈತ ಅತ್ಯಾಚಾರ ಎಸಗಿದ್ದಾನೆ. ಬೆತ್ತಲೆಯಾಗಿದ್ದ ಈತನಿಗೆ ಮೈ ಮುಚ್ಚಲು ಪೊಲೀಸ್ ಠಾಣೆಯಲ್ಲಿ ಅಂಗಿ ಮತ್ತು ಟವಲ್ ನೀಡಲಾಗಿದೆ. ಮಾತನಾಡಬೇಕು ಎಂದು ಕರೆಯಿಸಿ ನನ್ನನ್ನು ಸುಮಾರು 15 ಮಂದಿ ನನ್ನನ್ನು ತಳಿಸಿದ್ದಾರೆ  ಎಂದು ರಾಮ್‌ಬಾಬು ತಿಳಿಸಿದ್ದಾನೆ.

Tags

Related Articles

Leave a Reply

Your email address will not be published. Required fields are marked *

Language
Close