About Us Advertise with us Be a Reporter E-Paper

Breaking Newsದೇಶಪ್ರಚಲಿತ

ಡಾಲರ್‌ ಎದುರು ರೂಪಾಯಿ ದರ 70.1ಕ್ಕೆ ಕುಸಿತ

ದೆಹಲಿ: ಇತಿಹಾಸದಲ್ಲೇ ಮೊದಲ ಬಾರಿ ಅಮೆರಿಕನ್ ಡಾಲರ್ ಎದುರು ರೂಪಾಯಿ ದರವು 70.1ಕ್ಕೆ ಕುಸಿದಿದೆ. ಡಾಲರ್ ಮೌಲ್ಯವು 70 ರೂಪಾಯಿ ಗಡಿ ದಾಟಿದೆ.

ಒಂದು ಕಡೆ ಭಾರತದ ಷೇರು ಮಾರುಕಟ್ಟೆಯ ಮೌಲ್ಯ ಏರಿಕೆಯಾಗುತ್ತಿದೆ; ಇನ್ನೊಂದೆಡೆ ಡಾಲರ್ ಎದುರು ರೂಪಾಯಿ ಮೌಲ್ಯ ಕುಸಿಯುತ್ತಿದೆ. ಮಂಗಳವಾರದ ವಹಿವಾಟಿನಲ್ಲಿ ಅಮೆರಿಕನ್ ಡಾಲರ್ ಎದುರು ರೂಪಾಯಿ ದರವು 70.1ಕ್ಕೆ ಕುಸಿದಿದೆ.  ಈ ವರ್ಷ ಡಾಲರ್ ಎದುರು ರೂಪಾಯಿ ಮೌಲ್ಯ ಶೇ. 8ರಷ್ಟು ಕುಸಿತ ಕಂಡಿದೆ.

ಡಾಲರ್ ಎದುರು ರೂಪಾಯಿ ಮೌಲ್ಯ ಕುಸಿತಕ್ಕೆ ವಿವಿಧ ಕಾರಣಗಳನ್ನ ಅಂದಾಜಿಸಲಾಗಿದೆ. ಟರ್ಕಿ ದೇಶದ ಕರೆನ್ಸಿ ಬಿಕ್ಕಟ್ಟು ಪ್ರಮುಖ ಕಾರಣವೆನ್ನಲಾಗಿದೆ. ಇದರ ಜೊತೆಗೆ ವಿಶ್ವದ ಕೆಲ ದೇಶಗಳ ಕರೆನ್ಸಿ ಎದುರು ಡಾಲರ್ ಮೌಲ್ಯ ಗಣನೀಯ ಪ್ರಮಾಣದಲ್ಲಿ ವೃದ್ಧಿಸಿಕೊಂಡಿದ್ದೂ ರೂಪಾಯಿಯ ಕಳಪೆ ಪ್ರದರ್ಶನಕ್ಕೆ ಇನ್ನೊಂದು ಕಾರಣವಾಗಿದೆ.

Tags

Related Articles

Leave a Reply

Your email address will not be published. Required fields are marked *

Language
Close