About Us Advertise with us Be a Reporter E-Paper

ಯಾತ್ರಾಯಾತ್ರಾ panel 1

ಏಳು ದಿನದಲ್ಲಿ ನಾ ಕಂಡ ಅದ್ಭುತ ಜಗತ್ತು..!

ವೈ.ಎಸ್.ನಾಗರಾಜ

2016ರ ಮೇ ತಿಂಗಳಿನಲ್ಲಿ ‘ಫ್ರಾನ್‌ಸ್ ಮತ್ತು ಸ್ವಿಟ್ಜರ್‌ಲ್ಯಾಂಡ್’  ಹೋಗಿ ಬರುವ ಅವಕಾಶ ಒದಗಿ ಬಂತು. ಬೆಂಗಳೂರಿನಿಂದ ಮಸ್ಕಟ್‌ಗೆ 3.30ಗಂಟೆ ಪ್ರಯಾಣ. ಅಲ್ಲಿಂದ ಪ್ಯಾರಿಸ್‌ಗೆ ಮತ್ತೆ 8ಗಂಟೆಗಳ ಪ್ರಯಾಣ. ಅಲ್ಲಿ ಏರ್‌ಪೋರ್ಟ್‌ನಿಂದ ಆಚೆ ಬಂದ ಕೂಡಲೇ ನಮ್ಮ ಟೂರ್ ವ್ಯವಸ್ಥಾಪಕರ ರಿಪ್ರೆಸೆಂಟೇ ಟಿವ್ ನಮ್ಮನ್ನು ಬರಮಾಡಿಕೊಂಡು ಸೀದಾ ಇಂಡಿಯನ್ ರೆಸ್ಟೊರೆಂಟ್ ಒಂದಕ್ಕೆ ಕರೆದುಕೊಂಡು ಹೋದರು. ಹೋಟೆಲ್ ತಲುಪುವಾಗ ಅಲ್ಲಿನ ಸಮಯ ರಾತ್ರಿ 10ಗಂಟೆ ಅಂದರೆ, ಭಾರತದ ಸಮಯ ರಾತ್ರಿ 1.30ನಿಮಿಷ. ಅಲ್ಲಿಯ ವರೆಗೂ ಸೂರ್ಯ ಮುಳುಗಿರಲಿಲ್ಲ. ಅಲ್ಲಿ ರಾತ್ರಿ  ಗಂಟೆಯ ನಂತರವೇ ಕತ್ತಲಾಗುವುದೊಂದು ವಿಶೇಷ.

ಬೆಳಗ್ಗೆ ಏಳು ಗಂಟೆಗೆ ವೇಕ್ ಅಪ್ ಕಾಲ್. 8ಕ್ಕೆ ಉಪಾಹಾರ. 9ಗಂಟೆಗೆ ಪ್ಯಾರಿಸ್ ಸೈಟ್ ಸೀಯಿಂಗ್ ಶುರು. ಸುಂದರವಾದ ಪ್ಯಾರಿಸ್ ಸಿಟಿಯ ಹಲವು ಮ್ಯಾನುಮೆಂಟ್‌ಗಳನ್ನು ನೋಡಿ, ಮಧ್ಯಾಹ್ನದ ಹೊತ್ತಿಗೆ ಡಿಸ್ನಿಲ್ಯಾಂಡ್ ತಲುಪಿದೆವು. ಒಳಗಡೆ ಒಂದು ಸುಂದರವಾದ, ಸ್ವಚ್ಛವಾದ ಬೆಂಚಿನ ಮೇಲೆ ಕುಳಿತು ಊಟ ಮುಗಿಸಿ, ಡಿಸ್ನಿ ಪಾರ್ಕ್ ಒಳಗೆ ನಡೆದವು. ಅಲ್ಲಿ ಎರಡು ವಿಭಾಗಗಳಿವೆ. 1ಫನ್ ಪಾರ್ಕ್, ಇನ್ನೊಂದು ಥಿಯೇಟರ್ ಪಾರ್ಕ್. ಫನ್  ಏನಿದ್ದರೂ ಜಾಲಿ ರೈಡ್‌ಸ್ ಮತ್ತಿತರ ಮನರಂಜನೆಯ ಆಟಗಳು. ನಾವು ಥಿಯೇಟರ್ ಪಾರ್ಕ್‌ನ್ನು ಆಯ್ಕೆ ಮಾಡಿಕೊಂಡೆವು. ಒಳಗಡೆ ಹೋದೆವು. ಅಲ್ಲಿ ಸುಮಾರು ಬಿಲ್ಡಿಂಗ್‌ಗಳು. ಒಂದೊಂದರಲ್ಲಿ ಒಂದೊಂದು ತರಹ ವಿಶೇಷಗಳನ್ನು ನೋಡಬಹುದಾಗಿತ್ತು. ಕಾರ್ಟೂನ್ ಕ್ಯಾರೆಕ್ಟರ್‌ಗಳು ಜೀವ ತಳೆದಿದ್ದು ಹೇಗೆ ಎನ್ನುವ ರೋಚಕ ವಿವರಣೆಗಳು, ಸಿನಿಮಾ ಶೂಟಿಂಗ್ ಮಾಡುವ ಕಲೆ, ಸಲಕರಣೆಗಳ ಸೆಟ್‌ಗಳು, ಟೆರರ್ ಆಫ್ ಟಾವರ್ ಮುಂತಾದವುಗಳನ್ನು ನೋಡುತ್ತಾ.. ಸಮಯ ಕಳೆದಿದ್ದೇ ಗೊತ್ತಾಗಲಿಲ್ಲ. ರಾತ್ರಿ 10ಗಂಟೆಗೆ ಇನ್ನೊಂದು ಬಸ್‌ನಲ್ಲಿ ಪ್ಯಾರಿಸ್‌ನಲ್ಲಿ ನಡೆಯುವ  ಫೇಮಸ್ ಲಿಡೋ ಷೋ ಗೆ ಕರೆದುಕೊಂಡು ಹೋದರು. ಅದೊಂದು ಅದ್ಭುತವಾದ ಮ್ಯೂಸಿಕಲ್ ಡ್ಯಾನ್‌ಸ್ ಷೋ. ಅದು ಮುಗಿದು ಹೋಟೆಲ್ ತಲುಪುವಾಗ ರಾತ್ರಿ 2ಗಂಟೆ!

ಐಫೆಲ್ ಟವರ್

ಮರುದಿನ ಪ್ಯಾರಿಸ್ ಸಿಟಿಯಲ್ಲಿರುವ ಅದ್ಭುತವಾದ ಮಾನ್ಯುಮೆಂಟ್ ‘ಐಫೆಲ್ ಟವರ್’ನ್ನು ನೋಡಲು ಹೊಟೆವು. ಇದೊಂದು ಅದ್ಭುತವಾದ, ಉಕ್ಕಿನಿಂದ ನಿರ್ಮಿಸಲ್ಪಟ್ಟ ಟವರ್ ಆಗಿದ್ದು, ಸುಮಾರು 330ಮೀ. ಎತ್ತರವಿದೆ.  ಟವರ್ ಮೇಲೆ ಹೋಗಲು ನಾಲ್ಕು ದಿಕ್ಕುಗಳಲ್ಲಿಯೂ ನಾಲ್ಕು ಲಿಫ್‌ಟ್ಗಳಿದ್ದು, ಒಮ್ಮೆಲೆ 50ಜನ ಒಂದು ಲಿಫ್‌ಟ್ನಲ್ಲಿಯೇ  ಹೋಬಹುದು. ಮೂರು ಕಡೆ ಲ್ಯಾಂಡಿಂಗ್ ಇದ್ದು, ಮೊದಲನೆ ಹಂತ 84ಮೀ. ಎರಡನೇ ಹಂತ 130ಮೀ. ಮತ್ತು ಮೂರನೆಯ ಲೆವೆಲ್ ಮುನ್ನೂರು ನಾಲ್ಕು ಮೀಟರ್‌ನಲ್ಲಿದೆ. ಅಲ್ಲಿಂದ ಬಂದಮೇಲೆ, ಇನ್ನೊಂದು ಇಂಡಿಯನ್ ರೆಸ್ಟೊರೆಂಟ್‌ನಲ್ಲಿ ಊಟ ಮುಗಿಸಿ ಕ್ರೂಜರ್‌ನಲ್ಲಿ ಒಂದು ಗಂಟೆಯ ಪ್ರಯಾಣದಲ್ಲಿ ಪ್ಯಾರಿಸ್‌ಸಿಟಿಯ ಹಲವು ಭಾಗಗಳನ್ನು ದರ್ಶನ ಮಾಡಿದೆವು. ಅಲ್ಲಿಂದ ಮುಂದಿನ ಪಯಣ ಫ್ರಾನ್‌ಸ್ನ ಇನ್ನೊಂದು ಸುಂದರವಾದ ಸಿಟಿ ‘ಡೈಜಾನ’ 4.30ಗಂಟೆಗಳ ಬಸ್ಸಿನ ಪಯಣ ತುಂಬಾ ಅರಾಮದಾಯಕವಾಗಿತ್ತು. ರಾತ್ರಿ ಡೈಜಾನ್‌ನಲ್ಲಿರುವ ಬಾಂಗ್ಲಾದೇಶದ  ಇಂಡಿಯನ್ ಊಟ ಮುಗಿಸಿ, ಇನ್ನೊಂದು ಸುಂದರವಾದ ಹೋಟೆಲೊಂದರಲ್ಲಿ ತಂಗಿದೆವು.

ಮೌಂಟ್ ಟಿಟ್ಲಿಸ್

ಮರುದಿನ ಸುಂದರವಾದ ಡೈಜಾನ್ ಸಿಟಿಯ ಕೆಲವು ಭಾಗಗಳ ದರ್ಶನ ಮಾಡಿ, ಸ್ವಿಟ್ಜರ್‌ಲ್ಯಾಂಡಿಗೆ ಹೋದೆವು.  ಸುಮಾರು ಐದು ಗಂಟೆಗಳ ಬಸ್ಸಿನ ಪ್ರಯಾಣದುದ್ದಕ್ಕೂ ರೋಡಿನ  ಇಕ್ಕೆಲಗಳಲ್ಲಿ ಸುಂದರವಾದ ದೃಶ್ಯಗಳು. ರಾತ್ರಿ ಉಳಿದುಕೊಂಡು ಹೋಟೆಲ್ ಥೆಸ್ಸಾನಿ ಕ್ಲಾಸಿಕ್‌ನಲ್ಲೆ ಇಂಡಿಯನ್ ಊಟ. ಮುಂದಿನ ಮೂರು ದಿನ ಕಳೆದಿದ್ದು ಎಲ್ಲಿ ನೋಡಿದರೂ ದೃಶ್ಯಕಾವ್ಯಗಳನ್ನೇ ಕಾಣುವಂತಹ ಸ್ವಿಟ್ಜರ್‌ಲ್ಯಾಂಡ್‌ನಲ್ಲೆ. ಬೆಗ್ಗೆ ತಿಂಡಿ ಮುಗಿಸಿ ಹೊರಟಿದ್ದು  ಟಿಟ್ಲಿಸ್’ಗೆ ಸುಮಾರು 10.000 ಅಡಿ ಎತ್ತರವಿರುವ ಮೌಂಟ್ ಟಿಟ್ಲಿಸ್‌ನ ಬೇಸ್‌ನಿಂದ ಮೇಲೆ ಕೇಬಲ್ ಕಾರ್‌ಗಳ(ರೋಪ್‌ವೇ) ಮೂಲಕ ಹೋಗಬೇಕು. ಎರಡನೇಯ ಸ್ಟೇಷನ್‌ವರೆಗೆ  ಒಂದು ಕೇಬಲ್ ಕಾರ್‌ನಲ್ಲಿ ಹೋಗಿ, ಅಲ್ಲಿಂದ ಮುಂದೆ ಇನ್ನೊಂದು ತರಹದ ರೋಟೇರ್. 360ಡಿಗ್ರಿ ತಿರುಗುವ ಕೇಬಲ್ ಕಾರ್‌ನಲ್ಲಿ ಹೋಗುವ ವ್ಯವಸ್ಥೆ ಇದೆ.  ಬೆಟ್ಟದ ಮೇಲೆ ತಲುಪಿದಾಗ, ಎಲ್ಲೆಲ್ಲೂ ಹಿಮದ ರಾಶಿ. ಎರಡು ಬೆಟ್ಟದ ನಡುವೆ ನಿರ್ಮಿಸಲ್ಪಟ್ಟ ತೂಗು ಸೇತುವೆ ಮೇಲೆ ನಡೆಯುವುದೊಂದು ರೋಮಾಂಚನ. ಮಂಜಿನ ಗುಹೆಯೊಳಗೆ ಒಂದು  ಹಾಕಿ ಬರುವುದು ಮತ್ತೊಂದು ತರಹದ ಅನುಭವ.

ರೈನೀ ಫಾಲ್‌ಸ್

ನಮ್ಮ ಪ್ರವಾಸದ ಏಳನೇ ಮತ್ತು ಕೊನೆಯ ದಿನ ‘ರೈನೀ ಫಾಲ್‌ಸ್’ಗೆ ಪ್ರಯಾಣ ಮಾಡಿದೆವು. ಅಲ್ಲಿ ಬೋಟ್‌ನಲ್ಲಿ ಕುಳಿತು ಫಾಲ್‌ಸ್ನ ತೀರಾ ಹತ್ತಿರಕ್ಕೆ  ಹೋಗುವುದೊಂದು ತುಂಬಾ ಖುಷಿ ಕೊಡುವ ಅನುಭವ. ನಮ್ಮ ಟೂರ್ ಮ್ಯಾನೇಜರ್ ಕ್ ಗೈಡ್ ನಮ್ಮನ್ನೆಲ್ಲ ಜೂರಿಕ್ ಏರ್‌ಪೋರ್ಟ್‌ನಲ್ಲಿ ಬಿಡುವವರೆಗೂ ಎಲ್ಲ ಕಡೆಯಲ್ಲೂ ಜತೆಯಲ್ಲೇ ಇದ್ದು. ಎಲ್ಲಾ ರೀತಿಯ ಸಹಕಾರ ನೀಡಿದರು. ಟೂರ್‌ನ್ನು ಸಂಪೂರ್ಣವಾಗಿ ಎಂಜಾಯ್  ಹಾಗೆ ಮಾಡಿದ್ದೊಂದು ವಿಶೇಷವಾಗಿತ್ತು.

ನಮ್ಮ ಈ ಏಳುದಿನಗಳ ಪ್ರವಾಸದಲ್ಲಿ ಪ್ಯಾರಿಸ್‌ನಲ್ಲಾಗಲೀ, ಡೈಜಾನ್‌ನಲ್ಲಾಗಲೀ, ಸ್ವಿಟ್ಜರ್‌ಲೆಂಡ್‌ನಲ್ಲಾಗಲೀ.. ಎಲ್ಲೂ ಯಾವ ತರಹದ ಕಸ-ಕಡ್ಡಿ, ಹೊಲಸು ಏನೂ ನಮ್ಮ ಕಣ್ಣಿಗೆ ಕಾಣಲಿಲ್ಲ. ಬಸ್‌ನಲ್ಲಿ ಪ್ಯಾರಿಸ್‌ನಿಂದ ಡೈಜಾನ್, ಅಲ್ಲಿಂದ ಸ್ವಿಟ್ಜರ್‌ಲ್ಯಾಂಡ್‌ಗೆ ಪ್ರಯಾಣ ಮಾಡಿದರೂ, ಒಂದೇ ಒಂದು ರೋಡ್ ಹಂಪ್ ಸಿಗಲಿಲ್ಲ. ಒಂದೇ ಒಂದು ವಾಹನಗಳ ಹಾರ್ನ್ ಕೂಡ ನಮ್ಮ ಕಿವಿಗೆ ಕೇಳಲಿಲ್ಲ. ಸ್ವಿಟ್ಜರ್‌ಲ್ಯಾಂಡಿನಲ್ಲಿ ತಿರುಗಾಡುವಾಗ ಸಾಕಷ್ಟು ಹಸುಗಳು ಕಣ್ಣಿಗೆ ಬಿದ್ದೂ, ಒಂದೇ ಒಂದು ಹಸು ಕೂಡ  ಮೇಲೆ ಬಂದಿದ್ದಿಲ್ಲ. ಎಲ್ಲಾ ಕಡೆಗಳಲ್ಲೂ ಶಿಸ್ತು, ಸ್ವಚ್ಛತೆ, ಶುಭ್ರತೆ ಎದ್ದು ಕಾಣುತ್ತಿತ್ತು. ಸ್ವಿಟ್ಜರ್‌ಲ್ಯಾಂಡ್ ಹೈವೇಗಳ ಉದ್ದಕ್ಕೂ ಅಲ್ಲಲ್ಲಿ ಸುರಂಗ ಮಾರ್ಗಗಳಿದ್ದು ರೋಡ್‌ಗಳೆಲ್ಲ ಸೀದಾ ಸರಾಗವಾಗಿವೆ. ಅಲ್ಲಿನ ಸರೋವರಗಳಲ್ಲಿ ನೀರು ಸ್ಪಟಿಕದಂತೆ ಶುಭ್ರ. ಆಹ್ಲಾದಕರ. ಎಲ್ಲೆಲ್ಲೂ ಹಸಿರು ಹಾಸಿರುವ ನೆಲ. ಮಂಜು ಹಾಸಿರುವ ಬೆಟ್ಟಗುಡ್ಡಗಳು. ಅಲ್ಲಿರುವಂತಹ ಶಿಸ್ತು, ಸ್ವಚ್ಛತೆ, ಶುಭ್ರವಾದ ನೀರು(ಕೆರೆ, ಸರೋವರ) ಸುಸಜ್ಜಿತವಾದ ವ್ಯವಸ್ಥೆಗಳನ್ನು ಸ್ಮರಿಸುವುದೇ ಖುಷಿ.

Tags

Related Articles

Leave a Reply

Your email address will not be published. Required fields are marked *

Language
Close