ವಿಶ್ವವಾಣಿ

ರಸ್ತೆಗಳಲ್ಲಿ ಬಿಎಂಟಿಸಿ ಬಸ್‌ಗಳೇ ಇಲ್ಲದಂತಾಗಬಹುದು!

ರಾಜ್ಯ ರಾಜಕೀಯ ದೊಂಬರಾಟವು ಆಷಾಡ ಮಾಸದ ಕಾರಣ ತಾತ್ಕಾಲಿಕವಾಗಿ ಸ್ಥಗಿತಗೊಂಡಿದೆ. ರಾಹುಕಾಲದಲ್ಲಿ ಫೋನ್ ಕರೆ  ಎಚ್. ಡಿ.ರೇವಣ್ಣ ಹಾಗೂ ಕುಮಾರಸ್ವಾಮಿಯವರು ಮನಸ್ಸು ಮಾಡುತ್ತಿಲ್ಲವೇನೋ ಎಂಬಂತೆ ಸದ್ಯ ಭಾಸವಾಗುತ್ತಿದೆ. ಒಲ್ಲದ ಮನಸ್ಸಿನಿಂದ ಮದುವೆಯಾದ ವರನಂತೆ ಸಿಎಂ ಕುಮಾರ ಸ್ವಾಮಿಯವರು ತಮ್ಮ ಕಣ್ಣೀರು ಹಾಕಿದ್ದಾಯಿತು. ರಾಜ್ಯಾದ್ಯಂತ ಮಳೆ, ನೊರೆ, ನೆರೆ ಪ್ರವಾಹದಲ್ಲಿ ಜನರು ಗೋಗರೆಯುತ್ತಿದ್ದರೆ, ಇದ್ಯಾವುದರ ಪರಿವೇ ಇಲ್ಲದಂತೆ ತಮ್ಮ ಜಗಳಗಳಲ್ಲಿ ನಮ್ಮ ಶಾಸಕರು ತೊಡಗಿದ್ದಾಯಿತು. ಕುಮಾರಸ್ವಾಮಿಯವರು ಸಿಎಂ ಆದ ನಂತರ, ಜೋರು ಮಳೆ ಬಂದು ರಾಜ್ಯದ ನದಿಗಳೆಲ್ಲವೂ ತುಂಬಿದವೆಂದು ಸಾಮಾಜಿಕ ಜಾಲತಾಣಗಳಲ್ಲಿ ಜೆಡಿಎಸ್ ಕಾರ್ಯಕರ್ತರು ತಮ್ಮ   ಕಣ್ಣೀರು ಹಾಕಿದ್ದನ್ನು ಬಿಟ್ಟು ಜನರ ಕಷ್ಟ-ಸುಖ ಕೇಳಿದ್ದೀರಾ? ಎಂದು ಎಲ್ಲಿಯೂ ಕೇಳಲಿಲ್ಲ. ತುಂಬಿದ ಅಣೆಕಟ್ಟುಗಳಿಗೆ ಬಾಗಿನ ಅರ್ಪಿಸುವುದು ಇವರ ಮೊದಲ ಪ್ರಾಶಸ್ತ್ಯವಾಯಿತೇ ಹೊರತು ನೆರೆ ಸಂತ್ರಸ್ತರ ನೆರವಿಗೆ ಯಾವ ಶಾಸಕರಿಗೂ ಅನುಕಂಪವಿರಲಿಲ್ಲ.

There may be no BMTC buses on roads!ಒಂದೆಡೆ ಎಂ.ಬಿ.ಪಾಟೀಲ, ಮತ್ತೊಂದೆಡೆ ಜಾರಕಿಹೊಳಿ, ಮಗದೊಂದೆಡೆ ಬಿ.ಸಿ.ಪಾಟೀಲ ಎಲ್ಲರೂ ತಮ್ಮ ತಮ್ಮ ಶಕ್ತಿ ಪ್ರದರ್ಶನಕ್ಕೆ ಮುಂದಾಗಿದ್ದಾರೆ.ಮಂತ್ರಿಗಳು ತಮಗೆ ನೀಡಿದ ವಿವಿಧ ಖಾತೆಗಳನ್ನು ಯಾವ ರೀತಿ ಒಳ್ಳೆಯದಾಗಿ ನಿಭಾಯಿ ಸಬೇಕೆಂಬ ಒಂದು ಕನಿಷ್ಠ ಯೋಜನೆಯನ್ನೂ ಹಾಕಿಕೊಂಡಿಲ್ಲ.

 ಬಾರಿ ಗೆದ್ದವರಿಗೆ ಒಂದು ಖಾತೆ, ಮೂರು ಬಾರಿ ಗೆದ್ದವರಿಗೊಂದು ಖಾತೆ, ಎರಡು ಬಾರಿ ಗೆದ್ದವರಿಗೊಂದು ಖಾತೆ ಎಂದು ಬರೀ ಹಂಚಿಕೆ ನಡೆಯುತ್ತಿದೆಯೇ ಹೊರತು, ಅನುಭವದ ಆಧಾರದಲ್ಲಿ ಒಂದು ಖಾತೆಯೂ ಹಂಚಿಕೆಯಾಗಲಿಲ. ಸ್ವತಃ ಜಿ.ಟಿ.ದೇವೇಗೌಡರು ಬೇಡವೆಂದರೂ, ಅವರನ್ನು ಕರೆಯಿಸಿ ಉನ್ನತ ಶಿಕ್ಷಣ ಸಚಿವ ಖಾತೆ  ನೀಡಲಾಗಿದೆ. ರಾಜ್ಯದಲ್ಲಿರುವ ಪವರ್‌ಫುಲ್ ಖಾತೆಗಳೆಂದರೆ, ಹಣಕಾಸು, ಗೃಹ, ಲೋಕೋಪ ಯೋಗಿ, ಇಂಧನ, ದೊಡ್ಡ ನೀರಾವರಿ, ಕೈಗಾರಿಕೆ, ಸಾರಿಗೆ ಹಾಗೂ ಸಹಕಾರಿ ಖಾತೆಗಳು. ಯಾವ ಪಕ್ಷ  ಬಂದರೂ, ಈ ಖಾತೆಗಳ ಹಂಚಿಕೆ ಪ್ರಾಮುಖ್ಯ ಪಡೆದಿರುತ್ತದೆ. ಈ ಖಾತೆಗಳಿಗಾಗಿ ತೀವ್ರ ಪೈಪೋಟಿ ನಡೆದಿರುತ್ತದೆ. ಈ ಖಾತೆಗಳನ್ನು ಹೊಂದಿರುವ ಸಚಿವರು ಪವರ್‌ಫುಲ್ ಎಂದೇ ರಾಜಕೀಯ ಹಾಗೂ ಉದ್ದಿಮೆ ವಲಯವು ಬಿಂಬಿಸುತ್ತಿವೆ. ಈ ಪ್ರಾಮುಖ್ಯದಿಂದಾಗಿ ಆ ಖಾತೆ ಪೆಯಲು ಶಾಸಕರು ತಮ್ಮದೇ ಪಕ್ಷದ ಮುಖಂಡರನ್ನು ಹೆದರಿ ಸುತ್ತಾರೆ, ಆಪ್ತ ಶಾಸಕರನ್ನು ಸೇರಿಸಿಕೊಂಡು ಸಭೆ ನಡೆಸುತ್ತಾರೆ. ಪಕ್ಷ ತ್ಯಜಿಸುವ ಬ್ಲ್ಯಾಕ್‌ಮೇಲ್ ತಂತ್ರಕ್ಕೆ ಇಳಿಯುತ್ತಾರೆ. ಇಷ್ಟೆಲ್ಲ ಮಾಡಿ ಖಾತೆ ಪಡೆದ ಮೇಲೆ ಅವುಗಳ  ಮರೆಯುತ್ತಾರೆ.

 ನಾನು ಮೇಲೆ ಹೇಳಿದ ಖಾತೆಗಳಲ್ಲಿ ಸಾರಿಗೆ ಖಾತೆಯು ಕೆಲವೇ ವರ್ಷಗಳಲ್ಲಿ ತನ್ನ ಪ್ರಾಮುಖ್ಯ ಕಳೆದುಕೊಳ್ಳಬಹುದು. ಏಕೆಂದರೆ ಸಾರಿಗೆ ಇಲಾಖೆಯಲ್ಲಿರುವ ಎರಡು ಪ್ರಮುಖ ಸಂಸ್ಥೆಗಳೆಂದರೆ ಕೆಎಸ್‌ಆರ್‌ಟಿಸಿ ಮತ್ತು ಬಿಎಂಟಿಸಿ. ಸದ್ಯಕ್ಕೆ ಈ ಖಾತೆಯೂ ಪವರ್‌ಫುಲ್ ಎನಿಸಿದ್ದು, ಅದರಲ್ಲಿಯೂ ಬಿಎಂಟಿಸಿ ಎಂದರೆ, ನಮ್ಮ ಶಾಸಕರಿಗೆ ಅದೇನೋ ಒಂದು ರೀತಿಯ ಹಬ್ಬದ ವಾತಾವರಣದ ಸಂಸ್ಥೆಯಂತೆ. ಆದರೆ ಈ ಬಿಎಂಟಿಸಿಯ ಅಸ್ತಿತ್ವದ ಪ್ರಶ್ನೆಯೊಂದು ಇತ್ತೀಚಿನ ದಿನಗಳಲ್ಲಿ ಸಾರ್ವಜನಿಕ ಚಿಂತಕರ ವಲಯದಲ್ಲಿ ಹೆಚ್ಚಾಗಿ ಕೇಳಿಬರುತ್ತಿದ್ದು,  ಕಾರಣವೇ ‘ನಮ್ಮ ಮೆಟ್ರೋ’.

ಹೌದು. ಬೆಂಗಳೂರಿನಂತಹ ಮಹಾನಗರಕ್ಕೆ ಮೆಟ್ರೋ ಸೇವೆಯ ಅಗತ್ಯ ತುಂಬಾ ಇರುವುದರಿಂದ ಅದರ ವ್ಯಾಪ್ತಿಯನ್ನು ನಗರದ ಮೂಲೆ ಮೂಲೆಗಳಿಗೆ ವಿಸ್ತರಿಸಲಾಗುತ್ತಿದೆ, ಅದಕ್ಕೆ ಯೋಜನೆಗಳೂ ಸಿದ್ಧವಾಗಿವೆ. ನೇರಳೆ ಬಣ್ಣ ಹಾಗೂ ಹಸಿರು ಬಣ್ಣದ ಮಾರ್ಗದ ಮೆಟ್ರೊ ಆರಂಭದ ನಂತರ ನಗರದ ಪ್ರಮುಖ ಮಾರ್ಗಗಳ ಬಸ್ಸುಗಳ ಪ್ರಯಾಣಿಕರ ಸಂಖ್ಯೆಯಲ್ಲಿ ಗಣನೀಯವಾಗಿ ಇಳಿಮುಖವಾಗಿದೆ.

ಬಿಜೆಪಿಯ ಆರ್.ಅಶೋಕ, ಕಾಂಗ್ರೆಸ್‌ನ ರಾಮಲಿಂಗರೆಡ್ಡಿ, ಎಚ್.ಡಿ.ರೇವಣ್ಣ, ಈಗ ಜೆಡಿಎಸ್‌ನಿಂದ ಡಿ.ಸಿ. ತಮ್ಮಣ್ಣನವರೆಗೂ ಎಲ್ಲರೂ ಸಾರಿಗೆ ಇಲಾಖೆಯ  ಜಿದ್ದಿಗೆ ಬಿದ್ದು ಪಡೆವರೇ. ಆದರೆ ಇವರಲ್ಲಿ ಯಾರೊಬ್ಬರೂ ಬಿಎಂಟಿಸಿ ಸಂಸ್ಥೆ ುನ್ನು ನಷ್ಟದಿಂದ ಹೊರತರುವ ಪ್ರಯತ್ನವನ್ನು ಮಾಡಲೇ ಇಲ್ಲ. ನನಗೆ ಬಿಎಂಟಿಸಿ ಸಂಸ್ಥೆಯ ಈಗಿನ ಅಂಕಿ-ಅಂಶಗಳು ಸಿಗದ ಕಾರಣ, ಎರಡು ವರ್ಷಗಳ ಹಿಂದಿನ ಅಂಕಿ-ಅಂಶಗಳನ್ನು ಇಟ್ಟು ಕೊಂಡೇ ಕೆಲವು ಅಭಿಪ್ರಾಯ ಹಂಚಿಕೊಳ್ಳುತ್ತೇನೆ.

2009-10ರಿಂದ 2014-15ರವರೆಗೂ ಏರುಗತಿಯಲ್ಲಿದ್ದ ಬಿಎಂಟಿಸಿ ಸಂಸ್ಥೆಯ ಒಟ್ಟು ಆದಾಯವು 2015-16, 2016-17ರಲ್ಲಿ ಇಳಿಮುಖವಾದದ್ದು ಪ್ರಮುಖ ಸಂಗತಿ. ನಾನು ಈಗಾಲೇ ಹೇಳಿರುವ ಹಾಗೆ, ಇದಕ್ಕೆ ಮುಖ್ಯ ಕಾರಣ  2009-10ರಲ್ಲಿ 1,130 ಕೋಟಿಯಿದ್ದ ಬಿಎಂಟಿಸಿ ಒಟ್ಟು ಆದಾಯವು, 2014-15ರ ಹೊತ್ತಿಗೆ 2,256 ಕೋಟಿಗೆ ಏರಿಕೆಯಾಗಿತ್ತು. ಆದರೆ ಮೆಟ್ರೊ ಆರಂಭದಿಂದಾಗಿ 2015-16ರ ಸಾಲಿನಲ್ಲಿ  ಆದಾಯವು 2,207 ಕೋಟಿಗೆ ಇಳಿಯಿತು. ಆದಾಯ ಇಳಿಕೆಯಾದರೂ ಕೂಡ ತನ್ನ ಒಟ್ಟಾರೆ ವೆಚ್ಚದಲ್ಲಿ ಮಾತ್ರ ಕಡಿತವಾಗಿರಲಿಲ್ಲ.

ಇದೇ ರೀತಿ 2007-2008ನೇ ಸಾಲಿನಲ್ಲಿ ಸುಮಾರು 18ಕೋಟಿಯಷ್ಟು ಲಾಭ ಮಾಡಿದ್ದ ಬಿಎಂಟಿಸಿ, 2008-09 ರಲ್ಲಿ 22 ಕೋಟಿಯಷ್ಟು ನಷ್ಟವನ್ನು ಅನುಭವಿಸಿತ್ತು. ಇಲ್ಲಿಂದ ಶುರುವಾದ ನಷ್ಟವು ಇಂದಿಗೂ ಮುಂದುವರಿಯುತ್ತಲೇ ಇದೆ.  223 ಕೋಟಿ ನಷ್ಟ ಅನುಭವಿಸಿದ ಬಿಎಂಟಿಸಿ, 2013-14ರಲ್ಲಿ ಅತಿ ಹೆಚ್ಚು ಅಂದರೆ, ಸುಮಾರು 300ಕೋಟಿಯಷ್ಟು ನಷ್ಟ ಅನುಭವಿಸಿತು. ಇತ್ತೀಚಿನ ಅಂಕಿ-ಅಂಶಗಳ ಪ್ರಕಾರ 2015-16ರಲ್ಲಿ ಸುಮಾರು 275ಕೋಟಿಯಷ್ಟು ವಾರ್ಷಿಕ ನಷ್ಟವನ್ನು ಬಿಎಂಟಿಸಿ ಸಂಸ್ಥೆಯು ಅನುಭವಿಸುತ್ತಿದೆ.

ಪರಿಸ್ಥಿತಿ ಇಷ್ಟು ಕಳೆಗುಂದಲು ಹಿಂದೆ ಸಾರಿಗೆ ಸಚಿವರಾಗಿದ್ದವರು  ಮಾಡಿದ್ದಾದರೂ ಏನು? ಹತ್ತು ವರ್ಷಗಳ ಹಿಂದೆಯೇ  ನಷ್ಟದ ಹಾದಿಯಲ್ಲಿದ್ದ ಬಿಎಂಟಿಸಿಯ ಉದ್ಧಾರ ಮಾಡುವ ಯಾವ ನೀಲನಕ್ಷೆಯನ್ನು ಸಾರಿಗೆ ಸಂಸ್ಥೆ ನೊಗ ಹೊತ್ತ ಸಾರಥಿಗಳು ಏಕೆ ರೂಪಿ=ಸಲಿಲ್ಲ.  ಕೋಟಿಯಿಂದ ಶುರುವಾದ ನಷ್ಟ ಇಷ್ಟು ಬೇಗ 275 ಕೋಟಿಗೆ ತಲುಪಲು ಕಾರಣವೇನು? ನಷ್ಟದ ಲೆಕ್ಕ ತೋರಿಸಿದರೆ ಮೆಟ್ರೋ ಮೇಲೆ ಗೂಬೆ ಕೂರಿಸಿ ವೈಫಲ್ಯ ಮುಚ್ಚಿಕೊಳ್ಳುತ್ತಾರೆ.

ಬಿಎಂಟಿಸಿಗೆ ಇಷ್ಟೆಲ್ಲ ತೊಂದರೆಗಳಿದ್ದರೂ ಮುಖ್ಯಮಂತ್ರಿ ಕುಮಾರಸ್ವಾಮಿಯವರು ಬಜೆಟ್‌ನಲ್ಲಿ ಬಿಎಂಟಿಸಿಗೆ ಸುಮಾರು 4,200 ಹೊಸ ಬಸ್ ಖರೀದಿಗೆ ಹಣ ಮೀಸಲಿಟ್ಟಿದ್ದು ಮಾತ್ರ ಅಚ್ಚರಿಯ ಸಂಗತಿ. ದಿನದಿಂದ ದಿನಕ್ಕೆ ಪ್ರಯಾ ಣಿಕರ ಸಂಖ್ಯೆಯಲ್ಲಿ ಗಣನೀಯವಾಗಿ ಇಳಿಕೆಯಾಗುತ್ತಿರುವಾಗ ಬಸ್‌ಗಳ ಖರೀದಿ ಮಾಡಿ ಏಕೆ ಹಣ ವ್ಯರ್ಥ ಮಾಡಬೇಕು,  ತಿಳಿಯುತ್ತಿಲ್ಲ. 2,100 ಕೋಟಿ ಹಣ ಏಕೆ ನೀಡಬೇಕಿತ್ತು. ಅದರ ಬದಲು ಬಿಎಂಟಿಸಿ ಇಲಾಖೆಗೆ ನೀಡಿದ ಅನುದಾನ ಹಣವನ್ನು 100 ಕೋಟಿಯಿಂದ 1000 ಕೋಟಿಗೆ ಹೆಚ್ಚಿಸ ಬಹುದಿತ್ತಲ್ಲವೇ ಮುಖ್ಯ ಮಂತ್ರಿಗಳೇ? ಒಂದೆಡೆ ನೀವೇ ಹೇಳಿದ ಹಾಗೆ ಮೆಟ್ರೋ ಕಾಮಗಾರಿಯನ್ನು ತ್ವರಿತಗತಿಯಲ್ಲಿ ಮುಗಿಸಬೇಕಿದೆ. ಅದಕ್ಕೆ ಇನ್ನೂ ಹೊಸದಾದ ಮಾರ್ಗಗಳನ್ನೂ ಸೂಚಿಸಿದ್ದೀರಿ. ಇದು ಹೀಗೆ ಮುಂದುವರಿದರೆ, ಬಿಎಂಟಿಸಿ ಸಂಸ್ಥೆಯು ಇನ್ನು ಹೆಚ್ಚಿನ ನಷ್ಟವನ್ನು ಮುಂದಿನ ದಿನಗಳಲ್ಲಿ ಅನುಭವಿಸುತ್ತದೆ. ಹಾಗಿದ್ದರೂ ಬಸ್ ಖರೀದಿ ಏಕೆ

ಬಿಎಂಟಿಸಿ ಯವರೇ ಬಿಡುಗಡೆ ಮಾಡಿರುವ ಅಂಕಿ-ಅಂಶಗಳ ಪ್ರಕಾರ, 2011-12ರಲ್ಲಿ ಶೇ.3.2ರಷ್ಟು ರದ್ದತಿಯಾದ ಮಾರ್ಗಗಳಿ ದ್ದರೆ, ಇದರ ಸಂಖ್ಯೆ 2015-16ನೇ ಸಾಲಿನಲ್ಲಿ ಶೇ. 10.7ರಷ್ಟು ತಲುಪಿದೆ. ಅಂದರೆ ಇದರರ್ಥ, ಪ್ರತಿವರ್ಷವೂ ಮಾರ್ಗಗಳ ಸಂಖ್ಯೆ ಇಳಿಮುಖವಾಗುತ್ತಿದೆ. ಹೀಗೆ ಇಳಿಮುಖವಾಗುತ್ತಿರುವ ಮಾರ್ಗಗಳನ್ನು ಹೇಗೆ ತಾನೇ ನಷ್ಟದಿಂದ ತಡೆಯಲು ಸಾಧ್ಯ. ಅಷ್ಟೇ ಅಲ್ಲದೇ, ಸರಾಸರಿ 224 ಕಿ.ಮೀ ಪ್ರಯಾಣಿಸುತ್ತಿದ್ದ ಪ್ರತಿ ಬಸ್(2011-12ರಲ್ಲಿ) ಈಗ 200 ಕಿ.ಮೀ ಆಸುಪಾಸಿಗೆ ಬಂದು ನಿಂತಿವೆ. ಅದದಿಂದ ಬರುವ ಆದಾಯವೂ  ಇದ್ದರೂ ಖರ್ಚು ವೆಚ್ಚಗಳು ಮಾತ್ರ ಕಡಿಮೆಯಾಗುತ್ತಿಲ್ಲ.

ದಿನೇದಿನೆ ಇಂಧನ ಬೆಲೆ ಹೆಚ್ಚಾಗುತ್ತಿದ್ದರೂ ಅದರ ಹೊರೆ ಯನ್ನು ಬಿಎಂಟಿಸಿ ಸಂಸ್ಥೆಯು ಪ್ರಯಾಣಿಕರ ಮೇಲೆಯೇ ಹೇರಿದೆ. ಆದರೆ ಪ್ರಶ್ನೆ ಬಂದಿರುವುದು 2010-11ರಲ್ಲಿ ಪ್ರತಿ ಲೀಟರ್ ಡಿಸೇಲ್‌ಗೆ ಸುಮಾರು ನಾಲ್ಕು ಕಿಮೀನಷ್ಟು ಬರುತ್ತಿದ್ದ ಮೈ ಲೇಜ್, 2015-16ರಲ್ಲಿ 3.74 ಕಿ.ಮೀಯಷ್ಟು ಇಳಿಕೆಯಾಗಿದೆ. ಹಾಗಿದ್ದರೆ ಬಸ್‌ಗಳ ಗುಣಮಟ್ಟ ಮತ್ತು ಎಂಥ ಗುಣಮಟ್ಟದ ಇಂಧನ ಬಳಕೆಯಾಗುತ್ತಿರಬಹುದು ಎಂದು ಯೋಚಿಸಿ ನೋಡಿ.

ಕೇವಲ ಅಪಘಾತಗಳು ಕಡಿಮೆಯಾಗಿದೆ ಎಂಬ  ಒಳ್ಳೆಯ ಅಂಶವನ್ನು ಬಿಟ್ಟರೆ, ಮತ್ತ್ಯಾವ ರೀತಿಯಲ್ಲಿಯೂ ಬಿಎಂಟಿಸಿ ಸಂಸ್ಥೆಯು ಜೀರ್ಣೋದ್ಧಾರವಾಗಲಿಲ್ಲ. ಪರಿಸ್ಥಿತಿಯು ಹೀಗೆಯೇ ಮುಂದುವರಿದರೆ ಮುಂದಿನ ದಿನಗಳಲ್ಲಿ ಉಂಟಾಗುವ ಇನ್ನಷ್ಟು ನಷ್ಟವನ್ನು ಹೇಗೆ ತಾನೇ ಕಡಿಮೆ ಮಾಡುವುದು? ದಿನದಿಂದ ದಿನಕ್ಕೆ ಉಪಯೋಗಿಸುತ್ತಿದ್ದ ಮಾರ್ಗಗಳೂ ಕಡಿಮೆಯಾಗುತ್ತಿವೆ, ಮೈಲೇಜ್ ಕಡಿಮೆಯಾಗುತ್ತಿದೆ, ಡಿಸೇಲ್ ಬೆಲೆ ಏರಿಕೆಯಾಗುತ್ತಿದೆ, ರದ್ದತಿಯಾದ ಕಿ.ಮೀ ಸಂಖ್ಯೆ ಏರುತ್ತಿದೆ. ಆದಾಯ ರಹಿತ ಕಿ. ಮೀ ಕೂಡ ಏರಿಕೆಯಾಗುತ್ತಿದೆ. ಹಿಂದಿದ್ದ ಪ್ರತಿನಿತ್ಯದ 12.21 ಲಕ್ಷ ಕಿ.ಮೀಗಳ ಸರಾಸರಿ ಸಂಚಾರವು 2016-17ರಲ್ಲಿ 11.52ಲಕ್ಷಗಳಿಗೆ  ಹಾಗಾದರೆ, ಇದಕ್ಕೆಲ್ಲ ಪರಿಹಾರವೇನು ಎಂಬುದನ್ನೂ ಯಾರೂಬ್ಬರೂ ಯೋಚಿಸುತ್ತಿಲ್ಲ. ಈ ಸಂಸ್ಥೆಯನ್ನು ನಂಬಿರುವ ಸುಮಾರು 34,000 ಕೆಲಸಗಾರರು ಹಾಗೂ ಅವರ ಕುಟುಂಬಗಳ ಕಡೆಗೆ ಏನು ಮಾಬೇಕು. ಇದರ ಮಧ್ಯೆ ಹೊಸ ಕೆಲಸಗಾರರ ನೇಮಕವೂ ಕಡಿಮೆಯಾಗಿಲ್ಲ. ಇರುವ ಹೊರೆಯನ್ನು ನಿಭಾಯಿಸುವುದೇ ಕಷ್ಟವಿರುವಾಗ, ಮತ್ತೇಕೆ ಹೊಸ ನೇಮಕಗಳಿಂದ ಹೊರೆ ಹೆಚ್ಚಿಸಬೇಕು?

ಒಂದು ಕುತೂಹಲ, ಆತಂಕದ ವಿಷಯವನ್ನು ನಿಮಗೆ ಹೇಳಲೇಬೇಕು. ಪ್ರತಿ ಕಿ.ಮೀ ಸಂಚಾರದಿಂದ ಬಿಎಂಟಿಸಿಯ ಆದಾಯವು 56/-ರುಪಾಯಿ ಇದೆ. ಹಾಗಾದರೆ ಪ್ರತಿ ಕಿ.ಮೀ.ಗೆ  ರುಪಾಯಿ ನಷ್ಟ  ಅನುಭವಿಸುತ್ತಿರುವ ಸಂಸ್ಥೆಯು, ಮುಂದಿನ ದಿನಗಳಲ್ಲಿ ಮೆಟ್ರೋ ಸಂಚಾರದಲ್ಲಿ ಏರಿಕೆಯಾದರೆ, ನಷ್ಟದ ಪ್ರಮಾಣವೂ ಹೇರಿಕೆಯಾಗುವುದರಲ್ಲಿ ಯಾವುದೇ ಅನುಮಾನವಿಲ್ಲ. ಇದರ ಮಧ್ಯೆ ಓಲಾ, ಊಬರ್‌ನಂತಹ ಖಾಸಗೀ ಸಂಸ್ಥೆಗಳು ಬಂದ ಮೇಲೆ ಕಾರಿನಲ್ಲಿ ಓಡಾಡುವವರ  ಸಂಖ್ಯೆಯೂ ಹೆಚ್ಚಿದೆ. ಹಲವರಿಗೆ ತಿಳಿದಂತೆ ಓಲಾದಲ್ಲಿ ನೀವು ಓಡಾಡಿದರೆ, ನಿಮಗೆ ತಗಲುವ ವೆಚ್ಚವು ಬಿಎಂಟಿಸಿ ಯ ಬಸ್ ದರಕ್ಕಿಂತ ಕಡಿಮೆಯಾಗಿರುತ್ತದೆ. ಹಾಗಾದರೆ ಯಾರೂ ತಾನೇ ಬಿಎಂಟಿಸಿ ಬಸ್ ಹತ್ತಿ ಓಡಾಡುತ್ತಾರೆ ಹೇಳಿ ನೋಡೋಣ. ಇನ್ನು  ಊಛಿಛಿಛ್ಟಿಗಳನ್ನು ಒದಗಿಸುತ್ತೆವೆಂದು ಆರಂಭವಾದ ಸೇವೆಗಳೂ ಕೂಡ ಹೆಚ್ಚಿನ ಫಲ ನೀಡುತ್ತಿಲ್ಲ.  ಜನರೂ ಹೆಚ್ಚಾಗಿ ಆಟೋಗಳು ಹಾಗೂ ಕ್ಯಾಬ್‌ಗಳನ್ನು ಅವಲಂಬಿಸಿದ್ದಾರೆಯೇ ಹೊರತು ಫೀಡರ್ ಸೇವೆಗಳ ಬಳಕೆ ತಂಬಾನೇ ಕಡಿಮೆ ಇದೆ.  ನೀವು ಎಷ್ಟು ಗಮನಿಸಿದ್ದೀರೋ ತಿಳಿದಿಲ್ಲ. ಎಂ.ಜಿ.ರೋಡ್ ಹಾಗೂ ಬೈಯ್ಯಪ್ಪನಹಳ್ಳಿಯ ಮಧ್ಯೆ ಬಿಎಂಟಿಸಿ ಬಸ್ ಟ್ರಾಫಿಕ್ ಕಾಣಿಸು ವುದೇ ಅಪರೂಪ. ಜತೆಗೆ ಕೆಂಪೇಗೌಡ ಬಸ್ ನಿಲ್ದಾಣ ಹಾಗೂ ಜೆ.ಪಿ.ನಗರದ ಮಧ್ಯೆಯೂ ಸಾರಿಗೆ ಬಸ್ ಕೊರತೆ ಕಾಣಿಸುತ್ತಿದೆ.

ಖಾತೆ ಖಾತೆಯೆಂದು ಜಿದ್ದಿಗೆ  ಶಾಸಕರಿಗೆ ಯಾಕೆ ಕೊಂಚವಾದರೂ ಈಗ ತಲೆದೋರಿರುವ ಬಿಎಂಟಿಸಿ ಸಮಸ್ಯೆಗೆ ಒಂದು ಪರಿಹಾರ ಹುಡುಕಬೇಕೆಂದು ಯಾಕೆ ಹೊಳೆಯುತ್ತಿಲ್ಲವೋ ತಿಳಿದಿಲ್ಲ. ಇದೇ ಸಂಸ್ಥೆಯನ್ನು ನಂಬಿಕೊಂಡಿರುವ ನೌಕರರರ ಪರಿಸ್ಥಿತಿ ಮುಂದೆ ಏನಾಗಬೇಕು? ಸಣ್ಣಪುಟ್ಟ ಉದ್ಯಮಿಗಳ ಗತಿ ಏನಾಗಬೇಕು? ಪರೋಕ್ಷವಾಗಿ ಕೆಲಸ ನಿರ್ವಹಿಸುತ್ತಿರುವವರ ಗತಿ ಏನಾಗಬೇಕು? ಈ ನಿಟ್ಟಿನಲ್ಲಿ ನಿಜವಾಗಿಯೂ ನಮ್ಮ ಶಾಸಕರು ಹಾಗೂ ಅಧಿಕಾರಿಗಳು ಶೀಘ್ರದಲ್ಲಿಯೇ ಗಟ್ಟಿಯಾದ ನಿರ್ಧಾರ ಕೈಗೊಳ್ಳಬೇಕಿದೆ. ಈಗಾಗಲೇ ಎಚ್‌ಎಂಟಿ, ಎನ್‌ಜಿಇಎಫ್‌ನಂತಹ ಸಂಸ್ಥೆಗಳನ್ನು ನಾವು ಕಳೆದುಕೊಂಡಿದ್ದೇವೆ. ಇದರ ಸಾಲಿಗೆ ಬಿಎಂಟಿಸಿ  ಮುಂದಿನ ದಿನಗಳಲ್ಲಿ ಸೇರುತ್ತದೆಯೇ ಎಂಬ ಆತಂಕ ಶುರುವಾಗಿರುವುದು ಸಹಜವಲ್ಲವೇ?

ರಾಜಕೀಯ ವಲಯ ಮತ್ತು ಸರಕಾರದ ಮಟ್ಟದಲ್ಲಿ ಕೆಲ ಗಟ್ಟಿಯಾದ ನಿರ್ಧಾರಗಳನ್ನು ತೆಗೆದುಕೊಳ್ಳುವುದು ಅಷ್ಟು ಸುಲಭದ ಮಾತಲ್ಲ. ಆಗ ರಾಜಕೀಯ ಪಕ್ಷಗಳ ದೊಡ್ಡ ಹೈಡ್ರಾಮಾಗಳೇ ನಡೆದು ಹೋಗುತ್ತದೆ. ಆದ್ದರಿಂದ ನಿಧಾನವಾಗಿ ವರ್ಷದಿಂದ ವರ್ಷಕ್ಕೆ  ಒಳ್ಳೆಯದಾದ ಒಂದು ಬ್ಲ್ಯೂ ಪ್ರಿಂಟ್ ತಯಾರು ಮಾಡಿ, ಕೆಲಸಗಾರರಿಗೆ ಅನ್ಯಾಯವಾಗದಂತೆ ನಿರ್ಧಾರಗಳನ್ನು ಕೈಗೊಳ್ಳಬೇಕು.

 ಬಿಎಂಟಿಸಿ ಸಂಸ್ಥೆಯನ್ನು ಉಳಿಸಿಕೊಳ್ಳುವ ಬಗ್ಗೆ ಈಗಿನಿಂದಲೇ ಆದಷ್ಟು ಬೇಗ ಸಮಿತಿ ರಚನೆ  ವರದಿ ತಯಾರು ಮಾಡಿ, ಸೂಕ್ತ ನಿರ್ಧಾರ ಕೈಗೊಳ್ಳುವ ಕಡೆಗೆ ದಾಪುಗಾಲು ಇಟ್ಟರೆ ಒಳಿತು. ಇಲ್ಲವಾದಲ್ಲಿ ಮುಂದೊಂದು ದಿನ ಬಿಎಂಟಿಸಿ ಬಸ್ ರಹಿತ ರಸ್ತೆಗಳನ್ನು ನಾವು ನೋಡುವುದರಲ್ಲಿ ಅನುಮಾನವೇ ಇಲ್ಲ.