About Us Advertise with us Be a Reporter E-Paper

ಗುರು

ದೇಹ ನಶ್ವರ ಆತ್ಮ ಅಮರ

ಶಶಿಧರ ಹಾಲಾಡಿ

ನಂಬಿಕೆ ಮತ್ತು ಮೂಢನಂಬಿಕೆಗಳ ನಡುವಿನ ಅಂತರ, ಹಲವು ಬಾರಿ  ಸೂಕ್ಷ್ಮ, ಸಂಕೀರ್ಣ. ಧರ್ಮ, ಕರ್ಮ, ಆತ್ಮದ ವಿಚಾರಕ್ಕೆ ಬಂದಾಗಲಂತೂ, ಈ ಪರಿಕಲ್ಪನೆಯು ನಿಗೂಢ ಆಯಾಮವನ್ನೇ ಪಡೆವುದು ಹಲವರ ಅನು ಭವಕ್ಕೆ ಬಂದಿರಬಹುದು. ಮಾನವನ ವಿಕಸನ ಇತಿಹಾಸದಲ್ಲಿ ಧರ್ಮ, ಪೂಜಾಚರಣೆ ಮತ್ತು ಕ್ರಮಬದ್ಧ ಪೂಜೆ ರೂಪುಗೊಳ್ಳುವ ಮೊದಲೇ ಆತ್ಮ, ದೈವ, ದೈವೀಶಕ್ತಿಗಳ ಕುರಿತು ಮಾನವನಿಗೆ ಭಯ-ಭಕ್ತಿ ಮೂಡಿರಬೇಕು. ಪುರಾತತ್ವ ಉತ್ಪನ್ನಗಳು, ತತ್ವಜ್ಞಾನಿಗಳ ಚಿಂತನೆಗಳು ಸಹ ಅದನ್ನು ಸೂಚಿಸುತ್ತವೆ. ತರ್ಕಬದ್ಧವಾಗಿ ಯೋಚಿಸಲು ಕುಟುಂಬವನ್ನು ಕಟ್ಟುವ ಪ್ರಕ್ರಿಯೆಯನ್ನು ರೂಢಿಸಕೊಳ್ಳಲು ತೊಡಗಿದ ಮಾನವನಿಗೆ, ‘ಸಾವು’  ವಿದ್ಯಾಮಾನ ಬಹುವಾಗಿ ಕಾಡಿತ್ತು. ಆದಿಮಾನವನ ಆತ್ಮೀಯರು, ಸಹಾಯ ಮಾಡುವವರು, ಮಕ್ಕಳು ಸತ್ತಾಗ, ಆತ ಬಹುವಾಗಿ ಚಿಂತಿಸಿ, ಗೊಂದಲಕ್ಕೆ ಬಿಟ್ಟಿರಲೇಬೇಕು. ನಿನ್ನೆ ತಾನೆ ಮಾತನಾಡಿಕೊಂಡಿದ್ದ ಜೀವ, ಇಂದು ಇನ್ನಿಲ್ಲವಾದರೆ ಆ ದೇಹದ ಆತ್ಮ ಅಥವಾ ಶಕ್ತಿ ಎಲ್ಲಿಗೆ ಹೋಯಿತು ಎಂಬ ಜಿಜ್ಞಾಸೆ ಪುರಾತನ ಮಾನವನನ್ನು ಕಾಡಿದಂತೆ, ಆಧುನಿಕ ಚಿಂತಕರನ್ನೂ, ತತ್ವ ಜ್ಞಾನಿಗಳನ್ನೂ ಸಮನಾಗಿ ಕಾಡಿದೆ.

ದೇಹಕ್ಕೆ ಚೈತನ್ಯ ನೀಡುವ ಶಕ್ತಿಯೇ ಆತ್ಮ ಎಂಬ ಪರಿಕಲ್ಪನೆ ರೂಪು ಗೊಂಡದ್ದು ಇಂದು ನಿನ್ನೆಯೇನಲ್ಲ;  ವರ್ಷಗಳ ಹಿಂದೆಯೇ. ದೇಹವನ್ನು ಅಗಲಿದ ಆತ್ಮ ಪುನಃ ಹಿಂತಿರುಗಬಹುದೆಂಬ ಆಶಯ ಮಾನವನಲ್ಲಿತ್ತು. ಪುರಾತನ ಈಜಿಪ್‌ಟ್ನಲ್ಲಿ, ಸುಮಾರು 5 ಸಾವಿರ ವರ್ಷಗಳ ಹಿಂದೆಯೇ ಮೃತರ ದೇಹವನ್ನು ಕಾಪಾಡಲು ಪಿರಮಿಡ್ ಕಟ್ಟಲು ಆರಂಭಿಸಿದರು. ಅಪಾರ ಶ್ರಮ ವಹಿಸಿ ಕಟ್ಟುವ ಪಿರಮಿಡ್‌ನ ಗರ್ಭವು, ಮೃತರ ದೇಹವನ್ನು ಕೂಡಿಟ್ಟು, ಮುಂದೊಂದು ದಿನ ಅಗಲಿದ ಆತ್ಮ ಹಿಂದಿರುಗಿದಾಗ ಆ ದೇಹ ಸುಸ್ಥಿತಿಯಲ್ಲಿರಲಿ ಎಂದು ಅವರು ಆಶಿಸಿರಬೇಕು. ಇತ್ತ ನಮ್ಮ ನಾಡಿನಲ್ಲೂ ನೂತನ ಶಿಲಾಯುಗದ ಮತ್ತು ಕಬ್ಬಿಣ  ದೊರಕಿದ ಕಲ್ಗೋರಿಗಳಲ್ಲಿ, ದೇಹವನ್ನು ಹೂಳು ವಾಗ, ಮೃತ ವ್ಯಕ್ತಿಗೆ ಪಯೋಗಿಸುತ್ತಿದ್ದ ಪಾತ್ರ-ಪಗಡಗಳನ್ನು ಸೇರಿಸಿ ಹೂಳುವ ಪದ್ದತಿಯೂ ಇದನ್ನು ಹೋಲುತ್ತದೆ. ಸಿಂಧೂ ಸಂಸ್ಕೃತಿಯ ಅಪರೂಪಗಳು ದೊರಕಿದ ಚಿತ್ತಾರಗಳು, ರಚನರಗಳು ಆತ್ಮದ ಪಯಣ ವನ್ನು ಬಿಂಬಿಸುತ್ತವೆ. ಭಾರತೀಯ ಸಂಸ್ಕೃತಿಯ ನಂತರ ಬೆಳೆದು ಬಂದ ಪುನರ್ಜನ್ಮದ ಸಿದ್ದಾಂತದ ಮೂಲಗಳನ್ನು ಸಿಂಧೂ ಸಂಸ್ಕೃತಿಯಲ್ಲಿ ಹುಡುಕಲು ಸಾಧ್ಯ.

ಆತ್ಮವು ಮುಂದೊಂದು ದಿನ ಪುನರವತರಿಸುತ್ತದೆ ಎಂಬ ಆಶಯವೇ, ಮುಂದೆ ಪುನರ್ಜನ್ಮ ಎಂಬ ಪರಿಕಲ್ಪನೆ ಜನಿಸಲು ಸೇತುವಾಗಿರಬಹುದು. ಪುನರ್ಜನ್ಮದ  ತತ್ವ ಜ್ಞಾನಿಗಳು, ವೇದಾಂತಿಗಳು, ಕವಿಗಳು, ಚಿಂತಕರು ಸಾಕಷ್ಟು ಚಿಂತನೆ ನಡೆಸಿದ್ದಾರೆ. ಭಾರತೀಯ ಪರಂಪರೆಯಲ್ಲಿ ಪುನರ್ಜನ್ಮ ಮತ್ತು ಕರ್ಮಸಿದ್ಧಾಂತ ಹಾಸುಹೊಕ್ಕಾಗಿದೆ. ಭಾರತೀಯ ಜೀವನಪದ್ದತಿ, ಒಳಿತು-ಕೆಡುಕುಗಳ ಮಾನದಂಡ, ಪುಣ್ಯ ಪಾಪಗಳ ಸ್ವರೂಪ, ಮನುಷ್ಯ ಸದ್ಗತಿ ಇವೆಲ್ಲವೂ ಪುನರ್ಜನ್ಮದ ಪರಿಕಲ್ಪನೆಯೊಂದಿಗೆ ತುಳುಕು ಹಾಕಿಕೊಂಡಿವೆ. ಹಾಗೆ ನೋಡಹೋದರೆ, ಭಾರತೀಯರಿಗೆ ಪುನರ್ಜನ್ಮದ ವಿಚಾರ ಚಿರಪರಿಚಿತ; ಈಚಿನ ಕೆಲವು ದಶಕಗಳ ಆಧುನಿಕ ವಿದ್ಯಾಭ್ಯಾಸ ಪದ್ದತಿಯ ಪ್ರಭಾವದಿಂದ ಪುರಾತನ ನಂಬಿಕೆಗಳ ಬುಡ ಅಲುಗಿದ್ದು ನಿಜವಾದರೂ, ಪಾಪ-ಪುಣ್ಯ, ಕರ್ಮ, ಆತ್ಮ,  ಮೊದಲಾದ ಪದಗಳ ಪರಿಚಯವಿಲ್ಲದ ಭಾರತೀಯನೇ ಇಲ್ಲವೆನ್ನ ಬಹುದು. ಜಗತ್ತಿನ ಇತರ ನಾಗರಿಕತೆ ಮತ್ತು ಜನಾಂಗಳು ಸಹ ತಮ್ಮದೇ ರೀತಿಯ ಪುನರ್ಜನ್ಮದ ಪರಿಕಲ್ಪನೆಯನ್ನು ಹೊಂದಿದ್ದವು. ಪುರಾತನ ಈಜಿಪ್‌ಟ್ ಸಂಸ್ಕೃತಿಯಲ್ಲಿ ಪುನರ್ಜನ್ಮದ ಕಲ್ಪನೆಯು ಬದಲಾಗಿದ್ದು, ಆ ಕುರಿತು ಅವರು ರಚಿಸಿದ ಅಪಾರ ವಾಸ್ತು ರಚನೆಗಳು, ಪದ್ದತಿಗಳು ಲಭ್ಯವಾಗಿರುವುದರಿಂದ ಪುನರ್ಜನ್ಮದ ಕುರಿತ ಅತಿ ಪ್ರಾಚೀನ ಅಧಿಕೃತ ಪುರಾವೆ ದೊರೆಯುವುದು ಅಲ್ಲಿಯೇ. ದೇಹವನ್ನು ಮಮ್ಮಿಗಳ ಸ್ವರೂಪದಲ್ಲಿಟ್ಟು, ರಾಸಾಯನಿಕ ಪದಾರ್ಥ ಲೇಪಿಸುವುದು ಅವರ ಪದ್ದತಿ. ಆ  ಪುನರ್ಜನ್ಮಗೊಂಡಾಗ ಉಪಯೋಗವಾಗಲಿ ಎಂದೇ, ಪರಿಶ್ರಮದಿಂದ ಮಮ್ಮಿಗಳನ್ನು ರಚಿಸಿ, ಪಿರಮಿಡ್‌ಗಳನ್ನು ನಿರ್ಮಿಸುತ್ತಿದ್ದ ಸಂಸ್ಕೃತ ಅದಾಗಿತ್ತು.

ಭೂತ, ದೆವ್ವ, ಪುನರ್ಜನ್ಮದ ಕುರಿತ ಅತಿರಂಜಿತ ಕಥನಗಳ ಜಗತ್ತಿ ನಾದ್ಯಂತ ಇರುವುದು ಒಂದು ವಾಸ್ತವ. ಆ ಕಥನಗಳ ತಳಪಾಯವಾಗಿ, ಪುರಾತನ ಸಂಸ್ಕೃತಿಗಳು ಸಾಮಾನ್ಯವಾಗಿ ನಂಬಿದ್ದ ಆತ್ಮ, ಪುನರ್ಜನ್ಮದ ನಂಬಿಕೆಗಳು ಆಗಿರುವುದನ್ನು ಸುಲಭವಾಗಿ ಗುರುತಿಸಬಹುದು. ಮಾನವನು ನಾಗರಿಕತೆಯ ನಾಗಾಲೋಟದಲ್ಲಿ ಸಾಕಷ್ಟು ಕ್ರಮಿಸಿದ್ದರೂ, ಈ ರೀತಿಯ ಪುರಾತನ ನಂಬಿಕೆಗಳು ಇಂದಿಗೂ ಅಲ್ಲಲ್ಲಿ ತಲೆ ಎತ್ತಿ, ಹೊಸ ಹುಟ್ಟು  ಯತ್ನಿಸುತ್ತಿರುವುದು ಚೋದ್ಯವೇ ಸರಿ.

Tags

Related Articles

Leave a Reply

Your email address will not be published. Required fields are marked *

Language
Close