About Us Advertise with us Be a Reporter E-Paper

ಅಂಕಣಗಳು

ಪ್ರತ್ಯೇಕತೆಯ ಧ್ವನಿ ಅಡಗಲಿ

ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯಕ್ಕಾಗಿ ಹೋರಾಟ ನಡೆಸುತ್ತಿರುವುದು ಸರಿಯಲ್ಲ. ಅಖಂಡ ಕರ್ನಾಟಕಕ್ಕಾಗಿ ಎಷ್ಟೆಲ್ಲಾ ಹೋರಾಟ ನಡೆದಿವೆ, ಮಹನಿಯರ ತ್ಯಾಗ-ಬಲಿದಾನಗಳೇನು ಎಂಬುದನ್ನು ಹೋರಾಟಗಾರರು ಅರ್ಥ ಮಾಡಿಕೊಳ್ಳಬೇಕಿದೆ. ಅಭಿವೃದ್ಧಿ ವಿಷಯಕ್ಕೆ ಚರ್ಚಿಸಲು ಬಹಳಷ್ಟು ವೇದಿಕೆಗಳಿದ್ದು, ಅಲ್ಲಿ ಅದರ ಚರ್ಚೆ ಮಾಡಬೇಕಿದೆ. ಅದನ್ನು ಬಿಟ್ಟು ಹೋರಾಟಕ್ಕಿಳಿಯಬಾರದು. ಪ್ರತ್ಯೇಕತೆಯ ಧ್ವನಿ ಅಡಗಬೇಕಿದೆ. ಮಠಾಧೀಶರೂ  ನಾಡು-ನುಡಿ ಇಬ್ಭಾಗ ಮಾಡಲು ಪ್ರತ್ಯಕ್ಷವಾಗಲಿ-ಪರೋಕ್ಷವಾಗಲಿ ಬೆನ್ನೆಲುಬಾಗಬಾರದು. ಉತ್ತರ ಕರ್ನಾಟಕ ಭಾಗ ಅಭಿವೃದ್ಧಿಯಲ್ಲಿ ಹಿಂದೆ ಬಿದ್ದಿದೆ ಎಂಬುದರಲ್ಲಿ ಎರಡು ಮಾತಿಲ್ಲ. ಇದಕ್ಕೆ ಕಾರಣಗಳು ಹಲವು. ಕಡಿಮೆ ಅನುದಾನ, ಮೀಸಲಿಟ್ಟ ಅನುದಾನದ ಸದ್ವಿನಿಯೋಗದ ಕೊರತೆ, ರಾಜಕಾರಣಿಗಳ ಇಚ್ಛಾಶಕ್ತಿಯ ಕೊರತೆ ಮುಂತಾದ ಅಂಶಗಳು. ಪ್ರತ್ಯೇಕತೆಯ ಕೂಗು ನಿನ್ನೆ-ಮೊನ್ನೆಯದಲ್ಲ, ಹಿಂದೆಯೂ ಕೇಳಿಬಂದಿತ್ತು. ಅಂತಹ ಸಂದರ್ಭದಲ್ಲಿ ಒಂದಷ್ಟು ಘೋಷಣೆಗಳನ್ನು ಮಾಡಿದಾಕ್ಷಣ ಪರಿಸ್ಥಿತಿ ತಣ್ಣಗಾಗಿತ್ತು. ಈಗಲೂ ಸರಕಾರ ಒಂದಷ್ಟು ಯೋಜನೆಗಳನ್ನು ಪ್ರಕಟಿಸಿದೆ. ಇದು ಮೂಗಿಗೆ ತುಪ್ಪ ಸವರಿದಂತಾಗಬಾರದು.  ಹೋರಾಟ ತೀವ್ರಗೊಂಡಾಗ ರಾಜಕೀಯ ಪಕ್ಷಗಳು ತಮ್ಮ ಬೇಳೆ ಬೇಯಿಸಿಕೊಳ್ಳಲು ಮುಂದಾಗುವುದು ಇಂದು ಸಾಮಾನ್ಯವಾಗಿದೆ. ಆದರೆ ಉತ್ತರ ಕರ್ನಾಟಕದ ಜನರ ಭಾವನೆಗಳ ಜತೆ ರಾಜಕೀಯ ಪಕ್ಷಗಳು ಚೆಲ್ಲಾಟವಾಡಬಾರದು. ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಮತಗಳಿಕೆ ದೃಷ್ಟಿಯಿಂದ ಹೋರಾಟವನ್ನು ಜೀವಂತವಾಗಿಡುವ ಪ್ರಯತ್ನ ಸಲ್ಲದು.

Tags

Related Articles

Leave a Reply

Your email address will not be published. Required fields are marked *

Language
Close