About Us Advertise with us Be a Reporter E-Paper

ಗೆಜೆಟಿಯರ್

ವಿಶ್ವದ ಚಿತ್ತ 5Gಯತ್ತ

ಶ್ರೀನಿವಾಸ. ನಾ. ಪಂಚಮುಖಿ

ಹೊಟ್ಟೆ, ಬಟ್ಟೆ ಒಂಚೂರು ಸೂರಿಗಾಗಿ ಇಡೀ ಜೀವನವನ್ನು ಟಿಪಿಕಲ್ ಮಧ್ಯಮವರ್ಗದ ಜಮಾನಾ ಈಗ ಮಾಯವಾಗಿದೆ. ಇಂದಿಗೂ ವಿಶ್ವದ ಬಹುಪಾಲು ಜನತೆ ಈ ಮೂಲಭೂತ ಸೌಲಭ್ಯಗಳಿಂದ ವಂಚಿತರಾಗಿದ್ದಾರೆ. ಆದರೆ ಇಂದು ಒಪ್ಪತ್ತಿನ ಊಟ ಕಡಿಮೆ ಇದ್ದರೂ ಕೈಗೆ ಶೋಭೆ ತರುವ ಸ್ಮಾರ್ಟ್ ಫೋನ್ ಅವಶ್ಯಕ ಎಂಬ ಭಾವ ಜನರಲ್ಲಿ ಮನೆಮಾಡಿದೆ! ಕಳೆದ ಕೆಲ ವರ್ಷಗಳಲ್ಲಾದ ಡಿಜಿಟಲ್ ತಾಂತ್ರಿಕತೆಯ ಅಭಿವೃದ್ಧಿ ಡೇಟಾ ಮತ್ತು ಸಾಮಾಜಿಕ ಜಾಲತಾಣಗಳನ್ನೂ ಮೂಲಭೂತ ಸೌಲಭ್ಯಗಳ ಶ್ರೇಣಿಗೆ ಸೇರಿಸಿದೆ ಎಂದರೆ ಉತ್ಪ್ರೇಕ್ಷೆಯಾಗಲಿಕ್ಕಿಲ್ಲ. ಮೊಬೈಲ್ ಇಲ್ಲದ ಜೀವನವನ್ನು ಕಲ್ಪಿಸುವುದು ಕಷ್ಟ ಆದರೆ ಇದಕ್ಕಿಂತಲೂ ಮಿಗಿಲಾಗಿ ಇಂಟರ್ನೆಟ್ ಇಲ್ಲದ ಮೊಬೈಲ್ನ್ನು ಊಹಿಸುವುದೂ ಅಸಾಧ್ಯ! ಇಡೀ ಜಗತ್ತೇ ಅಕ್ಷರಶಃ ನಮ್ಮ ಮುಷ್ಟಿಯಲ್ಲಿಯ ಮೊಬೈಲ್ನಲ್ಲಿ ಕೈದಿಯಾಗಿದೆ!

ಆಮೆವೇಗದ ಇಂಟರ್ನೆಟ್‌ಗೆ ಬೇಸತ್ತ ನಮಗೆ ಈಗ ಬೇಕಾಗಿರುವುದು ವೇಗಾತಿವೇಗದ ಅಂತರ್ಜಾಲ ಸಂಪರ್ಕ. ಒಂದಕ್ಕಿಂತ ಒಂದು ಆಕರ್ಷಣೀಯ ಇಂಟರ್ನೆಟ್ ಪ್ಲ್ಯಾನ್‌ಗಳು ಗ್ರಾಹಕರನ್ನು ತಮ್ಮತ್ತ ಸೆಳೆದರೂ ಅಂತರ್ಜಾಲದ ವೇಗ ಇಂದಿಗೂ ಎಡೆಬಿಡದೇ ಕಾಡುವ ಭೂತವಾಗಿದೆ. ಇನ್ನು ಮುಂದೆ ಬುಲೆಟ್ ರೈಲಿನ ವೇಗದ ಇಂಟರ್ನೆಟ್ ಸೇವೆ ಒದಗಿಸಲು ಬರಲಿದೆ 5g 2020ರ ಹೊತ್ತಿಗೆ ಅನೇಕ ದೇಶಗಳು 5g ತಂತ್ರಜ್ಞಾನವನ್ನು ಅಳವಡಿಸಿಕೊಂಡು ಅಂತರ್‌ಸಂಪರ್ಕದ ಹೊಸ ಯುಗಕ್ಕೆ ಭಾಷ್ಯ ಬರೆಯಲಿವೆ. 5g ಯಿಂದ ಇಂಟರ್ನೆಟ್ ವೇಗ 10ರಿಂದ 20ಪಟ್ಟು ಹೆಚ್ಚಲಿದೆಯೆಂದು ಹೇಳಲಾಗುತ್ತಿದೆ ಮತ್ತು ಅಂತರ್ಜಾಲದ ವೆಗ ಸುಮಾರು 1010GBPSನಷ್ಟಿರಬಹುದು ಎಂದು ಅಂದಾಜಿಸಲಾಗಿದೆ.

ಸದ್ಯಕ್ಕೆ ಮೂಲಭೂತ ಸೌಲಭ್ಯವನ್ನು ಉನ್ನತೀಕರಿಸಬೇಕಾದ್ದದ್ದರಿಂದ 5g ತಂತ್ರಜ್ಞಾನ ಕ್ರಾಂತಿಕಾರಿಯಾದರೂ ಅಷ್ಟೇ ದುಬಾರಿ ಕೂಡ ಹೌದು. ಈ ದುಬಾರಿ ಬೆಲೆಯ ಹೊರೆಯನ್ನು ಹೊರಲು ಅನೇಕ ದೇಶಗಳಿಗೆ ಸಾಧ್ಯವಾಗದೇ ವಿಶ್ವದ ವಿವಿಧ ದೇಶಗಳ ಡಿಜಿಟಲ್ ಕಂದಕ ಇನ್ನಷ್ಟು ವೃದ್ಧಿಸಬಹುದು. ತಾಂತ್ರಿಕತೆಯ ಅಭಿವೃದ್ಧಿ ಮತ್ತು ನಾವೀನ್ಯತೆ ನಿಸ್ಸಂಕೋಚವಾಗಿ ಮಾನವನ ಜೀವನದ ಗುಣಮಟ್ಟವನ್ನು ಎತ್ತರಕ್ಕೇರಿಸಿ ಊಹಿಸಿದ್ದಕಿಂತ ಸರಳ ಮತ್ತು ಸುಖಮಯವಾಗಿಸಿದೆ. 5ಎಯ ಆಗಮನ ಭಾರತದಲ್ಲಿಯೂ ಗ್ರಾಹಕರ ಮುಖದ ಮೇಲೆ ಮಂದಹಾಸ ಮೂಡಿಸಿ ಉದ್ಯೋಗಪತಿಗಳ ಜೇಬು ತುಂಬಬಹುದು.

ತಂತ್ರಜ್ಞಾನದ ಕುರಿತು

ಮೊಬೈಲ್ ಫೋನ್‌ಗಳ ಸಂಪರ್ಕಕ್ಕಾಗಿ ರೇಡಿಯೋ ತರಂಗಗಳನ್ನು ಬಳಸಲಾಗುತ್ತದೆ. ಭೂಮಿಯ ಎಲ್ಲೆಡೆ ವ್ಯಾಪಿಸಿರುವ ಈ ವಿದ್ಯುತ್ಕಾಂತೀಯ ತರಂಗಗಳ ಆಕರ ಸೂರ್ಯ. ನಕ್ಷತ್ರ ಮತ್ತು ನಕ್ಷತ್ರಪುಂಜಗಳು ಕೂಡ ಈ ಅಲೆಗಳನ್ನು ಸೂಸುತ್ತವೆ. ಈ ಅಲೆ/ತರಂಗಗಳನ್ನು ಅವುಗಳ ಆವರ್ತನದ ((frequency) ಆಧಾರದ ಮೇಲೆ ವಿಂಗಡಿಸಲಾಗುತ್ತದೆ. ಒಂದು ನಿರ್ದಿಷ್ಟವಾದ ಆವರ್ತನದ ಶ್ರೇಣಿಯಲ್ಲಿರುವ ತರಂಗಗಳ ಗುಚ್ಛವನ್ನು ಸ್ಪೆಕ್ಟ್ರಮ್ ಎಂದು ಕರೆಯುತ್ತಾರೆ. ಆವರ್ತನಕ್ಕೆ ಸಂಬಂಧಿಸಿದಂತೆ ಮೊಬೈಲ್ ಫೋನ್‌ಗಳಲ್ಲಿ ಜಿ.ಎಸ್.ಎಮ್. Global System For Mobile Communication) ಮತ್ತು ಸಿ.ಡಿ.ಎಮ್.. (ಇCode Division Multiple Access) ಎಂಬೆರಡು ಬಗೆಯ ತಂತ್ರಜ್ಞಾನಗಳನ್ನು ಉಪಯೋಗಿಸಲಾಗುತ್ತದೆ.

ಬಹುತೇಕ ದೇಶಗಳು ತಮ್ಮ ಬಹುಪಾಲು ರೇಡಿಯೋ ಸ್ಪೆಕ್ಟ್ರಮ್‌ನ್ನು ಸೈನಿಕ ಬಳಕೆಗಾಗಿ ಮೀಸಲಿಟ್ಟು, ಮಿಕ್ಕಿದ್ದನ್ನು ಬಳಕೆಗಾಗಿ ನೀಡುತ್ತವೆ. ಭಾರತದಲ್ಲಿ 5Gಗಾಗಿ 3.3-3.6 GHz ಫ್ರೀಕ್ವೆನ್ಸಿ ಬ್ಯಾಂಡ್‌ನ್ನು (ತರಂಗಾಂತರಗಳ ಆವೃತ್ತಿ ಪಟ್ಟಿ) ಬಳಸಲು ಟ್ರಾಯ್ (TRAI)) ಶಿಫಾರಸು ಮಾಡಿದೆ. 5Gಗೆ ಉಪಯೋಗಿಸುವ ರೇಡಿಯೋ ತರಂಗಗಳ ಮತ್ತು ಸ್ಪೆಕ್ಟ್ರಮ್ ಕುರಿತು ಚರ್ಚಿಸಲು 2019ರಲ್ಲಿ ಜಿನೀವಾದಲ್ಲಿರುವ ಅಂತಾರಾಷ್ಟ್ರೀಯ ಟೆಲೇಕಾಮ್ ಯೂನಿಯನ್‌ನ ಸಭೆ ನಡೆಯಲಿದೆ. ತರಂಗಗಳ ಪಟ್ಟಿಯ ಆವೃತ್ತಿ ಬಗ್ಗೆ ತೀರ್ಮಾನವಾದ ನಂತರ ಅದಕ್ಕುನುಗುಣವಾಗಿ ಸಂಬಂಧಿಸಿದ ಉಪಕರಣಗಳನ್ನು ತಯಾರಿಸುವ ಕಂಪನಿಗಳು ತಮ್ಮ ಉಪಕರಣಗಳನ್ನು ಟ್ಯೂನ್ ಮಾಡುತ್ತವೆ. ನಂತರ 5ಎ ಸ್ಪೆಕ್ಟ್ರಮ್ನ ನಡೆಯಲಿದೆ. ಶುರುವಾತಿನಲ್ಲಿ 5ಎಯ ಅಲೆಗಳಿಗೆ 3600ಏ್ಢ ತರಂಗಗಳು ಸೂಕ್ತವೆಂದು ಹೇಳಲಾಗುತ್ತಿದೆ. ನಂತರದ ದಿನಗಳಲ್ಲಿ ಮಿಲಿಮೀಟರ್ ವೇವ್ ಸ್ಪೆಕ್ಟ್ರಮ್ ಪ್ರಮುಖ ಪಾತ್ರವಹಿಸಲಿವೆ.

5ನೇ ತಲೆಮಾರಿನ ಈ ಮೊಬೈಲ್ ಸೇವೆ ಇಂಟರ್ನೆಟ್ ವೇಗದಲ್ಲಿ ಕ್ರಾಂತಿ ತರಲಿದೆ ಎನ್ನಲಾಗುತ್ತಿದೆ. ಸ್ವೀಡನ ಮತ್ತು ಅಮೇರಿಕಾದಲ್ಲಿ ಈ ಸೇವೆ ಬಹುತೇಕ ಮುಂದಿನ ವರ್ಷ ಹಾಗೂ ಏಷಿಯಾದಲ್ಲಿ ಚೀನಾ ಮತ್ತು ಜಪಾನ ಒಂದೆರಡು ವರ್ಷಗಳಲ್ಲಿ 5G ಸೇವೆ ಪ್ರಾರಂಭಿಸುವ ತರಾತುರಿಯಲ್ಲಿವೆ. ಈ ವರ್ಷ ಫೆಬ್ರುವರಿಯಲ್ಲಿ 5ಎ ಪರೀಕ್ಷಾ ಸಂಪನ್ನಗೊಳಿದ ದಕ್ಷಿಣ ಕೋರಿಯಾ ಮಾರ್ಚ್ 2019ರಲ್ಲಿ ಈ ಸೇವೆ ಪ್ರಾರಂಭಿಸಿ 5G ಸೇವೆ ನೀಡುವ ಪ್ರಥಮ ದೇಶವಾಗುವ ತಯಾರಿಯಲ್ಲಿದೆ. ಭಾರತದಲ್ಲೂ ಈ ತಂತ್ರಜ್ಞಾನ ಒಂದೆರಡು ವರ್ಷಗಳಲ್ಲಿ ಪ್ರಾರಂಭವಾಗುವ ಆಶಯವಿದೆ. ಈಗಾಗಲೇ ಬಿ.ಎಸ್.ಎನ್.ಎಲ್. ಜಪಾನಿನ NTT ಕಂಪನಿಯೊಂದಿಗೆ ಈ ನಿಟ್ಟಿನಲ್ಲಿ ಒಪ್ಪಂದ ಮಾಡಿಕೊಂಡಿದೆ.

5Gಯ ಲಾಭಗಳು

ಕಡಿಮೆ ದರದ ಇಂಟರ್ನೆಟ್ ಸೇವೆ ಮತ್ತು ಇತ್ತೀಚಿನ ವರ್ಷಗಳಲ್ಲಾದ ಸಂಪರ್ಕ ಕ್ರಾಂತಿಯ ಪರಿಣಾಣಮಸ್ವರೂಪ, ವಿಶ್ವದಲ್ಲಿ ಭಾರತ ಅತೀ ವೇಗದಲ್ಲಿ ಬೆಳೆಯುತ್ತಿರುವ ಸ್ಮಾರ್ಟ್ ಫೋನ್ 2019ರ ಹೊತ್ತಿಗೆ ಸುಮಾರು ವಿಶ್ವದ 13.5% ಸ್ಮಾರ್ಟ್ ಫೋನ್‌ಗಳು ಭಾರತದಲ್ಲಿರಲಿವೆ. ಈಗ ಲಭ್ಯವಿರುವ ವೇಗತಿವೇಗದ 4MBPS ಸೈದ್ಧಾಂತಿಕ ಸ್ಪೀಡ್ 150MBPS ಆದರೆ ಗ್ರಾಹಕರಿಗೆ ದೊರೆಯುವ ಸರಾಸರಿ ಇಂಟರ್ನೆಟ್ ವೇಗ 45MBPS ಮಾತ್ರ, 5ಎಯ ಕೊಡುಗೆಯಿಂದ ಇದಕ್ಕಿಂತ 10ರಿಂದ 20 ಪಟ್ಟು ವೇಗದಲ್ಲಿ ಇಂಟರ್ನೆಟ್ ಲಭ್ಯವಾಗಲಿದೆ. 3ಘಂಟೆಯ ಹೈ ಡೆಫಿನಿಶನ್ ಚಲನ ಚಿತ್ರವೊಂದನ್ನು ಕೆಲವೇ ಸೆಕೆಂಡಗಳಲ್ಲಿ ಚಿಟಿಕೆ ಹೊಡೆಯುವಷ್ಟರಲ್ಲಿ ಡೌನ್‌ಲೋಡ್ ಮಾಡಬಹುದು! 4G ಡೇಟಾ ಸಂಚಾರದ 70ಮಿಲಿ ಸೆಕೆಂಡಗೆ ಹೊಲಿಸಿದಲ್ಲಿ ಸೆಕೆಂಡ್‌ನಲ್ಲಾಗುವ 5Gಡೇಟಾ ಡೆಲೆವರಿ ವಿಡಿಯೋಗಳ ಸ್ಟ್ರೀಮಿಂಗ್‌ನಲ್ಲಾಗುವ ಬಫರಿಂಗ್‌ನ ಕಿರಿಕಿರಿ ಮಾಯವಾಗಿಸಲಿದೆ. ಮಿಂಚಿನ ವೇಗದಲ್ಲಿ ದಂತ್ತಾಂಶದ ವಿನಿಮಯ ಸಾಧ್ಯವಾಗಿ, ಸ್ಮಾರ್ಟ್ ನಗರಗಳ ನಿರ್ಮಾಣ, ಸಂಚಾರ ದಟ್ಟಣೆಯ ನಿಭಾಯಿಸುವಲ್ಲಿ, ಶಸ್ತ್ರಚಿಕೆತ್ಸೆಗಳಲ್ಲಿ 5G ಮಹತ್ವದ ಪತ್ರ ವಹಿಸಲಿದೆ.

1G ಆಧಾರಿತ ಬಳಸಿ ಜುಲೈ 31, 1995ರಂದು ಪಶ್ಚಿಮ ಬಂಗಾಲದ ತತ್ಕಾಲೀನ ಮುಖ್ಯಮಂತ್ರಿ ಜ್ಯೋತಿಬಸು ಅಂದಿನ ಕೇಂದ್ರೀಯ ಸಂಪರ್ಕ ಮಂತ್ರಿ ಸುಖರಾಮ್ರಿಗೆ ಮಾಡಿದ ವೈಸ್ ಕಾಲ್ ಭಾರತದ ಪ್ರಥಮ ಜಂಗಮವಾಣಿಯ ಕಾಲ್ ಆಗಿತ್ತು. 5G ಕೇವಲ ಮೊಬೈಲ್ಗೆ ಸೀಮಿತವಾಗಿರದೆ ನಮ್ಮ ಮನೆಯ ಪ್ರತಿ ಕೆಲಸದಲ್ಲಿ ಪಾಲುದಾರನಾಗಲಿದೆ. ಕೃತಕ ಬುದ್ಧಿವಂತಿಕೆ ಮತ್ತು ವರ್ಚುಯಲ್ ಸಹಾಯಕರ ಲೋಕಕ್ಕೆ ಹೊಸ ಮುನ್ನುಡಿ ಬರೆಯಲಿದೆ.

Tags

Related Articles

Leave a Reply

Your email address will not be published. Required fields are marked *

Language
Close