ಭುವನೇಶ್ವರ: ಸ್ವದೇಶಿ ನಿರ್ವಿುತ ಖಂಡಾಂತರ ಕ್ಷಿಪಣಿ ಪೃಥ್ವಿ 2 ನ್ನು ಓಡಿಶಾದ ಚಾಂಡಿಪುರದ ಸೇನಾ ನೆಲೆಯಿಂದ ಯಶಸ್ವಿ ಪರೀಕ್ಷಾರ್ಥ ಪ್ರಯೋಗ ನಡೆಸಿದೆ ಎಂದು ರಕ್ಷಣಾ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ಸಂಯುಕ್ತ ವಲಯದ 3 ನೇ ಭಾಗದಿಂದ ಮೊಬೈಲ್ ಲಾಂಚ್ ವಾಹನದ ಮೂಲಕ ಕ್ಷಿಪಣಿ ಉಡಾವಣೆ ನಡೆಸಿದ್ದು ಸುಮಾರು 500 ರಿಂದ 1000 ಸಿಡಿತಲೆಗಳನ್ನು ಹೊತ್ತೊಯ್ಯಬಲ್ಲ ಪೃಥ್ವಿ 350 ಕಿ. ಮೀ. ವ್ಯಾಪ್ತಿ ಹೊಂದಿದೆ. ಪ್ರಮುಖವಾಗಿ ಕರಾವಳಿ ಪ್ರದೇಶಗಳ ಮೇಲೆ ನಿಗಾ ಇಡಲು ಕ್ಷಿಪಣಿಯನ್ನು ತಯಾರುಗೊಳಿಸಲಾಗಿದೆ. ಡಿಆರ್ಡಿಓ ವಿಜ್ಞಾನಿಗಳು ಉಡಾವಣೆ ನಂತರ ರಾಡಾರ್ ಮೂಲಕ ಕ್ಷಿಪಣಿ ಪತ್ತೆಹಚ್ಚಿದ್ದಾರೆ.
ಇಂಟಿಗ್ರೇಟೆಡ್ ನಿರ್ದೇಶಿತ ಕ್ಷಿಪಣಿ ಅಭಿವೃದ್ದಿ ಕಾರ್ಯಕ್ರಮ ಅಡಿಯಲ್ಲಿ 2003 ರಲ್ಲಿ ಡಿಆರ್ಡಿಓ ನಿಂದ ಪ್ರಥಮ ಕ್ಷಿಪಣಿ ನಿರ್ವಣವಾಗಿತ್ತು. ನಂತರ ನವೆಂಬರ್ 2015 ರಲ್ಲಿ ಇದೇ ಮಾದರಿ ಕ್ಷಿಪಣಿ ಯಶಸ್ವಿ ಪ್ರಯೋಗ ಓಡಿಶಾದಲ್ಲಿ ನಡೆಸಿತ್ತು.