About Us Advertise with us Be a Reporter E-Paper

ಗುರು

ಸಿದ್ಧಾಂತದ ಆಚರಣೆ ಪಿತೃಪಕ್ಷ

ಡಾ. ಗುರುರಾಜ ಪೋಶೆಟ್ಟಿಹಳ್ಳಿ

ಮ್ಮ ಇಡೀ ಬದುಕನ್ನು ಮಕ್ಕಳಿಗಾಗಿಯೇ ಸವೆಸಿ, ವಯಸ್ಸು ಮಾಗಿ, ಬೆನ್ನು ಬಾಗಿ, ವಯೋವೃದ್ಧರಾದಾಗ ಅವರನ್ನು ಪ್ರೀತಿ ಅಕ್ಕರೆಯಿಂದ, ಅವರ ಬೇಕುಬೇಡಗಳನ್ನು ಅರಿತು ಸೇವೆ ಮಾಡುವುದರಲ್ಲೇ ಮಕ್ಕಳ ಬದುಕಿನ ಸಾರ್ಥಕತೆ ಇದೆ. ಈ ಸಾರ್ಥಕತೆ ಪರಿಪೂರ್ಣವಾಗಲು ಮಕ್ಕಳು ಹೆತ್ತವರು ಸತ್ತಮೇಲೂ ಅವರ ಸ್ಮರಣೆಯಲ್ಲಿ ಇರಬೇಕು. ಪರಲೋಕದಲ್ಲೂ ಅವರ ಆತ್ಮಕ್ಕೆ ಶಾಂತಿ ನೀಡಲು ಪ್ರಯತ್ನಕ್ಕೊಂದು ದಾರಿಯೇ ಪಿತೃಪಕ್ಷ, ಹಾಗೂ ಈ ನಡೆಸುವ ಪಿತೃಕಾರ್ಯ.

ಶ್ರಾದ್ಧಕ್ರಿಯೆಯು ವರ್ಷದಲ್ಲಿ ಒಂದು ದಿನ ಮಾತ್ರ ವಾದರೂ ಪಿತೃಗಳಿಗೆ ಅನುದಿನವೂ ಅದರ ಫಲ ಲಭಿಸುತ್ತದೆ. ಕಾಲಗಣತಿಯ ಪ್ರಕಾರ ಪಿತೃಗಳ ಒಂದು ದಿನಕ್ಕೆ ಮಾನವರ ಒಂದು ವರ್ಷಬೇಕು. ಅಲ್ಲದೇ ಪಿತೃದೇವತೆಗಳಿಗೆ ದೂರದರ್ಶನ ಶ್ರವಣ ಶಕ್ತಿಗಳಿವೆ. ಪಿತೃಕಾರ್ಯದ ನಿಮಿತ್ತ ಹೇಳುವ ಮಂತ್ರ ಸ್ವರಗಳ ಸ್ಪಂದನಗಳು ಪಿತೃದೇವತೆಗಳಿಗೆ ತಲುಪಿ ಪ್ರಭಾವವನ್ನು ಬೀರುತ್ತವೆ. ಇದನ್ನು ಗೀತೆಯಲ್ಲಿ ಶ್ರೀಕೃಷ್ಣನು ಸವಿಸ್ತಾರವಾಗಿ ಹೇಳಿದ್ದಾನೆ. ಪಿತೃ ಕಾರ್ಯಗಳು ಪುನರ್‌ಜನ್ಮ ಸಿದ್ಧಾಂತವನ್ನು ಸಮರ್ಥಿ ಸುತ್ತವೆ. ಅಲ್ಲದೇ ಜನ್ಮಾಂತರ ನಿರ್ಮಾಣಕ್ಕೆ ಸಹಕಾರಿ. ಮೃತವ್ಯಕ್ತಿಯ ಸೂಕ್ಷ್ಮ ಶರೀರವು ಯಾವುದೇ ಅಜ್ಞಾತ ಯೋನಿಯಲ್ಲಿದ್ದರೂ, ಶ್ರದ್ಧಾ ಪೂರ್ವಕ, ವಿಧಿಪೂರ್ವಕ ಮಾಡಲ್ಪಟ್ಟ ಶ್ರಾದ್ಧದಲ್ಲಿ ಕ್ರಿಯಾ ಶಕ್ತಿ, ಮಂತ್ರಶಕ್ತಿ, ದ್ರವ್ಯಶಕ್ತಿಗಳು ಸಮ್ಮಿಲಿತ ಗೊಂಡು, ಪಿತೃಗಳಿಗೆ ಪಿಂಡ ತಿಲ ತರ್ಪಣಗಳು ರೂಪಾಂತರವನ್ನು ಹೊಂದಿ ಅವರವರ ಆಹಾರವಾಗಿ ಪರಿಣಮಿಸುತ್ತದೆ ಎಂಬ ನಂಬಿಕೆ ಇದೆ. ಸಾಮಾನ್ಯ ಮಾನವರಿಗೆ, ಅಗೋಚರವಾದ ತತ್ತ್ವವನ್ನು ಋಷಿ ವರ್ಯರು ಬಲ್ಲವರಾಗಿದ್ದಾರೆ.

ಎಲ್ಲಾ ಜೀವಗಳು ತೃಪ್ತರಾಗಲಿ

ಧರ್ಮರಾಜನು ಭೀಷ್ಮಾಚಾರ್ಯರಲ್ಲಿ ಪಿತೃ ಕಾರ್ಯದ ಬಗೆಗೆ ಕೇಳಿದಾಗ ಭೀಷ್ಮರು ತಮ್ಮದೇ ಹೇಳುತ್ತ ಪಿತೃಕಾರ್ಯದ ಶ್ರೇಷ್ಠತೆ ಯನ್ನು ತಿಳಿಸುತ್ತಾರೆ. ತಂದೆಯ ಶ್ರಾದ್ಧವನ್ನು ವಿದ್ಯುಕ್ತ ರೀತಿಯಲ್ಲಿ ಮಾಡಿ, ತಂದೆಯಿಂದ ಇಚ್ಚಾಮರಣಿ ಅನುಗ್ರಹ ಪಡೆದ ತಮ್ಮ ಪ್ರಸಂಗವನ್ನು ತಿಳಿಸಿ ಪಿತೃಕಾರ್ಯದ ಮಹಿಮೆಯನ್ನು ವಿವರಿಸು ತ್ತಾರೆ. ಭಗವದ್ಗೀತೆಯಲ್ಲಿ ಶ್ರೀಕೃಷ್ಣನು ಹೆತ್ತವರಿಗೆ ದೇವರ ಸ್ಥಾನಮಾನ ನೀಡಿ, ಅವರು ಸತ್ತ ಮೇಲೂ ಅವರ ಸ್ಮರಣೆ ಇರುವುದು ಧರ್ಮ ಎಂದಿದ್ದಾನೆ. ಪಿಂಡ ತಿಲ ತರ್ಪಣವನ್ನು ಗತಿಸಿದ ಹೆತ್ತವರಿಗೆ ನೀಡುವ ಈ ಪಿತೃಕಾರ್ಯವನ್ನು ಮಕ್ಕಳು ಮರೆತು ಬಿಟ್ಟರೆ, ಅದು ಸಾಮಾಜಿಕ ಹಾಗೂ ಅವನತಿಯ ಕೊನೆಯ ಹಂತವೆನ್ನುತ್ತದೆ ಭಗವದ್ಗೀತೆ.

ದರ್ಬೆಯ ಹಿಂದಿನ ಮಹತ್ವ

ಶ್ರಾದ್ಧ ಕಾರ್ಯಗಳಲ್ಲಿ ದರ್ಬೆಯ ಪಾತ್ರ ಪ್ರಮುಖ ವಾಗಿದೆ. ಶುಭ್ರವಾದ ನೆಲದಲ್ಲಿ ಬೆಳೆದಿರುವ ಹಸಿರು ವರ್ಣದ ದರ್ಬೆಯನ್ನು ಬೇರು ಸಮೇತ ಕಿತ್ತು ಬಳಸುವುದೇ ಶ್ರೇಷ್ಟ. ದರ್ಬೆಯಲ್ಲಿ ತೇಜಸ್ಸು ಮತ್ತು ಜಲಾಂಶ ಮುಖ್ಯವಾಗಿರುತ್ತದೆ. ಶ್ರಾದ್ಧ ಕಾರ್ಯದಲ್ಲಿ ಬಳಕೆ ಯಾಗುವ ದರ್ಬೆಯಿಂದಾಗಿ ಸಾತ್ವಿಕ ಗುಣ ವರ್ಧಿಸುತ್ತದೆ. ಭೌತಶಾಸ್ತ್ರದ ಆಬ್ಸಲ್ಯೂಟ್ ಏರ್ ಪ್ರಿನ್ಸಿಪಾಲ್ ಸಿದ್ಧಾಂತದ ಅನ್ವಯ ದರ್ಬೆಯಿಂದ ಹೊರಸೂಸಲ್ಪಟ್ಟ ಚೈತನ್ಯವು ಊರ್ದ್ವಮುಖವಾಗಿ ಸಾಗುತ್ತದೆ. ಅದರ ಪ್ರಭಾವ ಶ್ರಾದ್ಧ ನಡೆಯುತ್ತಿರುವ ಸ್ಥಳದ ಮೇಲಾಗುತ್ತದೆ.

ಶ್ರುತಿ, ವೇದ ಹಾಗೂ ಸ್ಮತಿಗಳು ಪಿತೃಕಾರ್ಯದ ಬಗೆಗೆ ತುಂಬ ವೈಜ್ಞಾನಿಕವಾಗಿ ಹೇಳಿವೆ. ಅವುಗಳ ಪ್ರಕಾರ ಮನೋಮಯ ಸೂಕ್ಷ್ಮ ದೇಹವು ಸಂಕಲ್ಪ ರೂಪವಾಗಿದೆ. ಪಿತೃಗಳಿಗೆ ಅವರ ಹೆಸರಿನಿಂದ ಸಂಕಲ್ಪಿಸಿಕೊಟ್ಟ ಗವ್ಯವು ಅವರಿಗೆ ತೃಪ್ತಿ ತರುತ್ತದೆ. ಪಿತೃ ಕಾರ್ಯದಲ್ಲಿ ಅವರಿಗೆ ಕೊಟ್ಟ ಆಹಾರಾದಿಯು ಅವರ ಆಹಾರಾದಿಯಾಗಿ ಪರಿಣಮಿಸುತ್ತದೆ. ಕರ್ಮಯೋಗದಿಂದ ಅವರನ್ನು ದ್ದೇಶಿಸಿ ನೀಡಿದ ಆಹಾರಾದಿ ದ್ರವ್ಯಗಳು ಅವರು ಯಾವುದೇ ಲೋಕ ದಲ್ಲಿ ಯಾವುದೇ ಸ್ಥಿತಿಯಲ್ಲಿದ್ದರೂ

ಜನಪದ ಸಂಸ್ಕೃತಿಯಲ್ಲಿ ವಿಶಿಷ್ಟ ಆಚರಣೆ

ಸತ್ತವರ ನೆನಪಿನಲ್ಲಿ ವರ್ಷಕ್ಕೊಮ್ಮೆ ಆಚರಿಸುವ ಪದ್ಧತಿಗೆ ಶಿಷ್ಟ ಪರಂಪರೆಯಲ್ಲಿ ಪಿತೃಪಕ್ಷ, ಶ್ರಾದ್ಧ ಎಂಬ ಹೆಸರುಗಳಲ್ಲಿ ಕರೆದರೆ ಜನಪದ ಪರಂಪರೆ ಯಲ್ಲಿ ಹಿರಿಯರ ಹಬ್ಬ, ಮಾಳ ಪಕ್ಷ ಎಂದು ಹೇಳುವು ದಿದೆ. ನಮ್ಮ ರಾಜ್ಯದಲ್ಲಿ ಈ ಆಚರಣೆಯಲ್ಲಿ ವೈವಿಧ್ಯ ವಿದೆ. ಉತ್ತರ ಕರ್ನಾಟಕದಲ್ಲಿ ಮಾಸ್ತಿಗಲ್ಲು, ವೀರ ಗಲ್ಲುಗಳಿಗೆ ಪೂಜೆ ನಡೆದರೆ, ದಕ್ಷಿಣ ಭಾಗದ ರಾಜ್ಯ ಗಳಲ್ಲಿ ಅದರ ಆಚರಣೆಯ ಸ್ವರೂಪವೇ ಬೇರೆ ರೀತಿಯಾಗಿರುತ್ತದೆ.

ಹಿರಿಯರು ಕಾಲ ಅವರಿಗೆ ಸಹಕಾರ ನೀಡಿದ ಪ್ರಕೃತಿಯನ್ನು ನೆನೆಯುವ ಆಚರಣೆ ಈ ವರ್ಗಗಳು ಇರುವುದು ಬಹುಮುಖ್ಯ ಅಂಶ. ಹಿರಿಯರು ಮದ್ಯಪಾನಿಗಳಾಗಿದ್ದರೆ, ಬೀಡಿ ಸೇದುತ್ತಿದ್ದರೇ, ಮಾಂಸಾಹಾರಿಗಳಾಗಿದ್ದರೆ, ಸಸ್ಯಾ ಹಾರಿಗಳಾಗಿದ್ದರೆ, ಅದನ್ನೇ ಆ ಹೊತ್ತಿನ ನೈವೇದ್ಯಕ್ಕಾಗಿ ಇರಿಸುವುದುಂಟು. ಇದರ ಅಲ್ಪಭಾಗವನ್ನು ಪೂಜೆ ಮಾಡಿಕೊಡಲು ಬಂದ ಪೂಜಾರಿ ಸೇವಿಸಲೇಬೇಕು. ಆಗಲೇ ಅದು ಸತ್ತು ಸ್ವರ್ಗದಲ್ಲಿರುವ ಹಿರಿಯರಿಗೆ ಸಂದಾಯವಾಗುತ್ತೆಂದು ಆಯಾ ಕುಟುಂಬದವರು ತಿಳಿಯುತ್ತಾರೆ.

ಜೀವಸೃಷ್ಟಿಯಲ್ಲಿದೆ ಮಂತ್ರದ ಅಂತರಾರ್ಥ

ತ್ಯಾಗ ಮನೋಭಾವನೆಯಿಂದ ಮಾಡುವ ಪ್ರತಿಯೊಂದು ಕಾರ್ಯವೂ ಅದು ದೇವ ಯಜ್ಞ, ಋಷಿಯಜ್ಞ ಅಥವಾ ಪಿತೃಯಜ್ಞ ವಾಗಿರಬಹುದು. ಪಿತೃಯಜ್ಞ ಶರೀರಕ್ಕೇ, ಜೀವ ಸೃಷ್ಟಿಗೆ ಸಂಬಂಧಿಸಿದ್ದು. ಒಂದು ಎಳ್ಳಿನ ತೆನೆ ನೂ ರಾರು ಎಳ್ಳಿನ ಗಿಡಗಳ ಹುಟ್ಟಿಗೆ ಕಾರಣ. ಹಾಗೆ ಜೀವವು. ಅಧ್ಯಯನದ ಪ್ರಕಾರ ಹೃದಯ ಭಾಗ ದಲ್ಲಿರುವ ಸೈನೋ ಆಟ್ರಿಯಲ್ ನೋಡ್‌ನಲ್ಲಿ ಪ್ರಾಣಶಕ್ತಿ ಪಲ್‌ಸ್ನ ಮಾದರಿಯಲ್ಲಿ ಗೋಚರ ವಾಗುತ್ತದೆ. ಅದರ ಗಾತ್ರ ಒಂದು ತಿಲಮಾತ್ರ ದಷ್ಟು. ಪಿತೃದೇವತೆಗಳು ಜೀವಸೃಷ್ಟಿಯ ಒಂದು ಭಾಗವೇ ಆಗಿದೆ. ನಮ್ಮ ಆಚರಣೆಗಳಲ್ಲಿ ಕಾಕತಾಳೀಯವಿದೆ. ಪ್ರಕಾರ ಎಳ್ಳಿನ ಲ್ಲಿರುವ ಖನಿಜಾಂಶ, ವಿಟಮಿನ್‌ಗಳು ಋತು ಚಕ್ರವನ್ನು ಸಮತೋಲನದಲ್ಲಿರಿಸುತ್ತವೆ.

ತರ್ಪಣ ವಿಧಾನದಲ್ಲಿ ಪ್ರತ್ಯೇಕತೆಯಿದೆ. ಅಂಗೈಯಲ್ಲಿ ಹಿಡಿದುಕೊಂಡ ಜಲವನ್ನು ನೇರ ವಾಗಿ ನೀಡಿದಾಗ ದೇವತರ್ಪಣ. ಅದೇ ಬ್ರಹ್ಮ ತೀರ್ಥವನ್ನು ಅಂಗುಷ್ಟದಿಂದ ಕೊಟ್ಟಾಗ ಪಿತೃ ತರ್ಪಣ. ಕಿರುಬೆರಳಿನಿಂದ ಕೊಟ್ಟಾಗ ಋಷಿ ತರ್ಪಣವಾಗುತ್ತದೆ.

Tags

Related Articles

Leave a Reply

Your email address will not be published. Required fields are marked *

Language
Close