About Us Advertise with us Be a Reporter E-Paper

ಅಂಕಣಗಳು

ಯಡಿಯೂರಪ್ಪರ ಮುಂದಿರುವ ಎರಡು ದಾರಿಗಳು

ಕೆ.ಎಂ.ಶಿವಪ್ರಸಾದ್

ಬ್ಬ ಜನನಾಯಕನಾದವನು ತನ್ನ ಮುಂದಿನ ಪೀಳಿಗೆಗೆ ಏನಾದರೂ ಒಂದು ಮಾದರಿಯನ್ನು ನಿರ್ಮಿಸಿ ಕೊಡಬೇಕು. ಅದರಲ್ಲಿ ತನ್ನದೇ ಆದ ವಿಶೇಷತೆಗಳಿರಬೇಕು. ಇಡೀ ಪೀಳಿಗೆಯೇ ಅವರ ಮಾದರಿಯನ್ನು ಅನುಸರಿಸಲು ಇಷ್ಟಪಡಬೇಕು. ಆದರೆ ಏಕೋ ನಮ್ಮ ನಾಡಿನ ಜನಪ್ರತಿನಿಧಿಗಳಿಗೆ ಅರಿವಿಲ್ಲ. ಭವಿಷ್ಯದ ಪೀಳಿಗೆ ಮೆಚ್ಚುವುದಿರಲಿ, ಪ್ರಸಕ್ತ ಅವರ ಸುತ್ತಮುತ್ತ ಇರುವವರೇ ಅವರ ನಡೆನುಡಿಗಳನ್ನು ಒಪ್ಪಲಾಗದಷ್ಟು ಅಸಹ್ಯ ನಡೆವಳಿಕೆ ತೋರುವ ಮೂಲಕ ಇವರೆಂಥಾ ನಾಯಕರು ಎಂದು ಜನ ಹಾದೀಬೀದಿಯಲ್ಲಿ ಅಪಹಾಸ್ಯ ಮಾಡುವಂತಹ ಸಂದಿಗ್ಥ ಪರಿಸ್ಥಿತಿ ಸೃಷ್ಟಿಸಿದ್ದಾರೆ. ಅದರಲ್ಲೂ ಒಂದು ಬಾರಿ ಮಾಡಿದ ತಪ್ಪನ್ನೇ ಅರಗಿಸಿಕೊಳ್ಳಲು ಆಗದಿದ್ದರೂ ಅವೇ ತಪ್ಪುಗಳನ್ನು ಪುನಾರವರ್ತಿಸುವ ಮೂಲಕ ತಾವು ನಾಯಕರಾಗಲೂ ಅನರ್ಹರೆಂದೂ ಬಿಂಬಿಸಿಕೊಳ್ಳುತ್ತಿದ್ದಾರೆ. ಅದರಲ್ಲೂ ಬಿಜೆಪಿಯ ರಾಜ್ಯಾಧ್ಯಕ್ಷ, ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅಂತೂ ತಪ್ಪುಗಳಿಂದಲೇ ತಮ್ಮ ಇಮೇಜ್ ಅನ್ನು ಹಾಳು ಮಾಡಿಕೊಂಡಿದ್ದಾರೆ.

ಕುಮಾರಸ್ವಾಮಿ ಅವರ ವಚನ ಭ್ರಷ್ಟತೆಯ ವಿರುದ್ಧ ಸಿಡಿದೆದ್ದ ನಾಡಿನ ಜನ, ಜಾತಿಧರ್ಮಗಳ ಭೇದ ಮರೆತು ಬಿಜೆಪಿಗೆ ಮತ ನೀಡಿ ಯಡಿಯೂರಪ್ಪರನ್ನು ಮುಖ್ಯಮಂತ್ರಿಯನ್ನಾಗಿಸಿದರು. ಆದರೆ ಅಲ್ಪಮತದ ಸರಕಾರದ ನೆಪವೊಡ್ಡಿದ ಯಡಿಯೂರಪ್ಪ ಇತರ ಪಕ್ಷಗಳಿಂದ ಚುನಾಯಿತರಾಗಿದ್ದ ನಾಯಕರನ್ನು ಆಪರೇಷನ್ ಕಮಲದ ಮೂಲಕ ತಮ್ಮ ಪಕ್ಷಕ್ಕೆ ಸೇರಿಸಿಕೊಂಡು ಅವರಿಗೆ ಸಚಿವ ಸ್ಥಾನ, ನಿಗಮ ಮಂಡಳಿಗಳಲ್ಲಿ ದೊಡ್ಡದೊಡ್ಡ ಜವಾಬ್ದಾರಿಯನ್ನು ನೀಡಿ ಅವರ ಹಿತವನ್ನೇನೋ ಕಾಯ್ದುಕೊಂಡರು, ನಿಜ. ಮೂಲಕ ತಮ್ಮ ಪಕ್ಷದಲ್ಲಿ ಹತ್ತಾರು ವರ್ಷಗಳ ಕಾಲ ದುಡಿದವರನ್ನು ನಿರ್ಲಕ್ಷಿಸಿ ಮತ್ತೊಂದು ತರಹದ ಎಡವಟ್ಟು ಮಾಡಿಕೊಂಡು ಕೇವಲ ಮೂರೇ ವರ್ಷಕ್ಕೆ ಹಲವಾರು ಭ್ರಷ್ಟಾಚಾರದ ಆರೋಪದೊಂದಿಗೆ ಮುಖ್ಯಮಂತ್ರಿ ಪದವಿಯನ್ನು ಕಳೆದುಕೊಂಡರು.

ಆಪರೇಷನ್ ಕಮಲದ ಪರಿಣಾಮದಿಂದ ಉಂಟಾದ ವಲಸಿಗ ವರ್ಸಸ್ ಮೂಲ ನಾಯಕರೆಂಬ ತಿಕ್ಕಾಟದಲ್ಲಿ ಕೊನೆಗೆ ಮಾತೃ ಪಕ್ಷವನ್ನು ತೊರೆದು ಹೊರಬರಬೇಕಾಯಿತು. ನಂತರ ಸ್ವಂತವಾಗಿ ಕಟ್ಟಿದ ಪಕ್ಷ, ರಾಜ್ಯಾದ್ಯಂತ ಕೇವಲ ಆರೇ ಸ್ಥಾನಗಳಿಗೆ ಸೀಮಿತಗೊಂಡು ವರ್ಚಸ್ಸನ್ನು ಹಾಳು ಮಾಡಿಕೊಂಡರುಹೀಗೆ ಯಡಿಯೂರಪ್ಪ ಅಧಿಕಾರವಧಿಯುದ್ದಕ್ಕೂ ನಡೆದುಕೊಂಡ ರೀತಿ ಅವರನ್ನು ರಾಜ್ಯ ನಾಯಕನ ಸ್ಥಾನದಿಂದ ಜಾತಿ ನಾಯಕನ ಸ್ಥಾನಕ್ಕೆ ಸೀಮಿತಗೊಳಿಸಿಬಿಟ್ಟಿತು. ಕೊನೆಗೆ ಆಪರೇಷನ್ ಕಮಲ, ವಿಧಾನಸಭಾ ಗದ್ದಲ, ಶಾಸಕರ ಅನರ್ಹತೆಯ ಕಪ್ಪು ಮಸಿ ಬಳಿದುಕೊಂಡು ಕೆಟ್ಟ ಸಂಪ್ರದಾಯಕ್ಕೆ ನಾಂದಿ ಹಾಡಿ, ಕಳಂಕಿತ ಜನನಾಯಕನೆಂದು ಬಿಂಬಿತರಾದರು. ಹೋಗಲಿ ಈಗಲಾದರೂ ಬುದ್ಧಿ ಬಂದಿದೆಯಾ ಅಂದರೆ ಇಲ್ಲ; ಬದಲಾಗಿ ಹೋರಾಟಗಾರನೆಂಬ ಹಣೆಪಟ್ಟಿಯಿಂದ ಅಧಿಕಾರಕ್ಕಾಗಿ ಹಪಾಹಪಿಸುವ ಸಾಮಾನ್ಯ ರಾಜಕಾರಣಿಯಂತೆ ಜನರ ಕಣ್ಣಿಗೆ ಕಾಣಿಸಿಕೊಳ್ಳುತ್ತಿದ್ದಾರೆ.

ಸತ್ಯ ಹೇಳಬೇಕೆಂದರೆ ಬಾರಿಯ ವಿಧಾನಸಭಾ ಬಿಜೆಪಿಗೆ 104 ಸ್ಥಾನ ಬಂದಿದ್ದು ಯಡಿಯೂರಪ್ಪನ ನಾಯಕತ್ವಕ್ಕಾಗಲೀ ಅಥವಾ ಹೋರಾಟಗಳಿಗಾಗಲೀ ಅಲ್ಲ. ಬದಲಾಗಿ ಮೋದಿಯ ನಾಯಕತ್ವಕ್ಕೆ ರಾಜ್ಯದ ಮತದಾರ ಕೊಟ್ಟ ತೀರ್ಪು ಅದಾಗಿತ್ತು. ಮೋದಿ ರಾಜ್ಯಕ್ಕೆ ಚುನಾವಣೆಯ ಪ್ರಚಾರಕ್ಕೆ ಬರುವ ಮುಂಚೆ ಬಿಜೆಪಿಗೆ 50 ಸ್ಥಾನಗಳ ನಿರೀಕ್ಷೆಯೂ ಇರಲ್ಲಿಲ್ಲ. ಅಷ್ಟೇ ಏಕೆ, ಇದೇ ಮಹಾನ್ ನಾಯಕ ಯಡಿಯೂರಪ್ಪರಿಗೂ ಪಕ್ಷದ ಎಲ್ಲ ನಾಯಕರನ್ನು ಒಂದೇ ವೇದಿಕೆಗೆ ಕರೆತರಲು ಆಗಿರಲಿಲ್ಲ. ರಾಜ್ಯ ಬಿಜೆಪಿ ನಾಯಕರ ಕಿತ್ತಾಟ ನೋಡಿ ಅಮಿತ್ ಶಾ ಅವರೇ ಸಮಯದಲ್ಲಿ ರಾಜ್ಯಕ್ಕೆ ಆಗಮಿಸಿದ ಮೋದಿ ಅಬ್ಬರದ ಪ್ರಚಾರದ ಮೂಲಕ ಬಿಜೆಪಿಗೆ ಆಸರೆಯಾಗಿ ನಿಂತಿದ್ದಲ್ಲದೇ, ಇವರಿಗಿದ್ದ ಕೆಟ್ಟ ಇಮೇಜ್ ನಡುವೆಯೂ, ಸಿದ್ದು ತಂತ್ರಗಾರಿಕೆಯ ನಡುವೆಯೂ ಅಬ್ಬರ ಸೃಷ್ಟಿಸಿ ಹೋದರು. ಅದರಿಂದಾಗಿ, ಇವರ ಕಚ್ಚಾಟ ಏನೇ ಇದ್ದರೂ ಮೋದಿ ಮುಖ ನೋಡಿಯಾದರೂ ಬಿಜೆಪಿಗೆ ಮತ ಹಾಕೋಣವೆಂದು ರಾಜ್ಯದ ಮತದಾರ ತೀರ್ಮಾನ ಮಾಡಿದ್ದಲ್ಲದೇ ಒಳ್ಳೆ ಫಲಿತಾಂಶವನ್ನು ನೀಡಿದ. ಆದರೆ ಯಡಿಯೂರಪ್ಪ ಗೆಲುವೆಲ್ಲಾ ತಮ್ಮದೇ ಎಂದೂ ಬೀಗಿದ್ದಲ್ಲದೇ ಸ್ಪಷ್ಟ ಬಹುಮತವಿಲ್ಲದಿದ್ದರೂ ಆತುರಾತುರವಾಗಿ ವಚನ ಸ್ವೀಕಾರ ಮಾಡಿದರು. ನೇರವಾಗಿ ಕಾಂಗ್ರೆಸ್ ಪಕ್ಷದ ಶಾಸಕರನ್ನು ಸೆಳೆಯಲು ಹೋಗಿ, ಅದು ವಿಫಲಗೊಂಡು, ಬಹುಮತ ಸಾಬೀತು ಪಡಿಸಲಾಗದೆ ಮುಖ್ಯಮಂತ್ರಿ ಪದವಿಗೆ ರಾಜೀನಾಮೆ ನೀಡಿ ಇಡೀ ದೇಶದ ಮುಂದೆ ತಾವೂ ಬೆತ್ತಲಾಗಿದ್ದಲ್ಲದೇ ಮೋದಿಯ ಮರ್ಯಾದೆಯನ್ನು, ಬಿಜೆಪಿಯ ಗೌರವವನ್ನು ಹಾಳುಗೆಡವಿದರು.

ಪರಿಸ್ಥಿತಿ ಹೀಗಿರುವಾಗ ಮತ್ತೆ ಕುಮಾರಸ್ವಾಮಿಯವರ ಸರಕಾರವನ್ನು ಕೆಡವಲು ಇನ್ನಿಲ್ಲದ ಪ್ರಯತ್ನವನ್ನು ಅವರು ನಡೆಸುತ್ತಿರುವುದೇಕೆ? ಮತ್ತೆ ಆಪರೇಷನ್ ಕಮಲ ಮಾತಾನಾಡುತ್ತಿದ್ದಾರೇಕೆ? ಕಾಂಗ್ರೆಸ್ ಪಕ್ಷದ ಒಡಕಿನ ಲಾಭ ಪಡೆದು ಇಪ್ಪತ್ತು ಕೈ ರಾಜೀನಾಮೆ ಕೊಡಿಸಿ, ಮುಖ್ಯಮಂತ್ರಿ ಪದವಿಗೇರುವ ಹಾಗೂ ಮೂಲಕ ಕುಮಾರಸ್ವಾಮಿಯವರನ್ನು ಅಧಿಕಾರದಿಂದ ಕೆಳಗಿಳಿಸುವ ಸನ್ನಾಹದಲ್ಲಿದ್ದಾರೆ. ಹಾಗಾದರೆ ಕುಮಾರಸ್ವಾಮಿ ಸರಕಾರವನ್ನು ಉರುಳಿಸಿದಾಕ್ಷಣ ಎಲ್ಲವೂ ಸುಖಾಂತ್ಯವಾಗಿ ಬಿಡುತ್ತದೆಯೆ? ಅದಕ್ಕೆ ಪ್ರತಿರೋಧವಿರುವುದಿಲ್ಲವೆ? ಹೀಗೆ ಅವರು ಇವರ ಪಕ್ಷದ ಶಾಸಕರನ್ನು, ಇವರು ಅವರ ಪಕ್ಷದ ಶಾಸಕರನ್ನು ರಾಜೀನಾಮೆ ಕೊಡಿಸುತ್ತಾ ಹೊರಟರೆ ಮತ ಹಾಕಿದ ಮತದಾರನಿಗೆ, ಆತನ ಭಾವನೆಗಳಿಗೆ ಬೆಲೆಯಿಲ್ಲವೆ? ಇದೇನಾ ಇವರು ಮುಂದಿನ ಪೀಳಿಗೆಗೆ ಉಳಿಸಿ ಹೋಗುವ ಮಾದರಿ? ಅದರಲ್ಲೂ ಯಡಿಯೂರಪ್ಪ ಆಪ್ತೆ ಶೋಭಾ ತಾಕತ್ತಿದ್ದರೆ ಅವರ ಪಕ್ಷದ ಶಾಸಕರನ್ನು ಕಾಪಾಡಿಕೊಳ್ಳಲಿ, ನಾವು ಆಪರೇಷನ್ ಕಮಲ ಮಾಡಿಯೇ ಸಿದ್ಧಎಂದು ಸಾರ್ವಜನಿಕವಾಗಿಯೇ ಹೇಳುತ್ತಿರುವುದು ಅದ್ಯಾವ ಸೀಮೆಯ ತತ್ತ್ವಾಧರಿತ ರಾಜಕಾರಣವೋ ತಿಳಿಯದು.

ಅವೆರಡು ತಪ್ಪುಗಳನ್ನು ಸಿದ್ದರಾಮಯ್ಯ ಮಾಡದೇ ಹೋಗಿದ್ದರೆ ಚೆನ್ನಿತ್ತು. ದೇವೇಗೌಡರನ್ನು ಹಾದೀಬೀದಿಯಲ್ಲಿ ನಿಂದಿಸದೆ ಹಾಗೂ ಪ್ರತ್ಯೇಕ ಲಿಂಗಾಯುತ ಧರ್ಮ ಹೋರಾಟಕ್ಕೆ ಬೆಂಬಲ ನೀಡದೇ ಹೋಗಿದ್ದಿದ್ದರೆ ಇಂದಿಗೂ ಸಿದ್ದರಾಮಯ್ಯನವರೇ ಮುಖ್ಯಮಂತ್ರಿಯಾಗಿರುತ್ತಿದ್ದರು ಅನ್ನುವ ಸತ್ಯ ರಾಜ್ಯದ ಎಷ್ಟೋ ಜನಕ್ಕೆ ತಿಳಿಯದ ವಿಚಾರ. ಕರಾವಳಿಯ ಧಾರ್ಮಿಕ ಹತ್ಯೆಗಳು, ಬಿಜೆಪಿಗರ ಮೋದಿ ಹವಾ, ಒಕ್ಕಲಿಗರ ಆಕ್ರೋಶ, ಲಿಂಗಾಯುತರ ಒಳಬೇಗುದಿ ಎಲ್ಲದರ ನಡುವೆಯೂ ಹತ್ತಿರತ್ತಿರ ಎಂಬತ್ತು ಸೀಟುಗಳನ್ನು ಗೆಲ್ಲಿಸಿಕೊಂಡು ಬಂದ ಸಿದ್ದರಾಮಯ್ಯನವರ ತಾಕತ್ತು ಇವರೆಲ್ಲರಿಗಿಂತಲೂ ಹೆಚ್ಚು. ಅವರ ಕಾಲದ ಜನಪರ ಯೋಜನೆಗಳು, ಸಾಮಾಜಿಕ ನ್ಯಾಯ ಪರಿಕಲ್ಪನೆಯ ಆಡಳಿತ ಅವರಿಗೆ ಬಹು ದೊಡ್ಡ ನಾಯಕನ ಸ್ಥಾನವನ್ನು ನೀಡಿತ್ತು. ಆದರೆ ಕೊನೆಕೊನೆಯಲ್ಲಿ ರಾಜಕೀಯ ಶಿಶುಗಳ ಸಹವಾಸದಿಂದ ಮಾಡಿಕೊಂಡ ಎಡವಟ್ಟುಗಳು ಅವರೆಲ್ಲಾ ಶ್ರಮವನ್ನು ವ್ಯರ್ಥ ಮಾಡಿಹಾಕಿತ್ತು. ಕಾರಣವಾಗಿಯೇ ಇಂದು ಅಧಿಕಾರ ಕಳೆದುಕೊಂಡು ಇವರೆಲ್ಲಾ ಮಂಗಾಟಗಳನ್ನು ಕೊಂಡು ನೋಡಿಕೊಂಡು ಕೂರುವಂತಾಗಿದೆ.

ಯಡಿಯೂರಪ್ಪನವರಿಗಾಗಲೀ, ಕುಮಾರಸ್ವಾಮಿಗಾಗಲೀ ರಾಜ್ಯದ ಜನ ಮುಖ್ಯಮಂತ್ರಿ ಗದ್ದುಗೆಯನ್ನು ನೀಡಿಲ್ಲ. ಅದು ಸಿದ್ದರಾಮಯ್ಯನವರ ಮೇಲಿನ ಅಸಮಾಧಾನ ತಂದ ಅಭಿವ್ಯಕ್ತಿ ಅಷ್ಟೇ. ಇದನ್ನು ಅರ್ಥ ಮಾಡಿಕೊಂಡು ಯಾವುದೋ ಒಂದು ಜಾತಿಗೆ, ಪ್ರದೇಶಕ್ಕೆ ಸೀಮಿತವಾಗದೆ ಕುಮಾರಸ್ವಾಮಿ ಅಧಿಕಾರ ನಡೆಸಲಿ. ಇನ್ನು ಯಡಿಯೂರಪ್ಪ ಅದ್ಯಾವುದೋ ಭಯಕ್ಕೆ ಹೆದರಿ ಮುಖ್ಯಮಂತ್ರಿಯಾಗಲೇಬೇಕೆಂದು ರಚ್ಚೆ ಹಿಡಿದು ಕುಮಾರಸ್ವಾಮಿ ಸರಕಾರವನ್ನು ಬೀಳಿಸಿದರೆ ಅದರಿಂದ ಅವರಿಗೆ ಅಧಿಕಾರವೇನೋ ಸಿಗಬಹುದು ಆದರೆ ರಾಷ್ಟ್ರಮಟ್ಟದಲ್ಲಿ ಬಿಜೆಪಿಗೆ ಆಗಬಹುದಾದ ಮುಜುಗರ ಮಾತ್ರ ಮಟ್ಟದಲ್ಲೇ ಇರುತ್ತದೆ.

ಇನ್ನು ಜಾರಕಿಹೊಳಿ ಬ್ರದರ್ಸ್ಲಕ್ಷ್ಮೀ ಹೊಡೆತಕ್ಕೆ ರೊಚ್ಚಿಗೆದ್ದು ಅಧಿಕಾರದಾಸೆಯಿಂದ ಬಿಜೆಪಿಗೆ ಹೋದರೆ ಅಲ್ಲಿ ಶೋಭಕ್ಕನ ಹೊಡೆತ ಸಹಿಸಿಕೊಳ್ಳುವುದು ಅಷ್ಟೇನೂ ಸುಲಭದ ಮಾತಲ್ಲ. ಕಳೆದ ಬಾರಿ ಅಧಿಕಾರಕ್ಕಾಗಿ ಕಿತ್ತಾಡಿಕೊಂಡ ರಾಜ್ಯ ಬಿಜೆಪಿ ನಾಯಕರು ಬಾರಿಯೇನೂ ಸನ್ಯಾಸಿಗಳಂತೆ ಕೂರುವುದಿಲ್ಲ. ಅಧಿಕಾರಕ್ಕಾಗಿ, ಪದವಿಗಾಗಿ ಕಾದಿರುವವರ ಸಂಖ್ಯೆ ಈಗಾಗಲೇ ಬಿಜೆಪಿಯಲ್ಲಿ ದೊಡ್ಡ ಸಾಲೇ ಇದೆ. ಅವರ ಮಧ್ಯೆ ಹೋಗಿ ಕೊಸರಾಡುವ ಬದಲು ಇಲ್ಲೇ ಇದ್ದು ಸಿಕ್ಕಿದ್ದನ್ನು ಅನುಭವಿಸುವುದು ಜಾಣರ ಲಕ್ಷಣ. ಮಾತಿನಲ್ಲಿ ಹೇಳುವುದಾದರೆ, ಅಧಿಕಾರಕ್ಕಾಗಿ ಇಷ್ಟೊಂದು ಪರಿಪಾಟಲು ಅನುಭವಿಸುವುದನ್ನು ಅವರು ಬಿಡಬೇಕು. ಮತ್ತೊಮ್ಮೆ ಹೋರಾಟ ಮಾಡಿ, ಜನರಿಂದ ಬಹುಮತಪಡೆದು ಅಧಿಕಾರ ಅನುಭವಿಸಿದರೆ ಅದೊಂದು ಯುಕ್ತವಾದ ರೀತಿ. ಇಲ್ಲವೇ ಸರಕಾರ ಬೀಳಿಸಿ ರಾಷ್ಟ್ರಮಟ್ಟದಲ್ಲಿ ಮುಖಭಂಗ ಅನುಭವಿಸಬೇಕು ಎಂದುಕೊಂಡರೆ ಅದೂ ಅವರ ಆಯ್ಕೆಯೇ ಆಗಿರುತ್ತದೆ.

Tags

Related Articles

Leave a Reply

Your email address will not be published. Required fields are marked *

Language
Close