About Us Advertise with us Be a Reporter E-Paper

Breaking Newsದೇಶಪ್ರಚಲಿತ

ವಿಶ್ವದ ಅತೀ ದೊಡ್ಡ ಆರೋಗ್ಯ ಯೋಜನೆ ಮೋದಿ ಕೇರ್‌ಗೆ ನಾಳೆ ದೇಶಾದ್ಯಂತ ಚಾಲನೆ

30 ರಾಜ್ಯಗಳ 445 ಜಿಲ್ಲೆಗಳಲ್ಲಿ ಆರಂಭ

ದೆಹಲಿ: ವಿಶ್ವದ ಅತೀ ದೊಡ್ಡ ಹೆಲ್ತ್‌ ಇನ್ಸುರೆನ್ಸ್‌ ಯೋಜನೆಯಾದ ಪ್ರಧಾನಮಂತ್ರಿ ಜನ್‌ ಆರೋಗ್ಯ ಯೋಜನೆಯನ್ನು ಪ್ರಧಾನಿ ನರೇಂದ್ರ ಮೋದಿ ರಾಂಚಿಯಲ್ಲಿ ಉದ್ಘಾಟಿಸಿದ ನಂತರ ದೇಶಾದ್ಯಂತ 30 ರಾಜ್ಯಗಳ 445 ಜಿಲ್ಲೆಗಳಲ್ಲಿ ಉದ್ಘಾಟನೆಯಾಗಲಿದೆ.

ಈ ಯೋಜನೆಯಡಿ 2.65 ಲಕ್ಷ ಬೆಡ್‌ಗಳು ಬಡವರಿಗೆ 10,000 ಸರಕಾರಿ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ ದೊರಕಲಿವೆ. ರಾಷ್ಟ್ರೀಯ ಆರೋಗ್ಯ ಸಂಸ್ಥೆ ಜನರಿಗೆ ಉಪಯೋಗವಾಗಲೆಂದು ಸಹಾಯವಾಣಿ 14555 ಆರಂಭಿಸಿದೆ. ಅಲ್ಲದೇ ವೆಬ್‌ಸೈಟ್‌ mera.pmjay.gov.in ನಲ್ಲಿ ಸಂಪೂರ್ಣ ಮಾಹಿತಿ ನೀಡಿದೆ.

ಈ ಯೋಜನೆ ಮೂಲಕ ಪ್ರತಿ ಕುಟುಂಬಕ್ಕೆ ವಾರ್ಷಿಕ ಹತ್ತು ಲಕ್ಷ ರುಗಳ ತನಕ ಚಿಕಿತ್ಸೆ ವೆಚ್ಚವನ್ನು ಭರಿಸಲು ಸರಕಾರ ಉದ್ದೇಶಿಸಿದೆ. ಈ ಮೂಲಕ ದೇಶದ ಹತ್ತು ಕೋಟಿಗೂ ಹೆಚ್ಚು ಕುಟುಂಬಗಳಿಗೆ ನೆರವಾಗಲಿದೆ.

ಗ್ರಾಮೀಣ ಪ್ರದೇಶದ 8.03 ಕೋಟಿ ಬಡ ಕುಟುಂಬಗಳು ಹಾಗು ನಗರ ಪ್ರದೇಶದ 2.33 ಕೋಟಿ ಬಡ ಕುಟುಂಬಗಳಿಗೆ ಮೂಲಕ ನರವು ನೀಡಲು ಉದ್ದೇಶಿಸಲಾಗಿದೆ. ಆಧಾರ್‌ ಕಾರ್ಡ್‌, ಮತದಾರರ ಗುರುತಿನ ಚೀಟಿ ಅಥವಾ ಪಡಿತರ ಚೀಟಿಗಳನ್ನು ನೀಡುವ ಮೂಲಕ ಯೋಜನೆಯ ಫಲಾನುಭವಿಗಳಾಗಬಹುದಾಗಿದೆ.

ಜಗತ್ತಿನ ಅತಿ ದೊಡ್ಡ ಸರಕಾರೀ ಪ್ರಾಯೋಜಿತ ಆರೋಗ್ಯ ರಕ್ಷಾ ಯೋಜನೆ ಎಂದು ಹೇಳಲಾದ ಆಯುಷ್ಮಾನ್‌ ಭಾರತ ಕಾರ್ಯಕ್ರಮಕ್ಕೆ ಕೇಂದ್ರ ಸರಕಾರ 60% ನಷ್ಟು ವೆಚ್ಚ ಭರಿಸಲಿಲದ್ದರೆ, ಸಂಬಂಧಪಟ್ಟ ರಾಜ್ಯ/ಕೇಂದ್ರಾಡಳಿತ ಪ್ರದೇಶಗಳ ಸರಕಾರಗಳು 40% ನಷ್ಟು ವೆಚ್ಚವನ್ನು ಭರಿಸಲಿವೆ.

Tags

Related Articles

Leave a Reply

Your email address will not be published. Required fields are marked *

Language
Close