ಇವತ್ತು ನಾವು ಸಾಮಾಜಿಕ ಜಾಲತಾಣಗಳಲ್ಲಿ ಮುಳುಗಿ ಹೋಗಿದ್ದೇವೆ. ಪ್ರೊಫೈಲ್ ಪಿಕ್ಚರ್ನಲ್ಲಿ ತ್ರಿವರ್ಣ ಧ್ವಜವನ್ನು ಹಾಕಿಕೊಳ್ಳುವುದು, ದೇಶ ಭಕ್ತಿಯ ಒಂದು ಪೋಸ್ಟ್ ಹಾಕುವುದು. ಎಲೆಕ್ಟ್ರಾನಿಕ್ ಪರದೆಯ ಮೇಲೆಯೇ ನಮ್ಮ ಸಂಭ್ರಮಾಚರಣೆ ಮುಗಿದು ಹೋಗುತ್ತದೆ. ಶುಕ್ರವಾರ ಅಥವಾ ಸೋಮವಾರ ಅಗಸ್ಟ್ ಹದಿನೈದು ಬಂದರೆ ‘ಲಾಂಗ್ ವೀಕೆಂಡ್’ ಎಂದು ಪ್ರವಾಸಕ್ಕೆ ಹೋಗುವುದು, ಅಲ್ಲಿಂದಲೇ ‘ಹ್ಯಾಪಿ ಇಂಡಿಪೆಂಡೆನ್ಸ್ ಡೇ’..!
ಆಗಸ್ಟ್ 15 ಹತ್ತಿರ ಬಂತು ಅಂದರೆ ಸಾಕು, ಒಂದು ವಾರ ಮುಂಚಿತವಾಗಿ ಆ ದಿನ ಏನು ಮಾಡಬೇಕು, ಏನು ತೊಡಬೇಕು, ಯಾರನ್ನೆಲ್ಲ ಭೇಟಿ ಮಾಡಬೇಕು ಎನ್ನುವ ಉತ್ಸಾಹ. ದೇಶದ ತುಂಬೆಲ್ಲ ಹಬ್ಬದ ಸಂಭ್ರಮ. ಕನ್ಯಾಕುಮಾರಿಯ ತನಕ, ಪೂರ್ವದಿಂದ ಪಶ್ಚಿಮದವರೆಗೆ ತಿರಂಗಾ ಎಲ್ಲೆಲ್ಲೂ ಹಾರಾಡುತ್ತದೆ. ದೇಶ ಭಕ್ತಿಯ ಹಾಡು ಎಲ್ಲೆಲ್ಲೂ ಮೊಳಗುತ್ತಿರುತ್ತದೆ. ದೆಹಲಿಯಲ್ಲಿ ಜನರು ಕೆಂಪು ಕೋಟೆಯ ಎದುರು ಸೇರುತ್ತಾರೆ. ಅಲ್ಲಿ ದೇಶದ ಪ್ರಧಾನಿ ಧ್ವಜಾರೋಹಣ ಮಾಡಿ ಮಾತನಾಡುತ್ತಾರೆ. ಇಡೀ ದೇಶವೇ ಇದನ್ನು ನೋಡಲು ಕಾತುರರಾಗಿರುತ್ತಾರೆ. ‘ದೆಹಲಿಯಲ್ಲಿ ಬಾವುಟ ಹಾರಿಸಿ ಆಯಿತಾ?’ ಎಂಬುದು ಪ್ರತಿಯೊಬ್ಬರ ಬಾಯಲ್ಲೂ ಬರುವ ಮೊದಲ ಮಾತು. ಅಂದು ರಾಜ್ಯದ ರಾಜಧಾನಿಯಿಂದ ಹಿಡಿದು ಪಂಚಾಯತ್ನ ಬೀದಿಯ ತನಕ ಪ್ರಮುಖರೆಲ್ಲ ಸೇರಿ ತಮ್ಮ ವಿರೋಧಗಳನ್ನು ಬದಿಗಿಟ್ಟು ತ್ರಿವರ್ಣ ಧ್ವಜವನ್ನು ಹಾರಿಸಿ ದೇಶಾಭಿಮಾನದಲ್ಲಿ ಬೀಗುತ್ತಾರೆ.
ಇವತ್ತು ನಾವು ತಂತ್ರಜ್ಞಾನದ ಗುಡ್ಡಗಾಡಿನಲ್ಲಿ ಕಳೆದು ಹೋಗಿದ್ದೇವೆ. ದಶಕದ ಹಿಂದಿನ ಸ್ವಾತಂತ್ರ್ಯ ದಿನದ ಸಂಭ್ರಮಾಚರಣೆ ಈಗಿಲ್ಲ. ಮೊದಲು ಜನರೆಲ್ಲ ಒಂದು ಕಡೆ ಸೇರಿ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸುತ್ತಿದ್ದರು. ನಾಲ್ಕಾರು ಹಳ್ಳಿಗಳ ಶಾಲೆಗಳು, ಒಂದು ಮಾಧ್ಯಮವಾಗಿ ಬಂದು ಎಲ್ಲರನ್ನೂ ಒಟ್ಟಿಗೆ ಸೇರಿಸುತ್ತಿತ್ತು. ಪ್ರತಿ ಶಾಲೆ, ಕಾಲೇಜು, ಕಚೇರಿಗಳಲ್ಲಿ ಅವರದ್ದೇ ಆದ ಸಂಭ್ರಮಾಚರಣೆಗಳು. ಭಾಷಣ, ಚರ್ಚೆ, ಹಾಡು, ನೃತ್ಯ. ಅದಕ್ಕೆ ವಾರಗಟ್ಟಲೆ ಭಾವುಟ ಹಿಡಿದು ಮನೆಯಿಂದ ಹೊರಗೆ ಹೋಗುವುದೇ ಹರುಷ. ಬಸ್ಸು, ಆಟೋ ರಿಕ್ಷಾಗಳು, ಕಟ್ಟಡಗಳು ಎಲ್ಲವೂ ಆ ದಿನ ವಿಶೇಷವಾಗಿ ಕಾಣಲು, ಅದರ ಮೇಲಿನ ತಿರಂಗವೇ ಕಾರಣ! ಚಿಕ್ಕಂದಿನಲ್ಲಿ ನಮಗೆ ಸ್ವಾತಂತ್ರ್ಯ ತಂದು ಕೊಟ್ಟ ಮಹನೀಯರ ಬಗ್ಗೆ ಅವರ ಕಷ್ಟ, ಸಾಹಸ, ತ್ಯಾಗದ ಕುರಿತು ಹಿರಿಯರು ವರ್ಣನೆ ಮಾಡುತ್ತಿದ್ದರು. ಪ್ರತಿ ವರ್ಷ ಆ ದಿನ ದೇಶಪ್ರೇಮದ ಟಾನಿಕ್ ಕುಡಿದ ಹಾಗೆ, ಮನಸ್ಸಿಗೆ ಒಂದು ರೀತಿಯ ಹುಮ್ಮಸ್ಸು! ಯಾವತ್ತೂ ಅಗಸ್ಟ್ ಹದಿನೈದು ದಿನ ಎನಿಸಿದ್ದೇ ಇಲ್ಲ. ಆ ದಿನ ಇನ್ನೂ ಕೆಲಸ ಹೆಚ್ಚು. ಕೆಲಸ ಹೆಚ್ಚಾದರೂ ಖುಷಿಯಿತ್ತು.
ಇವತ್ತು ನಾವು ಸಾಮಾಜಿಕ ಜಾಲತಾಣಗಳಲ್ಲಿ ಮುಳುಗಿ ಹೋಗಿದ್ದೇವೆ. ಪ್ರೊಫೈಲ್ ಪಿಕ್ಚರ್ನಲ್ಲಿ ತ್ರಿವರ್ಣ ಧ್ವಜವನ್ನು ಹಾಕಿಕೊಳ್ಳುವುದು, ದೇಶ ಭಕ್ತಿಯ ಒಂದು ಪೋಸ್ಟ್ ಹಾಕುವುದು. ಹೀಗೆ ಎಲೆಕ್ಟ್ರಾನಿಕ್ ಪರದೆಯ ಮೇಲೆಯೇ ನಮ್ಮ ಸಂಭ್ರಮಾಚರಣೆ ಮುಗಿದು ಹೋಗುತ್ತದೆ. ಶುಕ್ರವಾರ ಅಥವಾ ಸೋಮವಾರ ಆಗಸ್ಟ್ ಹದಿನೈದು ಬಂದರೆ ’ಲಾಂಗ್ ವೀಕೆಂಡ್’ ಎಂದು ಪ್ರವಾಸಕ್ಕೆ ಹೋಗುವುದು, ಅಲ್ಲಿಂದಲೇ ‘ಹ್ಯಾಪಿ ಇಂಡಿಪೆಂಡೆನ್ಸ್
ಒಂದು ಮೆಸೇಜ್ ಹಾಕಿಬಿಡುವುದು, ಇವತ್ತಿನ ಟ್ರೆಂಡ್! ವಾಟ್ಸಾಪ್ನಲ್ಲಿ ಫಾರ್ವರ್ಡ್ ಮೆಸೇಜ್ಗಳಂತೂ ಎಷ್ಟು ಬರುತ್ತವೆ ಅಂದರೆ ಅದನ್ನು ಸ್ವಚ್ಛ ಗೊಳಿಸಲು ಮುಂದಿನ ಅಗಸ್ಟ್ ಬರಬೇಕು. ‘ನಮ್ಮ ಸ್ವಾತಂತ್ರ್ಯವನ್ನು ನಮ್ಮ ದೇಶದ ಅಭಿವೃದ್ಧಿಗೆ ಬಳಸೋಣ, ಇನ್ನೂ ಮಾಡಬೇಕಾದ ಕೆಲಸ ಸಾಕಷ್ಟಿದೆ, ಹಳೆಯವರು ಪಟ್ಟ ಕಷ್ಟ, ನಾವು ಅಡುತ್ತಿರುವ ಕೆಲಸ ವ್ಯರ್ಥ ಆಗಬಾರದು ಅಲ್ವಾ?’ ಮೆಸೇಜ್ ನನ್ನನ್ನು ಚಿಂತನೆಗೆ ಒಡ್ಡಿತ್ತು. ಫಾರ್ವರ್ಡ್ ಆಗಿ ಬಂದ ಸಾವಿರಾರು ಮೇಸೇಜುಗಳಿಗಿಂತ ನನ್ನ ಆ ಪರಿಚಯದ ಒಬ್ಬರು ನಾಲ್ಕು ಶಬ್ಧ ಇನ್ನೂ ತನಕ ಮನಸ್ಸಿನಲ್ಲಿ ಪ್ರಿಂಟ್ ಆಗಿ ಉಳಿದಿದೆ.
ಸ್ವಾತಂತ್ರ್ಯ ಸಿಕ್ಕಿ ಈ ವರ್ಷ ಎಪ್ಪತ್ತೊಂದು ತುಂಬುತ್ತದೆ. ಈ ದಿನ ನಮ್ಮ ಸಾಧನೆಗಳನ್ನು ಒಮ್ಮೆ ಪುನರಾವಲೋಕನ ಮಾಡಲೇ ಬೇಕು. ಎಲ್ಲೋ ಕಳೆದು ಹೋಗಿದ್ದ ಬಾಲ್ಯದ ಸ್ನೇಹಿತ ಫೇಸ್ಬುಕ್ನಲ್ಲಿ ಸಿಕ್ಕಿದ್ದಾನೆ, ಅವನ ಹತ್ತಿರ ಎರಡು ನಿಮಿಷ ನಮ್ಮ ದೇಶದ ಬಗ್ಗೆ ಚರ್ಚೆ ಮಾಡೋಣ. ಹತ್ತಾರು ಗ್ರೂಪ್ನಲ್ಲಿ ಅದೇ ಮೆಸೇಜ್ ಫಾರ್ವರ್ಡ್ ಮಾಡುವ ಬದಲು ನಮ್ಮ ದೇಶದ ಸಾಧನೆಯ ವಿಷಯವನ್ನು ತ್ರಿವರ್ಣ ಧ್ವಜದ ಫೋಟೊ ಪ್ರೊಫೈಲ್ ಪಿಕ್ಚರ್ನಲ್ಲಿ ಬರಲಿ. ಹಾಗೆಯೇ ಮನಸ್ಸಿನಲ್ಲಿ ಇಡೀ ದಿನವೂ ತ್ರಿವರ್ಣ ಧ್ವಜ ಹಾರುತಿರಲಿ. ವೈಚಾರಿಕ ಭಿನ್ನತೆಗಳು ಏನೇ ಇರಲಿ, ಇಂದು ಒಟ್ಟಿಗೆ ಕೂತು ನಮ್ಮ ದೇಶವನ್ನು ಯಾರೂ ಮೀರಿಸಲು ಸಾಧ್ಯವಾಗದ ಹಾಗೆ ಹೇಗೆ ಕಟ್ಟಬಹುದು ಎಂದು ವಿಚಾರ ಮಾಡೋಣ.