About Us Advertise with us Be a Reporter E-Paper

Breaking Newsಪ್ರಚಲಿತರಾಜ್ಯ
Trending

ಪ್ರವಾಹ ಪೀಡಿತ ಕೊಡಗಿನಲ್ಲಿ ಕಳ್ಳರ ಹಾವಳಿ..!

ಕೊಡಗು: ಪ್ರವಾಹ, ಭೂಕುಸಿತದಿಂದ ಕೊಡಗು ಜಿಲ್ಲೆ ಅಕ್ಷರಶಃ ತತ್ತರಿಸಿದೆ. ಸಾವಿರಾರು ಮಂದಿ ನಿರಾಶ್ರಿತರಾಗಿದ್ದು, ನಿರಾಶ್ರಿತರ ಶಿಬಿರದಲ್ಲಿ ಆಶ್ರಯ ಪಡೆಯುತ್ತಿದ್ದಾರೆ. ಆದ್ರೆ ಇದನ್ನೇ ಬಂಡವಾಳವಾಗಿಟ್ಟುಕೊಂಡ ಖದೀಮರು ಮಾತ್ರ ಕೊಳ್ಳೆ ಹೊಡೆಯುತ್ತಿದ್ದಾರೆ.

ಹೌದು, ಭಾರಿ ಮಳೆ, ಭೂಕುಸಿತದಿಂದ ಕಂಗಾಲಾಗಿರುವ ಕೊಡಗಿನಲ್ಲಿ ಜನಜೀವನ ಅಸ್ತವ್ಯಸ್ತಗೊಂಡಿದೆ. ಸಂಕಷ್ಟದಲ್ಲಿರುವ ಸಂತ್ರಸ್ತರನ್ನು ಭಾರತೀಯ ಸೇನೆ, ರಕ್ಷಣಾ ತಂಡ ಜೀವಕ್ಕೆ ಜೀವ ಕೊಟ್ಟು ರಕ್ಷಿಸುವ ಕೆಲಸ ಮಾಡುತ್ತಿದೆ. ಆದ್ರೆ ಊರಿಗೆ ಊರೇ ನಾಶವಾದರೂ ಕಳ್ಳರು ಮಾತ್ರ ತಮ್ಮ ದುಷ್ಕೃತ್ಯವನ್ನು ಬಿಟ್ಟಿಲ್ಲ. ಮಡಿಕೇರಿ ತಾಲೂಕಿನ ಜೋಡುಪಾಲ ಸುತ್ತಮುತ್ತ ಸುಮಾರು 20ಕ್ಕೂ ಹೆಚ್ಚು ಮನೆಗಳಿಗೆ ಖದೀಮರು ಕನ್ನ ಹಾಕಿದ್ದಾರೆ. ಮನೆಗಳಲ್ಲಿನ ಹೆಂಚನ್ನು ತೆಗೆದು ಕಳವು ಮಾಡುತ್ತಿದ್ದಾರೆ ಎಂದು ತಿಳಿದು ಬಂದಿದೆ.

Tags

Related Articles

Leave a Reply

Your email address will not be published. Required fields are marked *

Language
Close