About Us Advertise with us Be a Reporter E-Paper

ವಿರಾಮ

ಥಾಮ್ಸನ್ ಟವರ್: ಕರ್ಲಿಂಗ್ ಸ್ಟೋನ್ ಸಂಗ್ರಹಾಲಯ

ಮಂಜುನಾಥ ಡಿ. ಎಸ್.

ಕರ್ಲಿಂಗ್ ಅಥವಾ ‘ಕರ್ಲಿಂಗ್ ಸ್ಟೋನ್’ ಆಟವು ಸುಮಾರು 500 ವರ್ಷಗಳ ಹಿಂದೆ ಪ್ರಾಯಶಃ ಸ್ಕಾಟ್ಲೆಂಡ್‌ನಲ್ಲಿ ಆರಂಭವಾದ ಕ್ರೀಡೆ. ರೋರಿಂಗ್ ಗೇಮ್ ಎಂದೂ ಕರೆಯಲ್ಪಡುವ ಈ ಆಟವನ್ನು, ತಲಾ ನಾಲ್ಕು ಕ್ರೀಡಾ ಪಟುಗಳನ್ನೊಳಗೊಂಡ ಎರಡು ತಂಡಗಳು ಆಡುತ್ತವೆ. ಎರಡೂ ತಂಡಗಳ ಕ್ರೀಡಾಳುಗಳು ದೊಡ್ಡ ದುಂಡುಕಲ್ಲುಗಳನ್ನು ಮಂಜಿನ ಮೇಲೆ ಉರುಳಿಸಿ ವೃತ್ತಾಕಾರದ ಹೌಸ್‌ಗೆ ತಲುಪಿಸಲು ಪ್ರಯತ್ನಿಸುತ್ತಾರೆ. ಆರಂಭದಲ್ಲಿ ಕಲ್ಲಿನ ಗಾತ್ರ, ಆಕಾರ, ಕ್ರೀಡಾಂಗಣದ ಅಳತೆ, ಇತ್ಯಾದಿಗಳು ನಿಗದಿಯಾಗಿರಲಿಲ್ಲ. ಕಾಲಾನುಕ್ರಮದಲ್ಲಿ ಕರ್ಲಿಂಗ್ ಕ್ಲಬ್‌ಗಳು ಈ ನಿಯಮಗಳನ್ನು ರೂಪಿಸಿದವು. 1803ರಲ್ಲಿ ನಡೆದ ಡಡ್ಡಿಂಗ್ಸ್ಟನ್ ಕರ್ಲಿಂಗ್ ಸೊಸೈಟಿಯ ಎಂಟನೆಯ ವಾರ್ಷಿಕ ಸಭೆಯಲ್ಲಿ ನಿಯಮಗಳನ್ನು ರೂಪಿಸಲು ಸಮಿತಿಯೊಂದನ್ನು ರಚಿಸಲಾಯಿತು. 1804ರಲ್ಲಿ ಪಪ್ರಥಮವಾಗಿ ಹನ್ನೆರಡು ನಿಯ ಮಾವಳಿಗಳನ್ನು ಮುದ್ರಿಸಿ, ಕ್ಲಬ್‌ನ ಸದಸ್ಯರಿಗೆ ವಿತರಿ ಸಲಾಯಿತು. 1838ರಲ್ಲಿ ಗ್ರಾಂಡ್ (ರಾಯಲ್) ಕೆಲೆಡೋನಿಯನ್ ಕರ್ಲಿಂಗ್ ಕ್ಲಬ್ ಈ ನಿಯಮಾವಳಿಗಳನ್ನು ಅಧಿಕೃತವಾಗಿ ಅಂಗೀಕರಿಸಿತು.

ಕರ್ಲಿಂಗ್ ಸ್ಟೋನ್ ಕ್ರೀಡೆಯ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರ ವಹಿಸುವ ಮೂಲಕವೇ ಎಡಿನ್‌ಬರೋ ನಗರದ ಥಾಮ್ಸನ್ ಟವರ್ ಪ್ರಸಿದ್ಧಿ. ಎಡಿನ್‌ಬರೋ ನಗರದಲ್ಲಿ ವೀಕ್ಷಣೆಗೆ ಲಭ್ಯವಿಲ್ಲದ ಹಲವು ತಾಣಗಳನ್ನು ವೀಕ್ಷಿಸಲು ಪ್ರತಿ ವರ್ಷ ಸೆಪ್ಟಂಬರ್‌ನಲ್ಲಿ ಆಯೋಜನೆಗೊಳ್ಳುವ ‘ಡೋರ್ಸ್ ಓಪನ್ ಡೇ’ ಸುವರ್ಣಾವಕಾಶ ಕಲ್ಪಿಸುತ್ತದೆ. ಸಮೀಪದ ಡಡ್ಡಿಂಗ್ಸ್ಟನ್ ಹಳ್ಳಿಯ ಲೋಚ್ ಸರೋವರದ ದಡದಲ್ಲಿರುವ ಥಾಮ್ಸನ್ ಟವರ್ ಅಂತಹ ತಾಣಗಳಲ್ಲೊಂದು.

ಹೆಸರು ನೋಡಿ ದೊಡ್ಡ ಗೋಪುರವಿರಬಹುದೆಂದು ನಿರೀಕ್ಷಿಸಿದರೆ ನಿರಾಶೆಯಾದೀತು. ಇದು ಸಣ್ಣಗಾತ್ರದ, ಪೀತ ವರ್ಣದ, ಅಷ್ಟಭುಜಾಕೃತಿಯ, ಎರಡು ಮಹಡಿಗಳ ಚೊಕ್ಕ ಕಟ್ಟಡ! ಮೂರ್ತಿ ಚಿಕ್ಕದಾದರೂ ಕೀರ್ತಿಗೇನೂ ಕಡಿಮೆಯಿಲ್ಲ! 1795ರಲ್ಲಿ ಆರಂಭಗೊಂಡ ಡಡ್ಡಿಂಗ್ಸ್ಟನ್ ಕರ್ಲಿಂಗ್ ಸೊಸೈಟಿ ಹಲವು ಕಾಲ ಮುಂಚೂಣಿಯಲ್ಲಿತ್ತು. ಇದರ ಸದಸ್ಯರ ಅನುಕೂಲಕ್ಕಾಗಿ, ವಿಲಿಯಮ್ ಹೆನ್ರಿ ಪ್ಲೇೇರ್ ಈ ಗೋಪುರವನ್ನು ವಿನ್ಯಾಸಗೊಳಿಸಿದ. 1825ರಲ್ಲಿ ನಿರ್ಮಾಣ. ಕರ್ಲಿಂಗ್ ಸ್ಟೋನ್ ಆಟಕ್ಕೆ ಮೀಸಲಾಗಿದ್ದ ಈ ಕಟ್ಟಡ, 1853ರಿಂದ ಮೂಲೆಗುಂಪಾಯಿತು. ನಿರ್ಲಕ್ಷ್ಯಕ್ಕೊಳಗಾಗಿದ್ದ ಈ ಕಟ್ಟಡವನ್ನು ಆಸಕ್ತರು 2009ರಲ್ಲಿ ನವೀಕರಿಸಿದರು.

ಸ್ಕಾಟ್ಲೆಂಡ್‌ನಲ್ಲಿ ಇಂದು ಆರುನೂರಕ್ಕೂ ಅಧಿಕ ಕರ್ಲಿಂಗ್ ಕ್ಲಬ್‌ಗಳಿವೆ. 1880ರಲ್ಲಿ ಆರಂಭಗೊಂಡ ಗ್ಲೆನ್ ಫಾರ್ಗ್ ಮಹಿಳೆಯರ ಪ್ರಥಮ ಕರ್ಲಿಂಗ್ ಕ್ಲಬ್ ಎನ್ನಲಾಗುತ್ತದೆ. ಫ್ರಾನ್‌ಸ್ನಲ್ಲಿ 1924ರಲ್ಲಿ ನಡೆದ ಪ್ರಥಮ ಚಳಿಗಾಲದ ಒಲಂಪಿಕ್‌ಸ್ನಲ್ಲಿ ಕರ್ಲಿಂಗ್ ಕ್ರೀಡೆ ಸೇರಿತ್ತು. ಇದರಲ್ಲಿ ಬ್ರಿಟನ್ ಚಿನ್ನದ ಪದಕ ಪಡೆಯಿತು. ಆದರೆ ಆ ನಂತರ ಕಾರಣಾಂತರಗಳಿಂದ, 1998ರ ತನಕ ಒಲಂಪಿಕ್‌ಸ್ನಲ್ಲಿ ಅಧಿಕೃತ ಸ್ಥಾನ ದೊರಕಲಿಲ್ಲ! ಈಗ ಚಳಿಗಾಲದ ಒಲಿಂಪಿಕ್‌ಸ್ನಲ್ಲಿ ಇದು ಪ್ರಮುಖ ಕ್ರೀಡೆ. ಮೊದಲಿನಿಂದಲೂ ಕೆನಡಾ ದೇಶವು ಈ ಆಟದಲ್ಲಿ ಮುಂಚೂಣಿಯಲ್ಲಿದ್ದು, ಸ್ವೀಡನ್, ಅಮೆರಿಕಗಳಲ್ಲೂ ಉತ್ತಮ ತಂಡಗಳಿವೆ. ಯೂರೋಪ್, ರಷ್ಯ, ಅಮೆರಿಕ, ನ್ಯೂಜಿಲೆಂಡ್, ಜಪಾನ್, ಚೀನ, ಹಾಗು ಕೊರಿಯಾ ರಾಷ್ಟ್ರಗಳಲ್ಲಿ ಮಹಿಳೆಯರು ಮತ್ತು ಪುರುಷರು ಈ ಆಟವನ್ನು ಆಡುತ್ತಾರೆ. ಈ ಸಂಬಂಧಿಸಿದ ಐತಿಹಾಸಿಕ ವಸ್ತುಗಳನ್ನು ಈ ಪುಟ್ಟ ಗೋಪುರದ ನೆಲ ಅಂತಸ್ತಿನಲ್ಲಿ ಸಂಗ್ರಹಿಸಿಡಲಾಗಿದ್ದು, ಕುತೂಹಲಕಾರಿ ಎನಿಸುತ್ತದೆ.

Tags

Related Articles

Leave a Reply

Your email address will not be published. Required fields are marked *

Language
Close