About Us Advertise with us Be a Reporter E-Paper

ಅಂಕಣಗಳು

ಎಲ್ಲ ಅಸಾಧ್ಯಗಳ ನಡುವೆಯೂ ಸಹಜವಾಗುವ ಈ ಬದುಕು, ಸಹ್ಯವಾಗುವ ಈ ವ್ಯವಸ್ಥೆ !

ಇದೇ ಅಂತರಂಗ ಸುದ್ದಿ: ವಿಶ್ವೇಶ್ವರ ಭಟ್

ಮೊನ್ನೆ ನಾನು ದಿಲ್ಲಿಗೆ ಹೋಗುವಾಗ ವಿಮಾನ ಹಿಡಿಯುವುದು ಸಾಧ್ಯವೇ ಇರಲಿಲ್ಲ. ವಿಮಾನ ತಪ್ಪಿ ಹೋಗುವುದು ನೂರಕ್ಕೆ ನೂರು ನಿಜವಾಗಿತ್ತು. ಕಾರಣ ನಾನು ಮನೆಯಿಂದ ಹೊರ–ಡುವುದೇ ತಡವಾಗಿತ್ತು. ಕಾರಣ ನಾನು ಎದ್ದಿದ್ದೇ ತಡವಾಗಿತ್ತು. ಕಾರಣ ನಾನು ಅಲಾರಂ ಇಟ್ಟುಕೊಂಡಿದ್ದರೂ  ಸೈಲೆಂಟ್ ಮೋಡ್‌ನಲ್ಲಿ ಇದ್ದುದರಿಂದ ಅದು ಕೂಗಿಕೊಳ್ಳಲೇ ಇಲ್ಲ.

ಇನ್ನೂ ಸ್ಪಷ್ಟವಾಗಿ ಹೇಳಬೇಕೆಂದರೆ, ಬೆಳಗ್ಗೆ ಆರು ಗಂಟೆ ಹತ್ತು ನಿಮಿಷಕ್ಕೆ ದಿಲ್ಲಿಗೆ ವಿಮಾನ ನಿಗದಿಯಾಗಿತ್ತು. ನಾನು ಐದು ಗಂಟೆ ಹತ್ತು ನಿಮಿಷಕ್ಕೆ ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಇರಬೇಕಿತ್ತು. ಆದರೆ ನಾನು ಮನೆಯಿಂದ ಹೊರಟಿದ್ದೇ ಬೆಳಗ್ಗೆ ನಾಲ್ಕೂವರೆಗೆ. ನಲವತ್ತು ನಿಮಿಷದಲ್ಲಿ ಏರ್‌ಪೋರ್ಟ್ ತಲುಪುವುದು ಸಾಧ್ಯವೇ ಇರಲಿಲ್ಲ. ನನ್ನ ಮನೆಯಿಂದ ಅಲ್ಲಿಗೆ ಹೋಗಲು ಬೆಳಗಿನ ಜಾವದ ಸಮಯ ದಲ್ಲೂ ಕನಿಷ್ಠ ಒಂದೂಕಾಲು ಗಂಟೆ

ಏನೇ ತಿಪ್ಪರಲಾಗ ಹಾಕಿದರೂ ಐದು ಮುಕ್ಕಾಲಕ್ಕಿಂತ ಮುಂಚೆ ಏರ್‌ಪೋರ್ಟ್ ತಲುಪಲು ಸಾಧ್ಯವಿರಲಿಲ್ಲ. ಅಲ್ಲದೇ ಹನು–ಮಂತನ ಬಾಲದಂಥ ಕ್ಯೂನಲ್ಲಿ ನಿಂತು, ಬೋರ್ಡಿಂಗ್ ಪಾಸ್ ಪಡೆಯುವ ಹೊತ್ತಿಗೆ, ಗೇಟ್ ಕ್ಲೋಸ್ ಆಗಿರುತ್ತದೆ. ಆನಂತರ ಯಾರೇ ಬಂದರೂ ಬಿಡುವುದಿಲ್ಲ. ಈ ಮಧ್ಯೆ, ತಕ್ಷಣ ಏರ್‌ಲೈನ್‌ಸ್ ಸಂಸ್ಥೆಗೆ ಫೋನ್ ಮಾಡಿ ಕೇಳಿದೆ. ವಿಮಾನ ರೈಟ್ ಟೈಮಿಗೆ ಹೊರಡುವುದೆಂದು ಹೇಳಿದರು. ಕೆಲಸ ಕೆಟ್ಟಿತು, ಫ್ಲೈಟ್ ಮಿಸ್ ಆಗೋದು ಗ್ಯಾರಂಟಿ ಎಂಬುದು ನಿಶ್ಚಿತವಾಯಿತು.

ಇನ್ನು ವಿಮಾನ ನಿಲ್ದಾಣದ  ಹೋಗಿ ಪ್ರಯೋಜನವಿಲ್ಲ ಎಂದು ನಿರ್ಧರಿದೆ. ನನ್ನ ಪತ್ನಿಯೂ ‘ಸುಮ್ನೆ ಯಾಕೆ ಅಲ್ಲಿ ತನಕ ಹೋಗಿ ಹಿಂದೆ ಬರ್ತೀರಾ? ಫ್ಲೈಟ್ ಮಿಸ್ ಆಗೋದರಲ್ಲಿ ಅನುಮಾನವೇ ಇಲ್ಲ. ಯಾಕೆ ತೊಂದರೆ ತೆಗೆದುಕೊಳ್ತೀರಾ?’ ಎಂದಳು. ಆದರೂ ಅದೃಷ್ಟ ಪರೀಕ್ಷಿಸೋಣ ಎಂದು ಹೊರಟೆ.

ಆಶ್ಚರ್ಯ ಅಂದ್ರೆ, ನಾನು ವಿಮಾನ ಹೊರಡಲು ಇನ್ನೂ ಇಪ್ಪತ್ತು ನಿಮಿಷಗಳಿರುವಾಗಲೇ ವಿಮಾನದೊಳಗೆ ಬಂದು ಕುಳಿತು, ಪತ್ನಿಗೆ ಫೋನ್ ಮಾಡಿದರೆ ಅವಳು ನಂಬಲಿಲ್ಲ. ನಂತರ ಗಗನಸಖಿಯ ಪ್ರಕಟಣೆಯ ದನಿ ಕೇಳಿದಾಗಲೇ ಆಕೆಗೂ

ನಮ್ಮ ದೇಶದಲ್ಲಿ ಇರುವಂಥ ಅವ್ಯವಸ್ಥೆ, ಅಸ್ತವ್ಯಸ್ತ (chaos)  ಬೇರೆಲ್ಲೂ ಇರಲಿಕ್ಕಿಲ್ಲ. ಆದರೂ ಎಲ್ಲವೂ ಸುಖಾಂತ್ಯವಾಗುತ್ತದೆ ಎಂಬುದು ನನಗೆ ನೂರಾರು ಸಲ ಅನುಭವಕ್ಕೆ ಬಂದಿದೆ.

ಈ ಘಟನೆಯಲ್ಲಿ ವ್ಯವಸ್ಥೆಯದೇನೂ ತಪ್ಪಿಲ್ಲ. ಪ್ರಮಾದವಾಗಿದ್ದು ನನ್ನಿಂದ. ನಾನು ಸಮಯಕ್ಕೆ ಸರಿಯಾಗಿ ಅಥವಾ ಮುಂಚಿತವಾಗಿ ಹೋಗಿದ್ದಿದ್ದರೆ ಇಷ್ಟೆಲ್ಲಾ ಗಂಡಾಗುಂಡಿ ಮಾಡಬೇಕಾದ ಅಗತ್ಯವಿರಲಿಲ್ಲ.  ಈ ರೀತಿಯ ಅನುಭವ ನಿಮಗೂ ಆಗಿರ–ಬಹುದು. ಕೊನೆ ಕ್ಷಣದಲ್ಲಿ ಪವಾಡ ಸದೃಶ ಎಂಬಂತೆ ಕಾರ್ಯಸಿದ್ಧಿಯಾಗಿರಬಹುದು.

ಆದರೂ ಈ ರಸ್ತೆ, ಗುಂಡಿ, ಮಳೆ,  ಜಾಮ್, ಜನಜಂಗುಳಿ ಮಧ್ಯದಲ್ಲಿಯೂ ನಮ್ಮ ಬದುಕು ಹೇಗೆ ನಡೆಯಬೇಕೋ ಹಾಗೆ ನಡೆಯುತ್ತಿರುತ್ತದೆ. ಇದನ್ನು perfect anarchy ಅಂತ ಕರೆಯುತ್ತಾರೆ. ಮುಂಬೈಯ ಧಾರಾವಿಯ ಕೊಳಗೇರಿಯನ್ನು ನೋಡಿದ ವಿದೇಶಿ ವರದಿಗಾರನೊಬ್ಬ ಇಲ್ಲಿ ಲಕ್ಷಾಂತರ ಜನ ಜೀವಿಸುತ್ತಿರುವುದೇ ಒಂದು ಸೋಜಿಗ ಎಂದು ಹೇಳಿದ. ಆದರೆ ಅಲ್ಲಿ ವಾಸಿಸುವ ಜನರಿಗೆ ಅದು ಸಹಜ. ಅವರು ಹುಟ್ಟಿ, ಬೆಳೆದಿದ್ದೇ ಅಲ್ಲಿ. ಅವರಿಗೆ ಅದು ಸಮಸ್ಯೆಯೇ ಅಲ್ಲ.

ಭಾರತದ ಜನಸಂಖ್ಯೆ, ಇಲ್ಲಿನ ಟ್ರಾಫಿಕ್, ಜನಜೀವನ ನೋಡಿದ ಅಮೆರಿಕನ್‌ರಿಗೆ  ಜನ ಹೇಗೆ ಜೀವಿಸುತ್ತಿರಬಹುದು ಎಂದು ಸೋಜಿಗವಾಗಬಹುದು. ಆದರೆ ನಮಗೆ ಅದು ಸೋಜಿಗವಲ್ಲ, ಸಹಜ. ಎಲ್ಲಾ ಅಸಾಧ್ಯಗಳ ನಡುವೆಯೂ ಬದುಕು ಸಾಧ್ಯವಾಗುತ್ತಾ ಹೋಗುತ್ತದೆ.

ಹತ್ತಿ ಚೀಲ ಪೂರ್ತಿ ತುಂಬಿದರೂ, ಇನ್ನೂ ಸ್ವಲ್ಪ ಹತ್ತಿಯನ್ನು ತುರುಕಲು ಜಾಗವಿರುತ್ತದಂತೆ. ಹಾಗೆಯೇ ಎಷ್ಟೇ ಟ್ರಾಫಿಕ್ ಜಾಮ್ ಆದರೂ ನಮ್ಮ ನಮ್ಮ ವಾಹನ ಹೋಗಲು ಸ್ವಲ್ಪ ಜಾಗ ಇದ್ದೇ ಇರುತ್ತದೆ. ಮುಂಬೈ ಲೋಕಲ್ ಟ್ರೈನ್ ಜನರಿಂದ ತುಂಬಿ ತುಳುಕುತ್ತಿದ್ದರೂ ಒಬ್ಬನಿಗೆ ಮೊಳಕೈ ಆಡಿಸಲು ಜಾಗ ಸಿಕ್ಕರೆ  ಜನ ಹತ್ತಿಕೊಳ್ಳುವಂತೆ, ನಮ್ಮ ವ್ಯವಸ್ಥೆ ಎಲ್ಲ ಪರಿಧಿಯನ್ನು ದಾಟಿಯೂ ಪುನಃ ಸಹಜ ಸ್ಥಿತಿಗೆ ಬಂದಿರುತ್ತದೆ.

ಮುಂಬೈ ಮಳೆಗೆ ವ್ಯವಸ್ಥೆಯೇ ಹರಿದು ಹೋಯಿತು ಎಂಬಂತೆ ವರದಿ ಮಾಡಿದ ಮಾಧ್ಯಮಗಳು ಎರಡು ದಿನ ಬಿಟ್ಟು ‘ಸಹಜ ಸ್ಥಿತಿಯತ್ತ ಮುಂಬೈ ಜನಜೀವನ’ ಎಂದು ವರದಿ ಮಾಡುತ್ತವೆ.

ಈ ವ್ಯವಸ್ಥೆಗೆ ಎಲ್ಲ ಅವ್ಯವಸ್ಥೆಗಳನ್ನು ಹೊಟ್ಟೆಯೊಳಗೆ ತುಂಬಿಕೊಳ್ಳುವ, ಹೀರಿಕೊಳ್ಳುವ, ಎಲ್ಲವನ್ನೂ ಮಟ್ಟಸವಾಗಿಸುವ ಒಂದು ಅಗಾಧ ಶಕ್ತಿಯಿರುವುದು ಮಾತ್ರ ಸುಳ್ಳಲ್ಲ. ಆ ಶಕ್ತಿಯೇ ಈ ವ್ಯವಸ್ಥೆಯನ್ನು ನಡೆಸುತ್ತಿರುವುದು.

 ನನಗೆ ಅಂದು ಫ್ಲೈಟ್ ಮಿಸ್ ಆಗುತ್ತಿತ್ತು. ಈ ಎಲ್ಲ ಅಪಸವ್ಯಗಳ ನಡುವೆಯೇ ನಮ್ಮ ಬದುಕು ಹಸನುಗೊಳ್ಳುತ್ತಿದೆ, ಬದುಕು ಸಾಗುತ್ತಿದೆ. ಅದೇ ಅದ್ಭುತ. ಇಷ್ಟೊಂದು ಜಾತಿ, ಪಂಗಡ, ಕೋಮು, ಧರ್ಮ, ಭಾಷೆ, ವೈರುಧ್ಯ, ಜನಸಂಖ್ಯೆ ಸಮಸ್ಯೆ.. ಇವೆಲ್ಲವುಗಳ ಮಧ್ಯೆಯೇ ಭಾರತ ಇಂದು ವಿಶ್ವದ ಪ್ರಮುಖ ಶಕ್ತಿಯಾಗಿ ಹೊರಹೊಮ್ಮುತ್ತಿರುವುದು ಸಣ್ಣ ಮಾತಲ್ಲ. ನೂರಾ ಮೂವತ್ತು ಕೋಟಿ ಜನ ಒಂದೆಡೆ ಶಾಂತಿ, ಸಹಬಾಳ್ವೆಯಿಂದ ಜೀವಿಸುತ್ತಿರುವುದೇ ಒಂದು ಅಚ್ಚರಿ ಅಲ್ಲವೇ?

ವಿಂಬಲ್ಡನ್ ಟೆನಿಸ್

ಉತ್ತರಾಧಿಮಠಕ್ಕೂ, ವಿಂಬಲ್ಡನ್ ಟೆನಿಸ್‌ಗೂ ಆಚರಣೆ, ಅನುಷ್ಠಾನದಲ್ಲಿ ಹೆಚ್ಚು ವ್ಯತ್ಯಾಸವಿಲ್ಲ. ಕರ್ಮಠತ್ವವೇ ಆತ್ಮ. ಅನುಷ್ಠಾನವೇ ಶಿಸ್ತುಪಾಲನೆ.  ಎಂದಿನ ಅಚರಣೆಯಲ್ಲಿ ಸ್ವಲ್ಪವೂ ರಿಯಾಯಿತಿ ಇಲ್ಲ. ಜನ ಬದಲಾಗಬಹುದು, ಕಾಲ ಬದ–ಲಾಗಬಹುದು, ಆದರೆ ವಿಂಬಲ್ಡನ್ ಟೆನಿಸ್‌ನ ಶಿಸ್ತು, ನಿಯಮ, ಆಚರಣೆ ಮಾತ್ರ ಸ್ವಲ್ಪವೂ ಬದಲಾಗುವುದಿಲ್ಲ.

ಆಟಗಾರರಿಗೆ ಮಾತ್ರ ಅಲ್ಲ, ಪ್ರೇಕ್ಷಕರಿಗೂ ಶಿಸ್ತಿನ ನಿಯಮ ಅನ್ವಯ. ಪ್ರೇಕ್ಷಕರು ಬೇಕಾಬಿಟ್ಟಿ ಉಡುಪು ಧರಿಸಿ ಬರುವಂತಿಲ್ಲ. ಸಂತಸವಾಗಿದೆಯೆಂದು ಯದ್ವಾ ತದ್ವಾ ಕುಣಿದು ಕುಪ್ಪಳಿಸು–ವಂತಿಲ್ಲ. ಎಲ್ಲರೂ ಒಂದು ನಿಯಮಕ್ಕೆ  ಚಪ್ಪಾಳೆ ತಟ್ಟುವ ಮೂಲಕ ಹರ್ಷ ವ್ಯಕ್ತಪಡಿಸಬೇಕು. ಇದಕ್ಕಾಗಿಯೇ ಇದನ್ನು ‘ಜಂಟಲ್‌ಮನ್‌ಸ್ ಗೇಮ್’ ಅಂತಾರೆ. ಇದನ್ನು ವೀಕ್ಷಿಸುವ ಪ್ರೇಕ್ಷಕರನ್ನು‘ಸೂಪರ್ ಜಂಟಲ್‌ಮೆನ್’ ಎಂದು ಕರೆಯುತ್ತಾರೆ. ಎಷ್ಟೇ ಸಂತಸವಾದರೂ ಅದನ್ನು ಅಲ್ಲಿ ತೋರ್ಪಡಿಸುವಂತಿಲ್ಲ. ಹೆಚ್ಚೆಂದರೆ ದೀರ್ಘ ಕರತಾಡನ!

ವಿಂಬಲ್ಡನ್‌ನಲ್ಲಿ ಆಡುವ ಆಟಗಾರರು ಆಡುವಾಗ ಸದಾ ಬಿಳಿ ಬಿಳಿ ಬಟ್ಟೆಯನ್ನೇ ಧರಿಸಿರಬೇಕೆಂಬ ನಿಯಮವಿದೆ. ತಾವು ಯಾವ ಉಡುಪು ಧರಿಸಿ ಆಡುತ್ತೇವೆಂಬುದನ್ನು ಆಟಗಾರರು ‘ಡ್ರೆಸ್ ಅಂಪೈರ್’ಗಳಿಗೆ ತಿಳಿಸಬೇಕು. ಅವರ ಅನುಮತಿ ಪಡೆ–ಯಬೇಕು. ಮನಸ್ಸಿಗೆ ಬಂದ ದಿರಿಸು

2013ರಲ್ಲಿ ರೋಜರ್ ಫೆಡರರ್ ಆರೇಂಜ್ ಬಣ್ಣದ ಸೋಲ್ ಇರುವ ಷೂ ಧರಿಸಿ ಬಂದಾಗ, ಆ ಬಣ್ಣ ‘ಡ್ರೆಸ್-ಕೋಡ್’ ಉಲ್ಲಂಘನೆಯೆಂದು, ಬೇರೆ ಷೂ ಧರಿಸುವಂತೆ ತಿಳಿಸಲಾಯಿತು. ಫೆಡರರ್ ಸಮ್ಮತಿಸಿದರು.

ಈ ಸಲದ ವಿಂಬಲ್ಡನ್‌ನಲ್ಲಿ ಜಾನ್ ಮಿಲ್‌ಮನ್ ಕಪ್ಪು ಬಣ್ಣದ ಒಳ ಉಡುಪನ್ನು ಧರಿಸಿ ಬಂದಿದ್ದರು. ಹಾಗೆಂದು ಅವರ ಟೀ ಶರ್ಟ್ ಹಾಗೂ ಚಡ್ಡಿ ಅಚ್ಚ ಬಿಳಿ ಬಣ್ಣದ್ದಿತ್ತು. ಆದರೆ ಡ್ರೆಸ್ ಅಂಪೈರ್‌ಗಳು ಕಪ್ಪು ಒಳ ಉಡುಪು ಧರಿಸಿ ಆಡುವುದಕ್ಕೆ ಅನು–ಮತಿ  ತಾವು ಸದಾ ಅದೇ ಒಳ ಉಡುಪು ಧರಿಸುವು–ದಾಗಿಯೂ, ಅದು ತನಗೆ ಹಿತಾನುಭವ ನೀಡುವು–ದೆಂದೂ ವಿಲ್‌ಮನ್ ವಾದಿಸಿದರೂ ಪ್ರಯೋಜನ ಆಗಲಿಲ್ಲ. ಕೊನೆಗೆ ಅನ್ಯ–ಮಾರ್ಗವಿಲ್ಲದೇ ಒಳ ಉಡುಪು ಬದಲಿಸಲು ಸಮ್ಮತಿಸಿದರು.

ಜಾನ್ ಮಿಲ್‌ಮನ್‌ಗೆ ಕಪ್ಪು ಒಳ ಉಡುಪು ಧರಿ–ಸಲು ಅನುಮತಿ ನೀಡದಿದ್ದಾಗ, ಅವರ ತಂದೆ ಹತ್ತಿರದ ಅಂಗ–ಡಿಗೆ ಹೋಗಿ ಬಿಳಿ ಬಣ್ಣದ ಒಳ ಉಡುಪನ್ನು ತರಬೇಕಾಯಿತು.

2017ರಲ್ಲಿ ಫ್ರೆಂಚ್ ಆಟಗಾರ್ತಿ ತಾತಿಯಾನ ಗೊಲೊವಿನ್ ಒಳ ಉಡುಪು ವಿವಾದಕ್ಕೆ ಗುರಿಯಾಗಿತ್ತು. ಅಚ್ಚ ಬಿಳಿ  ಧರಿಸಿದ್ದ ಆಕೆ ಕೆಂಪು ಒಳ ಉಡುಪು ಧರಿಸಿದ್ದಳು. ಅವಳ ಮೇಲುಡುಗೆಗಿಂತ ಒಳ ಉಡುಪು ಚಿಕ್ಕದಾಗಿದ್ದರಿಂದ, ಅವಳಿಗೆ ಅದೇ ದಿರಿಸಿನಲ್ಲಿ ಆಡಲು ಅನುಮತಿ ನೀಡಿದಾಗ, ಡ್ರೆಸ್-ಅಂಪೈರ್‌ಗಳೇ ಟೀಕೆಗೆ ಗುರಿಯಾಗಿದ್ದರು. ಪಂದ್ಯ ಮುಗಿದ ನಂತರ, ಪತ್ರಕರ್ತರು ಕೇಳಿದ ಹದಿನೈದು ಪ್ರಶ್ನೆಗಳ ಪೈಕಿ, ಹತ್ತು ಪ್ರಶ್ನೆಗಳು ಅವಳ ಕೆಂಪು ಒಳ ಉಡುಪಿನ ಕುರಿತಾಗಿಯೇ ಇದ್ದವು.

 ಕಳೆದ ವರ್ಷ ವೀನಸ್ ವಿಲಿಯಮ್‌ಳ ಒಳ ಉಡುಪು ಸಹ ಅಂಥದೇ ವಿವಾದಕ್ಕೆ ಗುರಿಯಾಗಿತ್ತು. ಈ ವಿಷಯದಲ್ಲಿ ಮಾತ್ರ  ಅಂಪೈರ್‌ಗಳು ರಾಜಿ ಆಗುವುದಿಲ್ಲ.

ವಿಂಬಲ್ಡನ್‌ನಲ್ಲಿ ಟೆನಿಸ್ ವೀಕ್ಷಿಸುವ ಪ್ರೇಕ್ಷಕರಿಗೂ ಡ್ರೆಸ್‌ಕೋಡ್ ಇದೆ. ಪಟ್ಟೆ ಪಟ್ಟೆ, ಬಣ್ಣಬಣ್ಣದ ರಬ್ಬಡಕ ಉಡುಪನ್ನು ಧರಿಸಿದರೆ ಪ್ರವೇಶ ನಿರಾಕರಿಸಲಾಗುತ್ತದೆ. ಇಂದಿಗೂ ಈ ‘ಪಾವಿತ್ರ್ಯ’ ಉಳಿಸಿಕೊಳ್ಳಲಾಗಿದೆ. ಉತ್ತರಾಧಿಮಠದ ಉದಾ–ಹರಣೆ ಕೊಟ್ಟಿದ್ದು ಸುಮ್ಮನೆ ಅಲ್ಲ.

ಹೀಗೊಂದು ಟ್ವೀಟ್

ಇತ್ತೀಚೆಗೆ ಡಾ.ಜಗದೀಶ ಜೆ. ಹಿರೇಮಠ ಎಂಬುವವರು ಜಿಯೋ ಸಿಮ್‌ಕಾರ್ಡ್, ಜಿಯೋ ಮೊಬೈಲ್ ಎಲ್ಲೆಡೆ ಜನಪ್ರಿಯ–ವಾಗಿ, ಸರ್ವತ್ರ ವ್ಯಾಪಿಸಿಕೊಳ್ಳುತ್ತಿರುವ ಹಿನ್ನೆಲೆಯಲ್ಲಿ ಒಂದು ಟ್ವೀಟ್ ಮಾಡಿದ್ದರು. ನೂತನ ಜಿಯೋ ಇನ್‌ಸ್ಟಿಟ್ಯೂಟ್ ಆಫ್  ಎಂಬ ಸಂಸ್ಥೆ ಸ್ಥಾಪನೆಯಾದರೆ ಅಲ್ಲಿ ಕಲಿಸುವ ವಿಷಯಗಳೆಂದರೆ- ಜಿಯೋಮೆಟ್ರಿ, ಜಿಯೋಗ್ರಫಿ, ಜಿಯೋಲಾಜಿ, ಜಿಯೋರ್ನಲಿಸಂ, ಇತ್ಯಾದಿ.

ಅದಕ್ಕೆ ಮೈಸೂರಿನ ಮೀನಾಕ್ಷಿದೇವಿಯವರು ಪ್ರತಿಕ್ರಿಯಿಸಿ–ದ್ದರು- ‘ಹಾಗಾದರೆ ನಿಮ್ಮನ್ನು ಡಾ. ಜಿಯೋಗದೀಶ ಜಿಯೋ ಹಿರೇಮಠ ಎಂದು ಹೇಳಬಹುದು.’

ಕಾಲಕಾಲಕ್ಕೆ ಬದಲಾಗುವ ನೀರು

ಮನುಷ್ಯರೊಂದೇ ಅಲ್ಲ, ಕಾಲಕಾಲಕ್ಕೆ ನೀರೂ ತನ್ನ ಸ್ವರೂಪ ಬದಲಿಸುತ್ತಿದೆ. ನಾವು ಈ ಮೊದಲು ನೋಡುತ್ತಿದ್ದ ನೀರಿಗೂ, ಈಗಿನದಕ್ಕೂ ಬಹಳ ವ್ಯತ್ಯಾಸವಿದೆ. ಇತ್ತೀಚೆಗೆ ಸ್ನೇಹಿತರೊಬ್ಬರು, ನೀರನ್ನು ನಾವು ನೋಡುತ್ತಿರುವ ರೀತಿಯ ಬಗ್ಗೆ  ಚೆಂದವಾಗಿ  ಸರಳ ವಿವರಣೆಯನ್ನು ಕಳಿಸಿಕೊಟ್ಟಿದ್ದರು.

ನಮ್ಮ ಪೂರ್ವಜರು, ನಮ್ಮ ತಾತ ನೀರನ್ನು ನೋಡಿದ್ದು ನದಿಯಲ್ಲಿ. ಅವರ ಪಾಲಿಗೆ ನೀರು ಅಂದರೆ ಗಂಗಾನದಿ. ನಮ್ಮ ತಂದೆ-–ತಾಯಂದಿರು ಅದನ್ನು ಬಾವಿಯಲ್ಲಿ ನೋಡಿದರು. ನಾವು ನಗರವಾಸಿಗಳು ನೀರನ್ನು ನೋಡಿದ್ದು ನಲ್ಲಿ(ಟ್ಯಾಪ್)ಯಲ್ಲಿ.

ಈಗ ನಮ್ಮ ಮಕ್ಕಳು ನೀರನ್ನು ನೋಡುತ್ತಿರುವುದು ಬಾಟಲಿ–ಯಲ್ಲಿ. ಪ್ರಾಯಶಃ ನಮ್ಮ ಮೊಮ್ಮಕ್ಕಳು ಅದನ್ನು ಕ್ಯಾಪ್ಸುಲ್‌ನಲ್ಲಿ ನೋಡಬಹುದೇನೋ?

ನೀರಿನ ಮಹತ್ವ ಇನ್ನಾದರೂ ಅರಿಯದಿದ್ದರೆ, ಕಣ್ಣೀರಿನಲ್ಲಿ ಅದನ್ನು ನೋಡಬೇಕಾಗಬಹುದೇನೋ!

ಅರಿಯಬೇಕಾದ, ಅರಿಯದ ಅಂಶಗಳು

ಕೆಲವು ಸಂಗತಿಗಳನ್ನು  ಜೀವನದಲ್ಲಿ ಮೊದಲಿಗೇ ತಿಳಿದಿದ್ದರೆ ಒಳ್ಳೆಯದು ಎಂದೆನಿಸುತ್ತದೆ. ಆದರೆ ಈ ಸಂಗತಿ–ಗಳೇನು ಎಂಬುದು ನಮಗೆ ಗೊತ್ತೇ ಆಗುವುದಿಲ್ಲ. ಅದೇನೇ ಇರಲಿ, ಈ ಸಂಗತಿಗಳನ್ನು ಎಷ್ಟು ಬೇಗ ಸಾಧ್ಯವೋ, ಅಷ್ಟು ಬೇಗ ಅರಿಯುವುದು ಒಳ್ಳೆಯದು.

ನಾವು ಯಾರನ್ನೇ ಆಗಲಿ, ಎಷ್ಟು ಗಾಢವಾಗಿ ಪ್ರೀತಿ–ಸುತ್ತೇವೋ, ಒಂದಲ್ಲ ಒಂದು ದಿನ ಅವರು ನಮ್ಮನ್ನು ಅಗಲಿ ಹೋಗುತ್ತಾರೆ.

ನಾವು ನಮ್ಮ ಜೀವನಕ್ಕೆ ಅರ್ಥ ಕೊಡಲು ಪ್ರಯತ್ನಿಸುತ್ತೇವೆ. ಆದರೆ ಅಸಲಿಗೆ ಬದುಕಿಗೆ ಅರ್ಥವೇ ಇರೊಲ್ಲ.  ಇದು ಗೊತ್ತಾಗುವುದಿಲ್ಲ.

ಪರಿಪೂರ್ಣ ಸಂಗಾತಿ, ಗಂಡ-ಹೆಂಡತಿ ಎಂಬುವವರು ಇಲ್ಲವೇ ಇಲ್ಲ. ನೀವು ಮೆಚ್ಚುವ ಗುಣ ಯಾರಲ್ಲಿ ಹೆಚ್ಚಾಗಿರುತ್ತದೋ, ಅಂಥವರ ಜತೆ ಉತ್ತಮ ಸಂಬಂಧ ಹೊಂದಲು ಪ್ರಯತ್ನಿಸಬೇಕು.

ಜೀವನ ಅಂದರೆ ಆಟವಿದ್ದಂತೆ, ನೀವು ಆಡುವ ಆಟ ಯಾವುದು ಎಂಬುದನ್ನು ತಿಳಿದುಕೊಂಡು, ಆ ಆಟದ ನಿಯಮ ಅರಿತುಕೊಂಡು ಕರಗತ ಮಾಡಿಕೊಳ್ಳಬೇಕು.

ಎಲ್ಲವೂ ಕೊನೆಗೊಳ್ಳಬೇಕು. ಪ್ರತಿಯೊಂದಕ್ಕೂ expiry date ಎಂಬುದು ಇರುತ್ತದೆ. ಯೌವನ, ಪ್ರೀತಿ, ಬದುಕು, ಹೀಗೆ ಎಲ್ಲವೂ  ಅದಕ್ಕಾಗಿಯೇ ಅವು ಅಮೂಲ್ಯ.

ಸಣ್ಣ ಸಣ್ಣ ವಿಷಯ, ಸಂಗತಿಗಳಲ್ಲೂ ಖುಷಿ ಕಾಣಬೇಕು.

ಕೆಲವು ಸಂಗತಿಗಳು ಜೀವನದಲ್ಲಿ ಸಿಗುವುದಿಲ್ಲ. ನಾವು ಅಂದುಕೊಂಡ ರೀತಿಯಲ್ಲಿ ಬದುಕು ಸಾಗುವುದಿಲ್ಲ. ಆ ಬಗ್ಗೆ ಬೇಸರ, ವಿಷಾದ ಬೇಡ.

ಬದುಕು, ಪ್ರಕೃತಿ ಇರುವುದೇ ಓರೆ-ಕೋರೆಯಾಗಿ. ಸದಾ ಕೊರಗಬೇಡಿ. ಏನಿದೆಯೋ ಅದರಲ್ಲಿ ಸಂತಸ, ನೆಮ್ಮದಿ ಕಾಣಲು ಪ್ರಯತ್ನಿಸಬೇಕು.

ಅರ್ಥವಾಗದ ಸಂಗತಿಗಳು

ಇತ್ತೀಚೆಗೆ ಸ್ಕೂಲ್‌ನಲ್ಲಿ ಟೀಚರ್ ‘ನನಗೆ ಅರ್ಥವಾಗದ ಸಂಗತಿಗಳು’ ಎಂಬ ವಿಷಯದ ಮೇಲೆ  ಪ್ರಬಂಧ ಬರೆಯಲು ಹೇಳಿದರಂತೆ. ಹತ್ತು ವರ್ಷದ ಬಾಲಕಿಯೊಬ್ಬಳು ಬರೆದ ಕಿರು ಪ್ರಬಂಧ ಹೀಗಿದೆ:

‘ಟೀಚರ್, ನೀವು ನಮಗೆ ಹೇಳಿಕೊಟ್ಟಿದ್ದೀರಿ, ಬೇರೆಯವರನ್ನು ನೋಯಿಸಬಾರದೆಂದು. ಆದರೆ ಈ ಮಾತು ಪ್ರಾಣಿಗಳಿಗೇಕೆ ಅನ್ವಯಿಸುವುದಿಲ್ಲ? ಮನುಷ್ಯನೇಕೆ ಪ್ರಾಣಿಗಳಿಗೆ ಹಿಂಸೆ ಕೊಡುತ್ತಾನೆ?’

‘ಟೀಚರ್, ನೀವು ಹೇಳಿಕೊಟ್ಟಿದ್ದೀರಿ ಮರ್ಡರ್ ಮಾಡುವುದು ಪಾಪ ಎಂದು, ಆದರೆ ಆ ನಿಯಮ ಮನುಷ್ಯರಿಗೆ ಮಾತ್ರ ಅನ್ವಯಿಸುವುದಿಲ್ಲ,  ಏಕೆ?’

‘ಟೀಚರ್, ನೀವು ಹೇಳಿಕೊಟ್ಟಿದ್ದೀರಿ ಸೀರಿಯಲ್ ಕಿಲ್ಲರ್‌ಸ್ ಇದ್ದಾರಲ್ಲ, ಅವರು ಕೆಟ್ಟವರು ಎಂದು. ಆದರೆ  ಅದೇ ರೀತಿ ಬೇಟೆಯಾಡಿ (Hunting) ಕೊಲ್ಲುತ್ತಾರೆ?’

‘ಟೀಚರ್, ನೀವು ಹೇಳಿಕೊಟ್ಟಿದ್ದೀರಿ ಮನುಷ್ಯರನ್ನು ಜೈಲಿನಲ್ಲಿ ಇಟ್ಟರೆ ಅದು ಶಿಕ್ಷೆ ಅಂತ. ಆದರೆ ಮೈಸೂರಿನ ಮೃಗಾಲಯ (್ಢಟಟ)ದಲ್ಲಿ ಪ್ರಾಣಿಗಳನ್ನಿಟ್ಟು ಮನುಷ್ಯನೇಕೆ ಆನಂದಿಸುವುದು?’

ನನಗೆ ಅರ್ಥವಾಗದ ಸಂಗತಿಗಳೆಂದರೆ ಇವು.

ಭವಿಷ್ಯ ಬದಲಿಸಿದ ಫುಟ್ಬಾಲ್ !

ಇಂದು ನಡೆಯ–ಲಿರುವ ಫಿಫಾ ವಿಶ್ವ–ಕಪ್ ಫುಟ್ಬಾಲ್ ಫೈನಲ್ ಪಂದ್ಯದಲ್ಲಿ  ಫ್ರಾನ್‌ಸ್ ವಿರುದ್ಧ ಕ್ರೊಯೇ–ಷಿಯಾ ಗೆಲ್ಲುವುದೋ, ಸೋಲು–ವುದೋ ಗೊತ್ತಿಲ್ಲ. ಆದರೆ ಕ್ರೋಯೇ–ಷಿಯನ್ನರ  ಪಾಲಿಗೆ ಕಪ್ ಗೆದ್ದಾಗಿದೆ. ಯಾಕೆಂದರೆ, ಆ  ಫುಟ್ಬಾಲ್ ಪ್ರಿಯರು ತಮ್ಮ ದೇಶದ ತಂಡ ಫೈನಲ್ ತಲುಪಬಹುದೆಂದು ಕನಸು ಮನಸಿ–ನಲ್ಲಿಯೂ ಅಂದುಕೊಂಡಿರಲಿಲ್ಲ. ಹೆಚ್ಚೆಂದರೆ ಕ್ವಾರ್ಟರ್ ಫೈನಲ್ ತಲುಪಬಹುದು ಎಂದು ಭಾವಿಸಿದ್ದರು. ಆದರೆ ಎಲ್ಲರ ನಿರೀಕ್ಷೆ, ಲೆಕ್ಕಾಚಾರ ಹುಸಿಗೊಳಿಸಿ ಕ್ರೊಯೇಷಿಯಾ ಫೈನಲ್ ಮುಟ್ಟಿದೆ. ಇನ್ನೇನಾದರೂ ಫೈನಲ್ ಪಂದ್ಯದಲ್ಲಿ ಫ್ರಾನ್‌ಸ್ನ್ನು ಮಣಿಸಿದರೆ, ಮುಗಿದೇ ಹೋಯಿತು, ಕ್ರೊಯೇಷಿಯಾ ಪಾಲಿಗೆ ಇದಕ್ಕಿಂತ ದೊಡ್ಡ ಖುಷಿ ಮತ್ತೊಂದಿರಲಾರದು.

ಮೊನ್ನೆ ಮೊನ್ನೆ ತನಕ ಈ ದೇಶದ ಬಗ್ಗೆ ಯಾರಿಗೂ ಗೊತ್ತಿರಲಿಲ್ಲ. ಈಗ ಎಲ್ಲರ ಬಾಯಲ್ಲೂ ಕ್ರೊಯೇಷಿಯಾ,  ಕಳೆದ ಮೂರು ದಿನಗಳಲ್ಲಿ, ಗೂಗಲ್‌ನಲ್ಲಿ ಅತಿ ಹೆಚ್ಚು ಮಂದಿ ಈ ದೇಶದ ಬಗ್ಗೆ ಮಾಹಿತಿ ಹುಡುಕಿದ್ದಾರೆ. ಇದರ ಬಗ್ಗೆ ತಿಳಿದುಕೊಳ್ಳಲು ಆಸಕ್ತಿ ತೋರಿದ್ದಾರೆ. ಇದ್ದಕ್ಕಿದ್ದಂತೆ ಈ ದೇಶದ ದೆಸೆ ಬದಲಾಗಿದೆ. ನಟಿ ಸನ್ನಿ ಲಿಯಾನ್ ಅವಳನ್ನೂ ನಾಚಿಸುವಂತಿರುವ ಕ್ರೊಯೇ–ಷಿಯಾ ಅಧ್ಯಕ್ಷೆ ಕೋಲಿಂದ ಗ್ರಾಬರ್ ಕಿಟಾರೋವಿಚ್ ಸಹ ಇದ್ದಕ್ಕಿದ್ದಂತೆ ಪ್ರಸಿದ್ಧಿ ಪಡೆದುಬಿಟ್ಟಿದ್ದಾಳೆ. ಅವಳ ಈಜು–ಡುಗೆಯ ಫೋಟೋಗಳಂತೂ ವೈರಲ್ ಆಗಿಬಿಟ್ಟಿವೆ.

ಒಂದು ಫುಟ್ಬಾಲ್ ಒಂದು ದೇಶದ ಭವಿಷ್ಯವನ್ನೇ ಬದಲಿಸಿದೆ.

Tags

Related Articles

Leave a Reply

Your email address will not be published. Required fields are marked *

Language
Close