About Us Advertise with us Be a Reporter E-Paper

ವಿವಾಹ್

ಮೊದಲ ಮುತ್ತಿಂದ ಮರುಹುಟ್ಟು…!

cardiopulmonary resuscitation (CPR)

ನಮ್ಮ ಭಾರತೀಯ ಸಿನಿಮಾಗಳಲ್ಲಿ ಸಾಕಷ್ಟು ಬಾರಿ ಮರುಕಳಿಸಿರುವ ದೃಶ್ಯವೆಂದರೆ ಮುತ್ತಿನದು. ಅದರಲ್ಲೂ ಕೆಲವು ಲವ್‌ಸ್ಟೋರಿ ಆರಂಭಗೊಳ್ಳುವುದೇ ಈ ಮುತ್ತಿನಿಂದ. ನೀರಿನಲ್ಲಿ ಅಚಾನಕ್ ಆಗಿ ನಾಯಕಿ ಮುಳುಗುವ ಸ್ಥಿತಿ ಬರುತ್ತದೆ, ಆಗ ನಾಯಕ ಆಕೆಯನ್ನು ಕಾಪಾಡಿ, ತನ್ನುಸಿರ ಅವಳಿಗಿತ್ತು ಆಕೆಯ ಜೀವಕ್ಕೆ ಮರುಹುಟ್ಟು ನೀಡುತ್ತಾನೆ. ಈ ಸಿನಿಮೀಯ ದೃಶ್ಯಗಳು ಎಷ್ಟರ ಮಟ್ಟಿಗೆ ಸತ್ಯವಾಗಬಹುದು ಎನ್ನುವುದು ಥಿಯೇಟರ್ ಬಿಟ್ಟು ಹೊರಬಂದು ಕೂಲಂಕುಷವಾಗಿ ಯೋಚಿಸಿದವನಿಗೆ ಮಾತ್ರ ಗೊತ್ತು. ಆದರೆ ಸಿನಿಮಾಗಳು ಹಾಗಲ್ಲ. ಅಲ್ಲಿ ಡೇಟಿಂಗ್, ಲವ್‌ಗೆಲ್ಲ ಇಂತದ್ದೇ ವಯಸ್ಸು ಎಂದೇನಿಲ್ಲ, ಮೊದಲ ಮುತ್ತು ನೆನಪಿನಲ್ಲುಳಿಯುವಂತದ್ದು ಎನ್ನುವ ಒಂದು ಭಾವನೆಯೇ ಅವರಲ್ಲಿಲ್ಲ. ಅಲ್ಲಿನ ಪ್ರೀತಿ, ಪ್ರೇಮ, ದಾಪಂತ್ಯಕ್ಕೆಲ್ಲ ಆಯಸ್ಸು ಬಹಳ ಕಡಿಮೆ ಎನ್ನುವುದು ನಾವೆಂದುಕೊಂಡಿರುವುದು. ಅಲ್ಲಿಯೂ ಸಹ ನಮ್ಮ ಭಾರತೀಯ ಸಿನಿಮೀಯ ದೃಶ್ಯಗಳು ನೈಜವಾಗಿ ನಡೆಯುತ್ತವೆ ಎನ್ನುವುದನ್ನು ನೀವು ನಂಬಲೇಬೇಕು.

ಅಮೆರಿಕದಲ್ಲಿ ವೈದ್ಯೆಯಾಗಿರುವ ಡಾ.ಆಂಡಿ ಅಂದು ತನ್ನ ಪ್ರಿಯತಮ ಮಾಂಟ್ಗೊಮೆರಿಯೊಂದಿಗೆ ಮೊದಲ ಡೇಟಿಂಗ್‌ಗೆಂದು ಹೊರಟಿದ್ದರು. 45 ವರ್ಷದ ಆಂಡಿಗೆ 56 ಮಾಂಟ್ಗೊಮೆರಿ ತನ್ನ ಜೀವನಕ್ಕೆ ತಕ್ಕ ಸಂಗಾತಿಯಾಗುತ್ತಾನೆಯೇ? ಎಂದು ನಿರ್ಧಾರ ಮಾಡುವ ದಿನ ಅದಾಗಿತ್ತು. ಪ್ರಿಯತಮನ ಮನೆಯ ಬಳಿಯೇ ಇದ್ದಂತ ಸಮುದ್ರ ತಟದಲ್ಲಿ ತಮ್ಮಿಬ್ಬರ ಬದುಕ ಹಾದಿಯ ಬಗ್ಗೆ, ಸಂಗಾತಿಯಿಂದ ತಮಗಿರುವ ನಿರೀಕ್ಷೆಯ ಬಗ್ಗೆ ಹರಟುತ್ತಾ ವಿಹರಿಸುತ್ತಿದ್ದರು. ಆದರೆ ದುರಾದೃಷ್ಟವೆನ್ನುವಂತೆ ಮಾಂಟ್ಗೊಮೆರಿಗೆ ಇದ್ದ ಜಾಗದಲ್ಲೇ ಕುಸಿದು ಬಿದ್ದಿದ್ದ. ಯಮಧರ್ಮರಾಯ ಹೃದಯಘಾತದ ರೂಪದಲ್ಲಿ ಆತನ ಕೊರಳಿಗೆ ಸಾವಿನ ಕೊಂಡಿ ಹಾಕಿಬಿಟ್ಟಿದ್ದ.

ಕುಸಿದ ಪ್ರಿಯತಮನನ್ನು ಕಂಡು ಧೃತಿಗೆಡದ ಆಂಡಿ ಆತನ ಬಾಯಿಗೆ ತನ್ನ ಕೊಟ್ಟು ತನ್ನ ಉಸಿರನ್ನು ಅವನಿಗೆ ವರ್ಗಾಯಿಸಿದಳು. ಹೃದಯದ ಕೆಳಭಾಗದಲ್ಲಿ ಕ್ರಮಬದ್ಧವಾಗಿ ಒತ್ತುವ ಮೂಲಕ (ಸಿಪಿಆರ್ ತಂತ್ರಗಾರಿಕೆ) ಆತನ ಹೃದಯ ಮತ್ತೆ ಕಾರ್ಯನಿರ್ವಹಿಸುವಂತೆ ಮಾಡಿದಳು. ಮೊದಲ ಮುತ್ತಿನಿಂದ ಆತನ ಹೃದಯ ಬಡಿಯುವಂತೆ ಮಾಡಿದಳು. ಪ್ರಥಮ ಚಿಕಿತ್ಸೆಯಿಂದ ಅಪಾಯದಿಂದ ಪಾರು ಮಾಡಿದ ಆಂಡಿ ನಂತರ ಮಾಂಟ್ಗೊಮೆರಿಯನ್ನು ಆಸ್ಪತ್ರೆಗೆ ಸೇರಿಸಿ ಅವನ ಆರೈಕೆ ಮಾಡಿದಳು. ತನ್ನ ಪ್ರಿಯತಮ ಹೃದ್ರೋಗಿ ಎಂದು ತಿಳಿದ ನಂತರವೂ ಆತನನ್ನೇ ತನ್ನ ಪತಿಯಾಗಿ ವರಿಸುವ ನಿರ್ಧಾರ ಮಾಡಿ ಇಂದು ಜತೆಯಾಗಿ ಬಾಳುತ್ತಿದ್ದಾರೆ.

ಪ್ರೇಮದ ಕುರುಹು ಈ ಸಂಸ್ಥೆ: ಕಳೆದ ಸೆಪ್ಟೆಂಬರ್‌ನಲ್ಲಿ ನಡೆದ ಈ ಘಟನೆಯನ್ನೇ ಸ್ಫೂರ್ತಿಯಾಗಿ ತೆಗೆದುಕೊಂಡು ದಂಪತಿಗಳಿಬ್ಬರು Paddle4Good ಎಂಬ ಲಾಭರಹಿತ ಸಂಸ್ಥೆಯನ್ನು ಹುಟ್ಟುಹಾಕಿದ್ದಾರೆ. ಸಮುದ್ರದಲ್ಲಿ ಪುಟ್ಟ ಬೋಟಿನಲ್ಲಿ ಪ್ಯಾಡಲ್ ಮಾಡಬಯಸುವ ಜನರಿಗಾಗಿ cardiopulmonary resuscitation (CPR) ತಂತ್ರಗಾರಿಕೆಯ ಬಗ್ಗೆ ತಿಳಿವಳಿಕೆ ನೀಡುವ ಪ್ರಯತ್ನಕ್ಕೆ ಕೈಹಾಕಿದ್ದಾರೆ. ಪ್ರತಿ 90 ಸೆಕೆಂಡಿಗೊಬ್ಬರು ಹೃದಯಾಘಾತದಿಂದ ಸಾವಿಗೀಡಾಗುತ್ತಿದ್ದಾರೆ. ಆದರೆ, ಸಿಪಿಆರ್ ತಂತ್ರಗಾರಿಕೆಯ ಬಗ್ಗೆ ಜನರಿಗೆ ತಿಳಿದಿದ್ದರೆ ಹೃದಯಸ್ತಂಬನಕ್ಕೆ ಒಳಗಾದವರನ್ನು ಬದುರಿಸಲು ಸಾಧ್ಯವಾಗುತ್ತದೆ ಜನರಲ್ಲಿ ಅರಿವು ಮೂಡಿಸುತ್ತಿದ್ದಾರೆ.

Tags

Related Articles

Leave a Reply

Your email address will not be published. Required fields are marked *

Language
Close