About Us Advertise with us Be a Reporter E-Paper

ಅಂಕಣಗಳು

ಕೊಡಲಿ ಹಿಡಿದು ಕ್ಷತ್ರಿಯರನ್ನು ಸಂಹರಿಸಿದ ಪರಶುರಾಮನ ಕತೆ

- ಸುಧಾ ಮೂರ್ತಿ

ಒಂದಾನೊಂದು ಕಾಲದಲ್ಲಿ ಜಮದಗ್ನಿ ಎಂಬ ಋಷಿ ಕಾಡಿನ ಮಧ್ಯೆ ಮನೆ ಮಾಡಿಕೊಂಡು ಜೀವಿಸುತ್ತಿದ್ದ. ಹೆಚ್ಚೇನೂ ಅವಶ್ಯಕತೆಗಳಿಲ್ಲದ ಸರಳ ಜೀವನ ಅವನದಾಗಿತ್ತು. ಒಳ್ಳೆಯ ವಿದ್ವಾಂಸನಾಗಿದ್ದರೂ ಜಮದಗ್ನಿ ಶೀಘ್ರಕೋಪಿ.
ಅದೇ ರಾಜ್ಯದ ರಾಜಕುಮಾರಿ ಎಂಬಾಕೆ ರಾಜಪುತ್ರಿಗೆ ಒಪ್ಪುವಂತೆ ಒಳ್ಳೆ ವೈಭವದ ಜೀವನ ನಡೆಸುತ್ತಿದ್ದಳು. ತುಂಬ ರೂಪವತಿ ಅಷ್ಟೇ, ಬುದ್ಧಿವಂತೆ ಕೂಡ. ಒಂದು ದಿನ ಗೆಳತಿಯರೊಂದಿಗೆ ರೇಣುಕಾ ಹತ್ತಿರದ ಕಾಡಿಗೆ ವಿಹಾರಕ್ಕೆಂದು ಹೋದಳು. ಅದು ಜಮದಗ್ನಿ ವಾಸವಾಗಿದ್ದ ಸ್ಥಳ. ವಿಧಿಯಾಟದಂತೆ ರಾಜಕುಮಾರಿ ಋಷಿಯ ನಿವಾಸಕ್ಕೆ ಭೇಟಿ ಇತ್ತಳು. ನಿರಾಡಂಬರತ್ವ ಹೊಡೆದು ಕಾಣುವಂತಿದ್ದರೂ ಶಾಂತವಾಗಿ, ತೃಪ್ತನಾಗಿ ಇದ್ದ ಮುನಿಯ ವ್ಯಕ್ತಿತ್ವ ಆಕೆಯನ್ನು ಸೆಳೆಯಿತು. ಜಮದಗ್ನಿಯಿಂದ ಕಣ್ಣು ತೆಗೆಯದಾದ ರೇಣುಕ ವಿಹಾರ ಮುಗಿಸಿ ಅರಮನೆಗೆ ತೆರಳಿದಳು ಮತ್ತು ತನ್ನನ್ನು ಜಮದಗ್ನಿ ಋಷಿಗೆ ಮದುವೆ ಮಾಡಿಕೊಡು ಎಂದು ಕೇಳಿದಳು.

ಮಗಳ ಅಭಿಲಾಷೆ ಪೂರೈಸಲು ಕಾತರನಾಗಿದ್ದ ರಾಜ ಕೂಡಲೇ ಋಷಿಯ ನಿವಾಸಕ್ಕೆ ತನ್ನ ಜನರನ್ನು ಕಳುಹಿಸಿ ವಿವಾಹದ ಪ್ರಸ್ತಾಪ ಇಟ್ಟ. ಆ ದರೆ ಮೊದಲು ಜಮದಗ್ನಿ ಅದನ್ನು ಒಪ್ಪಿಕೊಳ್ಳಲಿಲ್ಲ. ‘ನಾನೊಬ್ಬ ಆಶ್ರಮವಾಸಿ. ಅರಣ್ಯದಲ್ಲಿ ವಾಸ. ಸದಾ ಆಧ್ಮಾತ್ಮಿಕ ಯೋಚನೆಗಳಲ್ಲಿ ಮಗ್ನನಾಗಿರುತ್ತೇನೆ. ರೇಣುಕೆಯಾದರೋ ಒಬ್ಬ ಸುಂದರ ತರುಣಿ. ಅರಮನೆಯಲ್ಲಿ ಸುಖವಾಗಿ ಬೆಳೆದವಳು. ನನ್ನ ಪರಿಸರಕ್ಕೆ ಹೊಂದಿಕೊಳ್ಳುವುದು ಆಕೆಗೆ ಕಷ್ಟವಾಗುತ್ತದೆ, ಬೇಡ’ ಎಂದ. ರಾಜಕುಮಾರಿ ಹಟ ಹಿಡಿದಳು. ಋಷಿಯನ್ನು ಸ್ವತಃ ಕಂಡು ಮಾತನಾಡಿದಳು. ನಿಮ್ಮನ್ನೇ ವರಿಸಬೇಕು ಎಂಬುದು ನನ್ನ ನಿರ್ಧಾರ. ಅದರಿಂದ ನಾನು ಕದಲುವುದಿಲ್ಲ. ನಿಮ್ಮಂತೆ ನಾನೂ ಸರಳ ಜೀವನ ನಡೆಸಬಲ್ಲೆ…ಎಂದೆಲ್ಲ ವಿವರಿಸಿದಳು.

ಭೋಗಭಾಗ್ಯಗಳ ಜೀವನ ತ್ಯಜಿಸಿ ವಿರಕ್ತರಂತೆ ಇರುವುದುನೀನು ಹೇಳುತ್ತಿರುವಷ್ಟು ಸುಲಭವಲ್ಲ, ಬೇಡ ರೇಣುಕಾ. ಇಲ್ಲಿ ಬಂದಮೇಲೆ ನೀನು ಕಳೆದುಕೊಂಡ ವೈಭವಗಳ ಬಗ್ಗೆ ಹಳಹಳಿಸಿದರೆ ನನಗೆ ಕೆಡುಕೆನ್ನಿಸಬಹುದು. ಕೋಪದಲ್ಲಿ ನಾನೇದರೂ ಶಾಪ ಕೊಡಬಹುದು. ಅದೆಲ್ಲಾ ಯಾಕೆ? ಈ ಬಗೆಯ ಅಹಿತಕಾರಿ ಘಟನಾವಳಿ ನಾವು ಮದುವೆಯಾಗದಿರುವುದೇ ಒಳ್ಳೆಯದು ಎಂದು ನನಗೆ ಈಗಲೂ ಅನ್ನಿಸುತ್ತದೆ ಎಂಬ ಜಮದಗ್ನಿಯ ನುಡಿಗಳನ್ನು ರೇಣುಕಾ ಕಿವಿ ಮೇಲೆ ಹಾಕಿಕೊಳ್ಳದೇ ತನ್ನ ತೀರ್ಮಾನಕ್ಕೆ ಆತುಕೊಂಡಳು. ನನ್ನ ಗತವನ್ನು ಸಂಪೂರ್ಣ ಮರೆಯುತ್ತೇನೆ. ನಮ್ಮ ವಿವಾಹ ನೆರವೇರಿದ್ದೇ ಆದರೆ ಹಿಂದಿನ ಬದುಕನ್ನು ಕ್ಷಣಮಾತ್ರವೂ ನಾನು ನೆನಪಿಸಿಕೊಳ್ಳುವುದಿಲ್ಲ ಎಂದು ನಿಮಗೆ ವಾಗ್ದಾನ ನೀಡುತ್ತೇನೆ ಎಂದಳು. ನಿರುಪಾಯನಾಗಿ ಋಷಿ ಆಕೆಯ ಕೈಹಿಡಿಯಲು ಒಪ್ಪಿದ.

ಅವರಿಬ್ಬರ ವಿವಾದ ಶೀಘ್ರವಾಗಿ ನೆರವೇರಿತು. ಸಂಯಮಪೂರ್ಣ ನಿರಾಡಂಬರದ ಬದುಕು ಸಾಗಿಸಲು ಸಿದ್ಧಳಾಗಿ ಪತಿಯ ನಿವಾಸಕ್ಕೆ ಬಂದಿಳಿದಳು. ಚೆನ್ನಾಗಿ ಹೊಂದಿಕೊಂಡು ಅವರು ಸಂಸಾರ ನಡೆಸಿದರು. ಮಕ್ಕಳೂ ಆದರು. ಹಿರಿಯವನ ಹೆಸರು ಪರಶುರಾಮ. ತಂದೆತಾಯಿಗಳಿಗೆ ತುಂಬ ವಿಧೇಯನಾಗಿ ನಡೆದುಕೊಳ್ಳುತ್ತಿದ್ದ ಸತ್ಪುತ್ರ ಅವನು. ಆದರೆ ತಂದೆಯ ಶೀಘ್ರಕೋಪವನ್ನು ಮಾತ್ರ ಬಳುವಳಿಯಾಗಿ ಪಡೆದಿದ್ದ.

ಒಮ್ಮೆ ಹತ್ತಿರದ ನದಿಯಿಂದ ನೀರು ತರುತ್ತಿರುವಾಗ ಒಬ್ಬ ಗಂಧರ್ವ ಮತ್ತು ಅಪ್ಸರೆ ಗಾಢಾಲಿಂಗನದಲ್ಲಿ ಇದ್ದುದನ್ನು ಋಷಿಪತ್ನಿ ನೋಡಿದಳು. ಆಕೆಗೆ ಹೇಗೋ ಅನ್ನಿಸಿತು. ಜಮದಗ್ನಿಯ ಕೈ ಹಿಡಿದು, ಆಶ್ರಮವಾಸಿಯಾಗಲು ಬಂದಾಗ ಇಂಥ ವಿಷಯಗಳಿಂದ ದೂರ ಕೈಗೊಂಡಿದ್ದ ಪ್ರತಿಜ್ಞೆಯನ್ನು ರೇಣುಕಾ ಮರೆತುಬಿಟ್ಟಳು. ಆ ಜೋಡಿಯ ಸುಖ, ಸಂತೋಷ, ಅವರ ವೈಭವದ ಜೀವನವನ್ನೇ ಅವಳ ಮನಸ್ಸು ಧ್ಯಾನಿಸಿತು. ಅವರ ಕುರಿತು ಮತ್ಸರವೂ ಹುಟ್ಟಿತು. ಆಕೆ ಮನೆ ಸೇರುವ ವೇಳೆಗೆ ಜಮದಗ್ನಿಗೆ ಎಲ್ಲವೂ ಅರ್ಥವಾಗಿತ್ತು. ತನ್ನ ತಪೋಶಕ್ತಿಯಿಂದ ರೇಣುಕೆಯ ಮನದಲ್ಲಾದ ತೊಳಲಾಟ ಮತ್ತು ಅದರಿಂದ ಆಕೆಯ ಪ್ರತಿಜ್ಞೆ ಭಂಗಗೊಂಡಿದ್ದು ತಿಳಿದು ಕ್ರುದ್ಧನಾದ. ಪತ್ನಿ ಒಳಗೆ ಪ್ರವೇಶಿಸುತ್ತಲೇ, ‘ಏಕೆ ಹೀಗೆ ಮಾಡಿದೆ ರೇಣುಕಾ? ನಾನು ಇದೆಲ್ಲ ಬೇಡ ಎಂದು ಮೊದಲೇ ನಿನ್ನ ಈ ತಪ್ಪಿಗೆ ಎಂಥ ಉಗ್ರ ಶಿಕ್ಷೆ ಕಾದಿದೆ ಎಂಬ ಅರಿವಾದರೂ ನಿನಗಿದೆಯೇ?’ ಎಂದು ಕೂಗಾಡಿದ.

ತನ್ನ ಮಕ್ಕಳೆಲ್ಲರನ್ನು ಒಬ್ಬೊಬ್ಬರಾಗಿ ಕರೆದು ‘ನಿಮ್ಮ ತಾಯಿಯನ್ನು ಕೊಲ್ಲಿ’ ಎಂದು ಆಜ್ಞಾಪಿಸಿದ. ಅವರ್ಯಾರೂ ಅದಕ್ಕೆ ಮುಂದಾಗದೆ ನಿರಾಕರಿಸಿದರು. ಅಷ್ಟರಲ್ಲಿ ಎಲ್ಲಿಗೋ ಹೋಗಿದ್ದ ಪರಶುರಾಮ ಮನೆಗೆ ಬಂದ. ವಾತಾವರಣ ಉದ್ವಿಗ್ನಗೊಂಡಿದ್ದನ್ನು ಗ್ರಹಿಸಿ, ಏನಾಯಿತು ಎಂದು ತಂದೆಯನ್ನು ಕೇಳಿದ. ನನಗೊಂದು ಸಹಾಯ ಮಾಡುತ್ತೀಯಾ ಮಗನೇ ಎಂಬ ವಿನಂತಿ ತಂದೆಯ ಬಾಯಿಂದ ಬರುತ್ತಿದ್ದ ಹಾಗೇ, ಹೇಳಪ್ಪ, ಹೇಳು, ಚಾಚೂ ತಪ್ಪದೆ ಮಾಡುತ್ತೇನೆಂದು ವಚನ ನೀಡುತ್ತೇನೆ ಎಂದ.

‘ನಿನ್ನ ತಾಯಿಯನ್ನು ಕೊಲ್ಲು’ ಎಂಬ ಆಣತಿ ಬಂತು.
ನಿರುಪಾಯನಾಗಿ ಪರಶುರಾಮ ಅದನ್ನು ನೆರವೇರಿಸಿದ.
ಮಗನ ವಿಧೇಯತೆಯಿಂದ ತೀವ್ರ ಸಂತುಷ್ಟನಾದ ಜಮದಗ್ನಿ, ತಾಯಿಯನ್ನು ಕೊಲ್ಲುವ ಕೆಲಸ ಪರಶುರಾಮನಿಗೆ ಎಷ್ಟೊಂದು ದುಃಖ ತಂದಿರಬಹುದು ಎಂಬುದನ್ನು ಬಲ್ಲೆ ಎಂದು ಮಗನನ್ನು ಸಮಾಧಾನಿಸಿ, ಏನು ಬೇಕೋ ಕೇಳಿಕೋ ಎಂದ. ನನ್ನ ತಾಯಿಯನ್ನು ಮರಳಿ ಬದುಕಿಸು ಹಾಗೂ ಈ ದುರಂತದ ನೆನಪನ್ನು ಆಕೆಯ ಮನದಿಂದ ಅಳಿಸಿಹಾಕು ಕೇಳಿಕೊಂಡ ಆ ಧೀರ ಮಗ. ಮುಗುಳ್ನಕ್ಕ ತಂದೆ ಆ ಕ್ಷಣ ಪತ್ನಿ ರೇಣುಕಾಗೆ ಜೀವದುಂಬಿದ.
ಎಷ್ಟೋ ವರ್ಷ ಕಳೆದ ಬಳಿಕ, ಜಮದಗ್ನಿ ತಪ್ಪಸ್ಸನ್ನು ಆಚರಿಸುತ್ತಿರುವಾಗ, ಅಲ್ಲಿನ ರಾಜ ಕಾರ್ತವೀರ್ಯಾರ್ಜುನ ಆಶ್ರಮಕ್ಕೆ ಬಂದ. ಕ್ರೂರಿ ಎಂದು ಹೆಸರಾಗಿದ್ದ ಮಹಾರಾಜನನ್ನು ಋಷಿ ಗೌರವದಿಂದಲೇ ಕಂಡು, ರಾಜಪರಿವಾರಕ್ಕೆ ಅಗತ್ಯವಿದ್ದ ಎಲ್ಲ ಸೌಕರ್ಯ ಒದಗಿಸಿದ.

ಕಾರ್ತವೀರ್ಯಾರ್ಜುನನಿಗೆ ಅಚ್ಚರಿಯೆನಿಸಿತು. ಈ ಆಶ್ರಮದಲ್ಲಿ ರಾಜವೈಭವದ ಆತಿಥ್ಯ ನೀಡಲು ನಿಮಗೆ ಹೇಗೆ ಸಾಧ್ಯವಾಯಿತು ಎಂದು ಋಷಿಯನ್ನು ಕೇಳಿದ. ತನ್ನ ಕಾಮಧೇನುವಿನ ಮಗಳಾದ ನಂದಿನಿ ಹಸು ಇರುವುದು, ಬಯಸಿದ್ದನ್ನೆಲ್ಲಾ ಅದು ಕರುಣಿಸುವುದು ಎಲ್ಲವನ್ನೂ ಜಮದಗ್ನಿ ರಾಜನಿಗೆ ಹೇಳಬೇಕಾಯಿತು. ಐಷಾರಾಮಿ ವಸ್ತುಗಳಿಗಾಗಿ ಪ್ರತಿ ದಿನ ತಾವು ಆ ಪವಿತ್ರ ಗೋವನ್ನು ಬೇಡಿಕೊಳ್ಳುವುದಿಲ್ಲ, ಬಹಳ ಸರಳ ಜೀವನವಾದ್ದರಿಂದ ಅದರ ಅಗತ್ಯ ತಮಗಿಲ್ಲ. ಆದರೆ ಎಂದಾದರೊಮ್ಮೆ ಹೀಗೆ ಅನಿರೀಕ್ಷಿತ ಅತಿಥಿಗಳು ಬಂದಾಗ ನಂದಿನಿ ನೆರವಿಗೆ ಬರುತ್ತಾಳೆ. ನನ್ನ ಕುಟೀರದಲ್ಲಿ ನಿಮಗೆ ಏನೇ ಮೆಚ್ಚುಗೆಯಾಗಿದ್ದರೂ ಅದು ನನ್ನ ಸ್ವಂತದ್ದಲ್ಲ, ನಂದಿನಿ ನೀಡಿದ್ದು ಎಂದು ಎಲ್ಲವನ್ನೂ ಅರುಹಿಬಿಟ್ಟ,
ಆಹಾ! ಇದೆಲ್ಲ ಎಷ್ಟು ಚೆನ್ನಾಗಿದೆ, ನೀವು ನಂದಿನಿಯಂತಹ ಗೋವಿನ ಒಡೆಯರಾಗಿರುವುದು ಅದ್ಭುತ ಎಂದೆಲ್ಲ ಎದುರಿಗೆ ಜಮದಗ್ನಿಯನ್ನು ಹೊಗಳಿದರೂ ಆ ರಾಜನ ಮನಸ್ಸು ನಂದಿನಿಯ ಮೇಲೆ ನೆಟ್ಟಿತು. ಅದನ್ನು ತಾನು ಪಡೆಯಬೇಕೆಂಬ ದುರಾಸೆ ಅವನಲ್ಲಿ ಉಂಟಾಯಿತು. ಹೇಗೆ ಇದನ್ನು ಸಾಧಿಸುವುದು ಎಂದು ಹಂಚಿಕೆ ಹಾಕಿದ. ಯುದ್ಧಗಳು ನಡೆಯುವಾಗ ಇಂತಹದೊಂದು ಹಸು ಬಳಿಯಿದ್ದರೆ ತನ್ನ ಸೈನ್ಯಕ್ಕೆ ಎಷ್ಟೊಂದು ಉಪಯುಕ್ತ ಎಂದು ಯೋಚಿಸಿದ.

ತಡಮಾಡದೆ ಋಷಿಯನ್ನು ಕೇಳಿಯೂಬಿಟ್ಟ. ನಂದಿನಿಯನ್ನು ತನಗೆ ನೀಡಿದ್ದಕ್ಕೆ ಬದಲಾಗಿ, ತನ್ನನ್ನು ಯಾವಾಗ, ಏನು ಬೇಕಾದರೂ ಕೇಳಬಹುದು. ತಾನು ಎಲ್ಲ ಕೋರಿಕೆಗಳನ್ನೂ ನೆರವೇರಿಸಲು ಬದ್ಧ ಎಂದು ಘೋಷಿಸಿದ.
ತಲೆಯಲ್ಲಾಡಿಸಿ ಅಸಮ್ಮತಿ ಸೂಚಿಸಿದ ಜಮದಗ್ನಿ, ನಂದಿನಿ ಪವಿತ್ರವಾದ ಗೋವು. ಅದು ಆಶ್ರಮವಾಸಿಯಾಗಿರಬೇಕೇ ವಿನಃ ಎಲ್ಲೆಂದರಲ್ಲಿ ಅದನ್ನು ಕರೆದೊಯ್ದು ಐಹಿಕ ಸುಖಭೋಗ ದೊರಕಿಸಿಕೊಳ್ಳಲು ಬಳಸುವಂತಿಲ್ಲ ಎಂದು ರಾಜನಿಗೆ ತಿಳಿಹೇಳಿದ. ರಾಜನ ಮೇಲೆ ಇದು ಯಾವ ಪರಿಣಾಮವನ್ನೂ ಬೀರಲಿಲ್ಲ. ಬದಲಾಗಿ ಈ ನಿರಾಕರಣೆಯಿಂದ ಅಸಂತುಷ್ಟನಾಗಿ ಅರಮನೆಗೆ ಮರಳಿದ. ಕುಟುಂಬದ ಸದಸ್ಯರಿಗೆ ನಂದಿನಿಯ ಕುರಿತು, ಅದಕ್ಕಿರುವ ಶಕ್ತಿ ಕುರಿತು ವಿವರವಾಗಿ ತಿಳಿಸಿದ. ಸೇನಾಪತಿಗಳೊಂದಿಗೆ, ಮಕ್ಕಳೊಂದಿಗೆ ಸಮಾಲೋಚಿಸಿದ. ಎಲ್ಲರಿಗೂ ಹೇಗಾದರೂ ಮಾಡಿ, ಯಾವುದೇ ಬೆಲೆ ಬೇಕಾದರೂ ತೆತ್ತು ನಂದಿನಿಯನ್ನು ತಮ್ಮ ವಶಕ್ಕೆ ತೆಗೆದುಕೊಳ್ಳಬೇಕೆಂಬ ದುರ್ಬುದ್ಧಿ ಉಂಟಾಯಿತು.
ಮಿಂಚಿನ ಕಾರ್ಯಾಚರಣೆ ನಡೆಸಿದ ರಾಜನ ಸೇನೆ ಜಮದಗ್ನಿಯ ಕುಟೀರದ ಮೇಲೆ ಆಕ್ರಮಣ ನಡೆಸಿ ಹಸುವನ್ನು ಕದ್ದು ಹೊತ್ತೊಯ್ದರು. ತಡೆಯಲು ಬಂದ ಋಷಿಯನ್ನು ಕೊಂದರು.

ಅಂದೂ ಸಹ ಪರಶುರಾಮ ಆಶ್ರಮದಲ್ಲಿರಲಿಲ್ಲ. ಎಲ್ಲಿಗೋ ಹೊರಗೆ ಹೋಗಿದ್ದ. ಮನೆಗೆ ವಾಪಸಾದರೆ ತಾಯಿ ದುಃಖಾರ್ತಳಾಗಿದ್ದಳು. ಸಹೋದರರೆಲ್ಲ ಶೋಕದಲ್ಲಿದ್ದರು. ಕಾರ್ತವೀರ್ಯಾರ್ಜುನ ತಮ್ಮ ಮನೆಗೆ ಬಂದುದು, ಒಳ್ಳೆಯ ಆತಿಥ್ಯ ಸ್ವೀಕರಿಸಿದ್ದು, ಆದರೆ ಕೃತಜ್ಞತೆಯ ಲವಲೇಶವೂ ಇಲ್ಲದ ಬಲಪ್ರಯೋಗ ಮಾಡಿ ಪವಿತ್ರ ಗೋವನ್ನು ಕದ್ದುಕೊಂಡು ಹೋಗಿದ್ದು, ಎಲ್ಲಕ್ಕಿಂತ ಮಿಗಿಲಾಗಿ ತನ್ನ ತಂದೆಯನ್ನು ಕೊಂದದ್ದು ಕೇಳಿ ಅವನಿಗೆ ರಕ್ತ ಕುದಿಯಿತು. ತನ್ನ ಆಯುಧವಾದ ಕೊಡಲಿ ಹಿಡಿದು ಕಾರ್ತವೀರ್ಯಾರ್ಜುನ ಮೇಲೆ ಸೇಡು ತೀರಿಸಿಕೊಳ್ಳಲು ಹೊರಟ. ಸಾತ್ವಿಕರಾದ ಋಷಿಮುನಿಗಳ ಮೇಲೆ ಹಲ್ಲೆ ಮಾಡುವ, ಅವರನ್ನು ಅನಾದರದಿಂದ ಕಾಣುವ ಗರ್ವಿಷ್ಠ, ಕ್ರೂರಿ ಕ್ಷತ್ರಿಯ ರಾಜರುಗಳನ್ನೆಲ್ಲ ಮಾರ್ಗಮಧ್ಯೆ ಎಂದು ಪ್ರತಿಜ್ಞೆ ಮಾಡಿದ.

ಜಮದಗ್ನಿಯ ಹಿರಿಯ ಮಗ, ಪರಶುರಾಮ ಅಂದರೆ ಕೊಡಲಿಧಾರಿ ಎಂದು ನಾಮಾಂಕಿತನಾದದ್ದು ಹೀಗೆ. ಪ್ರಪಂಚವನ್ನು ಸುತ್ತಿ 16 ದಂಡಯಾತ್ರೆ ಕೈಗೊಂಡ. ಎಲ್ಲ ರಾಜರುಗಳನ್ನು ಮಣಿಸಿ ಅವರ ಧನ-ಕನಕ-ವಜ್ರ-ವೈಢೂರ್ಯಗಳನ್ನೆಲ್ಲ ತಂದು ಆಶ್ರಮವಾಸಿಗಳಿಗೆ ಹಂಚಿದ. ವಿಷ್ಣುವಿನ ಭೂಮಿಯ ಮೇಲಿನ ಹತ್ತು ಅವತಾರಗಳಲ್ಲಿ ಒಂದು, ಇನ್ನೊಂದಕ್ಕೆ ಮುಖಾಮುಖಿಯಾಗುವ ಪ್ರಸಂಗವೂ ಇದೆ. ಸ್ವತಃ ತಾನೇ ಒಂದು ಅವತಾರವಾದ ಪರಶುರಾಮ, ಸೀತಾಸ್ವಯಂವರದ ವೇಳೆ ವಿಷ್ಣುವಿನ ಮತ್ತೊಂದು ಅವತಾರವಾದ ಶ್ರೀರಾಮನನ್ನು ಸಂಧಿಸುತ್ತಾನೆ. ಶಿವಧನಸ್ಸನ್ನು ಎತ್ತಿ, ಹೂಡಿದವರಿಗೆ ಮಗಳು ಜಾನಕಿಯನ್ನು ಮದುವೆ ಮಾಡಿಕೊಡುವೆ ಎಂದು ಜನಕ ಮಹಾರಾಜ ಏರ್ಪಡಿಸಿದ್ದ ಸ್ವಯಂವರಕ್ಕೆ ಪರಶುರಾಮನೂ ಹೋಗುತ್ತಾನೆ. ಆದರೆ ಅಲ್ಲಿ ತೇಜಃಪುಂಜ ಕ್ಷತ್ರಿಯ ತರುಣನೊಬ್ಬ ಗೆಲುವು ಸಾಧಿಸಿದಾಗ ತನ್ನ ನಂತರದ ಅವತಾರವಾದ ಶ್ರೀರಾಮ ಜನಿಸಿಬಂದಿರುವುದು ಅವನಿಗೆ ವೇದ್ಯವಾಗುತ್ತದೆ. ‘ಇನ್ನು ತನ್ನ ಕೆಲಸ ಮುಗಿಯಿತು, ನಿರ್ಗಮನ ಸನ್ನಿಹಿತವಾಗಿದೆ’ ಎಂದು ಮನಗಂಡ ಪರಶುರಾಮ ಮಹೇಂದ್ರ ಪರ್ವತದಲ್ಲಿ ತಪಸ್ಸನ್ನು ಆಚರಿಸಲು ತೆರಳುತ್ತಾನೆ. ಕಲ್ಕ್ಯಾವತಾರ: ಭಗವಾನ್ ವಿಷ್ಣುವಿನ ಕೊನೆಯ ಅವತಾರ ಒಂದು ಶ್ವೇತ ಕುದುರೆಯಾದ, ಕಲ್ಕಿ ಹೇಳಲಾಗುತ್ತದೆ. ಪ್ರಪಂಚದಲ್ಲಿ ಕೆಡುಕು, ಒಳಿತನ್ನು ಮೆಟ್ಟಿ ನಿಂತು ವಿನಾಶ ತಂದಾಗ ಬಿಳಿಗುದುರೆ ಸವಾರನಾಗಿ, ಕೈಯಲ್ಲಿ ಕತ್ತಿ ಹಿರಿದು ವಿಷ್ಣು ಬರುತ್ತಾನೆ. ಲೋಕದ ಎಲ್ಲ ಕತ್ತಲೆ ಕಳೆದು ಹೊಸ ಯುಗ ಸೃಷ್ಟಿಸುತ್ತಾನೆ ಎಂಬ ನಂಬಿಕೆಯಿದೆ.

ಕೊಡಲಿ ಹಿಡಿದು ಕ್ಷತ್ರಿಯರನ್ನು ಸಂಹರಿಸಿದ ಪರಶುರಾಮನ ಕತೆ

ಒಂದಾನೊಂದು ಕಾಲದಲ್ಲಿ ಜಮದಗ್ನಿ ಎಂಬ ಋಷಿ ಕಾಡಿನ ಮಧ್ಯೆ ಮನೆ ಮಾಡಿಕೊಂಡು ಜೀವಿಸುತ್ತಿದ್ದ. ಹೆಚ್ಚೇನೂ ಅವಶ್ಯಕತೆಗಳಿಲ್ಲದ ಸರಳ ಜೀವನ ಅವನದಾಗಿತ್ತು. ಒಳ್ಳೆಯ ವಿದ್ವಾಂಸನಾಗಿದ್ದರೂ ಜಮದಗ್ನಿ ಶೀಘ್ರಕೋಪಿ.
ಅದೇ ರಾಜ್ಯದ ರಾಜಕುಮಾರಿ ಎಂಬಾಕೆ ರಾಜಪುತ್ರಿಗೆ ಒಪ್ಪುವಂತೆ ಒಳ್ಳೆ ವೈಭವದ ಜೀವನ ನಡೆಸುತ್ತಿದ್ದಳು. ತುಂಬ ರೂಪವತಿ ಅಷ್ಟೇ, ಬುದ್ಧಿವಂತೆ ಕೂಡ. ಒಂದು ದಿನ ಗೆಳತಿಯರೊಂದಿಗೆ ರೇಣುಕಾ ಹತ್ತಿರದ ಕಾಡಿಗೆ ವಿಹಾರಕ್ಕೆಂದು ಹೋದಳು. ಅದು ಜಮದಗ್ನಿ ವಾಸವಾಗಿದ್ದ ಸ್ಥಳ. ವಿಧಿಯಾಟದಂತೆ ರಾಜಕುಮಾರಿ ಋಷಿಯ ನಿವಾಸಕ್ಕೆ ಭೇಟಿ ಇತ್ತಳು. ನಿರಾಡಂಬರತ್ವ ಹೊಡೆದು ಕಾಣುವಂತಿದ್ದರೂ ಶಾಂತವಾಗಿ, ತೃಪ್ತನಾಗಿ ಇದ್ದ ಮುನಿಯ ವ್ಯಕ್ತಿತ್ವ ಆಕೆಯನ್ನು ಸೆಳೆಯಿತು. ಜಮದಗ್ನಿಯಿಂದ ಕಣ್ಣು ತೆಗೆಯದಾದ ರೇಣುಕ ವಿಹಾರ ಮುಗಿಸಿ ಅರಮನೆಗೆ ತೆರಳಿದಳು ಮತ್ತು ತನ್ನನ್ನು ಜಮದಗ್ನಿ ಋಷಿಗೆ ಮದುವೆ ಮಾಡಿಕೊಡು ಎಂದು ಕೇಳಿದಳು.

ಮಗಳ ಅಭಿಲಾಷೆ ಪೂರೈಸಲು ಕಾತರನಾಗಿದ್ದ ರಾಜ ಕೂಡಲೇ ಋಷಿಯ ನಿವಾಸಕ್ಕೆ ತನ್ನ ಜನರನ್ನು ಕಳುಹಿಸಿ ವಿವಾಹದ ಪ್ರಸ್ತಾಪ ಇಟ್ಟ. ಆ ದರೆ ಮೊದಲು ಜಮದಗ್ನಿ ಅದನ್ನು ಒಪ್ಪಿಕೊಳ್ಳಲಿಲ್ಲ. ‘ನಾನೊಬ್ಬ ಆಶ್ರಮವಾಸಿ. ಅರಣ್ಯದಲ್ಲಿ ವಾಸ. ಸದಾ ಆಧ್ಮಾತ್ಮಿಕ ಯೋಚನೆಗಳಲ್ಲಿ ಮಗ್ನನಾಗಿರುತ್ತೇನೆ. ರೇಣುಕೆಯಾದರೋ ಒಬ್ಬ ಸುಂದರ ತರುಣಿ. ಅರಮನೆಯಲ್ಲಿ ಸುಖವಾಗಿ ಬೆಳೆದವಳು. ನನ್ನ ಪರಿಸರಕ್ಕೆ ಹೊಂದಿಕೊಳ್ಳುವುದು ಆಕೆಗೆ ಕಷ್ಟವಾಗುತ್ತದೆ, ಬೇಡ’ ಎಂದ. ರಾಜಕುಮಾರಿ ಹಟ ಹಿಡಿದಳು. ಋಷಿಯನ್ನು ಸ್ವತಃ ಕಂಡು ಮಾತನಾಡಿದಳು. ನಿಮ್ಮನ್ನೇ ವರಿಸಬೇಕು ಎಂಬುದು ನನ್ನ ನಿರ್ಧಾರ. ಅದರಿಂದ ನಾನು ಕದಲುವುದಿಲ್ಲ. ನಿಮ್ಮಂತೆ ನಾನೂ ಸರಳ ಜೀವನ ನಡೆಸಬಲ್ಲೆ…ಎಂದೆಲ್ಲ ವಿವರಿಸಿದಳು.

ಭೋಗಭಾಗ್ಯಗಳ ಜೀವನ ತ್ಯಜಿಸಿ ವಿರಕ್ತರಂತೆ ಇರುವುದುನೀನು ಹೇಳುತ್ತಿರುವಷ್ಟು ಸುಲಭವಲ್ಲ, ಬೇಡ ರೇಣುಕಾ. ಇಲ್ಲಿ ಬಂದಮೇಲೆ ನೀನು ಕಳೆದುಕೊಂಡ ವೈಭವಗಳ ಬಗ್ಗೆ ಹಳಹಳಿಸಿದರೆ ನನಗೆ ಕೆಡುಕೆನ್ನಿಸಬಹುದು. ಕೋಪದಲ್ಲಿ ನಾನೇದರೂ ಶಾಪ ಕೊಡಬಹುದು. ಅದೆಲ್ಲಾ ಯಾಕೆ? ಈ ಬಗೆಯ ಅಹಿತಕಾರಿ ಘಟನಾವಳಿ ನಾವು ಮದುವೆಯಾಗದಿರುವುದೇ ಒಳ್ಳೆಯದು ಎಂದು ನನಗೆ ಈಗಲೂ ಅನ್ನಿಸುತ್ತದೆ ಎಂಬ ಜಮದಗ್ನಿಯ ನುಡಿಗಳನ್ನು ರೇಣುಕಾ ಕಿವಿ ಮೇಲೆ ಹಾಕಿಕೊಳ್ಳದೇ ತನ್ನ ತೀರ್ಮಾನಕ್ಕೆ ಆತುಕೊಂಡಳು. ನನ್ನ ಗತವನ್ನು ಸಂಪೂರ್ಣ ಮರೆಯುತ್ತೇನೆ. ನಮ್ಮ ವಿವಾಹ ನೆರವೇರಿದ್ದೇ ಆದರೆ ಹಿಂದಿನ ಬದುಕನ್ನು ಕ್ಷಣಮಾತ್ರವೂ ನಾನು ನೆನಪಿಸಿಕೊಳ್ಳುವುದಿಲ್ಲ ಎಂದು ನಿಮಗೆ ವಾಗ್ದಾನ ನೀಡುತ್ತೇನೆ ಎಂದಳು. ನಿರುಪಾಯನಾಗಿ ಋಷಿ ಆಕೆಯ ಕೈಹಿಡಿಯಲು ಒಪ್ಪಿದ.

ಅವರಿಬ್ಬರ ವಿವಾದ ಶೀಘ್ರವಾಗಿ ನೆರವೇರಿತು. ಸಂಯಮಪೂರ್ಣ ನಿರಾಡಂಬರದ ಬದುಕು ಸಾಗಿಸಲು ಸಿದ್ಧಳಾಗಿ ಪತಿಯ ನಿವಾಸಕ್ಕೆ ಬಂದಿಳಿದಳು. ಚೆನ್ನಾಗಿ ಹೊಂದಿಕೊಂಡು ಅವರು ಸಂಸಾರ ನಡೆಸಿದರು. ಮಕ್ಕಳೂ ಆದರು. ಹಿರಿಯವನ ಹೆಸರು ಪರಶುರಾಮ. ತಂದೆತಾಯಿಗಳಿಗೆ ತುಂಬ ವಿಧೇಯನಾಗಿ ನಡೆದುಕೊಳ್ಳುತ್ತಿದ್ದ ಸತ್ಪುತ್ರ ಅವನು. ಆದರೆ ತಂದೆಯ ಶೀಘ್ರಕೋಪವನ್ನು ಮಾತ್ರ ಬಳುವಳಿಯಾಗಿ ಪಡೆದಿದ್ದ.

ಒಮ್ಮೆ ಹತ್ತಿರದ ನದಿಯಿಂದ ನೀರು ತರುತ್ತಿರುವಾಗ ಒಬ್ಬ ಗಂಧರ್ವ ಮತ್ತು ಅಪ್ಸರೆ ಗಾಢಾಲಿಂಗನದಲ್ಲಿ ಇದ್ದುದನ್ನು ಋಷಿಪತ್ನಿ ನೋಡಿದಳು. ಆಕೆಗೆ ಹೇಗೋ ಅನ್ನಿಸಿತು. ಜಮದಗ್ನಿಯ ಕೈ ಹಿಡಿದು, ಆಶ್ರಮವಾಸಿಯಾಗಲು ಬಂದಾಗ ಇಂಥ ವಿಷಯಗಳಿಂದ ದೂರ ಕೈಗೊಂಡಿದ್ದ ಪ್ರತಿಜ್ಞೆಯನ್ನು ರೇಣುಕಾ ಮರೆತುಬಿಟ್ಟಳು. ಆ ಜೋಡಿಯ ಸುಖ, ಸಂತೋಷ, ಅವರ ವೈಭವದ ಜೀವನವನ್ನೇ ಅವಳ ಮನಸ್ಸು ಧ್ಯಾನಿಸಿತು. ಅವರ ಕುರಿತು ಮತ್ಸರವೂ ಹುಟ್ಟಿತು. ಆಕೆ ಮನೆ ಸೇರುವ ವೇಳೆಗೆ ಜಮದಗ್ನಿಗೆ ಎಲ್ಲವೂ ಅರ್ಥವಾಗಿತ್ತು. ತನ್ನ ತಪೋಶಕ್ತಿಯಿಂದ ರೇಣುಕೆಯ ಮನದಲ್ಲಾದ ತೊಳಲಾಟ ಮತ್ತು ಅದರಿಂದ ಆಕೆಯ ಪ್ರತಿಜ್ಞೆ ಭಂಗಗೊಂಡಿದ್ದು ತಿಳಿದು ಕ್ರುದ್ಧನಾದ. ಪತ್ನಿ ಒಳಗೆ ಪ್ರವೇಶಿಸುತ್ತಲೇ, ‘ಏಕೆ ಹೀಗೆ ಮಾಡಿದೆ ರೇಣುಕಾ? ನಾನು ಇದೆಲ್ಲ ಬೇಡ ಎಂದು ಮೊದಲೇ ನಿನ್ನ ಈ ತಪ್ಪಿಗೆ ಎಂಥ ಉಗ್ರ ಶಿಕ್ಷೆ ಕಾದಿದೆ ಎಂಬ ಅರಿವಾದರೂ ನಿನಗಿದೆಯೇ?’ ಎಂದು ಕೂಗಾಡಿದ.

ತನ್ನ ಮಕ್ಕಳೆಲ್ಲರನ್ನು ಒಬ್ಬೊಬ್ಬರಾಗಿ ಕರೆದು ‘ನಿಮ್ಮ ತಾಯಿಯನ್ನು ಕೊಲ್ಲಿ’ ಎಂದು ಆಜ್ಞಾಪಿಸಿದ. ಅವರ್ಯಾರೂ ಅದಕ್ಕೆ ಮುಂದಾಗದೆ ನಿರಾಕರಿಸಿದರು. ಅಷ್ಟರಲ್ಲಿ ಎಲ್ಲಿಗೋ ಹೋಗಿದ್ದ ಪರಶುರಾಮ ಮನೆಗೆ ಬಂದ. ವಾತಾವರಣ ಉದ್ವಿಗ್ನಗೊಂಡಿದ್ದನ್ನು ಗ್ರಹಿಸಿ, ಏನಾಯಿತು ಎಂದು ತಂದೆಯನ್ನು ಕೇಳಿದ. ನನಗೊಂದು ಸಹಾಯ ಮಾಡುತ್ತೀಯಾ ಮಗನೇ ಎಂಬ ವಿನಂತಿ ತಂದೆಯ ಬಾಯಿಂದ ಬರುತ್ತಿದ್ದ ಹಾಗೇ, ಹೇಳಪ್ಪ, ಹೇಳು, ಚಾಚೂ ತಪ್ಪದೆ ಮಾಡುತ್ತೇನೆಂದು ವಚನ ನೀಡುತ್ತೇನೆ ಎಂದ.
‘ನಿನ್ನ ತಾಯಿಯನ್ನು ಕೊಲ್ಲು’ ಎಂಬ ಆಣತಿ ಬಂತು.
ನಿರುಪಾಯನಾಗಿ ಪರಶುರಾಮ ಅದನ್ನು ನೆರವೇರಿಸಿದ.
ಮಗನ ವಿಧೇಯತೆಯಿಂದ ತೀವ್ರ ಸಂತುಷ್ಟನಾದ ಜಮದಗ್ನಿ, ತಾಯಿಯನ್ನು ಕೊಲ್ಲುವ ಕೆಲಸ ಪರಶುರಾಮನಿಗೆ ಎಷ್ಟೊಂದು ದುಃಖ ತಂದಿರಬಹುದು ಎಂಬುದನ್ನು ಬಲ್ಲೆ ಎಂದು ಮಗನನ್ನು ಸಮಾಧಾನಿಸಿ, ಏನು ಬೇಕೋ ಕೇಳಿಕೋ ಎಂದ.
ನನ್ನ ತಾಯಿಯನ್ನು ಮರಳಿ ಬದುಕಿಸು ಹಾಗೂ ಈ ದುರಂತದ ನೆನಪನ್ನು ಆಕೆಯ ಮನದಿಂದ ಅಳಿಸಿಹಾಕು ಕೇಳಿಕೊಂಡ ಆ ಧೀರ ಮಗ.
ಮುಗುಳ್ನಕ್ಕ ತಂದೆ ಆ ಕ್ಷಣ ಪತ್ನಿ ರೇಣುಕಾಗೆ ಜೀವದುಂಬಿದ.
ಎಷ್ಟೋ ವರ್ಷ ಕಳೆದ ಬಳಿಕ, ಜಮದಗ್ನಿ ತಪ್ಪಸ್ಸನ್ನು ಆಚರಿಸುತ್ತಿರುವಾಗ, ಅಲ್ಲಿನ ರಾಜ ಕಾರ್ತವೀರ್ಯಾರ್ಜುನ ಆಶ್ರಮಕ್ಕೆ ಬಂದ. ಕ್ರೂರಿ ಎಂದು ಹೆಸರಾಗಿದ್ದ ಮಹಾರಾಜನನ್ನು ಋಷಿ ಗೌರವದಿಂದಲೇ ಕಂಡು, ರಾಜಪರಿವಾರಕ್ಕೆ ಅಗತ್ಯವಿದ್ದ ಎಲ್ಲ ಸೌಕರ್ಯ ಒದಗಿಸಿದ.

ಕಾರ್ತವೀರ್ಯಾರ್ಜುನನಿಗೆ ಅಚ್ಚರಿಯೆನಿಸಿತು. ಈ ಆಶ್ರಮದಲ್ಲಿ ರಾಜವೈಭವದ ಆತಿಥ್ಯ ನೀಡಲು ನಿಮಗೆ ಹೇಗೆ ಸಾಧ್ಯವಾಯಿತು ಎಂದು ಋಷಿಯನ್ನು ಕೇಳಿದ. ತನ್ನ ಕಾಮಧೇನುವಿನ ಮಗಳಾದ ನಂದಿನಿ ಹಸು ಇರುವುದು, ಬಯಸಿದ್ದನ್ನೆಲ್ಲಾ ಅದು ಕರುಣಿಸುವುದು ಎಲ್ಲವನ್ನೂ ಜಮದಗ್ನಿ ರಾಜನಿಗೆ ಹೇಳಬೇಕಾಯಿತು. ಐಷಾರಾಮಿ ವಸ್ತುಗಳಿಗಾಗಿ ಪ್ರತಿ ದಿನ ತಾವು ಆ ಪವಿತ್ರ ಗೋವನ್ನು ಬೇಡಿಕೊಳ್ಳುವುದಿಲ್ಲ, ಬಹಳ ಸರಳ ಜೀವನವಾದ್ದರಿಂದ ಅದರ ಅಗತ್ಯ ತಮಗಿಲ್ಲ. ಆದರೆ ಎಂದಾದರೊಮ್ಮೆ ಹೀಗೆ ಅನಿರೀಕ್ಷಿತ ಅತಿಥಿಗಳು ಬಂದಾಗ ನಂದಿನಿ ನೆರವಿಗೆ ಬರುತ್ತಾಳೆ. ನನ್ನ ಕುಟೀರದಲ್ಲಿ ನಿಮಗೆ ಏನೇ ಮೆಚ್ಚುಗೆಯಾಗಿದ್ದರೂ ಅದು ನನ್ನ ಸ್ವಂತದ್ದಲ್ಲ, ನಂದಿನಿ ನೀಡಿದ್ದು ಎಂದು ಎಲ್ಲವನ್ನೂ ಅರುಹಿಬಿಟ್ಟ, ಆಹಾ! ಇದೆಲ್ಲ ಎಷ್ಟು ಚೆನ್ನಾಗಿದೆ, ನೀವು ನಂದಿನಿಯಂತಹ ಗೋವಿನ ಒಡೆಯರಾಗಿರುವುದು ಅದ್ಭುತ ಎಂದೆಲ್ಲ ಎದುರಿಗೆ ಜಮದಗ್ನಿಯನ್ನು ಹೊಗಳಿದರೂ ಆ ರಾಜನ ಮನಸ್ಸು ನಂದಿನಿಯ ಮೇಲೆ ನೆಟ್ಟಿತು. ಅದನ್ನು ತಾನು ಪಡೆಯಬೇಕೆಂಬ ದುರಾಸೆ ಅವನಲ್ಲಿ ಉಂಟಾಯಿತು. ಹೇಗೆ ಇದನ್ನು ಸಾಧಿಸುವುದು ಎಂದು ಹಂಚಿಕೆ ಹಾಕಿದ. ಯುದ್ಧಗಳು ನಡೆಯುವಾಗ ಇಂತಹದೊಂದು ಹಸು ಬಳಿಯಿದ್ದರೆ ತನ್ನ ಸೈನ್ಯಕ್ಕೆ ಎಷ್ಟೊಂದು ಉಪಯುಕ್ತ ಎಂದು ಯೋಚಿಸಿದ.

ತಡಮಾಡದೆ ಋಷಿಯನ್ನು ಕೇಳಿಯೂಬಿಟ್ಟ. ನಂದಿನಿಯನ್ನು ತನಗೆ ನೀಡಿದ್ದಕ್ಕೆ ಬದಲಾಗಿ, ತನ್ನನ್ನು ಯಾವಾಗ, ಏನು ಬೇಕಾದರೂ ಕೇಳಬಹುದು. ತಾನು ಎಲ್ಲ ಕೋರಿಕೆಗಳನ್ನೂ ನೆರವೇರಿಸಲು ಬದ್ಧ ಎಂದು ಘೋಷಿಸಿದ.
ತಲೆಯಲ್ಲಾಡಿಸಿ ಅಸಮ್ಮತಿ ಸೂಚಿಸಿದ ಜಮದಗ್ನಿ, ನಂದಿನಿ ಪವಿತ್ರವಾದ ಗೋವು. ಅದು ಆಶ್ರಮವಾಸಿಯಾಗಿರಬೇಕೇ ವಿನಃ ಎಲ್ಲೆಂದರಲ್ಲಿ ಅದನ್ನು ಕರೆದೊಯ್ದು ಐಹಿಕ ಸುಖಭೋಗ ದೊರಕಿಸಿಕೊಳ್ಳಲು ಬಳಸುವಂತಿಲ್ಲ ಎಂದು ರಾಜನಿಗೆ ತಿಳಿಹೇಳಿದ.

ರಾಜನ ಮೇಲೆ ಇದು ಯಾವ ಪರಿಣಾಮವನ್ನೂ ಬೀರಲಿಲ್ಲ. ಬದಲಾಗಿ ಈ ನಿರಾಕರಣೆಯಿಂದ ಅಸಂತುಷ್ಟನಾಗಿ ಅರಮನೆಗೆ ಮರಳಿದ. ಕುಟುಂಬದ ಸದಸ್ಯರಿಗೆ ನಂದಿನಿಯ ಕುರಿತು, ಅದಕ್ಕಿರುವ ಶಕ್ತಿ ಕುರಿತು ವಿವರವಾಗಿ ತಿಳಿಸಿದ. ಸೇನಾಪತಿಗಳೊಂದಿಗೆ, ಮಕ್ಕಳೊಂದಿಗೆ ಸಮಾಲೋಚಿಸಿದ. ಎಲ್ಲರಿಗೂ ಹೇಗಾದರೂ ಮಾಡಿ, ಯಾವುದೇ ಬೆಲೆ ಬೇಕಾದರೂ ತೆತ್ತು ನಂದಿನಿಯನ್ನು ತಮ್ಮ ವಶಕ್ಕೆ ತೆಗೆದುಕೊಳ್ಳಬೇಕೆಂಬ ದುರ್ಬುದ್ಧಿ ಉಂಟಾಯಿತು. ೬೬ಮಿಂಚಿನ ಕಾರ್ಯಾಚರಣೆ ನಡೆಸಿದ ರಾಜನ ಸೇನೆ ಜಮದಗ್ನಿಯ ಕುಟೀರದ ಮೇಲೆ ಆಕ್ರಮಣ ನಡೆಸಿ ಹಸುವನ್ನು ಕದ್ದು ಹೊತ್ತೊಯ್ದರು. ತಡೆಯಲು ಬಂದ ಋಷಿಯನ್ನು ಕೊಂದರು.

ಅಂದೂ ಸಹ ಪರಶುರಾಮ ಆಶ್ರಮದಲ್ಲಿರಲಿಲ್ಲ. ಎಲ್ಲಿಗೋ ಹೊರಗೆ ಹೋಗಿದ್ದ. ಮನೆಗೆ ವಾಪಸಾದರೆ ತಾಯಿ ದುಃಖಾರ್ತಳಾಗಿದ್ದಳು. ಸಹೋದರರೆಲ್ಲ ಶೋಕದಲ್ಲಿದ್ದರು. ಕಾರ್ತವೀರ್ಯಾರ್ಜುನ ತಮ್ಮ ಮನೆಗೆ ಬಂದುದು, ಒಳ್ಳೆಯ ಆತಿಥ್ಯ ಸ್ವೀಕರಿಸಿದ್ದು, ಆದರೆ ಕೃತಜ್ಞತೆಯ ಲವಲೇಶವೂ ಇಲ್ಲದ ಬಲಪ್ರಯೋಗ ಮಾಡಿ ಪವಿತ್ರ ಗೋವನ್ನು ಕದ್ದುಕೊಂಡು ಹೋಗಿದ್ದು, ಎಲ್ಲಕ್ಕಿಂತ ಮಿಗಿಲಾಗಿ ತನ್ನ ತಂದೆಯನ್ನು ಕೊಂದದ್ದು ಕೇಳಿ ಅವನಿಗೆ ರಕ್ತ ಕುದಿಯಿತು. ತನ್ನ ಆಯುಧವಾದ ಕೊಡಲಿ ಹಿಡಿದು ಕಾರ್ತವೀರ್ಯಾರ್ಜುನ ಮೇಲೆ ಸೇಡು ತೀರಿಸಿಕೊಳ್ಳಲು ಹೊರಟ. ಸಾತ್ವಿಕರಾದ ಋಷಿಮುನಿಗಳ ಮೇಲೆ ಹಲ್ಲೆ ಮಾಡುವ, ಅವರನ್ನು ಅನಾದರದಿಂದ ಕಾಣುವ ಗರ್ವಿಷ್ಠ, ಕ್ರೂರಿ ಕ್ಷತ್ರಿಯ ರಾಜರುಗಳನ್ನೆಲ್ಲ ಮಾರ್ಗಮಧ್ಯೆ ಎಂದು ಪ್ರತಿಜ್ಞೆ ಮಾಡಿದ. ಜಮದಗ್ನಿಯ ಹಿರಿಯ ಮಗ, ಪರಶುರಾಮ ಅಂದರೆ ಕೊಡಲಿಧಾರಿ ಎಂದು ನಾಮಾಂಕಿತನಾದದ್ದು ಹೀಗೆ. ಪ್ರಪಂಚವನ್ನು ಸುತ್ತಿ 16 ದಂಡಯಾತ್ರೆ ಕೈಗೊಂಡ. ಎಲ್ಲ ರಾಜರುಗಳನ್ನು ಮಣಿಸಿ ಅವರ ಧನ-ಕನಕ-ವಜ್ರ-ವೈಢೂರ್ಯಗಳನ್ನೆಲ್ಲ ತಂದು ಆಶ್ರಮವಾಸಿಗಳಿಗೆ ಹಂಚಿದ.

ವಿಷ್ಣುವಿನ ಭೂಮಿಯ ಮೇಲಿನ ಹತ್ತು ಅವತಾರಗಳಲ್ಲಿ ಒಂದು, ಇನ್ನೊಂದಕ್ಕೆ ಮುಖಾಮುಖಿಯಾಗುವ ಪ್ರಸಂಗವೂ ಇದೆ. ಸ್ವತಃ ತಾನೇ ಒಂದು ಅವತಾರವಾದ ಪರಶುರಾಮ, ಸೀತಾಸ್ವಯಂವರದ ವೇಳೆ ವಿಷ್ಣುವಿನ ಮತ್ತೊಂದು ಅವತಾರವಾದ ಶ್ರೀರಾಮನನ್ನು ಸಂಧಿಸುತ್ತಾನೆ. ಶಿವಧನಸ್ಸನ್ನು ಎತ್ತಿ, ಹೂಡಿದವರಿಗೆ ಮಗಳು ಜಾನಕಿಯನ್ನು ಮದುವೆ ಮಾಡಿಕೊಡುವೆ ಎಂದು ಜನಕ ಮಹಾರಾಜ ಏರ್ಪಡಿಸಿದ್ದ ಸ್ವಯಂವರಕ್ಕೆ ಪರಶುರಾಮನೂ ಹೋಗುತ್ತಾನೆ. ಆದರೆ ಅಲ್ಲಿ ತೇಜಃಪುಂಜ ಕ್ಷತ್ರಿಯ ತರುಣನೊಬ್ಬ ಗೆಲುವು ಸಾಧಿಸಿದಾಗ ತನ್ನ ನಂತರದ ಅವತಾರವಾದ ಶ್ರೀರಾಮ ಜನಿಸಿಬಂದಿರುವುದು ಅವನಿಗೆ ವೇದ್ಯವಾಗುತ್ತದೆ. ‘ಇನ್ನು ತನ್ನ ಕೆಲಸ ಮುಗಿಯಿತು, ನಿರ್ಗಮನ ಸನ್ನಿಹಿತವಾಗಿದೆ’ ಎಂದು ಮನಗಂಡ ಪರಶುರಾಮ ಮಹೇಂದ್ರ ಪರ್ವತದಲ್ಲಿ ತಪಸ್ಸನ್ನು ಆಚರಿಸಲು ತೆರಳುತ್ತಾನೆ.  ಕಲ್ಕ್ಯಾವತಾರ: ಭಗವಾನ್ ವಿಷ್ಣುವಿನ ಕೊನೆಯ ಅವತಾರ ಒಂದು ಶ್ವೇತ ಕುದುರೆಯಾದ, ಕಲ್ಕಿ ಹೇಳಲಾಗುತ್ತದೆ. ಪ್ರಪಂಚದಲ್ಲಿ ಕೆಡುಕು, ಒಳಿತನ್ನು ಮೆಟ್ಟಿ ನಿಂತು ವಿನಾಶ ತಂದಾಗ ಬಿಳಿಗುದುರೆ ಸವಾರನಾಗಿ, ಕೈಯಲ್ಲಿ ಕತ್ತಿ ಹಿರಿದು ವಿಷ್ಣು ಬರುತ್ತಾನೆ. ಲೋಕದ ಎಲ್ಲ ಕತ್ತಲೆ ಕಳೆದು ಹೊಸ ಯುಗ ಸೃಷ್ಟಿಸುತ್ತಾನೆ ಎಂಬ ನಂಬಿಕೆಯಿದೆ.
==

Tags

Related Articles

Leave a Reply

Your email address will not be published. Required fields are marked *

Language
Close