About Us Advertise with us Be a Reporter E-Paper

ಅಂಕಣಗಳು

ನಮ್ಮ ಸಂವಿಧಾನ ಮನುಸ್ಮೃತಿಯ ಸಾಮ್ಯತೆ ಹೊಂದಿದೆಯೇ?

-ಉಮಾ ಮಹೇಶ ವೈದ್ಯ, ವಕೀಲೆ

ಅನಾದಿ ಕಾಲದಿಂದ, ಮನುಸ್ಮೃತಿಯನ್ನಾಧರಿಸಿ ಸಮಾಜದಲ್ಲಿ ನಡೆದಿದ್ದು, ಇದನ್ನು ಧಿಕ್ಕರಿಸಿ ಬಾಬಾ ಸಾಹೇಬ ಅಂಬೇಡ್ಕರ್ ಅವರು ಈ ಮನುಸ್ಮೃತಿಯನ್ನು ಸುಟ್ಟು ಹಾಕಿದ ವಿಷಯವನ್ನು ನಾವು ಅನೇಕ ಸಂದರ್ಭಗಳಲ್ಲಿ ಕೇಳಿದ್ದೇವೆ ಮತ್ತು ಓದಿದ್ದೇವೆ. ತದ ನಂತರ ಸ್ವಾತಂತ್ರ್ಯಾ ನಂತರದ ಭಾರತದ ಭವ್ಯ ಭವಿಷ್ಯಕ್ಕೆ , ಹಿಂದಿದ್ದ ಎಲ್ಲ ಅಪಸವ್ಯದ ಮೂಲಗಳನ್ನು ಕಿತ್ತೊಗೆದು, ನಮ್ಮದೇ ಸಂವಿಧಾನದ ಆಶಯದಲ್ಲಿ ಬಾಬಾ ಸಾಹೇಬರ ನೇತೃತ್ವದಲ್ಲಿ ರಚಿಸಿದ ವಿಶ್ವದಲ್ಲಿಯೇ ಅತಿ ದೊಡ್ಡದಾದ ಲಿಖಿತ ಸಂವಿಧಾನವನ್ನು ಹೊಂದಿದ್ದೇವೆ. ಆದರೆ ಯಾವ ಮನುಸ್ಮೃತಿಯನ್ನು ಅಂದು ಸುಟ್ಟು ಅದರಲ್ಲಿನ ಎಲ್ಲ ಸಾರವನ್ನು ಬೇರೆ, ಬೇರೆ ಸ್ವರೂಪದಲ್ಲಿ, ಹೆಸರಿನಲ್ಲಿ, ನಮ್ಮೀ ಸಂವಿಧಾನದಲ್ಲಿ ಕಂಡು ಬರುತ್ತಿುವುದು ಮಾತ್ರ ಕುತೂಹಲಕಾರಿ ಅಚ್ಚರಿ ಎಂದರೆ ತಪ್ಪಾಗಲಕ್ಕಿಲ್ಲ.

ಸ್ಮೃತಿ ಅಂದರೆ ನೆನೆಪು. ನಾಗರಿಕ ಸಮಾಜ ಬೆಳದಂತೆ, ಕಂಡ ಸಾಮಾಜಿಕ ವ್ಯವಸ್ಥೆಯ ಬದಲಾವಣೆ ಹಾಗೂ ಬೆಳವಣಿಗೆಯ ಆಧಾರದ ಮೇಲೆ ಅಂದು ರಾಜ್ಯಭಾರ ನಡೆಸುತ್ತಿದ್ದ ರಾಜರು ಹಾಗೂ ಅವರ ಸಲಹೆಗಾರರು ರೂಪಿಸಿ, ಅಳವಡಿಸಿಕೊಂಡ ನಿಯಮಗಳನ್ನು, ಕಟ್ಟು ಪಾಡುಗಳನ್ನು ತಮ್ಮ ನೆನಪಿನಲ್ಲಿಟ್ಟುಕೊಂಡು, ತಮ್ಮ ಕಾಲದಲ್ಲಿ ಕಂಡು ಬರುವ ಸಂದರ್ಭ ಸನ್ನಿವೇಶಗಳಿಗೆ ತಕ್ಕಂತೆ ಅವುಗಳನ್ನು ಮಾರ್ಪಾಡು ಮಾಡಿಕೊಂಡು, ತಮ್ಮದೇ ಆದ ಧಾಟಿಯಲ್ಲಿ ಅವುಗಳನ್ನು ಧರ್ಮಶಾಸ್ತ್ರವೆಂದು ಕರೆದು, ಉಲ್ಲಂಘಿಸಿದವರಿಗೆ ಸೂಕ್ತ ಶಿಕ್ಷೆ ಉಲ್ಲೇಖಿಸಿ, ಈ ಸ್ಮೃತಿ ತಮ್ಮ ಸ್ಮೃತಿಯೆಂದು ಕರೆದುಕೊಳ್ಳುತ್ತಿದ್ದರು. ಆದ್ದರಿಂದಲೇ, ನಮ್ಮ ದೇಶದಲ್ಲಿ ಹತ್ತು ಹಲವು ಸ್ಮೃತಿಗಳಿವೆ, ಉದಾಹರಣೆಗೆ, ನಾರದ ಸ್ಮೃತಿ, ಪರಾಶರ ಸ್ಮೃತಿ, ಯಾಜ್ನವಲ್ಕ ಸ್ಮೃತಿ, ಮನು ಸ್ಮೃತಿ ಹೀಗೆ. ಆದರೆ ಯಾವುದೇ ಸ್ಮೃತಿಕಾರ ತನ್ನ ಸ್ಮೃತಿ ಶ್ರೇಷ್ಠ ಎಂದು ಎಲ್ಲಿಯೂ ಹೇಳಿಕೊಳ್ಳಲಿಲ್ಲ. ಆದರೆ ಸಮಯಾನುಸಾರ ತಿದ್ದುಪಡೆಗಳಿಗೆ ಧರ್ಮ ತೆರೆದಿಟ್ಟರು.

ನಮ್ಮ ಸಂವಿಧಾನ ಕೂಡಾ ವಿಶ್ವದ ಅನೇಕ ಶ್ರೇಷ್ಠ ಸಂವಿಧಾನಗಳಲ್ಲಿನ ಅಂಶಗಳನ್ನು ಒಳಗೊಂಡ ಒಂದು ಕೋಶ. ಇದನ್ನು ರೂಪಿಸುವ ಮೊದಲು ಅವುಗಳನ್ನು ಓದಿ, ನೆನಪಿನಲ್ಲಿಟ್ಟುಕೊಂಡು, ನಂತರ ಸಂವಿಧಾನ ರಚನಾ ಸಭೆಯಲ್ಲಿ ಚರ್ಚಿಸಿ ಒಂದು ರೂಪಕ್ಕೆ ತಂದು ಸಂವಿಧಾನ ರಚಿಸಿದ್ದಾರೆ. ಆದರೆ ನಮ್ಮ ಸಂವಿಧಾನ ಕೂಡಾ ಸಮಯಾನುಸಾರ ತಿದ್ದುಪಡಿಗೆ ಒಳಗಾಗುವ ಹೊತ್ತಿಗೆ, ಇಲ್ಲಿಯವರೆಗೆ 121 ತಿದ್ದುಪಡಿಗಳನ್ನು ನಮ್ಮ ಸಂವಿಧಾನ ಕಂಡಿದೆ. ಭವಿಷ್ಯದಲ್ಲಿಯೂ ಸಹ ನಮ್ಮ ಸಂವಿಧಾನ ತಿದ್ದುಪಡಿಗೆ ತೆರೆದಿಟ್ಟ ಪುಸ್ತಕ.

ನ್ಯಾಯ ಹಾಗೂ ಕಾನೂನಿನ ಮೂಲಗಳು, ರಾಜ್ಯಭಾರ, ವಾಣಿಜ್ಯ ವ್ಯವಹಾರ, ನ್ಯಾಯಾಧೀಶರು ಹಾಗೂ ನ್ಯಾಯವಿಚಾರಣೆ, ಸಮಾಜದಲ್ಲಿ ವರ್ಗ ಶ್ರೇಣಿ, ವೈಯಕ್ತಿಕ ಆಸ್ತಿ ಹಕ್ಕು, ಕರ ನಿರ್ಧರಣೆ , ವಸೂಲಾತಿ ಇತ್ಯಾದಿಗಳನ್ನು ಪ್ರತಿಪಾದಿಸುತ್ತದೆ. ಅದೇ ರೀತಿ ನಮ್ಮ ಸಂವಿಧಾನದಲ್ಲಿಯೂ ಪರಿಚ್ಛೇದ 13ನ್ನು ಗಮನಿಸಿದಾಗ , ನಮ್ಮ ಸಂವಿಧಾನದಲ್ಲಿ ಯಾವ, ಯಾವ ಮೂಲಗಳನ್ನು ಕಾನೂನಿನ ಮೂಲಗಳು ಹಾಗೂ ಯಾವುಗಳು ಕಾನೂನುಗಳಲ್ಲ ಎಂದು ಸ್ಪಷ್ಟವಾಗಿ ಉಲ್ಲೇಖಿಸಲಾಯಿತು. ಮನುಸ್ಮೃತಿಯಂತೆಯೇ ನಾಗರಿಕರ ಹಕ್ಕು, ಬಾಧ್ಯತೆಗನ್ನು ವಿವರಿಸಲಾಯಿತು ಹಾಗೂ ವರ್ಗಕ್ಕೆ ವಿಶೇಷ ಸೌಲಭ್ಯ ಅಥವಾ ಮೀಸಲಾತಿ ನೀಡಲು ಅವಕಾಶ ಮಾಡಿಕೊಡಲಾಯಿತು. ಮನುಸ್ಮೃತಿಯಲ್ಲಿ ಒಕ್ಕೂಟ ರಾಜ್ಯದ ಪರಿಕಲ್ಪನೆ ಇಲ್ಲದಿದ್ದರಿಂದ ಎಲ್ಲವನ್ನೂ ವಿವರವಾಗಿ ಬಿಚ್ಚಿಟ್ಟರೆ, ನಮ್ಮ ಸಂವಿಧಾನದಲ್ಲಿ, ತನ್ನ ಪರಿಚ್ಛೇದ ಹಾಗೂ ಉಪಬಂಧಗಳನುಸಾರ ಕೇಂದ್ರ ಹಾಗೂ ರಾಜ್ಯಗಳು ಪ್ರತ್ಯೇಕ ಕಾನೂನುಗಳನ್ನು ರಚಿಸಿಕೊಳ್ಳಲು ಅನುವು ಮಾಡಿಕೊಡಲಾಯಿತು. ಈ ಹಿನ್ನಲೆಯಲ್ಲಿಯೇ ನಾವಿಂದು ಹತ್ತು ಹಲವಾರು ಅಧಿನಿಯಮಗಳನ್ನು, ಕಾನೂನುಗಳನ್ನು ಹೊಂದಿದ್ದೇವೆ. ಈ ಎಲ್ಲ ಸಂಗತಿಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಾ ಹೋದಂತೆ ನಮ್ಮ ಸಂವಿಧಾನದಲ್ಲಿ ಮನುಸ್ಮೃತಿಯ ಗಾಢವಾದ ಸಾಮ್ಯತೆ ಬರುತ್ತಾ ಹೋಗುತ್ತದೆ.

ಎಲ್ಲಕ್ಕೂ ಮಿಗಿಲಾಗಿ, ಮನುಸ್ಮೃತಿ ಕಾಲದಲ್ಲಿದ್ದ ವರ್ಣಾಶ್ರಮಗಳು ನಮ್ಮ ಸಂವಿಧಾನದಲ್ಲಿ ಕಾಣಸಿಗುತ್ತವೆಯೇ? ಎಂಬ ಪ್ರಶ್ನೆಗೆ ಸಕಾರಾತ್ಮಕವಾಗಿ ನಾವು ಉತ್ತರಿಸಬಹುದು. ಭಗವದ್ಗೀತೆಯಲ್ಲಾಗಲಿ, ಮನುಸ್ಮೃತಿಯಲ್ಲಾಗಲಿ ಮನುಷ್ಯನ ಹುಟ್ಟಿನಿಂದ ಆತನ ವರ್ಣ ಅಂದರೆ ಬ್ರಾಹ್ಮಣ, ಕ್ಷತ್ರಿಯ, ವೈಶ್ಯ ಅಥವಾ ಶೂದ್ರ ನಿರ್ಧಾರವಾಗದು. ಹುಟ್ಟಿನಿಂದ ಎಲ್ಲರೂ ಸಮಾನರು. ಆತನ ವರ್ಣ ಆ ವ್ಯಕ್ತಿಯ ಕರ್ಮ ಹಾಗೂ ಪಡೆದ ಕೌಶಲ್ಯದ ಮೇಲೆ ಅವಲಂಬಿತವಾಗಿರುತ್ತದೆ. ಅಂದರೆ, ಯಾವುದೇ ವ್ಯಕ್ತಿ ಬುದ್ಧಿವಂತನಾಗಿದ್ದು, ಶಾಸ್ತ್ರಗಳನ್ನು ಕೇಳಿದ್ದನ್ನು ನೆನಪಿಟ್ಟುಕೊಂಡು, ಮನನ ಯಥಾವತ್ತಾಗಿ ಇನ್ನೊಬ್ಬರಿಗೆ ಹೇಳಿಕೊಡುವಷ್ಟು ಸಮರ್ಥನಾದರೆ ಆತನನ್ನು ಬ್ರಾಹ್ಮಣ ಆಶ್ರಮಕ್ಕೆ ಸೇರಿಸುತ್ತಿದ್ದರು. ಇಲ್ಲಿ ಆ ವ್ಯಕ್ತಿಯ ದೈಹಿಕ ಬಲ ಕೇವಲ ಅಪೇಕ್ಷಣೀಯ. ಅದೇ ರೀತಿ ದೈಹಿಕವಾಗಿ ಸಬಲನಿದ್ದು ಬುದ್ದಿವಂತಿಕೆಯಲ್ಲಿ ಕಡಿಮೆ ಇದ್ದು, ರಕ್ಷಣಾ ವಿಷಯದಲ್ಲಿ ಕೌಶಲ್ಯ ಹೊಂದಿದ್ದರೆ ಆತನನ್ನು ಕ್ಷತ್ರೀಯ ಆಶ್ರಮಕ್ಕೆ , ಹೊರ ಜಗತ್ತಿನ ಪರಿಜ್ಞಾನವಿದ್ದು, ಹಣಕಾಸಿನ ವಿಷಯದಲ್ಲಿ ಚತುರನಿದ್ದರೆ ವೈಶ್ಯ ಆಶ್ರಮಕ್ಕೆ ಹಾಹೂ ಕೊನೆಯಲ್ಲಿ ಇವೆಲ್ಲರನ್ನೂ ಸಾಕಿ ಸಲಹುವ, ಆಹಾರ ಉತ್ಪಾದಿಸಿ ಪೊರೆಯುವ, ವ್ಯವಸಾಯ ಹಾಗೂ ಸೇವಾ ಹೊಂದಿದ ವ್ಯಕ್ತಿಯನ್ನು ಶೂದ್ರ ಆಶ್ರಮಕ್ಕೆ ಸೇರಿಸಿ, ಅವರ ಪ್ರತಿಭೆಗೆ ತಕ್ಕಂತೆ ಅವರ ಬೆಳವಣಿಗೆ ಹಾಗೂ ಸ್ಥಾನ-ಮಾನ ದೊರೆಯುತ್ತಿತ್ತು. ಬ್ರಾಹ್ಮಣನ ಸಂತಾನ ಬ್ರಾಹ್ಮಣನೇ ಆಗಬೇಕು ಎಂಬ ಕಡ್ಡಾಯ ಮನುಸ್ಮೃತಿ ಕಾಲದಲ್ಲಿ ಜಾರಿಯಲ್ಲಿರಲಿಲ್ಲ. ಆದರೆ ಒಂದು ಆಶ್ರಮದಲ್ಲಿದ್ದ ಒಬ್ಬ ವ್ಯಕ್ತಿ ತನ್ನ ವಿಶೇಷ ಪ್ರತಿಭೆ ಹಾಗೂ ಜಾಣ್ಮೆ ಸಾಬೀತಿನ ನಂತರ ಇನ್ನೊಂದು ಆಶ್ರಮಕ್ಕೆ ಸೇರ್ಪಡೆಗೊಳ್ಳುತ್ತಿದ್ದ. ಇದಕ್ಕೆ ಉದಾಹರಣೆ ಕೊಡಬೇಕಾದರೆ, ಕ್ಷತ್ರಿಯನಾಗಿದ್ದ ವಿಶ್ವಾಮಿತ್ರ, ಬ್ರಹ್ಮರ್ಷಿಯಾಗಿದ್ದು, ಶೂದ್ರನಾಗಿದ್ದ ವಾಲ್ಮಿಕಿ, ಬ್ರಾಹ್ಮಣರೂ ಕೈ ಮುಗಿಯುವಂಥಹ ಶ್ರೇಷ್ಠ ಈಗ ಈ ಸನ್ನಿವೇಶಗಳು ಹೇಗೆ ನಮ್ಮ ಸಂವಿಧಾನದಲ್ಲಿ ಮಿಳಿತವಾಗಿವೆ ಎಂದು ನೋಡೋಣ.

ನಮ್ಮ ಸಂವಿಧಾನದಲ್ಲಿದ್ದ ಶಿಕ್ಷಣದ ಹಕ್ಕು, ಈಗ ಮೂಲಭೂತ ಹಕ್ಕುಗಳಲ್ಲೊಂದು. ಪ್ರತಿ ಮಗು ಶಿಕ್ಷಣ ಪಡೆಯುವ ಸಮಯದಲ್ಲಿಯೇ ಆ ಮಗುವಿನ ಜಾಣ್ಮೆ ಹಾಗೂ ವಿಷಯ ಗ್ರಹಿಕೆಯ ಆಧಾರದಲ್ಲಿ ಪರೀಕ್ಷಾ ನಂತರ ಅಂಕಗಳ ಮೇಲೆ ಜಾಣ, ಸ್ವಲ್ಪ ಜಾಣ, ಸಾಧಾರಣವೆಂದು ಗ್ರೇಡ ನೀಡುತ್ತೇವೆ. ಇದೇ ರೀತಿ ಬೆಳೆದ ಮಕ್ಕಳು ತಮ್ಮ ತಮ್ಮ ಇಚ್ಛೆಗನುಸಾರ ವಿಜ್ಞಾನವನ್ನೋ, ವಾಣಿಜ್ಯವನ್ನೋ, ಕಲಾ ವಿಷಯವನ್ನೋ, ಶಾಸ್ತ್ರವನ್ನೋ, ಇತ್ಯಾದಿ ವಿಷಯಗಳನ್ನು ಆಯ್ಕೆ ಮಾಡಿಕೊಂಡು ಪದವಿ ಪೂರೈಸಿ, ತಮ್ಮ ಭವಿಷ್ಯದ ಕರ್ಮವನ್ನು ನಿಭಾಯಿಸಲು ಸಿದ್ಧರಾಗುತ್ತಾರೆ. ಇಲ್ಲಿಂದ ನಮ್ಮ ಸಂವಿಧಾನ ವರ್ಣಾಶ್ರಮ ಪ್ರಾರಂಭವಾಗುತ್ತದೆ. ಏಕೆಂದರೆ, ನಮ್ಮ ಸಂವಿಧಾನದಲ್ಲಿ, ದೇಶದ ಆಡಳಿತ, ಶಾಸನ ರಚನೆ ಹಾಗೂ ನ್ಯಾಯ ನಿರ್ಣಯ ವಿಷಯಗಳನ್ನಾಧರಿಸಿ, ಕಾರ್ಯಾಂಗ, ಶಾಸಕಾಂಗ, ಮತ್ತು ನ್ಯಾಯಾಂಗವೆಂದು ಪ್ರತ್ಯೇಕ ವಿಭಾಗ ಅಂದರೆ ಆಶ್ರಮ ರಚಿಸಿಕೊಂಡಿದ್ದೇವೆ. ಪ್ರತಿಯೊಂದು ಅಂಗಕ್ಕೂ ಅದರದೇ ಆದ ಸ್ವರೂಪ ಹಾಗು ಅಧಿಕಾರ ವ್ಯಾಪ್ತಿಯನ್ನು ನೀಡಿ, ಇವು ಸ್ವತಂತ್ರವಾಗಿ ಒಂದಕ್ಕೊಂದು ಸಂವಿಧಾನ, ಅಂದರೆ ಧರ್ಮದ ಆಶಯಗಳನ್ನು ಸಾರ್ಥಕಗೊಳಿಸುವಲ್ಲಿ ತಮ್ಮ ಅಧಿಕಾರ ಹಾಗೂ ಕರ್ತವ್ಯ ನಿರ್ವಹಿಸಬೇಕೆಂದು ಸ್ಪಷ್ಟವಾಗಿ ಹೇಳಿಕೊಂಡಿದ್ದೇವೆ.

ಕಾನೂನು ಪದವಿ ಪಡೆದ ನ್ಯಾಯವಾದಿಗಳು, ನ್ಯಾಯ ನಿರ್ಣಯಿಸುವ ನ್ಯಾಯಾಧೀಶರುಗಳೇ ಮನುಸ್ಮೃತಿಯಲ್ಲಿ ಉಲ್ಲೇಖಿಸಿರುವ ಬ್ರಾಹ್ಮಣ ಆಶ್ರಮಕ್ಕೆ ಸೇರಿದವರು. ನೀವು ನೋಡಿರಬಹುದು, ಕಾನೂನು ಪದವಿ ಪಡೆಯುವುದೆಂದರೆ ಹಿಂದಿನ ಧರ್ಮ ಶಾಸ್ತ್ರಗಳನ್ನು ಅಭ್ಯಸಿಸಿ, ನೆನಪಿಟ್ಟುಕೊಂಡು ಯಥಾವತ್ತಾಗಿ ಹೇಳುವ ಜಾಣ್ಮೆ ಅಗತ್ಯವಾಗಿರುವಂತೆ, ಇಂದಿನ ಸಂವಿಧಾನ ಹಾಗೂ ಅದರಡಿ ರೂಪಿಸಿರುವ ಅನೇಕ ಕಾನೂನುಗಳನ್ನು ಅಭ್ಯಸಿಸಿ, ಉಪಬಂಧಗಳನ್ನು ಯಥಾವತ್ತಾಗಿ ಹೇಳುವ ಪ್ರತಿಪಾದಿಸುವ, ನ್ಯಾಯ ನಿರ್ಣಯಿಸುವ ಜಾಣ್ಮೆ ನಾವಿಂದು ಕಾಣುವುದು ಈ ನ್ಯಾಯಾಂಗದಲ್ಲಿ. ನ್ಯಾಯಾಧೀಶರುಗಳನ್ನು ಇಂದು ಸಂವಿಧಾನದ ರಕ್ಷಕರು ಎಂದು ಕರೆದರೆ, ಅಂದು ಧರ್ಮ ಶಾಸ್ತ್ರ ರಕ್ಷಕರೆಂದರೆ ಬ್ರಾಹ್ಮಣರು ಹೇಳುತ್ತಿದ್ದರು. ಈ ಕಾರಣಕ್ಕಾಗಿಯೇ ಅವರಿಗೆ ಅಂದು ವಿಶೇಷ ಸೌಲಭ್ಯಗಳಿದ್ದರೆ, ಇಂದು ನ್ಯಾಯಾಧಿಶರುಗಳಿಗೆ ಹತ್ತು ಹಲವು ವಿಶೇಷ ಸೌಲಭ್ಯ ಹಾಗೂ ಕಾನೂನು ರಿಯಾಯಿತಿಗಳಿವೆ. ಅಂದು ಮೇಲ್ವರ್ಗದವರನ್ನು ಪ್ರಶ್ನಿಸಲು ಬರುತ್ತಿರಲಿಲ್ಲವೆಂದು ಹೇಳುತ್ತಿದ್ದರೆ, ಇಂದು ನ್ಯಾಯಾಂಗವನ್ನು ಪ್ರಶ್ನಿಸುವಂತಿಲ್ಲವೆಂದು ನಮ್ಮ ಅರಿವಿಗಿರುವ ಸಂಗತಿ. ಹಾಗಿದ್ದ ಮೇಲೆ ನಮ್ಮ ನ್ಯಾಯಾಂಗ, ಮನುಸ್ಮೃತಿಯ ಬ್ರಾಹ್ಮಣ ಆಶ್ರಮದ ಹೋಲಿಕೆಯಲ್ಲಿ ಅತೀ ಹತ್ತಿರದ ಸಾಮ್ಯತೆ ಹೊಂದಿಲ್ಲವೇ?

ನಮ್ಮ ರಾಷ್ಟ್ರಪತಿಗಳು, ರಾಜ್ಯಪಾಲರು, ಮಂತ್ರಿಗಳು, ಶಾಸಕರು, ಇವರ ಕುರಿತಂತೆ ಪ್ರತ್ಯೇಕವಾದ ಅಧ್ಯಾಯಗಳು ನಮ್ಮ ಸಂವಿಧಾನದಲ್ಲಿರುವಂತೆ, ಮನುಸ್ಮೃತಿಯಲ್ಲಿಯೂ ಕೂಡಾ ಪ್ರತ್ಯೇಕ ವಿಭಾಗವಿದ್ದು ಅವರ ವ್ಯಾಪ್ತಿ, ಅಧಿಕಾರದ ಉಲ್ಲೇಖವಿದೆ. ಈ ವಿಭಾಗವೇ ನಮ್ಮ ಸಂವಿಧಾನದ ರಾಜ್ಯಾಂಗ ಹಾಗೂ ಶಾಸಕಾಂಗ. ಧರ್ಮ ಶಾಸ್ತ್ರದಂತೆ ನಿಯಮಗಳನ್ನು ರೂಪಿಸಿ ರಾಜ್ಯವಾಳುವ ಹಾಗೆ, ಇಂದು ಸಂವಿಧಾನದ ಚೌಕಟ್ಟಿನಲ್ಲಿ ಕಾನೂನುಗಳನ್ನು ರೂಪಿಸಿ ದೇಶ ಹಾಗೂ ರಾಜ್ಯಗಳನ್ನು ಪ್ರಭುತ್ವದ ತತ್ವಗಳ ಮಾದರಿಯಲ್ಲಿ ಆಳ್ವಿಕೆ ನಡೆಸುವುದು ಮನುಸ್ಮೃತಿಯನ್ನು ನಮ್ಮ ಸಂವಿಧಾನ ನೆನೆಪಿಸುತ್ತದೆ.

ವೈಶ್ಯ ಆಶ್ರಮದ ಬಗ್ಗೆ ನಮ್ಮ ಸಂವಿಧಾನದಲ್ಲಿ ಎಲ್ಲಿ ಹೇಳಿದ್ದಾರೆಂದು ಕೇಳಿದರೆ, ನಮ್ಮ ಮೂಲ ಭೂತ ಹಕ್ಕಿನಲ್ಲಿಯೇ ಹೇಳಲಾಗಿದೆ. ಯಾವುದೇ ನಾಗರಿಕ ತನ್ನ ಇಚ್ಛೆಯನುಸಾರ ಯಾವುದೇ ವ್ಯಾಪಾರ, ವೃತ್ತಿಯನ್ನು ಕೈಗೊಳ್ಳಬಹುದು ಎಂದು. ಈ ಹಕ್ಕಿನಡಿ ವ್ಯಾಪಾರ ಅಥವಾ ವೃತ್ತಿ ಕೈಗೊಳ್ಳುವ ನಾಗರಿಕ ಸಂವಿಧಾನದಲ್ಲಿ ವ್ಯಾಪಾರ ವಹಿವಾಟು ಸಂಬಂಧಿಸಿದಂತೆ ಇರುವ ಪರಿಚ್ಛೇದಗಳು ಹಾಗು ರೂಪಿಸಿದ ಕಾನೂನುಗಳನ್ನು ಪಾಲಿಸಿಕೊಂಡು ದೇಶದಲ್ಲಿ ವಹಿವಾಟು ಬೆಳೆಸಿ, ಉದ್ಯೋಗ ಸೃಷ್ಟಿಸುವ, ಲಾಭ ಗಳಿಸಿ ರಾಜ್ಯಾಂಗಕ್ಕೆ ತೆರಿಗೆ ಸಲ್ಲಿಸುವ ಹೊಣೆ ಹೊಂದಿರುತ್ತಾನೆ. ಇದೇ ಅಲ್ಲವೇ ಮನು ಸ್ಮೃತಿಯಲ್ಲಿ ಹೇಳಿದ ವೈಶ್ಯ ಆಶ್ರಮ?

ಇನ್ನು ಶೂದ್ರ ಆಶ್ರಮ, ಎಂದರೆ ಈಗಿನ ಸರಕಾರಿ ಹಾಗೂ ಖಾಸಗಿ ನೌಕರರು, ಕಾರ್ಮಿಕರು. ಇಂಜನೀಯರುಗಳು, ವೈದ್ಯರು, ಇತ್ಯಾದಿ. ಇವರು ನ್ಯಾಯಾಂಗ, ಶಾಸಕಾಂಗ, ರಾಜ್ಯಾಂಗದ ಒಳಿತಿಗಾಗಿ ತಮ್ಮ ತಮ್ಮ ಜಾಣ್ಮೆ ಹಾಗೂ ಕೌಶಲ್ಯವನ್ನು ತಮ್ಮ ಕ್ಷೇತ್ರಗಳಲ್ಲಿ ಕಂಡುಕೊಂಡು, ಸಮಾಜದ ಒಳಿತಿಗಾಗಿ ಕಾರ್ಯ ನಿರ್ವಹಿಸುವ ಕಾರ್ಯಾಂಗದ ಈ ಕಾರಣಕ್ಕಾಗಿಯೇ ನಮ್ಮ ಸಂವಿಧಾನ ಕಾರ್ಯಾಂಗದವರನ್ನು ‘ಸಾರ್ವಜನಿಕ ಸೇವಕ’ ಎಂದು ಕರೆದದ್ದು. ಈ ಸಾರ್ವಜನಿಕ ಸೇವಕರನ್ನು ರಾಜ್ಯಾಂಗ ಎ ವರ್ಗ, ಬಿ ವರ್ಗ, ಸಿ ವರ್ಗ ಹಾಗೂ ಡಿ ವರ್ಗದ ನೌಕರರೆಂದು ವಿಭಾಗಿಸಿ, ಪ್ರತ್ಯೇಕ ಕಾರ್ಯಾಧಿಕಾರ ಮತ್ತು ಹೊಣೆಗಳನ್ನು ನಿಶ್ಚಯಿಸಿದೆ. ಇದೇ ರೀತಿಯಲ್ಲಿ ಮನುಸ್ಮೃತಿಯ ಶೂದ್ರ ಆಶ್ರಮದಲ್ಲಿ, ಕುಲ ಕಸುಬುಗಳಾಧಾರದ ಮೇಲೆ ಆಂತರಿಕ ವರ್ಗ ಶ್ರೇಣಿಯ ರಚನೆ ಕಂಡು ಬರುತ್ತದೆ. ಈಗ ಹೇಳಿ, ನಮ್ಮ ಸಂವಿಧಾನದಲ್ಲಿ ಮನು ಸ್ಮೃತಿಯ ಅಂಶಗಳು ಕಂಡು ಬರುತ್ತಿಲ್ಲವೇ?
ಇನ್ನು ಪುರೋಹಿತ ಶಾಹಿ ವರ್ಗ, ಅಂದು ರಾಜನ ಹಿಂದೆಯೇ ಇದ್ದು ಆಸ್ಥಾನದಲ್ಲಿನ ಆಗು ಹೋಗುಗಳಲ್ಲಿ ತಮ್ಮ ಪ್ರಭಾವ ಬೀರಿ, ತಮ್ಮ ಹಿಡಿತವನ್ನು ಆಡಳಿತದ ಮೇಲೆ ಹೊಂದಿ, ರಾಜನ ಅಭಿಪ್ರಾಯ ಹಾಗು ರಾಜ ನೀತಿಗಳ ಮೇಲೆ ಪ್ರಭಾವ ಬಿರುತ್ತಿದ್ದ ವರ್ಗ, ಇಂದಿನ ವಿಧಾನ ಸೌಧದಲ್ಲಿರುವ ಐ.ಎ.ಎಸ್. ಐ.ಪಿ.ಎಸ್. ಅಧಿಕಾರಿಗಳು ಹಾಗು ಕೈಗಾರಿಕೋದ್ಯಮಿಗಳು ರಾಜಕೀಯ ಪ್ರಭಾವವಿರುವ ಜನರು ಎಂದರೆ ತಪ್ಪಾಗಲಕ್ಕಿಲ್ಲ. ಮಂತ್ರಿಗಳ ಅಭಿಪ್ರಾಯಗಳನ್ನು ಬದಲಾಯಿಸುವ, ಸರ್ಕಾರದ ನೀತಿ ತಮ್ಮದೇ ಪ್ರಭಾವ ಬೀರಿ ತಮ್ಮ ಅಧಿಕಾರಶಾಹಿಯ ಬುನಾದಿಯನ್ನು ಸದಾ ಗಟ್ಟಿಯಾಗಿರಿಸಿಕೊಂಡಿರುವ ವರ್ಗವೆಂದು ನಮಗೆ ಕಂಡು ಬರುತ್ತಿಲ್ಲವೇ?

ಮಹಿಳಾ ಸ್ವಾತಂತ್ರ್ಯ, ಅಸ್ಪಶ್ಯತೆ , ಧಾರ್ಮಿಕ ಆಚರಣೆ, ತುರ್ತು ಪರಿಸ್ಥಿಯಲ್ಲುಂಟಾಗುವ ಪರಿಣಾಮ, ಇತ್ಯಾದಿಗಳ ಕುರಿತಂತೆ ನಮ್ಮ ಸಂವಿಧಾನದಡಿ ರೂಪಿಸಿ ಕಾನೂನುಗಳಲ್ಲಿ ಪ್ರತ್ಯೇಕ ವಿವರಣಗೆಳು ಹಾಗೂ ನಿಬಂಧನೆಗಳು ಇರುವಂತೆ, ಮನುಸ್ಮೃತಿುಲ್ಲಿಯೂ ಸಹ ಕಾಣಬಹುದು. ಆಂದು ಒಂದು ಆಶ್ರಮದ ಅತಿಕ್ರಮತೆ ಇನ್ನೊಂದು ಆಶ್ರಮದ ಮೇಲೆ ನಡೆದು ಅದನ್ನು ಶೋಷಣೆಯೆಂದು ಕರೆದಂತೆ ಇಂದು ಒಂದು ಸಂವಿಧಾನಿಕ ಇನ್ನೊಂದು ಸಂವಿಧಾನಿಕ ಅಂಗದ ಮೇಲೆ ಅತಿಕ್ರಮಣ ಮಾಡಿ ಕೈಗೊಳ್ಳುವ ನಿರ್ಧಾರವನ್ನು ನಾವು ಶೋಷಣೆಯೆಂದೇ ಕರೆಯಬೇಕಾಗುತ್ತದೆ. ಈ ಹಿನ್ನಲೆಯಲ್ಲಿ, ಶಾಸಕಾಂಗ, ನ್ಯಾಯಾಂಗದ ನಡುವೆ ಶ್ರೇಷ್ಠತನದ ಪೈಪೋಟಿ, ರಾಜ್ಯಾಂಗದಿಂದ, ಕಾರ್ಯಾಂಗದ ಮೇಲೆ ಅಧಿಕಾರದ ಉಪಯೋಗಗಳನ್ನು ಮನುಸ್ಮೃತಿಯಲ್ಲಿನ ಶೋಷಣೆಗೆ ಹೋಲಿಸಬಹುದು.

ಈ ಎಲ್ಲ ವಿವರಣೆಗಳಿಂದ ಒಂದಂತು ಸ್ಪಷ್ಟವಾಗುತ್ತದೆ. ಮನುಸ್ಮೃತಿಯನ್ನು ಹಾಗೂ ಸಂವಿಧಾನವನ್ನು ಜತೆ, ಜತೆಯಾಗಿ ಓದಿ, ಅರ್ಥೈಸಿಕೊಳ್ಳುವವನಿಗೆ ಅವುಗಳ ನಡುವೆ ಕಾಲ, ದೇಶ, ಸಂದರ್ಭದ ವ್ಯತ್ಯಾಸ ಹೊರತು ಪಡಿಸಿ ಉಳಿದೆಲ್ಲ ಧರ್ಮ ಸಾರ ಆಗಿರುವ ಹಾಗೂ ತೀವ್ರ ಸಾಮಿಪ್ಯದ ಸಾಮ್ಯತೆ ಖಂಡಿತ ಕಂಡು ಬರುತ್ತದೆ. ಇದರಿಂದ ಮನುಸ್ಮೃತಿಯನ್ನು ವಿರೋಧಿಸಿ, ಸುಟ್ಟರೆ ಪರೋಕ್ಷವಾಗಿ?

Tags

Related Articles

Leave a Reply

Your email address will not be published. Required fields are marked *

Language
Close