Sri Ganesh Tel

ರಾಮ ಹುಟ್ಟಿದ್ದಕ್ಕೆ ದಾಖಲೆ ಇಲ್ಲ: ದ್ವಾರಕನಾಥ

Posted In : ದಕ್ಷಿಣ ಕನ್ನಡ, ರಾಜ್ಯ

ಮಂಗಳೂರು: ಶ್ರೀರಾಮನ ಅಸ್ತಿತ್ವಕ್ಕೆ ಸರಿಯಾದ ದಾಖಲೆ ಇಲ್ಲ. ಅದೊಂದು ಅಪ್ಪಟ ಸುಳ್ಳು ಎಂದು ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಮಾಜಿ ಅಧ್ಯಕ್ಷ ಸಿಎಸ್ ದ್ವಾರಕನಾಥ್ ಹೇಳಿದರು.

ಬಾಬರಿ ಮಸೀದಿ ಧ್ವಂಸ-ರಾಷ್ಟ್ರೀಯ ಅವಮಾನಕ್ಕೆ 25 ವರ್ಷಗಳು ಎಂಬ ವಿಷಯದ ಕುರಿತು ಮಾತನಾಡಿ, ಶ್ರೀರಾಮನ ಅಸ್ತಿತ್ವಕ್ಕೆ ಯಾವುದೇ ದಾಖಲೆ ಗಳಿಲ್ಲ. ರಾಮನ ಕುರಿತು ಸರಿಯಾದ ಸ್ಪಷ್ಟತೆ ಇಲ್ಲ. ನಮ್ಮ ತಾತನ ಹೆಸರು ಹೇಳಿ ಎಂದರೆ ಹೇಳಬಹುದು. ಅವರ ಅಪ್ಪನ ಹೆಸರು ಹೇಳಿ ಅಂದರೆ ಆಗುತ್ತಾ. ಆದರೆ 9 ಲಕ್ಷ ವರ್ಷಗಳ ಹಿಂದೆ ಇದ್ದ ವ್ಯಕ್ತಿಯ ಬಗ್ಗೆ ಮಾತನಾಡುತ್ತಾರೆ ಎಂದರೆ ಇದಕ್ಕೆ ಏನು ಹೇಳಬೇಕು ಗೊತ್ತಾಗುತ್ತಿಲ್ಲ ಎಂದರು.

ನಮಗೆ ಜ್ಞಾನ ಬಂದ ಆನಂತರ ದಾಖಲೆಗಳ ಪ್ರಕಾರ ನಾನು ಜಗತ್ತಿನಲ್ಲಿ ಮೂರು ವ್ಯಕ್ತಿಗಳನ್ನು ಗುರುತಿಸಬಹುದು. ಮೊದಲನೆ ಯದ್ದಾಗಿ ಬುದ್ದ. ಇವರು ಸುಮಾರು 2600 ವರ್ಷಗಳ ಹಿಂದೆ ಇದ್ದರು ಎಂಬುದಕ್ಕೆ ದಾಖಲಾತಿಗಳಿವೆ. ಎರಡನೆಯ ದಾಗಿ ಜೀಸಸ್. ಇವರು ಸುಮಾರು 1600 ವರ್ಷಗಳ ಹಿಂದೆ ಇದ್ದರು, ಇದಕ್ಕೂ ಪುರಾವೆಗಳಿವೆ. ಇನ್ನು ಮೂರನೆಯದಾಗಿ ಪೈಗಂಬರ್. ಇವರು ಸುಮಾರು 600 ವರ್ಷಗಳ ಹಿಂದೆ ಇದ್ದರು ಎಂಬುವುದಕ್ಕೆ ದಾಖಲೆಗಳಿವೆ.

3 thoughts on “ರಾಮ ಹುಟ್ಟಿದ್ದಕ್ಕೆ ದಾಖಲೆ ಇಲ್ಲ: ದ್ವಾರಕನಾಥ

  1. ಎಂದರೆ ನಮ್ಮ ಮುತ್ತಾತನ ಬಗ್ಗೆ ನಮಗೆ ಅರಿವಿಲ್ಲದಿರಬಹುದು. ಆದರೆ ಅವರು ಇದ್ದರಷ್ಟೇ. ಇರಲಿಲ್ಲವೆನ್ನವುದು ಮೂರ್ಖತನದ ಮಾತಾದೀತು, ರಾಮನ ಕಾಲ ಮಹಾಭಾರತಕ್ಕೂ ಹಿಂದಿನದು, ಮಹಾಭಾರತ ಕಾಲ ನಡೆದು 5000 ವರ್ಷಗಳು ಗತಿಸಿವೆ. ಮಹಾಭಾರತದ ಬಗ್ಗೆ ನಮಗೆ ಏನೂ ನಿಖರ ವಾದ ಮಾಹಿತಿ ಸಿಕ್ಕಿಲ್ಲ. ಆದರೆ ಅದು ಇಲ್ಲವೆನ್ನಲಾಗುವುದಿಲ್ಲ. ಹಾಗೆಯೇ ರಾಮನ ಕಾಲ 10000 ವರ್ಷಕ್ಕೂ ಹಿಂದಿನದು, ಸಹಜವಾಗಿ ಪುರಾವೆಗಳು ಸಿಗದು, ಆದರೆ ವಾಲ್ಮೀಕಿ ರಾಮಾಯಣವಿದೆಯಲ್ಲ.? ರಾಮನ ಅಸ್ತಿತ್ವ ವನ್ನು ಪ್ರಶ್ನಿಸಿರುವವರು ಅವರ 5 ತಲೆಮಾರುಗಳ ಹಿಂದಿನ ಪುರಾವೆಯನ್ನು ಮೊದಲು ಒದಗಿಸಲಿ.

Leave a Reply

Your email address will not be published. Required fields are marked *

19 − 16 =

Friday, 15.12.2017

ಶ್ರೀಹೇಮಲಂಭಿ, ದಕ್ಷಿಣಾಯನ, ಹೇಮಂತಋತು, ಮಾರ್ಗಶಿರ ಮಾಸ, ಕೃಷ್ಣ ಪಕ್ಷ , ತ್ರಯೋದಶಿ, ಶುಕ್ರವಾರ, ನಿತ್ಯ ನಕ್ಷತ್ರ-ವಿಶಾಖ, ಯೋಗ-ಸುಕರ್ಮ, ಕರಣ-ಗರಜೆ.

ರಾಹುಕಾಲಗುಳಿಕಕಾಲಯಮಗಂಡಕಾಲ
10.30-12.00 07.30-09.00 03.00-04.30

Read More

 

Friday, 15.12.2017

ಶ್ರೀಹೇಮಲಂಭಿ, ದಕ್ಷಿಣಾಯನ, ಹೇಮಂತಋತು, ಮಾರ್ಗಶಿರ ಮಾಸ, ಕೃಷ್ಣ ಪಕ್ಷ , ತ್ರಯೋದಶಿ, ಶುಕ್ರವಾರ, ನಿತ್ಯ ನಕ್ಷತ್ರ-ವಿಶಾಖ, ಯೋಗ-ಸುಕರ್ಮ, ಕರಣ-ಗರಜೆ.

ರಾಹುಕಾಲಗುಳಿಕಕಾಲಯಮಗಂಡಕಾಲ
10.30-12.00 07.30-09.00 03.00-04.30

Read More

Back To Top