About Us Advertise with us Be a Reporter E-Paper

ಅಂಕಣಗಳು

ಕಾಂಗ್ರೆಸ್‌ಗೆ ಬೀಗುವ ಕಾಲವಲ್ಲ!

ಬೀಗುವುದು ಬಿಟ್ಟು ಬಾಗುವುದನ್ನು ಕಲಿಯಬೇಕು ಎನ್ನುವ ಸಂದೇಶವನ್ನು ಪಂಚರಾಜ್ಯಗಳ ಚುನಾವಣೆ ಫಲಿತಾಂಶ ಎಲ್ಲ ರಾಜಕೀಯ ಪಕ್ಷಗಳಿಗೆ ರವಾನಿಸಿದೆ. ಹಿಂದಿವಲಯದಲ್ಲೇ ಬಿಜೆಪಿಗೆ ಹಿನ್ನಡೆಯಾಗಿರುವುದು ದೇಶದ ರಾಜಕೀಯ ಚಿತ್ರಣ ಬದಲಾಗುವ ಮುನ್ಸೂಚನೆ ನೀಡಿದೆ. ಇಲ್ಲಿ ಮಹಾಘಟಬಂಧನ್ ಪಾಲುದಾರಿಕೆಗಿಂತಲೂ ಕಾಂಗ್ರೆಸ್ ತನ್ನ ಶಕ್ತಿಯನ್ನು ಪ್ರದರ್ಶನ ಮಾಡಿದೆ. ಬಾರದಿದ್ದರೂ ರಾಜಕಾರಣದಲ್ಲಿ ತನ್ನ ಶಕ್ತಿ ಕುಗ್ಗಿಲ್ಲ ಎನ್ನುವುದನ್ನು ಸ್ಪಷ್ಟವಾಗಿ ಹೇಳಿದೆ. ಬರುಬರುತ್ತ ರಾಹುಲ್ ಗಂಭೀರ ವ್ಯಕ್ತಿತ್ವದವರಾಗಿ ಕಾಣುತ್ತಿದ್ದಾರೆ. ಕಳೆದ ನಾಲ್ಕೂವರೆ ವರ್ಷದಲ್ಲಿ ಆದ ಎಲ್ಲ ಅವಮಾನಗಳನ್ನೂ ರಾಹುಲ್ ಅತ್ಯಂತ ತಾಳ್ಮೆಯಿಂದ ಸಹಗಿಸಿಕೊಂಡಿದ್ದಾರೆ. ಮೋದಿಯವರಂಥ ನಾಯಕರ ಬಾಯಿಗೆ ಸಿಲುಕಿದರೆ ಅದು ಕಬ್ಬನ ಜಲ್ಲೆಯಾಗುವುದು ಖಚಿತ. ಅಂಥ ಎಲ್ಲ ಸನ್ನಿವೇಶಗಳನ್ನು ಅವರು ಸಹಿಸಿಕೊಂಡು ಮುನ್ನಡೆದಿದ್ದಾರೆ.

ಕಾಂಗ್ರೆಸ್ ಮುಕ್ತ ಭಾರತ ಎನ್ನುವ ಹೇಳಿಕೆ ಅತ್ಯಂತ ನೂವು ತರುತ್ತಿದ್ದರೂ ಅದನ್ನು ಅವರು ಸಹಿಸಿಕೊಂಡ ರೀತಿಯನ್ನು ಮೆಚ್ಚಲೇ ಬೇಕು. ರಾಜಸ್ಥಾನ, ಮಧ್ಯಪ್ರದೇಶ, ಛತ್ತೀಸ್‌ಗಢ ರಾಜ್ಯಗಳನ್ನು ಕಾಂಗ್ರೆಸ್ ವಶ ಮಾಡಿಕೊಂಡಿದೆ. ಇದು ಮುಂಬರುವ ಲೋಕಸಭಾ ಚುನಾವಣೆ ಮೇಲೂ ಪರಿಣಾಮ ಬೀಳುತ್ತದಾ ಎನ್ನುವುದು ಮುಂದಿನ ಪ್ರಶ್ನೆಯಾಗಿದೆ. ಆದರೆ ಕಾಂಗ್ರೆಸ್ ಕೂಡಾ ಈಗ ಬೀಗುವ ಸ್ಥಿತಿಯಲ್ಲಿಲ್ಲ. ಐದು ರಾಜ್ಯಗಳಲ್ಲಿ ಮತ ಗಳಿಕೆಯ ಪ್ರಮಾಣ ಕಾಂಗ್ರೆಸ್ ಮತ್ತು ಬಿಜೆಪಿ ಸಮಬಲದಲ್ಲಿದೆ. ಸೀಟು ಗಳಿಕೆಯಲ್ಲಿ ಕಾಂಗ್ರೆಸ್ ಒಂದು ಹೆಜ್ಜೆ ಮುಂದೆ ಇದೆ ಅಷ್ಟೇ. ಈಗ ಹೆಚ್ಚು ಕೆಲಸ ಮಾಡಿದರೆ ಮಾತ್ರ ಮುಂದಿನ ದಿನಗಳಲ್ಲಿ ಉಳಿಸಿಕೊಳ್ಳಲು ಸಾಧ್ಯವಾಗುತ್ತದೆ ಇಲ್ಲದಿದ್ದರೆ ಮತ್ತೆ ಸಮಸ್ಯೆ ತಂದುಕೊಳ್ಳುವುದರಲ್ಲಿ ಅನುಮಾನವಿಲ್ಲ.

ರಾಜಸ್ಥಾನದಲ್ಲಿ 25, ಮಧ್ಯಪ್ರದೇಶದಲ್ಲಿ 29 ಹಾಗೂ ಛತ್ತೀಸ್‌ಗಢದಲ್ಲಿ 11 ಲೋಕಸಭಾ ಕ್ಷೇತ್ರಗಳಿವೆ. 2013ರಲ್ಲಿ ರಾಜಸ್ಥಾನದಲ್ಲಿ ಬಿಜೆಪಿ ಫುಲ್ ಸ್ವೀಪ್ ಮಾಡಿತ್ತು. ಆದರೆ 2019ರ ಲೋಕಸಭಾ ಚುನಾವಣೆಯಲ್ಲಿ ಲೆಕ್ಕಾಚಾರ ಉಲ್ಟಾ ಆಗಬಹುದು.

ವಿಧಾನಸಭೆ ಚುನಾವಣೆಯ ಲೆಕ್ಕಾಚಾರವನ್ನು ತಾಳೆ ಹಾಕಿ ನೋಡಿದಾಗ ರಾಜಸ್ಥಾನದಲ್ಲಿ ಬಿಜೆಪಿ 13, ಕಾಂಗ್ರೆಸ್ 12 ಲೋಕಸಭಾ ಕ್ಷೇತ್ರಗಳಲ್ಲಿ ಗೆಲುವು ಸಾಧಿಸಲಿದೆ ಎನ್ನುವುದು ರಾಜಕೀಯ ಪಂಡಿತರ ಲೆಕ್ಕಾಚಾರ. ಮೂರು ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಿರುವುದು ಸ್ವಾಭಾವಿಕವಾಗಿ ಆ ಪಕ್ಷದ ಹುಮ್ಮುಸ್ಸು ವೃದ್ಧಿಸಿದೆ. ಮಧ್ಯಪ್ರದೇಶ, ರಾಜಸ್ಥಾನದಲ್ಲಿ ಲೆಕ್ಕ ನೋಡಿದರೆ ಬಿಜೆಪಿಗೆ ಭಾರಿ ನಷ್ಟವಾಗಿಲ್ಲ. ಬಹಳಷ್ಟು ಜನ ಅತ್ಯಂತ ಕಡಿಮೆ ಅಂತರದಲ್ಲಿ ಸೋತಿದ್ದಾರೆ. ಆದ್ದರಿಂದ ಕಾಂಗ್ರೆಸ್ ಬೀಗುವ ಹಾಗಿಲ್ಲ. ಏಕೆಂದರೆ ಎರಡೂ ರಾಜ್ಯದಲ್ಲಿ ಮತದಾರರು ಬಿಜೆಪಿ ವಿರುದ್ಧ ಮತ ಹಾಕಿದ್ದಾರೆಯೇ ಹೊರತು ಕಾಂಗ್ರೆಸ್ ಪರವಾಗಿ ಅಲ್ಲ ಎನ್ನುವುದು ಖಚಿತವಾಗಿದೆ. ಗೆದ್ದ ಖುಷಿಯಲ್ಲಿ ಮೈಮರೆತರೆ ಸಂಕಷ್ಟವನ್ನು ಮೈಮೇಲೆಳೆದುಕೊಂತಾಗುವುದು ಖಚಿತ.

Tags

Related Articles

Leave a Reply

Your email address will not be published. Required fields are marked *

Language
Close