ವಿಶ್ವವಾಣಿ

ತಪ್ಪು ಸರಿಪಡಿಸಿಕೊಳ್ಳಲು ಇರುವ ಉಪ ದಾರಿಯನ್ನು ಬಳಸಿಕೊಳ್ಳಬೇಕು!

ಕೆಲವೊಮ್ಮೆ ಜೀವನದಲ್ಲಿ  ಮಾಡಿದ ತಪ್ಪುಗಳನ್ನು ಸರಿಪಡಿಸುವುದು ಅಸಾಧ್ಯವೆನಿಸುತ್ತದೆ. ಇನ್ನು ಉದ್ಧಾರವಾಗಲು ಯಾವುದೇ ದಾರಿ ಕಾಣುವುದಿಲ್ಲ. ಜೀವನವೇ ಸಾಕೆನಿಸುತ್ತದೆ. ಆದರೆ ಅದನ್ನು ಸರಿಪಡಿಸಲು ಕೆಲವೊಂದು ಉಪ ದಾರಿಗಳು ನಮ್ಮೆದುರಿಗಿರುತ್ತವೆ.  ಅವುಗಳನ್ನು ನಾವು ಹೇಗೆ ಬಳಸಿಕೊಳ್ಳುತ್ತೇವೆ ಎಂಬುದು ನಮಗೆ ಬಿಟ್ಟಿದ್ದು.

ಅಂದು ಬಿರು ಬಿಸಿಲಿತ್ತು. ತಡೆಯಲಾರದ ಸೆಕೆ. ಜೀವ ತಂಪಾಗಲು ಆನಂದ ಲಿಂಬೆ ಹಣ್ಣಿನ ಶರಬತ್ತು ಮಾಡಿಕೊಳ್ಳಲು ನಿರ್ಧರಿಸಿದ. ಫ್ರಿಜ್ಜಿನಿಂದ ಲಿಂಬೆ ಹಣ್ಣು ತೆಗೆದು ತೊಳೆದುಕೊಳ್ಳುವಾಗಲೇ ಅವನ ಗೆಳೆಯನೊಬ್ಬ ಫೋನ್ ಮಾಡಿದ್ದ. ಅವನೊಡನೆ ಮಾತನಾಡುವುದರಲ್ಲಿ  ಆವನಿಗೆ ತಾನು ಮಾಡುತ್ತಿರುವ ಕೆಲಸದ ಮೇಲೆ ಗಮನವೇ ಇರಲಿಲ್ಲ. ಒಂದು ಲೋಟ ಶರಬತ್ತಿಗೆ ತಡೆಯಲಾರದಷ್ಟು ಲಿಂಬೆ ಹಣ್ಣು ಹಿಂಡಿದ್ದ. ಅದನ್ನು ಕುಡಿದ ಅವನಿಗೆ ಅಸಹ್ಯವಾಯಿತು. ಆಗ ತಾನು ಮಾಡಿದ ತಪ್ಪಿನ ಅರಿವಾಯಿತು. ಇನ್ನೇನು ಮಾಡುವುದು? ಆ ಮಿಶ್ರಣದಿಂದ ಸ್ವಲ್ಪ ಮಟ್ಟಿಗಿನ ಲಿಂಬೆ ರಸ ತೆಗೆದು ಮತ್ತೆ ಮೊದಲಿನಂತಾಗಿಸುವುದು ಸಾಧ್ಯವೇ? ಇಲ್ಲ.

ಆದರೆ ಅವನೆದುರಿಗೆ ಬೇರೆ ದಾರಿಯೂ ಒಂದಿತ್ತು. ಅದನ್ನು ಒಂದು ದೊಡ್ಡ ಪಾತ್ರೆಗೆ ಹಾಕಿದವನೇ ಅದಕ್ಕೆ ನಾಲ್ಕು ಲೋಟ  ನೀರು ಸುರಿದು, ಅಗತ್ಯವಿದ್ದಷ್ಟು ಉಪ್ಪು-ಸಕ್ಕರೆ ಸೇರಿಸಿದ. ಈಕ ಮತ್ತೆ ಅದನ್ನೇ ಕುಡಿದಾಗ ಅದರ ರುಚಿ ಚೆನ್ನಾಗಿತ್ತು. ಆದರೆ ಅದರಲ್ಲಿ ಒಂದು ಬದಲಾವಣೆಯಾಗಿತ್ತು. ಅದೇನೆಂದರೆ, ಒಬ್ಬನೇ ಕುಡಿಯುವಷ್ಟಿದ್ದ ಶರಬತ್ತನ್ನು ಈಗ ಹೆಚ್ಚಿನ ನಾಲ್ಕು ಜನ ಕುಡಿಯಬಹುದಾಯಿತು.

ನಮ್ಮ ಜೀವನವೂ ಹಾಗೆ. ಕೆಲವೊಮ್ಮೆ ನಾವು ಮಾಡಿದ ತಪ್ಪುಗಳನ್ನು ಸರಿಪಡಿಸುವುದು ಅಸಾಧ್ಯವಾಗಿರುತ್ತದೆ. ಉದಾಹರಣೆಗೆ, ನಮ್ಮ ಕೆಲವೊಂದು ತಪ್ಪು ನಿರ್ಧಾರಗಳು, ತಪ್ಪು ಆಯ್ಕೆಗಳು, ಕೆಲವೊಂದು ಹೂಡಿಕೆಗಳು ಅಥವಾ ನಾವಾಡಿದ ತಪ್ಪು ಮಾತುಗಳು ಯಾವತ್ತೂ ಹಿಂತೆಗೆದುಕೊಳ್ಳಲು  ಹಾಗೆ ಮಾಡಲೂ ಬಾರದು. ಏಕೆಂದರೆ ಸುಧಾರಿಸಲಾರದ ತಪ್ಪುಗಳನ್ನು ಸರಿಪಡಿಸುವುದೆಂದರೆ, ಆತಿಯಾಗಿ ಹುಳಿಯಾದ ಲಿಂಬೆ ಹಣ್ಣಿನ ಶರಬತ್ತಿನಿಂದ ಲಿಂಬೆ ಹಣ್ಣನ್ನು ತೆಗೆಯಲು ಪ್ರಯತ್ನಿಸಿದಂತೆ.

ಈ ರೀತಿ ವ್ಯರ್ಥ ಕೆಲಸಗಳಿಗೆ ಸಮಯ ಹಾಳು ಮಾಡುವ ಬದಲು ಮುಂದೇನು ಮಾಡಬೇಕೆಂದು ಯೋಚಿಸುವುದು ಸರಿಯಾದ ದಾರಿ. ಮುಂದಿನ ಸಮಯದಲ್ಲಿ ನಾವು ನಮ್ಮ ಜೀವದಲ್ಲಿ ಎಷ್ಟೊಂದು ಒಳ್ಳೆಯ ಸಂಗತಿಗಳನ್ನು ಸೇರಿಸಬೇಕೆಂದರೆ, ನಾವು ಹಿಂದೆ ಮಾಡಿದ ತಪ್ಪುಗಳು ಕ್ಷುಲ್ಲಕವೆನಿಸಬೇಕು. ಆಗ ಮಾತ್ರ ನಮ್ಮ ಜೀವನವನ್ನು ಸದ್ವಿನಿಯೋಗ ಮಾಡಿದಂತಾಗುತ್ತದೆ.

***

ಯಾರನ್ನೇ ಆಗಲಿ ತಿಳಿಯುವ ಮುನ್ನವೇ, ಅವರು ಹೀಗೆ ಎಂದು ನಿರ್ಧಾರಕ್ಕೆ ಬರುವುದು, ಅವರನ್ನು ಹೀಯಾಳಿಸುವುದು ಮಾಡಬಾರದು. ಏಕೆಂದರೆ, ಪ್ರತಿಯೊಬ್ಬನ ಹಿಂದೆಯೂ ಅವನದ್ದೇ ಆದ ಒಂದು ಕಥೆ ಇದೆ. ಅವನ ಜೀವನದ ರೀತಿ ಸರಿಯಾಗಿಯೇ ಇದ್ದರೂ ಬಹುಶಃ ನಮ್ಮದೇ ತಪ್ಪು ಅರಿಕೆಯಿಂದಾಗಿ ಅದು ಕಾಣಸಿಗುವುದಿಲ್ಲ. ಅದು ಹೇಗೆ ಗೊತ್ತಾ? ವಿವರಿಸುವುದಕ್ಕಾಗಿ ಒಂದು ಕಥೆಯನ್ನು ಹೇಳುತ್ತೇನೆ.

ಒಂದು ದಿನ ಶಿಕ್ಷಕಿಯೊಬ್ಬಳು 6ವರ್ಷದ ಮಕ್ಕಳಿಗೆ ಗಣಿತ ಪಾಠ ಹೇಳಿ ಕೊಡುತ್ತಿರುತ್ತಾಳೆ. ಕೂಡಿಸುವುದು ಹೇಗೆ  ವಿವರಿಸಲು ಸುಲಭ ವಿಧಾನವೊಂದನ್ನು ಆಯ್ದುಕೊಂಡಿರುತ್ತಾಳೆ. ತನ್ನ ವಿಷಯವನ್ನು ವಿವರಿಸುತ್ತಾ, ಕಿರಣ ಎಂಬ ಹುಡುಗನ ಬಳಿ ಕೇಳುತ್ತಾಳೆ, ‘ಕಿರಣ, ನಾನು ನಿನಗೆ 2 ಮಾವಿನ ಹಣ್ಣುಗಳನ್ನು ಕೊಟ್ಟು, ಆಮೇಲೆ ಪುನಃ 2 ಮಾವಿನ ಹಣ್ಣುಗಳನ್ನು ಕೊಟ್ಟರೆ ನಿನ್ನ ಬಳಿ ಎಷ್ಟು ಮಾವಿನ ಹಣ್ಣುಗಳು ಇರುತ್ತವೆ?’ ಅದಕ್ಕೆ ಉತ್ತರವಾಗಿ ಆ ಹುಡುಗ ‘ಐದು’ ಎನ್ನುತ್ತಾನೆ. ಅವನಿಗೆ ಸರಿಯಾಗಿ ಅರ್ಥವಾಗಿಲ್ಲವೇನೋ ಎಣಿಸಿದ ಶಿಕ್ಷಕಿ ಮತ್ತೆ ಕೈಯಲಿ ನಟಿಸಿ ತೋರಿಸುತ್ತಾ ಮತ್ತೊಮ್ಮೆ ಕೇಳುತ್ತಾಳೆ ‘ಇಲ್ಲಿ  ಕಿರಣ, ನಾನು ನಿನಗೆ, ‘ಒಂದು–ಎರಡು’ ಮಾವಿನ ಹಣ್ಣು ಕೊಟ್ಟು, ಮತ್ತೊಮ್ಮೆ ‘ಒಂದು–ಎರಡು’ ಮಾವಿನ ಹಣ್ಣು ಕೊಟ್ಟರೆ, ನಿನ್ನ ಬಳಿ ಎಷ್ಟು ಮಾವಿನ ಹಣ್ಣು ಇರುತ್ತದೆ?’ ಎಂದು. ಆಗಲೂ ಆ ಹುಡುಗ ‘ಐದು ಟೀಚರ್’ ಎನ್ನುತ್ತಾ, ಅದೇ ಉತ್ತರ ಕೊಡುತ್ತಾನೆ.

ಇವನಿಗೆ ಹೇಗಪ್ಪಾ ಹೇಳಿ ಕೊಡುವುದು ಎಂದು ಯೋಚಿಸುತ್ತಿದ್ದ ಶಿಕ್ಷಕಿಗೆ, ‘ಅವನಿಗೆ ಕಿತ್ತಳೆ ಹಣ್ಣು ಎಂದರೆ ತುಂಬಾ ಇಷ್ಟ’ ಎಂದು ಅವನ ಅಮ್ಮ ಹೇಳಿದ್ದು ನೆನಪಾಗುತ್ತದೆ. ಆಗ ಇದೇ ಸರಿಯಾದ  ಅಂತ ಯೋಚಿಸಿದವಳೇ, ತನ್ನ ಉದಾಹರಣೆಯನ್ನು ಬದಲಿುತ್ತಾಳೆ. ಮತ್ತೆ ಕಿರಣನಲ್ಲಿ ಅದೇ ಪ್ರಶ್ನೆಯನ್ನು ಬೇರೆ ಉದಾಹರಣೆ ನೀಡುತ್ತಾ ‘ ನಾನು ನಿನಗೆ ಮೊದಲು ಎರಡು ಕಿತ್ತಳೆ ಹಣ್ಣುಗಳನ್ನು ಕೊಟ್ಟು, ಆಮೆಲೆ ಇನ್ನೂ ಎರಡು ಕಿತ್ತಳೆ ಹಣ್ಣುಗಳನ್ನು ಕೊಟ್ಟರೆ, ನಿನ್ನ ಬಳಿ ಎಷ್ಟು ಕಿತ್ತಳೆ ಹಣ್ಣುಗಳು ಇರುತ್ತವೆ?’ ಆಗ ಅವನು ‘ನಾಲ್ಕು’ ಎಂದು ಉತ್ತರಿಸುತ್ತಾನೆ. ಈ ಉತ್ತರ ಕೇಳಿದ ಶಿಕ್ಷಕಿ ತುಂಬಾ ಸಂತೋಷಗೊಳ್ಳುತ್ತಾಳೆ.‘ವೆರಿ ಗುಡ್’ ಎನ್ನುತ್ತಾ ಆ ಶಿಕ್ಷಕಿ ಮತ್ತೆ ಮೊದಲನೇ  ಕೇಳುತ್ತಾಳೆ, ‘ಈಗ ಹೇಳು ಪುಟ್ಟಾ, ನಾನು ನಿನಗೆ ಮೊದಲು ಎರಡು ಮಾವಿನ ಹಣ್ಣುಗಳನ್ನು ಕೊಟ್ಟು ಆಮೇಲೆ ಮತ್ತೆರಡು ಮಾವಿನ ಹಣ್ಣುಗಳನ್ನು ಕೊಟ್ಟರೆ ನಿನ್ನ ಬಳಿ ಎಷ್ಟು ಮಾವಿನ ಹಣ್ಣುಗಳು ಇರುತ್ತವೆ?’ ಆಗಲೂ ಅವನು ‘ಐದು’ ಎಂದೇ ಉತ್ತರಿಸುತ್ತಾನೆ.

ಈ ಬಾರಿ ಶಿಕ್ಷಕಿಗೆ ತುಂಬಾ ಕೋಪ ಬರುತ್ತದೆ. ಕಿತ್ತಳೆಯ ಉದಾಹರಣೆ ಕೊಟ್ಟಾಗ ಸರಿಯಾಗಿಯೇ ಉತ್ತರಿಸುತ್ತಿದ್ದವನಿಗೆ, ಮಾವಿನ ಹಣ್ಣಿನ ಉದಾಹರಣೆ ಕೊಟ್ಟಾಗ ಏನಾಗುತ್ತದೆ? ಎಂದು ಯೋಚಿಸುತ್ತಾ ಸಿಡುಕುತ್ತಾ ಕೇಳುತ್ತಾಳೆ, ‘ ನಿನಗೆ  ಇಲ್ವಾ? 2+2 ಕಿತ್ತಳೆ ಹಣ್ಣುಗಳು ಕೊಟ್ಟರೆ ನಾಲ್ಕು, ಅದೇ 2+2 ಮಾವಿನ ಹಣ್ಣುಗಳನ್ನು ಕೊಟ್ಟರೆ 5 ಹೇಗಾಗುತ್ತದೆ?’ ಅಂತ. ಆಗ ಆ ಹುಡುಗ ತುಂಬಾ ಮುಗ್ಧವಾಗಿ ಉತ್ತರಿಸುತ್ತಾನೆ, ‘ಟೀಚರ್, ನನ್ನ ಚೀಲದಲ್ಲಿ ಈಗಾಗಲೇ ಒಂದು ಮಾವಿನ ಹಣ್ಣು ಇದೆ!’. ಆಗ ಆ ಶಿಕ್ಷಕಿ ದಿಗ್ಭ್ರಾಂತಳಾಗಿ ಅವನನ್ನೇ ನೋಡುತ್ತಾಳೆ. ಅವನ ಉತ್ತರ ನಿಜವಾಗಿಯೂ ಸರಿ. ಮೊದಲೇ ಅವನ ಬಳಿ ಒಂದು ಮಾವಿನ ಹಣ್ಣು ಇದೆ. ಆಮೇಲೆ ಶಿಕ್ಷಕಿ 2 ಮಾವಿನ  ಕೊಟ್ಟು, ಪುನಃ 2 ಮಾವಿನ ಹಣ್ಣುಗಳನ್ನು ಕೊಟ್ಟಾಗ, ಅವನ ಬಳಿ 2+2+1=5 ಮಾವಿನ ಹಣ್ಣುಗಳು ಇವೆ.

ಈಗ ಹೇಳಿ ತಪ್ಪು ಯಾರದ್ದು? ಆ ಶಿಕ್ಷಕಿಯ ತಪ್ಪೇ? ಅಲ್ಲ. ಹಾಗಾದರೆ ಕಿರಣನ ತಪ್ಪೇ? ಅವನದ್ದೂ ಅಲ್ಲ. ಶಿಕ್ಷಕಿಯ ಉತ್ತರ ತಾತ್ವಿಕವಾಗಿ ಸರಿ. ತಾತ್ವಿಕವೆಂದರೆ, ಇರುವುದನ್ನು ನೋಡುವುದು. ಯಾವುದು ರೂಢಿಯೋ ಅದನ್ನೇ ಅನುಸರಿಸುವುದು. ಹಾಗೆಯೇ ವಿದ್ಯಾರ್ಥಿಯ ಉತ್ತರ ಕೂಡಾ ಪ್ರಾಯೋಗಿಕವಾಗಿ ಸರಿ. ಅಂದರೆ, ಸಾಮಾನ್ಯ ಸಂಗತಿಯನ್ನು ನೋಡುವುದು. ಕಣ್ಣಿಗೆ ಕಾಣುವುದನ್ನೂ ಮೀರಿದ್ದನ್ನು

ನಮ್ಮ ಜೀವನದುದ್ದಕ್ಕೂ ತಾತ್ವಿಕ ಹಾಗೂ ಪ್ರಾಯೋಗಿಕ ಸರಿಗಳ ನಡುವೆ ತಿಕ್ಕಾಟಗಳಲ್ಲಿ ತೊಡಗಿರುತ್ತವೆ. ನಮ್ಮ ಎದುರಿರುವವರು ನಮ್ಮನ್ನು ಅರ್ಥ ಮಾಡಿಕೊಳ್ಳುವುದಿಲ್ಲ ಎಂದು ಬೈದುಕೊಳ್ಳುತ್ತಿರುತ್ತೇವೆ. ಆದರೆ ಅವರ ಮನಸ್ಸಿನಲ್ಲಿ ಏನಿದೆ ಎಂದು ಅರ್ಥಮಾಡಿಕೊಳ್ಳುವ ಗೋಜಿಗೇ ಹೋಗದೆ ಕೇವಲ ನಮ್ಮ ಯೋಚನೆಯ ನೇರಕ್ಕೆ ಬದುಕುತ್ತಿರುತ್ತೇವೆ. ಇದು ನಮ್ಮ ಕಥೆಯ ಶಿಕ್ಷಕಿ ಹಾಗೂ ವಿದ್ಯಾರ್ಥಿಯ ನಡುವೆ ಇರುವ ಭಿನ್ನಾಭಿಪ್ರಾಯದಂತೆ. ನಮ್ಮವರ ಒಳ ಮನಸ್ಸನ್ನು ಅರ್ಥೈಸಿಕೊಳ್ಳಲು ಪ್ರಯತ್ನಿಸಿದಾಗ, ಇನ್ನೊಬ್ಬರ ಅಭಿಪ್ರಾಯಗಳನ್ನೂ ಗೌರವಿಸಿದಾಗ ವೈಮನಸ್ಸಿಗೆ ಜಾಗವೇ ಇರುವುದಿಲ್ಲ.

***

ಇದು ಕಟ್ಟುಕತೆಯೋ, ನಿಜವೋ ಎನ್ನುವ ಮಾತು ಒತ್ತಟ್ಟಿಗಿರಲಿ. ಆದರೆ ಈ ಕತೆಯನ್ನೊಮ್ಮೆ ಕೇಳಬೇಕು.

ಒಂದಾನೊಂದು ಕಾಲದಲ್ಲಿ ದೇವರು ಮತ್ತು ರಾಜ ಒಂದೇ ಊರಿನಲ್ಲಿ ವಾಸಿಸುತ್ತಿದ್ದರಂತೆ. ಒಮ್ಮೆ ದೇವರಿಗೆ ಕಷ್ಟ ಎದುರಾಯಿತು. ಆಗ ಆ ಊರಿನ ರಾಜ ದೇವರ ಸಹಾಯಕ್ಕೆ ಬಂದನು.

ಕಷ್ಟದ ಸಮಯದಲ್ಲಿ ಸಹಾಯಕ್ಕೆ ಬಂದ ಆ ರಾಜನಿಗೆ ಏನಾದರೂ ಪ್ರತಿಫಲ ಕೊಡಬೇಕೆನಿಸಿತು. ದೇವರು ರಾಜನಲ್ಲಿಗೆ ಬಂದು, ‘ನೀನು ನನಗೆ  ಸಹಾಯ ಮಾಡಿದ್ದೀಯ, ಅದಕ್ಕಾಗಿ ನೀನಗೆ ಬೇಕಾದ ವರ  ನಾನು ಇಲ್ಲ ಎನ್ನದೇ ಕೊಡುತ್ತೇನೆ’ ಎಂದನು.

ಆ ರಾಜ, ದೇವರಲ್ಲಿ ಏನು ವರ ಕೇಳುವುದೆಂದು ತುಸು ಚಿಂತಿಸದ ತೊಡಗಿದ. ರಾಜನಿಗೆ ಬಂಗಾರ, ವಜ್ರ, ವೈಢೂರ‌್ಯಗಳ ಹುಚ್ಚು ಹೆಚ್ಚೇ ಇತ್ತು. ಹೇಗೋ ದೇವರು ಕೇಳಿದ್ದು ವರ ಕೊಡುತ್ತೇನೆ ಎಂದು ಮಾತು ಕೊಟ್ಟಿದ್ದಾನೆ. ದೊಡ್ಡ ವರವನ್ನೇ ಕೇಳಿಬಿಡೋಣ ಎಂದು ರಾಜ ಮನಸಿನಲ್ಲಿ ನಿರ್ಧರಿಸಿದ.

‘ದೇವರೇ, ನಾನು ಮುಟ್ಟಿದ್ದೆಲ್ಲ ಚಿನ್ನವಾಗುವಂಥ ವರ ಕೊಡು’ ಎಂದು ಬೇಡಿಕೊಂಡ. ಅದಕ್ಕೆ ದೇವರು ಕೂಡ ತಥಾಸ್ತು ಎಂದು  ಇತ್ತ ರಾಜನಿಗೆ ದೇವರು ಕೊಟ್ಟ ವರ ಸಿಕ್ಕಿದೆಯೋ, ಇಲ್ಲವೋ ಎಂಬುದನ್ನು ಪರೀಕ್ಷಿಸುವ ಕುತೂಹಲವಾಯಿತು. ರಾಜ ಅರಮನೆಯ ಕಡೆ ನಡೆಯುತ್ತಿದ್ದಾಗ, ಒಂದು ಕಲ್ಲಿನ ಗುಂಡನ್ನು ಬೆರಳಿನಿಂದ ಸ್ಪರ್ಶಿಸಿದ. ತಕ್ಷಣ ಅದು ಬಂಗಾರದ ಗುಂಡಾಯಿತು! ರಾಜನಿಗೆ ಆಶ್ಚರ್ಯ, ಆನಂದ.

ರಾಜ ಅವಸರದಿಂದ ಅರಮನೆಯತ್ತ ಧಾವಿಸಿದವನೆ ಮೆಟ್ಟಿಲುಗಳನ್ನು ಮುಟ್ಟುತ್ತಾ ಹತ್ತಿದ. ಹಿಂದೆ ಹಿಂದೆ ಮೆಟ್ಟಿಲುಗಳು ಬಂಗಾರದ ಮೆಟ್ಟಿಲುಗಳಾಗತೊಡಗಿದವು. ಅರಮನೆಯ ಬಾಗಿಲು, ಹೂಕುಂಡ, ಸಿಂಹಾಸನ… ಹೀಗೆ ಎಲ್ಲವನ್ನೂ ಮುಟ್ಟುತ್ತಾ ಹೋದ. ನೋಡನೋಡುತ್ತಿದ್ದಂತೆ ಆರಮನೆಯೇ ಬಂಗಾರವಾಯಿತು.

 ಆನಂದಕ್ಕೆ ಪಾರವೇ ಇಲ್ಲ. ಇಡೀ ಪ್ರಪಂಚಕ್ಕೆ ನಾನೇ ಶ್ರೀಮಂತ ರಾಜನೆಂದು ಉಬ್ಬತೊಡಗಿದ. ಸ್ವಲ್ಪಹೊತ್ತಿನಲ್ಲಿಯೇ  ಒಳಗಿನಿಂದ ಮೂರು ವರ್ಷ ವಯಸ್ಸಿನ ರಾಜನ ಏಕೈಕ ಪುತ್ರಿ ಅಪ್ಪಾ ಎಂದು ಓಡುತ್ತಾ ಎದುರು ಬಂದಳು. ಆ ರಾಜ ತನ್ನ ಮಗಳನ್ನು ಕಂಡು ಪ್ರೀತಿಯಿಂದ ಎತ್ತಿಕೊಳ್ಳುತ್ತಿದ್ದಂತೆ ಮಗಳು ನಿರ್ಜೀವಾಗಿ ಬಂಗಾರದ ಶಿಲೆಯಾದಳು. ರಾಜನಿಗೆ ಆಘಾತವಾಯಿತು. ಮಗಳೇ, ಮಗಳೇ ಎಂದು ಎಷ್ಟು ಅಲುಗಾಡಿಸಿದರೂ ಅದರಲ್ಲಿ ಜೀವಚೈತನ್ಯವಿಲ್ಲ, ಬಂಗಾರದ ಮೂರ್ತಿಯಂತಾದಳು. ರಾಜ ದುಃಖಿಸತೊಡಗಿದೆ. ಮಗಳಿಗಾಗಿ ಅಳುತ್ತಾ ಕುಳಿತಿರುವಾಗ  ತಿನ್ನಲು ಪಕ್ಕದ ಬುಟ್ಟಿಯಲ್ಲಿದ್ದ ಸೇಬು ಹಣ್ಣಿಗೆ ಕೈಹಾಕಿದ. ಸೇಬು ಬಂಗಾರದ್ದಾಯಿತು! ಅಯ್ಯೋ ಕರ್ಮವೇ ಇದನ್ನ ತಿನ್ನುವುದೆಂತು! ರಾಜನಿಗೆ ಹಸಿವೆಯ ತೀವ್ರತೆ ಹೆಚ್ಚಾಗತೊಡಗಿತು. ತಿನ್ನುವ ಪದಾರ್ಥವೆಲ್ಲವನ್ನೂ ಮುಟ್ಟಿದ್ದರಿಂದ ಅೆಲ್ಲವೂ ಬಂಗಾರದ ತುಂಡುಗಳಾಗಿ ಬದಲಾಗಿದ್ದವು.

ರಾಜನಿಗೆ ತನ್ನ ತಪ್ಪಿನ ಅರಿವಾಯಿತು. ಕೇವಲ ಬಂಗಾರದಿಂದ ಬದುಕಲು ಸಾದ್ಯವಿಲ್ಲ. ಬಂಗಾರದ ಮೇಲಿನ ಮೋಹದಿಂದ ಇದ್ದ  ಒಬ್ಬಳೇ ಒಬ್ಬಳು ಮಗಳನ್ನು ನಿರ್ಜೀವ ಶಿಲೆಯನ್ನಾಗಿಸಿದೆ. ಈಗ ಅರಮನೆಯೆಲ್ಲ ಬಂಗಾರವಾಗಿದೆ. ಆದರೆ  ತಿನ್ನಲು ಒಂದೇ ಒಂದು ತುತ್ತು ಇಲ್ಲದೇ  ಈ ಗತಿ ಬಂದಿತು. ಎಂದು ತನ್ನ ತಪ್ಪಿನ ಅರಿವಾಗಿ, ರಾಜ ಮತ್ತೆ ದೇವರನ್ನು ಪ್ರಾರ್ಥಿಸತೊಡಗಿದ.

‘ದೇವರೇ ನಾನು ಬಂಗಾರದ ಮೇಲಿನ ಆಸೆಯಿಂದ ‘ಮುಟ್ಟಿದ್ದೆಲ್ಲ ಬಂಗಾರವಾಗುವಂಥ’ ವರ ಕೇಳಿ ತಪ್ಪು ಮಾಡಿದೆ. ದಯಮಾಡಿ ನೀನು ಕೊಟ್ಟ ವರವನ್ನು ವಾಪಸ್ಸು ತೆಗೆದುಕೊ’ ಎಂದು ದುಃಖದಿಂದ ಬೇಡಿಕೊಂಡ.

ದೇವರು ಪ್ರತ್ಯಕ್ಷವಾಗಿ, ‘ನೀನು ಅರಮನೆಯ ಮುಂದೆ ಹರಿಯುತ್ತಿರುವ ನದಿಯಿಂದ ನೀರನ್ನು ತಂದು, ಮುಟ್ಟಿದ ವಸ್ತುಗಳ ಮೇಲೆಲ್ಲ ಚಿಮುಕಿಸು, ಕೊಟ್ಟಿರುವ ವರ ನಾಶವಾಗುತ್ತದೆ’ ಎಂದು ಹೇಳಿ ರಾಜ ತಡಮಾಡದೇ ನದಿಗೆ ಇಳಿದ. ಅಲ್ಲಿಂದ ನೀರನ್ನು ತಂದು ಮೆಟ್ಟಿಲುಗಳ ಮೇಲೆಲ್ಲ ಚಿಮುಕಿಸುತ್ತ ಬಂದಂತೆ ಮೆಟ್ಟಿಲುಗಳು ಮೊದಲಿನಂತಾದವು. ಶಿಲೆಯಾಗಿ ನಿಂತಿದ್ದ ಮಗಳ ಮೇಲೆ ನೀರು ಚಿಮುಕಿಸಿದ ತಕ್ಷಣ ಮಗಳು ಅಪ್ಪನನ್ನು ತಬ್ಬಿ ದಳು.

ದೇವರು ಕೊಟ್ಟಿದ್ದ ವರ ನಾಶವಾಯಿತು. ಇದರಿಂದ ಪಾಠ ಕಲಿತ ರಾಜ, ತನ್ನ ಅರಮನೆಯಲ್ಲಿ ಕೂಡಿಟ್ಟಿದ್ದ  ಎಲ್ಲ ಹಣ ಅಭರಣಗಳನ್ನು ಬಡವರಿಗೆ ದಾನ ಮಾಡಿ, ಸರಳವಾಗಿ ಬದುಕತೊಡಗಿದ.

ಅತಿಯಾಸೆ ಎಂಬುವುದು ಮಾನವನನ್ನು ಕೊಲ್ಲುತ್ತದೆ, ಅವನಿಂದ ತನ್ನ  ಕಿತ್ತುಕೊಳ್ಳುತ್ತದೆ. ಹೀಗಾಗಿ ನಮ್ಮಲ್ಲಿ ಏನಿದೆಯೋ ಅದರಿಂದಲೇ ತೃಪ್ತಿಪಟ್ಟು ಬದುಕುವುದನ್ನು ಕಯಬೇಕು. ಇದರಿಂದ ನಮ್ಮವರೊಂದಿಗೆ ನೆಮ್ಮದಿ ಹಾಗೂ ಸಂತಸದ ಜೀವನವನ್ನು ಕಂಡುಕೊಳ್ಳಲು ಸಾಧ್ಯ.