About Us Advertise with us Be a Reporter E-Paper

ವಿರಾಮ

ಹಗ್ಗ ಹೋಯ್ತು ಡೋಲು ಬಂತು ಡುಂಡುಂಡುಂ

ಶಶಾಂಕ್

ಮಾದೇಶದಲ್ಲಿದ್ದ ಒಂದು ಕೊಕ್ಕರೆಯು ಸಮುದ್ರ ತೀರದಲ್ಲಿ ನಡೆದಾಡುತ್ತಿದ್ದಾಗ ಪಿಷ್ಟೆ ಹಾಕಿತು. ಅಲ್ಲಿಂದ ಸ್ವಲ್ಪ ದೂರ ಹೋಗಿ ವಾಪಸಾದಾಗ ಅಲ್ಲಿ ಅದರ ಪಿಷ್ಟೆ ಇರಲಿಲ್ಲ. ‘ಏ ಸಮುದ್ರ, ನನ್ನ ಪಿಷ್ಟೆ ಎಲ್ಲಿ?’ ಎಂದು ಸಮುದ್ರವನ್ನು ಕೇಳಿತು. ‘ನನ್ನ ಅಲೆಗಳಲ್ಲಿ ಅದು ತೊಳೆದು ಹೋಯಿತು. ನೀನು ಬೇಸರಿಸಬೇಡ, ನಿನಗೆ ಒಂದು ಮೀನನ್ನು ಕೊಡುತ್ತೇನೆ’ ಎಂದು ಸಮುದ್ರವು ಕೊಕ್ಕರೆಗೆ ಒಂದು ದೊಡ್ಡ ಮೀನನ್ನು ಕೊಟ್ಟಿತು.

ಕೊಕ್ಕರೆಯು ಮೀನನ್ನು ಕೊಕ್ಕಿನಲ್ಲಿ ಕಚ್ಚಿಕೊಂಡು ಒಂದು ಮನೆಯ ಕುಳಿತಿತು. ಮೀನನ್ನು ಅಲ್ಲಿಯೇ ಬಿಟ್ಟು ಹಾರಿ ಹೋಗಿ, ವಾಪಸು ಬಂದು ನೋಡಿದರೆ ಮೀನು ಅಲ್ಲಿಲ್ಲ! ಅಲ್ಲಿ ಒಂದಿಬ್ಬರು ಯುವಕರು ಅಡುಗೆ ಮಾಡುತ್ತಿದ್ದರು. ‘ಎಲ್ಲಿ ನನ್ನ ಮೀನು?’ ಎಂದು ಕೊಕ್ಕರೆ ಕರ್ಕಶ ದನಿಯಲ್ಲಿ ಕೇಳಿತು. ‘ನಾವು ಅದನ್ನು ತೆಗೆದುಕೊಂಡಿದ್ದೇವೆ.’ ಎಂದರು ಯುವಕರು. ‘ನನಗೆ ಮೀನು ವಾಪಸು ಕೊಡಿ’ ಎಂದಿತು ಕೊಕ್ಕರೆ.

ಆ ಮೀನು ಇಲ್ಲ, ಬೇಕಾದರೆ ಒಂದು ಒಣ ಮೀನನ್ನು ಕೊಡುತ್ತೇವೆ’ ಎಂದು ಯುವಕರು ಒಂದು ಒಣ ಮೀನನ್ನು ಕೊಟ್ಟರು. ಅದನ್ನು ಕಚ್ಚಿಕೊಂಡು ಒಬ್ಬ ರೈತನ ಮನೆಯ ಹತ್ತಿರ ಹೋಗಿ, ಮೀನನ್ನು ಬೇಲಿಯ ಮೇಲೆ ಇಟ್ಟಿತು. ಸ್ವಲ್ಪ ಸಮಯದ ನಂತರ ನೋಡಿದರೆ ಆ ಒಣ ಮೀನು ಅಲ್ಲಿರಲಿಲ್ಲ.

ಕೊಕ್ಕರೆಯು ಕರ್ಕಶ ದನಿಯಲ್ಲಿ, ‘ಓ ರೈತ, ನನ್ನ ಮೀನು ಎಲ್ಲಿದೆ?’ ಎಂದು ಗದರಿತು. ‘ಅದನ್ನು ನಮ್ಮ ಮನೆಯ ಬೆಕ್ಕು ಕಚ್ಚಿಕೊಂಡು ಹೋಗಿದೆ’ ಎಂದ ರೈತ.‘ನನಗೆ ಅದನ್ನು ವಾಪಸು ಕೊಡು’ ಎಂದಿತು ಕೊಕ್ಕರೆ.

ಆ ಒಣಮೀನನ್ನು ಬೆಕ್ಕು ತಿಂದಿದೆ. ನನ್ನ ಹತ್ತಿರ ನಿನಗೆ ಇರುವುದು ಹಗ್ಗ ಮಾತ್ರ. ನಮ್ಮ ಮನೆಯ ಸುತ್ತ ಇದ್ದ ತೆಂಗಿನ ಮರದ ಸಿಪ್ಪೆಯಿಂದ ಹಗ್ಗ ಮಾಡುತ್ತಾ ಇದ್ದೇನೆ. ಬೇಕಾದರೆ ಹಗ್ಗವನ್ನು ಕೊಡುತ್ತೇನೆ’ ಎಂದು ರೈತನು, ಕೊಕ್ಕರೆಗೆ ಒಂದು ಪಿಂಡಿ ಹಗ್ಗವನ್ನು ಕೊಟ್ಟನು.

ಹಗ್ಗದ ಪಿಂಡಿಯನ್ನು ಬಾಯಲ್ಲಿ ಕಚ್ಚಿಕೊಂಡು ಕೊಕ್ಕರೆಯು ಒಂದು ಮರದ ನೆರಳಿನಲ್ಲಿ ಹಗ್ಗವನ್ನು ಅಲ್ಲಿ ಇಟ್ಟಿತು. ಸ್ವಲ್ಪ ಸಮಯ ನಂತರ ನೋಡಿದರೆ ಹಗ್ಗದ ಪಿಂಡಿ ಇರಲಿಲ್ಲ. ಅಲ್ಲೊಬ್ಬ ಮುದುಕ ಇದ್ದ. ‘ನನ್ನ ಹಗ್ಗದ ಪಿಂಡಿ ಎಲ್ಲಿ ?’ಎಂದು ಕೇಳಿತು.

ಅದನ್ನು ನಾನು ತೆಗೆದುಕೊಂಡು ಈ ಎಲ್ಲಾ ಡೋಲುಗಳನ್ನು ಮಾಡಿದ್ದೇನೆ’ ಎಂದ ಮುದುಕ. ಅವನ ಎದುರು ಸಣ್ಣ ದೊಡ್ಡ ಡೋಲುಗಳಿದ್ದವು.

ನನಗೆ ಹಗ್ಗದ ಪಿಂಡಿ ಕೊಡು’ ಎಂದಿತು ಕೊಕ್ಕರೆ. ಆಗ ಆ ಮುದುಕ, ಹಗ್ಗದ ಬದಲು ಎರಡು ಡೋಲುಗಳನ್ನು ಕೊಟ್ಟ.

ಆ ಎರಡೂ ಡೋಲುಗಳನ್ನು ಕೊಕ್ಕಿನಲ್ಲಿ ಕಚ್ಚಿಕೊಂಡು ಹಾರಿದ ಕೊಕ್ಕರೆಯು, ಒಂದು ತೆಂಗಿನ ಮರದ ಮೇಲೆ ಕುಳಿತುಕೊಂಡಿತು. ತನ್ನ ಕೊಕ್ಕಿನಿಂದ ಡೋಲುಗಳಿಗೆ ಬಡಿದು ನೋಡಿತು. ಸಣ್ಣ ಡೋಲಿಗೆ ಬಡಿದಾಗ ಟಪ್’ ಎಂಬ ಸದ್ದಾಯಿತು. ದೊಡ್ಡ ಡೋಲಿಗೆ ಬಡಿದಾಗ ‘ಡುಂ ಡುಂ ಡುಂ’ ಎಂಬ ಸದ್ದಾಯಿತು. ಎರಡೂ ಡೋಲುಗಳನ್ನು ಬಡಿಯುತ್ತಾ ಕೊಕ್ಕರೆ ಆನಂದಪಟ್ಟಿತು.

ಅದೇ ಸಮಯದಲ್ಲಿ ಆ ಮರದ ಕೆಳಗೆ ಒಂದು ಹೆಂಗಸು ಬರುತ್ತಿದ್ದಳು. ಕೊಕ್ಕರೆಯು ಎರಡೂ ಡೋಲುಗಳನ್ನು ಕುಟ್ಟುತ್ತಾ ಶಬ್ದ ಮಾಡುತ್ತಿದ್ದುದನ್ನು ಕೇಳಿ ಆಶ್ಚರ್ಯ ಪಟ್ಟಳು. ‘ನನಗೂ ಆ ಡೋಲುಗಳಿದ್ದಿದ್ದರೆ, ಹಾಡುಹಾಡುತ್ತಾ ಡೋಲು ಬಡಿಯುತ್ತಿದ್ದೆ’ ಎಂದುಕೊಂಡಳು. ಆ ಸಮಯಕ್ಕೆ ಸರಿಯಾಗಿ ಗಾಳಿ ಬೀಸಿ, ಕೊಕ್ಕರೆ ಕುಳಿತಿದ್ದ ಒಣ ತೆಂಗಿನ ಕೆಳಗೆ ಬಿತ್ತು. ಅದರ ಜೊತೆಗೆ ಕೆಳಗೆ ಬಿದ್ದ ಕೊಕ್ಕರೆಯ ತಲೆಯ ಮೇಲೆ ಎರಡೂ ಡೋಲುಗಳು ಬಿದ್ದು, ಕೊಕ್ಕರೆ ಸತ್ತು ಹೋಯಿತು. ಆ ಹೆಂಗಸು ಎರಡೂ ಡೋಲುಗಳನ್ನು ತೆಗೆದುಕೊಂಡು, ಅದನ್ನು ಬಡಿಯುತ್ತಾ ಹಾಡುಹೇಳುತ್ತಾ ತನ್ನ ಮನೆಗೆ ಹೋದಳು.

(ಮಾಲ್ದೀವ್‌ಸ್ ದೇಶದ ಜಾನಪದ ಕಥೆ)

Tags

Related Articles

Leave a Reply

Your email address will not be published. Required fields are marked *

Language
Close